ಓಲಾ ಸ್ಕೂಟರ್‌ಗೆ ಸರಿಸಾಟಿಯೇ ಇಲ್ಲ.. ಭಾರತದಲ್ಲಿ ಹೊಸ ಯುಗವನ್ನು ಸೃಷ್ಟಿಸುತ್ತಾ?

ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಓಲಾ ಎಲೆಕ್ಟ್ರಿಕ್ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟಗಾರರಲ್ಲಿ ಒಂದಾಗಿ ಗುರುತುಸಿಕೊಂಡಿದೆ. ಸದ್ಯ ಓಲಾ ಎಲೆಕ್ಟ್ರಿಕ್ ತನ್ನ ಡಿಸೆಂಬರ್ 2022ರ ಮಾರಾಟ ವರದಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ವಿವರ ತಿಳಿಯೋಣ.

ಕಳೆದ ಡಿಸೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ 25 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಓಲಾ ಎಲೆಕ್ಟ್ರಿಕ್ 2022ರಲ್ಲಿ ಬರೋಬ್ಬರಿ 1.50 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ, ತನ್ನದೇ ಆದ ದಾಖಲೆ ನಿರ್ಮಿಸಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಓಲಾ ಎಲೆಕ್ಟ್ರಿಕ್‌ನ ಮಾರುಕಟ್ಟೆ ಪಾಲು ಶೇಕಡ 30 ರಷ್ಟಿದೆ ಎಂದು ಹೇಳಬಹುದು.

ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ತನ್ನ ಸ್ಕೂಟರ್‌ ಮಾರಾಟದ ಅಂಕಿಅಂಶವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಗಳನ್ನು ಮಾಡುತ್ತಿದ್ದು, ಇದರ ಭಾಗವಾಗಿ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಪ್ರಸ್ತುತ, ಓಲಾ ಎಲೆಕ್ಟ್ರಿಕ್ ಭಾರತದಾದ್ಯಂತ 100ಕ್ಕೂ ಹೆಚ್ಚು ಎಕ್ಸ್ಪೀರಿಯೆನ್ಸ್ ಸೆಂಟರ್ ಹೊಂದಿದೆ. ಅಲ್ಲದೆ, ಓಲಾ ಎಲೆಕ್ಟ್ರಿಕ್ ಮಾರ್ಚ್ ವೇಳೆಗೆ ಇನ್ನೂ 100 ಎಕ್ಸ್ಪೀರಿಯೆನ್ಸ್ ಸೆಂಟರ್ ಓಪನ್ ಮಾಡಲು ಯೋಜಿಸಿದೆ ಎಂದು ಸದ್ಯ ವರದಿಯಾಗಿದೆ.

ಓಲಾ ಎಲೆಕ್ಟ್ರಿಕ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 2 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ ಓಲಾ S1 ಮತ್ತು ಓಲಾ S1 Pro. ಇದಲ್ಲದೇ ಓಲಾ ಎಸ್1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಓಲಾ S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆ ಇನ್ನೂ ಪ್ರಾರಂಭವಾಗಿಲ್ಲ. ಓಲಾ ಎಲೆಕ್ಟ್ರಿಕ್ ಎಸ್ 1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಏಪ್ರಿಲ್ ಆರಂಭದಲ್ಲಿ ಗ್ರಾಹಕರಿಗೆ ತಲುಪಿಸಬಹುದು.

S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯ ಪ್ರಾರಂಭದ ನಂತರ, ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್‌ನ ಮಾರಾಟ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಏಕೆಂದರೆ Ola S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ತುಂಬಾ ಕಡಿಮೆಯಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್‌ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಪ್ರಸ್ತುತ 1.40 ಲಕ್ಷ ರೂ. ಇದ್ದು, ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ರೂ. ಇದೆ ಎಂದು ಹೇಳಬಹುದು.

ಆದರೆ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇವಲ 80 ಸಾವಿರ ರೂ. ಇದು ಗ್ರಾಹಕರಿಗೆ ಕೈಗೆಟುವ ದರವಾಗಿದೆ. ಇದರಿಂದ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದನ್ನು ನಾವು ಇಲ್ಲಿ ನೋಡಬಹುದು. ಓಲಾ ಎಲೆಕ್ಟ್ರಿಕ್ ಪ್ರಾರಂಭದಲ್ಲಿ ವಿತರಣೆಯಲ್ಲಿ ವಿಳಂಬ ಸೇರಿದಂತೆ ಹಲವು ತೊಂದರೆಗಳಿಗೆ ಒಳಗಾಯಿತು ಎಂದು ಹೇಳಬಹುದು.

ಈ ಕಾರಣಗಳಿಂದಾಗಿ ಓಲಾ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹಲವರು ಭಾವಿಸಿದ್ದರು. ಆದರೆ, ಇಲ್ಲಿ ನಡೆದಿರುವುದೇ ಬೇರೆ. ಓಲಾ ಎಲೆಕ್ಟ್ರಿಕ್ ಇದೀಗ ಒಂದೇ ತಿಂಗಳಲ್ಲಿ 25 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಪ್ರಗತಿಯನ್ನು ಸಾಧಿಸಿದೆ. ಓಲಾ ಎಲೆಕ್ಟ್ರಿಕ್ ಮುಂಬರುವ ವರ್ಷಗಳಲ್ಲಿ ಮಾರಾಟಕ್ಕೆ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರಿನಂತಹ ವಿವಿಧ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಗ್ರಾಹಕರನ್ನು ಸೆಳೆಯಬಹುದು.

ಗ್ರಾಹಕರ ಹಿತಾಸಕ್ತಿಗೆ ಆದ್ಯತೆ ನೀಡುವ ಓಲಾ, ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಮೂವ್ ಓಎಸ್ 3.0 ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಪರಿಚಯಿಸಿತು. ಈ OTA ಅಪ್‌ಡೇಟ್ S1 ಮತ್ತು S1 Pro ಸ್ಕೂಟರ್‌ಗಳಲ್ಲಿ ಹೈಪರ್ ಚಾರ್ಜಿಂಗ್, ಬ್ಲೂಟೂತ್ ಕಾಲಿಂಗ್, ಪಾರ್ಟಿ ಮೋಡ್, ರೈಡಿಂಗ್ ಮೂಡ್‌ಗಳು, ಅಡ್ವಾನ್ಸ್ಡ್ ರೀ- ಜನರೇಷನ್, ಪ್ರಾಕ್ಸಿಮಿಟಿ ಲಾಕ್, ಅನ್‌ಲಾಕ್, ಹಿಲ್ - ಹೋಲ್ಡ್ ಕಂಟ್ರೋಲ್ ಇತ್ಯಾದಿಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೊಸ ಖರೀದಿದಾರರನ್ನು ತನ್ನತ್ತ ಸೆಳೆಯಲು ಸಾಧ್ಯವಾಗುತ್ತದೆ.

Most Read Articles

Kannada
English summary
Ola sells over 25000 s1 s1 pro electric scooters in december 2022
Story first published: Tuesday, January 3, 2023, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X