Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 9 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 10 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಯಮಹಾ ಏರಾಕ್ಸ್ 155 ಸ್ಕೂಟರ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮೋಟಾರ್ ಇಂಡಿಯಾ ತನ್ನ ಏರಾಕ್ಸ್ 155 ಸ್ಕೂಟರ್ ಬೆಲೆಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿದೆ. ಯಮಹಾ ಏರಾಕ್ಸ್ 155 (Yamaha Aerox 155) ಸ್ಕೂಟರ್ ಬೆಲೆಯನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಹೆಚ್ಚಿಸಲಾಗಿತ್ತು.

ಈ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಬೆಲೆಯನ್ನು ರೂ.1,000 ಗಳವರೆಗೆ ಹೆಚ್ಚಿಸಲಾಗಿದೆ. ಈ ಜಪಾನೀಸ್ ಮ್ಯಾಕ್ಸಿ-ಸ್ಕೂಟರ್‌ಗೆ ಬೆಲೆ ಏರಿಕೆಯನ್ನು ಹೊರತುಪಡಿಸಿ ಯಾವುದೇ ಕಾಸ್ಮೆಟಿಕ್ ಅಥವಾ ಯಾಂತ್ರಿಕ ಬದಲಾವಣೆಗಳನ್ನು ತರುವುದಿಲ್ಲ. ಕಚ್ಚಾ ಸಾಮಗ್ರಿಗಳು ಮತ್ತು ಕಾರ್ಯಾಚರಣೆಗಳ ವೆಚ್ಚದಲ್ಲಿ ನಿರಂತರ ಹೆಚ್ಚಳದಿಂದಾಗಿ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಮೆಟಾಲಿಕ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಇತ್ತೀಚೆಗೆ ಪಡೆದುಕೊಂಡಿದೆ.

ಜಪಾನಿನ ತಯಾರಕರು ಖಂಡಿತವಾಗಿಯೂ ತನ್ನ 125 ಸಿಸಿ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದ್ದಾರೆ ಏಕೆಂದರೆ ಫಾಸಿನೋ ಮತ್ತು ರೇ ಜೆಡ್ಆರ್ ಎಫ್ಐ ಹೈಬ್ರಿಡ್ ಆವೃತ್ತಿಗಳನ್ನು ಇತ್ತೀಚೆಗೆ ಪರಿಚಯಿಸಲಾಯಿತು. ಈ ಯಮಹಾ ಏರಾಕ್ಸ್ 155 ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ.

ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ.ಹಲವು ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟವಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಈ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.

ಈ ವಾಹನದ ಒಟ್ಟು ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಏರಾಕ್ಸ್ 155 ಸ್ಕೂಟರ್ ಮಿಡ್-ಲೈಫ್ ಅಪ್ಡೇಟ್ ಅನ್ನು ಪದೆದಿದೆ,

ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಯಮಹಾ ಏರೋಕ್ಸ್ 155 ಸ್ಕೂಟರ್ ನಲ್ಲಿ ಅದೇ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಧನ-ಇಂಜೆಕ್ಟೆಡ್ ಡಿಒಎಚ್‌ಸಿ ಎಂಜಿನ್ ಅನ್ನು ವೇರಿಯಬಲ್ ವ್ಯಾಲ್ಯೂ ಆಕ್ಚುವೇಶನ್ ಟೆಕ್‌ನೊಂದಿಗೆ ಬಳಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 14.95 ಬಿಹೆಚ್‍ಪಿ ಪವರ್ ಅನ್ನು ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಆರ್15 ವಿ3 ಮಾದರಿಗಿಂತ ಸುಮಾರು 4 ಬಿಹೆಚ್‍ಪಿ ಕಡಿಮೆ ಆದರೆ ಖಂಡಿತವಾಗಿಯೂ 10.9 ಬಿಹೆಚ್‍ಪಿ ಪವರ್ ಉತ್ಪಾದಿಸುವ ಎಪ್ರಿಲಿಯಾ ಎಸ್ಎಕ್ಸ್ಆರ್160 ಗಿಂತ ಹೆಚ್ಚು.ಆಗಿದೆ. ಮಲೇಷಿಯಾದ ಸೆಪಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ 2016 ರ ಅಂತ್ಯದಲ್ಲಿ ಮೊದಲ ಚೊಚ್ಚಲ ಪ್ರದರ್ಶನ ಪಡಿಸಿತು.

