ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

By Nagaraja

ಕಳೆದ ಕೆಲವು ವರ್ಷಗಳ ವರೆಗೆ ದೇಶದ ದ್ವಿಚಕ್ರ ವಾಹನಗಳ ಪೈಕಿ ಸಾಮಾನ್ಯರಲ್ಲಿ ಅತಿ ಸಾಮಾನ್ಯರು ಮಾತ್ರ ಬಳಕೆ ಮಾಡುವಂತಹ ಬೈಕ್ ಅಂದರೆ ಹೀರೊ ಹೋಂಡಾ ಸ್ಲ್ಪೆಂಡರ್ ಆಗಿತ್ತು. ಇದೇ ಕಾರಣಕ್ಕಾಗಿ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಬೈಕ್‌ಗಳಲ್ಲಿ ಸ್ಲ್ಪೆಂಡರ್ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು.

2014 ಆಟೋ ಎಕ್ಸ್ ಪೋ

ಗರಿಷ್ಠ ಇಂಧನ ಕ್ಷಮತೆಯು ಸ್ಲ್ಪೆಂಡರ್ ಯಶಸ್ಸಿನ ಹಿಂದಿನ ರಹಸ್ಯವಾಗಿತ್ತು. ಇದೀಗ ಹೀರೊ ಹಾಗೂ ಹೋಂಡಾ ನಡುವಣ ಬಾಂಧವ್ಯ ಕಡಿತದ ಬಳಿಕ ಪರಿಸ್ಥಿತಿ ಭಿನ್ನವಾಗಿದೆ. ಆದರೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಸ್ಲ್ಪೆಂಡರನ್ನು ಹೊಸ ರೂಪದಲ್ಲಿ ಪ್ರದರ್ಶಿಸಿದೆ. ಅದು ಹೇಗೆ ಅಂತೀರಾ? ಸ್ಲೈಡರ್ ವೀಕ್ಷಿಸಿ...

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಹೌದು, ಬಡವರ ಕೆಫೆ ರೇಸರ್ ಎಂದೇ ವಿಶ್ಲೇಷಿಸಬಹುದಾದ ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್ ಮೋಟಾರುಸೈಕಲ್, ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ನಿಮಗೆಲ್ಲರಿಗೂ ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬಗ್ಗೆ ಸ್ಪಷ್ಟ ಅರಿವಿದೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದ ಚಿಂತನೆ ಮಾಡಿರುವ ಹೀರೊ, 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ನಿಮ್ಮ ಮಾಹಿತಿಗಾಗಿ, ಹಾಗೊಂದು ವೇಳೆ ನಿರ್ಮಾಣ ವರ್ಷನ್ ಪಡೆದ್ದಲ್ಲಿ ದೇಶದ ಚೊಚ್ಚಲ 100 ಸಿಸಿ ಕೆಫೆ ರೇಸರ್ ಮೋಟಾರುಸೈಕಲ್ ಎಂಬ ಬಿರುದಿಗೆ ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್ ಪಾತ್ರವಾಗಲಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಇದು ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ 97.2 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7.7 ಬಿಎಚ್‌ಪಿ (8.04 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಕೂಡಾ ಪಡೆದುಕೊಳ್ಳಲಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಇನ್ನು ವಿನ್ಯಾಸದ ವಿಚಾರಕ್ಕೆ ಬಂದ್ದಲ್ಲಿ ಹೆಸರಲ್ಲೇ ಸೂಚಿಸಿರುವಂತೆಯೇ ಹ್ಯಾಂಡಲ್ ಬಾರ್ ಸೇರಿದಂತೆ ಎಲ್ಲವೂ ಕೆಫೆ ರೇಸರ್‌ಗೆ ತಕ್ಕುದಾದ ವಿನ್ಯಾಸ ಪಡೆದುಕೊಂಡಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಇದು ಕ್ಲಾಸಿಕ್ ಹೆಡ್ ಲೈಟ್ ಹಾಗೂ ಟೈಲ್ ಲೈಟ್ ಪಡೆದುಕೊಂಡಿದೆ. ಹಾಗೆಯೇ ಆಕ್ರಮಣಕಾರಿ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಕಂಪನಿ ಯಶ ಸಾಧಿಸಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

109 ಕೆ.ಜಿ ಭಾರ ಹೊಂದಿರುವ ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್ ಕೆಫೆ ರೇಸರ್, 159 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಹೊಂದಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಇನ್ನುಳಿದಂತೆ ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಸಸ್ಪೆಷನ್ ನಿಯಂತ್ರಿಸಲಿದೆ. ಹಾಗೆಯೇ 5 ಹಂತದ ಹೊಂದಾಣಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಕೂಡಾ ಹೊಂದಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಇದು 1.4 ಮೀಸಲು ಜತೆಗೆ 11 ಲೀಟರ್ ಇಂಧನ ಟ್ಯಾಂಕ್ ಕೂಡಾ ಹೊಂದಿರಲಿದೆ. ಹಾಗೆಯೇ 1935 ಎಂಎಂ ಉದ್ದ, 720 ಎಂಎಂ ಅಗಲ ಮತ್ತು 1020 ಎಂಎಂ ಎತ್ತರ ಕೂಡಾ ಹೊಂದಿರಲಿದೆ.

ಬಡವರ ಕೆಫೆ ರೇಸರ್ - ಹೀರೊ ಸ್ಲ್ಪೆಂಡರ್ ಪ್ರೊ ಕ್ಲಾಸಿಕ್

ಅಂತಿಮವಾಗಿ ದರ ಇತ್ಯಾದಿ ಮಾಹಿತಿಗಳು ಹೊರಬಂದಿಲ್ಲ. ಪ್ರಸ್ತುತ ಚಿತ್ರಗಳನ್ನು ಆನಂದಿಸಿರಿ.

Most Read Articles

Kannada
English summary
Hero Splendor Pro Classic Cafe Racer revealed at 2014 Auto Expo
Story first published: Friday, February 7, 2014, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X