Just In
- 7 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Auto Expo 2023: ಫ್ಲೆಕ್ಸ್-ಇಂಧನದ ಹೋಂಡಾ XRE 300 ರ‍್ಯಾಲಿ ಬೈಕ್ ಪ್ರದರ್ಶನ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ 2023ರ ಆಟೋ ಎಕ್ಸ್‌ಪೋದಲ್ಲಿ ಫ್ಲೆಕ್ಸ್ ಇಂಧನದ XRE 300 ರ‍್ಯಾಲಿ ಬೈಕ್ ಅನ್ನು ಪ್ರದರ್ಶಿಸಿದೆ. ಈ ಹೊಸ ಹೋಂಡಾ XRE 300 ರ‍್ಯಾಲಿ (Honda XRE 300 Rally) ಬೈಕ್ e20 ನಿಂದ e85 ಎಥೆನಾಲ್ ಮಿಶ್ರಿತ ಇಂಧನಗಳ ಮೇಲೆ ಚಲಿಸುತ್ತದೆ.
ಹೊಸ ಹೋಂಡಾ ರ‍್ಯಾಲಿ ಹೋಂಡಾದ ಏಕೈಕ ಎಥೆನಾಲ್ ಮೋಟಾರ್‌ಸೈಕಲ್ ಆಗಿದೆ. ಈ XRE 300 ರ‍್ಯಾಲಿ ಬೈಕ್ ಪ್ರಸ್ತುತ ಬ್ರೆಜಿಲ್‌ನಲ್ಲಿ ಫ್ಲೆಕ್ಸ್-ಇಂಧನ ವಾಹನವಾಗಿ ಮಾರಾಟ ಮಾಡುತ್ತಿದೆ. ಭಾರತದಲ್ಲಿಯೂ ಕೂಡ e20 ಗೆ ಬದಲಾಯಿಸಲು ಹೊಂದಿಸುವುದರೊಂದಿಗೆ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೋಂಡಾ XRE 300 ರ‍್ಯಾಲಿ ಬೈಕ್ 291.7 ಸಿಸಿ, ಇಂಧನ-ಇಂಜೆಕ್ಟೆಡ್, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.
ಇದು ಸಾಮಾನ್ಯ ಪೆಟ್ರೋಲ್ ಮತ್ತು ಫ್ಲೆಕ್ಸ್-ಇಂಧನ (ಪೆಟ್ರೋಲ್-ಎಥೆನಾಲ್) ಮಿಶ್ರಣಗಳಲ್ಲಿ 20 ರಿಂದ 85 ಶೇಕಡಾ ( e20-e85) ಎಥೆನಾಲ್ ಮಿಶ್ರಿತವಾಗಿದೆ. ಈ ಹೋಂಡಾ XRE 300 ಬೈಕ್ ದೊಡ್ಡ 13.8-ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಅನ್ನು ಹೊಂದಿದೆ, ಪೆಟ್ರೋಲ್‌ನಲ್ಲಿ ಚಾಲನೆಯಲ್ಲಿರುವಾಗ, ಹೋಂಡಾ XRE 300 ರ‍್ಯಾಲಿ ಬೈಕ್ 7,500 rpm ನಲ್ಲಿ 25.05 ಬಿಹೆಚ್‍ಪಿ ಪವರ್ ಮತ್ತು 27.06 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಥೆನಾಲ್ ಮಿಶ್ರಣವನ್ನು ಸಿಪ್ ಮಾಡುವಾಗ, ಹೋಂಡಾ XRE ರ‍್ಯಾಲಿ ಬೈಕ್ 7,500 rpm ನಲ್ಲಿ 25.24 bhp ಮತ್ತು 6,000 rpm ನಲ್ಲಿ 27.45 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಮತ್ತು ಚೈನ್ ಡ್ರೈವ್ ಸಹಾಯದಿಂದ ಹಿಂದಿನ ಚಕ್ರಕ್ಕೆ ಪವರ್ ಅನ್ನು ಕಳುಹಿಸುತ್ತದೆ. ಈ ಹೋಂಡಾ XRE 300 ರ‍್ಯಾಲಿ ಬೈಕ್ 2,195 mm ಉದ್ದ ಮತ್ತು 838 mm ಅಗಲ ಮತ್ತು 1,215 mm ಎತ್ತರವನ್ನು ಹೊಂದಿದೆ.
ಈ ರ‍್ಯಾಲಿ ಬೈಕ್ 1,417 mm ವೀಲ್‌ಬೇಸ್ ಅನ್ನು ಹೊಂದಿದೆ . ಇನ್ನು ಈ ಬೈಕ್ 259 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದ ಕಠಣವಾದ ರಸ್ತೆಗಳಲ್ಲಿ ಉಪಯೋಕ್ತವಾಗಿದೆ. ಇನ್ನು ಈ ಈ ಹೋಂಡಾ XRE 300 ರ‍್ಯಾಲಿ ಬೈಕ್ ಎತ್ತರವು 860 ಎಂಎಂ ಎತ್ತರದಲ್ಲಿದೆ. ಹೋಂಡಾ XRE 300 ರ‍್ಯಾಲಿ ಬೈಕ್ ಸೆಮಿ ಡಬಲ್ ಕ್ರಿಬ್ ಫ್ರೇಮ್ ಅನ್ನು ಹೊಂದಿದೆ ಮತ್ತು ಅದರ ಸಸ್ಪೆನ್ಶನ್ ಸೆಟಪ್ ಸ್ವಲ್ಪ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.
ಮುಂಭಾಗದಲ್ಲಿ, XRE300 ಸವಾರಿಗಳು 245 ಎಂಎಂ ಟ್ರಾವೆಲ್ ನೊಂದಿಗೆ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಮೋನೋಶಾಕ್ 225mm ಟ್ರ್ಯಾವೆಲ್ ಅನ್ನು ನೀಡಿದೆ ಇನ್ನು ಈ ಹೋಂಡಾ XRE 300 ರ‍್ಯಾಲಿ ಬೈಕಿನ ಮುಂಭಾಗದಲ್ಲಿ 21-ಇಂಚಿನ ಯುನಿಟ್ ಮತ್ತು ಹಿಂಭಾಗದಲ್ಲಿ 18-ಇಂಚಿನ ವ್ಹೀಲ್ ನೊಂದಿಗೆ ಸ್ಪೋಕ್ಡ್ ರಿಮ್‌ಗಳ ಮೇಲೆ ಸವಾರಿ ಮಾಡುತ್ತದೆ. ರಿಮ್‌ಗಳು 90/90 (ಮುಂಭಾಗ) ಮತ್ತು 120/80 (ಹಿಂಭಾಗ) ಟೈರ್‌ಗಳನ್ನು ಹೊಂದಿವೆ.
ಇನ್ನು ಪ್ರಮುಖವಾಗಿ ಹೋಂಡಾ XRE 300 ಫ್ಲೆಕ್ಸ್ ಇಂಧನದ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಈ ರ‍್ಯಾಲಿ ಬೈಕಿನಲ್ಲಿ 256 mm ಡಿಸ್ಕ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ 220 mm ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಎಬಿಎಸ್ ಅನ್ನು ಸಹ ನೀಡಲಾಗಿದೆ. ಹೋಂಡಾ ಎಕ್ಸ್‌ಆರ್‌ಇ 300 ಬೈಕಿನಲ್ಲಿ ಎತ್ತರದ ಸೀಟ್ ಮತ್ತು ಮೇಲಕ್ಕೆತ್ತಿದ ಎಕ್ಸಾಸ್ಟ್ ಸೇರಿದಂತೆ ವಿಶಿಷ್ಟ ಸಾಹಸ ಮೋಟಾರ್‌ಸೈಕಲ್ ಮುಖ್ಯಾಂಶಗಳನ್ನು ಹೊಂದಿದೆ. ಹೋಂಡಾ ಎಕ್ಸ್‌ಆರ್‌ಇ 300 ರ‍್ಯಾಲಿಯು ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸುತ್ತಲೂ ಸಂಪೂರ್ಣ ಎಲ್‌ಇಡಿ ಲೈಟಿಂಗ್ ಅನ್ನು ಸಹ ಹೊಂದಿದೆ.
ಇನ್ನು ಭಾರತದಲ್ಲಿ ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡು ಗ್ರಾಹಕ ಅಸಹಾಯಕನಂತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಪರಿಸ್ಥಿತಿಯಲ್ಲಿ ಸರಕಾರ ಕೂಡ ಇಂಧನ ದರ ನಿಯಂತ್ರ ಕಷ್ಟ ಎಂದು ಕೈಚೆಲ್ಲಿ ಕುಳಿತಿದೆ. ಇದಕ್ಕೊಂದು ಬೇರೆಯೇ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಹುಡುಕಬೇಕಾಗಿದೆ. ಹೀಗಾಗಿಯೇ ಪೆಟ್ರೋಲ್ ಜಾಗಕ್ಕೆ ಇಥೆನಾಲ್ ಬರಬಹುದು. ಮುಂದಿನ ಕೆಲವು ದಿನಗಳಲ್ಲಿ ಫ್ಲೆಕ್ಸ್ ಫ್ಯೂಯೆಲ್ ಇಂಜಿನ್ ಅನ್ನು ಮಾರುಕಟ್ಟೆಗೆ ತರಲಿದೆ.