ಈ ಸ್ಕೂಟರ್ ಹಝರ್ಡ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್ ಫೇರಿಂಗ್ ಮತ್ತು ಸಮತಲವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ಜೋಡಿಸಲಾಗಿದೆ.ಇನ್ನು ಈ ಸ್ಕೂಟರ್ ಸಣ್ಣ ವಿಂಡ್‌ಸ್ಕ್ರೀನ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಸ್ಟಬ್ಬಿ ಎಕ್ಸಾಸ್ಟ್ ಸಿಸ್ಟಂ, ದೊಡ್ಡ ಫುಟ್‌ಬೋರ್ಡ್ ಮತ್ತು ವಿಶಾಲವಾದ ಸ್ಟೋರೆಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಈ ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ,

ಈ ಹೊಸ ಏರಾಕ್ಸ್ 155 ಸ್ಕೂಟರ್ ಬ್ಲೂಟೂತ್ ಎನೇಬಲ್ಡ್ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಅಪ್ಲಿಕೇಶನ್, 5.8 ಇಂಚಿನ ಎಲ್‌ಸಿಡಿ ಕ್ಲಸ್ಟರ್, ಉತ್ತಮ ರಾತ್ರಿ ಸಮಯದ ದೃಷ್ಟಿಗಾಗಿ ಎಲ್‌ಇಡಿ ಹೆಡ್ ಲ್ಯಾಂಪ್‌ಗಳು ಮತ್ತು 3ಡಿ ನೋಟವನ್ನು ನೀಡುವ 12 ಕಾಂಪ್ಯಾಕ್ಟ್ ಎಲ್‌ಇಡಿಗಳನ್ನು ಒಳಗೊಂಡಿರುವ ಟೈಲ್ ಲ್ಯಾಂಪ್‌ಗಳಂತಹ ಪ್ರಮುಖ ಫೀಚರ್ಸ್ ಗಳನ್ನು ಹೊಂದಿವೆ.

ಇನ್ನು ಈ ಮಹಾ ಏರೋಕ್ಸ್ 155 ಸ್ಕೂಟರ್ 24.5 ಲೀಟರ್ ಸಾಮರ್ಥ್ಯದ ಕೆಳಗಿರುವ ಸ್ಟೋರೇಜ್ ಅನ್ನು ಸಹ ಪಡೆಯುತ್ತದೆ. ಇನ್ನು ಈ ಸ್ಕೂಟರ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಪೂರ್ಣ ಡಿಜಿಟಲ್ 5.8 ಇಂಚಿನ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ ಮತ್ತು ಸ್ಪೀಡೋಮೀಟರ್, RPM, VVA ಇಂಡಿಕೇಟರ್ ಮತ್ತು ವೈ-ಕನೆಕ್ಟ್ ಆಪ್ ಫೋನ್ ಅಲರ್ಟ್, ಕೊನೆಯ ನಿಲುಗಡೆ ಸ್ಥಳ, ಇಂಧನ ಬಳಕೆಯನ್ನು ಮಾಹಿತಿ ಮತ್ತು ಇತರ ಮಾಹಿತಿಗಳನ್ನು ಕೂಡ ಪ್ರದರ್ಶಿಸುತ್ತದೆ.

ಇನ್ನು ಯಮಹಾ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ನ್ಯೂ ಜನರೇಷನ್ ಆರ್15 ವಿ4 ಮತ್ತು ಆರ್15 ಎಂ ಮಾದರಿಗಳನ್ನು ತಿಂಗಳುಗಳ ಹಿಂದೆ ಪರಿಚಯಿಸಿತು. ಈ ಯಮಹಾ ಆರ್15 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಯಮಹಾ ಮೋಟಾರ್ ಇಂಡಿಯಾ ತನ್ನ ಹೊಸ ಆರ್15ಎಂ ಮತ್ತು ಆರ್15 ವಿ4 ಮಾದರಿಗಳನ್ನು ಈ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಯಮಹಾ ಆರ್15 ಎಂ ಭಾರತದಲ್ಲಿ ಮೊದಲ ಎಂ ಹೆಸರನ್ನು ಹೊಂದಿರುವ ಯಮಹಾ ಬೈಕ್ ಆಗಿದೆ,

ಯಮಹಾ ಏರೋಕ್ಸ್ 155 ಪ್ರೀಮಿಯಂ ಸ್ಕೂಟರ್ ಜಾಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸುತ್ತಿದೆ. ಇನ್ನು ಈ ಯಮಹಾ ಮ್ಯಾಕ್ಸಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿರುವುದರಿಂದ ಯಮಹಾ ಮೋಟಾರ್ ಇಂಡಿಯಾ ಕಂಪನಿಯ ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಿತು.