ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

Written By:

ಬೈಕ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಜರ್ಮನಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಅದರ ಭಾರತೀಯ ಪಾಟ್ನರ್ ಟಿವಿಎಸ್ ಮೋಟಾರ್ಸ್ ಜಂಟಿಯಾಗಿ ಸದ್ಯದಲ್ಲೇ ಭಾರತಕ್ಕೆ ನೂತನ ಬೈಕ್‌ಗಳನ್ನು ಪರಿಚಯಿಸಲಿದೆ.

ಯಾವ ರೀತಿಯಲ್ಲಿ ಬಜಾಜ್ ಹಾಗೂ ಕೆಟಿಎಂ ಪಾಲುದಾರಿಕೆಯಿದೆಯೋ ಅದೇ ರೀತಿಯಲ್ಲಿ ಬಿಎಂಡಬ್ಲ್ಯು-ಟಿವಿಎಸ್ ಪಾಲುದಾರಿಕೆ ಕಂಡುಬರಲಿದೆ. ಅಂದರೆ ಬಜಾಜ್-ಕೆಟಿಎಂ ಬೈಕ್‌ಗಳಿಗೆ ನೇರ ಪ್ರತಿಸ್ಪರ್ಧಿಗಳನ್ನು ಬಿಎಂಡಬ್ಲ್ಯು-ಟಿವಿಎಸ್ ಕಣಕ್ಕಿಳಿಸಲಿದೆ.

ಸಬ್ 500ಸಿಸಿ ವಿಭಾಗದಲ್ಲಿ ಬಿಎಂಡಬ್ಲ್ಯು-ಟಿವಿಎಸ್ ಜಂಟಿಯಾಗಿ ಬೈಕ್ ಉತ್ಪನ್ನವಾಗಲಿದೆ. ದ್ವಿಚಕ್ರ ವಲಯದಲ್ಲಿ ಎರಡು ಕಂಪನಿಗಳು ಸಾಧಿಸಿರುವ ಯಶಸ್ಸನ್ನು ನೋಡಿದರೆ ನೂತನ ಬೈಕ್‌ಗಳು ಹೆಚ್ಚು ಸದ್ದು ಮಾಡುವ ನಿರೀಕ್ಷೆಯಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ 250ಸಿಸಿ ಬೈಕ್‌ಗಳು ಎಂಟ್ರಿ ಕೊಡುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಎರಡು ಮೂರು ವರ್ಷಗಳಲ್ಲಿ ಸಬ್ 250ಸಿಸಿ ಬೈಕ್ ಕೂಡಾ ಎಂಟ್ರಿ ಕೊಡಲಿದೆ.

ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

ಬಿಎಂಡಬ್ಲ್ಯು-ಟಿವಿಎಸ್‌ನಿಂದ ಆಗಮನವಾಗಲಿರುವ ಸಬ್ 500ಸಿಸಿ ಬೈಕ್‌ಗಳು ನೆಕ್ಡ್ ಅಥವಾ ಅಡ್ವೆಂಚರ್ ವರ್ಷನ್ ಪಡೆದುಕೊಳ್ಳಲಿದೆ.

(ಚಿತ್ರದಲ್ಲಿ ನೀವು ನೋಡುತ್ತಿರುವುದು ಇದುವರೆಗೆ ಬಿಎಂಡಬ್ಲ್ಯು‌ನಿಂದ ಉತ್ಪಾದನೆಯಾಗಿರುವ ಅತಿ ಕಡಿಮೆ ಎಂಜಿನ್ ಮಾನದಂಡ ಹೊಂದಿರುವ ಬೈಕ್ ಜಿ650ಎಸ್ ಆಗಿದೆ.)

ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

ಭಾರತದಲ್ಲಿ ನಿರ್ಮಾಣವಾಗಲಿರುವ ಮೊದಲ 250ಸಿಸಿ ಬೈಕ್ 2015ರಲ್ಲಿ ಲಾಂಚ್ ಆಗಲಿದೆ. ಇದು ಪ್ರಮುಖವಾಗಿಯೂ ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಇತರ ಏಷ್ಯಾ ರಾಷ್ಟ್ರಗಳನ್ನು ಗುರಿಯಾಗಿರಿಸಲಿದೆ. ಅಲ್ಲದೆ ಯುರೋಪ್ ಹಾಗೂ ಬ್ರಿಟನ್‌ನಲ್ಲೂ ಇದರ ಮಾರಾಟವಾಗಲಿದೆ.

ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

ದೇಶದಲ್ಲಿ ಬಜಾಜ್ ಪ್ರಾಬಲ್ಯಕ್ಕೆ ಇತಿಶ್ರೀ ಹಾಡುವುದೇ ಟಿವಿಎಸ್ ಇರಾದೆಯಾಗಿದೆ. ಇನ್ನೊಂದೆಡೆ ಯುರೋಪ್ ಮಾರುಕಟ್ಟೆಯಲ್ಲಿ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ಬೈಕ್ ಬಯಸುವ ಗ್ರಾಹಕರಿಗೆ ಬಿಎಂಡಬ್ಲ್ಯು ಮೊಟೆರಾಡ್ ಉತ್ತಮ ಆಯ್ಕೆಯಾಗಿರಲಿದೆ. ಈ ಮೂಲಕ ಡ್ಯೂಕ್ ಬೈಕ್‌ಗಳನ್ನು ಹಿಂದಿಕ್ಕಿ ಮಗದೊಮ್ಮೆ ನಂ.1 ಪಟ್ಟ ವಶಪಡಿಸಿಕೊಳ್ಳುವ ಇರಾದೆ ಹೊಂದಿದೆ.

ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

ಹಾಗಿದ್ದರೂ ನೂತನ ಟಿವಿಎಸ್ ಬೈಕ್‌ಗಳು ಅಪಾಚೆ, ಪಲ್ಸರ್ ಎನ್‌ಎಸ್ ರೇಂಜ್‌ನಲ್ಲಿ ಅಥವಾ ನೂತನ ಸಿರೀಸ್‌ನಲ್ಲಿ ಬರಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಿಹಿ ಸುದ್ದಿ; ಬಿಎಂಡಬ್ಲ್ಯು-ಟಿವಿಎಸ್‌ ಬೈಕ್ ನಿರೀಕ್ಷಿಸಿ

ವರ್ಷಾರಂಭದಲ್ಲಿ ಬಿಎಂಡಬ್ಲ್ಯು-ಟಿವಿಎಸ್ ಒಪ್ಪಂದ ಪ್ರಕಾರ ಬಿಎಂಡಬ್ಲ್ಯುತಂತ್ರಗಾರಿಕೆಯನ್ನು ಟಿವಿಎಸ್ ಪಡೆದುಕೊಳ್ಳಲಿದೆ. ಇದಕ್ಕೆ ಪ್ರತಿಯಾಗಿ ಟಿವಿಎಸ್ ಸ್ಥಳೀಯ ತಯಾರಕ ಘಟಕದ ಸೌಲಭ್ಯಗಳು ಬಿಎಂಡಬ್ಲ್ಯುಗೆ ಲಭಿಸಲಿದೆ.

English summary
BMW Motorrad and its Indian partner TVS Motors are set to pull off a Bajaj-KTM. As in the duo will build sub 500cc, most likely 250cc, possibly even sub-250cc in India in the next two to three years.
Story first published: Tuesday, October 22, 2013, 11:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark