ಹರ್ಲಿಯಿಂದ 29 ಲಕ್ಷಗಳಷ್ಟು ದುಬಾರಿ ಬೈಕ್ ಬಿಡುಗಡೆ

Written By:

ಜಗತ್ತಿನ ಅತಿ ಪುರಾತನ ಹಾಗೂ ಪ್ರಖ್ಯಾತ ಬೈಕ್ ಉತ್ಪಾದಕ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್, ಭಾರತದಲ್ಲಿ ನೂತನ ಬೈಕ್ ಲಾಂಚ್ ಮಾಡಿದೆ. ಅತ್ಯಂತ ಬೆಲೆಬಾಳುವ ಹರ್ಲಿ 2014 ಪ್ರೊಜೆಕ್ಟ್ ರಷ್‌ಮೋರ್ ಸ್ಟ್ರೀಟ್ ಗ್ಲೈಡ್ ಎಕ್ಸ್ ಶೋ ರೂಂ ದರ 29 ಲಕ್ಷ ರು.ಗಳಾಗಿವೆ.

ಹರ್ಲಿಯ ರಷ್‌ಮೋರ್ ಯೋಜನೆಯ ಅಂಗವಾಗಿ ಈ ಬೈಕ್ ಬಿಡುಗಡೆಯಾಗಿದೆ. ಜಾಗತಿಕವಾಗಿ ಟೂರಿಂಗ್ ಮೋಟಾರ್‌ಸೈಕಲ್‌ಗಳ ಸುಧಾರಣೆ ಮಾಡುವುದು ಹರ್ಲಿ ಡೇವಿಡ್ಸನ್ ರಷ್‌ಮೋರ್ ಪ್ರೊಜೆಕ್ಟ್‌ನ ಉದ್ದೇಶವಾಗಿದೆ.

ಪ್ರೊಜೆಕ್ಟ್ ರಷ್‌ಮೋರ್ ಯೋಜನೆಯಡಿಯಲ್ಲಿ ಬರುವ ಬೈಕ್‌ಗಳು ಹೈಟೆಕ್ ವೈಶಿಷ್ಟ್ಯಗಳ ಜತೆಗೆ ತಾಜಾ ಎಂಜಿನ್ ತಂತ್ರಗಾರಿಕೆಗಳನ್ನು ಹೊಂದಿರಲಿದೆ. ಇದು ರೈಡರ್‌ಗೆ ನೈಜ ಟೂರಿಂಗ್ ಅನುಭವ ನೀಡಲು ನೆರವಾಗಲಿದೆ.

To Follow DriveSpark On Facebook, Click The Like Button
ಹರ್ಲಿಯಿಂದ 29 ಲಕ್ಷಗಳಷ್ಟು ದುಬಾರಿ ಬೈಕ್ ಬಿಡುಗಡೆ

ಪ್ರೊಜೆಕ್ಟ್ ರಷ್‌ಮೋರ್ ಪ್ರಮುಖವಾಗಿಯೂ ನಾಲ್ಕು ಸಿದ್ಧಾಂತಗಳನ್ನು ಒಳಗೊಂಡಿರಲಿದೆ. ಅವುಗಳೆಂದರೆ

ನಿಯಂತ್ರಣ, ಮಾಹಿತಿ, ಅನುಭವ ಹಾಗೂ ಶೈಲಿ.

ಕಂಟ್ರೋಲ್ (Control)

ಕಂಟ್ರೋಲ್ (Control)

ಪರಿಷ್ಕೃತ ಡ್ಯುಯಲ್ ಹ್ಯಾಲೊಜೆನ್ ಲೈಟಿಂಗ್, ರಿಫ್ಲೆಕ್ಸ್ ಲಿಂಕ್ಡ್ ಬ್ರೇಕ್ ಜತೆ ಆಟಿ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಸುಧಾರಿತ ಫ್ರಂಟ್ ಸಸ್ಫೆಷನ್, 49 ಎಂಎಂ ಫಾರ್ಕ್, ಟ್ವಿನ್ ಕ್ಯಾಮ್ 103 ಪವರ್ ಟ್ರೈನ್.

ಮೇಲೆ ತಿಳಿಸಿದ ಎಲ್ಲ ವೈಶಿಷ್ಟಗಳು 2014 ಸ್ಟ್ರೀಟ್ ಗ್ಲೈಡ್ ಬೈಕ್ ಒಳಗೊಂಡಿರಲಿದೆ.

 ಮಾಹಿತಿ ( Infotainment)

ಮಾಹಿತಿ ( Infotainment)

ಕಲರ್ ಸ್ಕೀಮ್, 4.3 ಇಂಚಿನ ಹೈ ರೆಸಲ್ಯೂಷನ್ ಪರದೆ, 5.25 ಇಂಚಿನ ಸ್ಪೀಕರ್, ಬ್ಲೂಟೂತ್, ಯುಎಸ್‌ಬಿ ಕನೆಕ್ಟಿವಿಟಿ, ಧ್ವನಿ ಗುರುತಿಸುವಿಕೆ, ಟೆಕ್ಸ್ಟ್ ಟು ಸ್ಪೀಚ್ ತಂತ್ರಗಾರಿಕೆ, ಜಿಪಿಎಸ್ ನೇವಿಗೇಷನ್

ಅನುಭವ (feel)

ಅನುಭವ (feel)

ಸುಧಾರಿತ ಏರೋಡೈನಾಮಿಕ್ ವಿನ್ಯಾಸ, ಪರಿಷ್ಕೃತ ಸಿಟ್ಟಿಂಗ್ ವ್ಯವಸ್ಥೆ. ಇವೆಲ್ಲವೂ ಹೆಚ್ಚಿನ ಆರಾಮದಾಯಕತೆಗೆ ಸಾಕ್ಷಿಯಾಗಿದೆ.

ಶೈಲಿ (style)

ಶೈಲಿ (style)

ಮರುರೂಪ ಪಡೆದ ಟೂರ್ ಪ್ಯಾಕೇಜ್, ಬ್ಯಾಡ್ಜ್, ಒನ್ ಟಚ್ ಡಿಸೈನ್ ಎಲೆಮಂಟ್, ಸ್ಲೀಕರ್ ಫೆಂಡರ್, ಹಗುರವಾದ ಅಲ್ಯೂಮಿನಿಯಂ ವೀಲ್, ಒನ್ ಟಚ್ ಇಂಧನ ಟ್ಯಾಂಕ್ ಡೋರ್ ಎಲ್ಲವೂ ಹರ್ಲಿ ಶೈಲಿಯನ್ನು ಇತರ ಬೈಕ್‌ಗಳಿಗಿಂತ ಭಿನ್ನವಾಗಿಸಲಿದೆ.

English summary
Harley Davidson has launched 2014 Project Rushmore Street Glide, one of its most advanced cruiser bike in India. The cruiser, part of the Rushmore Project comes powered by a ‘High Output Twin Cam 103' engine. The bike will com to India via the import route and hence will be priced at INR 29 lakhs (ex-showroom).
Story first published: Friday, October 11, 2013, 15:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark