Auto Expo 2023: ಬಹುನೀರಿಕ್ಷಿತ LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನ - ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ಭಾರತದಲ್ಲಿ ಪ್ರಸಿದ್ಧವಾಗಿದ್ದ ವಾಹನ ತಯಾರಿಕ ಕಂಪನಿ LML (ಲೋಹಿಯಾ ಮೆಷಿನರಿ ಲಿಮಿಟೆಡ್) ಮತ್ತೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಬಾರಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೆಹಲಿಯ ಆಟೋ ಎಕ್ಸ್‌ಪೋ ಪ್ರದರ್ಶಿಸಿದೆ. ಈ ಮೂಲಕ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದು, ಖರೀದಿದಾರರಿಗೆ ನಿರೀಕ್ಷೆಗಳು ಹೆಚ್ಚಿವೆ.

LML 2023ರ ಆಟೋ ಎಕ್ಸ್‌ಪೋದ ಮೂಲಕ ಮತ್ತೆ ರೀ-ಎಂಟ್ರಿ ಕೊಡಲು ಯೋಜಿಸುತ್ತಿದೆ ಎಂದು ಕಂಪನಿಯು ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಸದ್ಯ ಅದನ್ನು ನಿಜ ಮಾಡಿದೆ. ಭಾರತ ಗ್ರಾಹಕರಿಗೆ ತನ್ನ ಮೊದಲ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಗೆ ನೀಡುವ ಮುನ್ನ ಆಟೋ ಎಕ್ಸ್‌ಪೋದ ಎರಡನೇ ದಿನವಾದ ಇಂದು (ಜನವರಿ 12) ಅನಾವರಣ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಆದರೆ, ಗ್ರಾಹಕರು ಯಾವುದೇ ಮುಂಗಡ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

Auto Expo 2023: LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನ

ಸ್ಟಾರ್ ಸ್ಕೂಟರ್ ಮಾದರಿ ಪ್ರದರ್ಶಿಸುವ ಮೂಲಕ LML ಕಂಪನಿ, ಈಗಾಗಲೇ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಚೇತಕ್, ಟಿವಿಎಸ್ iQube, Ola S1, Vida V1, Simple one, ಮತ್ತು ಎಥರ್ 450Xಗೆ ಭಾರೀ ಪೈಪೋಟಿ ನೀಡಲು ಸಿದ್ಧವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಇದು ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದ್ದು, ಇದೊಂದು ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರಲ್ಲಿ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು LML ಕಂಪನಿ ನೀಡಿದೆ.

ಮಾರುಕಟ್ಟೆಯಲ್ಲಿರುವ ಸದ್ಯದ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡಿರುವ LML ಈ ಸ್ಕೂಟರ್ ಗೆ ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದರಲ್ಲಿ ವಿಶೇಷವಾಗಿ 360-ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೆ, DRLsಗಳೊಂದಿಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್ ಜೊತೆಗೆ ಹಿಂಭಾಗದಲ್ಲಿ ಮೊನೊಶಾಕ್, ರೈಡ್ ಮೋಡ್, ರಿವರ್ಸ್ ಮೋಡ್, TPMS ಸೇರಿದಂತೆ ಹಲವು ವೈಶಿಷ್ಠ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

Auto Expo 2023: LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನ

ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಪಡೆದಿರಲಿದೆ ಎಂದು LML ಖಚಿತಪಡಿಸಿದೆ. ಇದರೊಂದಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣವು ತನ್ನ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ. ಫುಟ್‌ಬೋರ್ಡ್‌ನಲ್ಲಿ ಬದಲಾಯಿಸಬಹುದಾದ ಬ್ಯಾಟರಿಯನ್ನು ಸೆಟಪ್ ಮಾಡಲಾಗಿದೆ. ಜೊತೆಗೆ ಬೂಟ್ ಸ್ಪೇಸ್ ಕೂಡ ತುಂಬಾ ಅತ್ಯುತ್ತಮವಾಗಿದ್ದು, ಒಂದು ಬೆಸ್ಟ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆ ಎಂದು ಹೇಳಬಹುದು.

LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 4.2 ಸೆಕೆಂಡುಗಳಲ್ಲಿ 40kmph ಟಾಪ್ ಸ್ವೀಡ್ ಪಡೆಯಲಿದ್ದು, ಎಕಾನಮಿ ಮತ್ತು ಪವರ್ ಎಂಬ ಎರಡು ರೈಡಿಂಗ್ ಮೋಡ್‌ ಆಯ್ಕೆಗಳನ್ನು ಹೊಂದಿರಲಿದ್ದು, ಜೊತೆಗೆ ಕ್ಯೂ-ಅಸಿಸ್ಟ್ ರಿವರ್ಸ್ ಮೋಡ್ ಅನ್ನು ಸಹ ಪಡೆದಿರಲಿದೆಯಂತೆ. 3.4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಅದು 100km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

Auto Expo 2023: LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನ

ಭಾರತ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ LML ಸುದೀರ್ಘ ಸಮಯದ ಬಳಿಕ ಮತ್ತೆ ರೀ-ಎಂಟ್ರಿ ಕೊಟ್ಟಿದೆ. ಹೊಸ ಇವಿ ಉತ್ಪಾದನೆ ಮಾಡಲು ಸುಮಾರು 500 ಕೋಟಿ ರೂ. ಬಂಡವಾಳ ಹೂಡಿದ್ದು, ಈ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದು, ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ 100-ಡೀಲರ್‌ಶಿಪ್ ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ. ಸ್ಟಾರ್ ಸ್ಕೂಟರ್ ಬಳಿಕ, ಭಾರತದ ಮಾರುಕಟ್ಟೆಗೆ ಮೂನ್‌ಶಾಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮತ್ತು ಓರಿಯನ್ ಎಲೆಕ್ಟ್ರಿಕ್ ಬೈಕ್‌ಗಳನ್ನು ಲಾಂಚ್ ಮಾಡಲಿದೆಯಂತೆ.

ಸದ್ಯ ಆಟೋ ಎಕ್ಸ್‌ಪೋದಲ್ಲಿ LML ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನೇ ಪ್ರದರ್ಶಿಸಲಾಗಿಲ್ಲ. ಹಲವು ದೇಶೀಯ ಕಂಪನಿಗಳು ತನ್ನ ಇವಿಗಳನ್ನು ಪ್ರದರ್ಶಿಸಿವೆ. ಟಾರ್ಕ್ ಮೋಟಾರ್ಸ್, ಕ್ರಾಟೋಸ್ X, ನವೀಕರಿಸಿದ ಕ್ರಾಟೋಸ್ R ಇ-ಬೈಕ್‌ ಅನಾವರಣ ಮಾಡಿದೆ. ಮುಂಬೈ ಮೂಲದ ಸ್ಟಾರ್ಟ್-ಅಪ್ 'ಲಿಗರ್ ಮೊಬಿಲಿಟಿ' ಎರಡು ಹೊಸ ಸೆಲ್ಫ್ - ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಲಿಗರ್ ಎಕ್ಸ್ ಮತ್ತು ಲಿಗರ್ ಎಕ್ಸ್ ಪ್ಲಸ್ ಅನ್ನು ಪ್ರದರ್ಶಿಸಿದೆ. ಒಟ್ಟಾರೆ ಗ್ರಾಹಕರು ಎದುರು ನೋಡುತ್ತಿರುವ ಹೊಸ ವಾಹನಗಳು ಈ ಬಾರಿ ಎಕ್ಸ್‌ಪೋದಲ್ಲಿ ಅನಾವರಣಗೊಂಡಿವೆ.

Most Read Articles

Kannada
English summary
Auto expo 2023 the much awaited lml star electric scooter showcased details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X