ಡ್ರೀಮ್ ನಿಯೋ ಯಶಸ್ಸಿನ ಹಿಂದಿರುವ ಗುಟ್ಟೇನು?

By Nagaraja

ಬಿಡುಗಡೆಯಾದ ನಾಲ್ಕು ತಿಂಗಳೊಳಗೆ ಹೋಂಡಾ ಡ್ರೀಮ್ ನಿಯೋ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿಯ ಹಬ್ಬದ ಆವೃತ್ತಿಯಲ್ಲಿ ಭಾರಿ ಮಾರಾಟ ದಾಖಲಿಸಿರುವ ಹೋಂಡಾ ಟು ವೀಲರ್ಸ್, ಒಟ್ಟು 80,000 ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ಪೈಕಿ ವಿಶ್ಲೇಷಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಡ್ರೀಮ್ ನಿಯೋ 110ಸಿಸಿ ಜನಸಾಮಾನ್ಯರಿಗೆ ನಿಜಕ್ಕೂ ಕನಸಿನ ಬೈಕ್ ಎನಿಸಿಕೊಂಡಿದೆ. ಅಷ್ಟಕ್ಕೂ ಹೋಂಡಾ ಡ್ರೀಮ್ ನಿಯೋ ಯಶಸ್ಸಿನ ಗುಟ್ಟೇನು? ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ..

ಡ್ರೀಮ್ ನಿಯೋ ಯಶಸ್ಸಿನ ಹಿಂದಿರುವ ಗುಟ್ಟೇನು?

ಡ್ರೀಮ್ ನಿಯೋ ಹಾಗೂ ಡ್ರೀಮ್ ಯುಗಾ ಬೈಕ್‌ಗಳಿಗೆ ಗ್ರಾಮೀಣ ಸೇರಿದಂತೆ ನಗರ ಪ್ರದೇಶ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿದೆ.

ಡ್ರೀಮ್ ನಿಯೋ ಯಶಸ್ಸಿನ ಹಿಂದಿರುವ ಗುಟ್ಟೇನು?

ಈ ಎರಡು ಬೈಕ್‌ಗಳು 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 8.3 ಪಿಎಸ್ ಪವರ್ (8.3 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅತ್ಯುತ್ತಮ ಎಂಜಿನ್

ಅತ್ಯುತ್ತಮ ಎಂಜಿನ್

ವಿಶ್ಲೇಷಕರ ಪ್ರಕಾರ ಹೋಂಡಾ ಡ್ರೀಮ್ ನಿಯೋ ಯಶಸ್ಸಿನಲ್ಲಿ ಎಂಜಿನ್ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ 110ಸಿಸಿ ಎಂಜಿನ್ ಈ ವಿಭಾಗದ ಬೈಕ್‌ಗಳಲ್ಲಿ ಅತ್ಯುತ್ತಮವೆನಿಸಿಕೊಂಡಿದೆ.

ಆಕರ್ಷಕ ಗ್ರಾಫಿಕ್ಸ್

ಆಕರ್ಷಕ ಗ್ರಾಫಿಕ್ಸ್

ಇನ್ನು ನೋಡುಗರ ಮನ ಸೆಳೆಯುವಂತಹ ಗ್ರಾಫಿಕ್ಸ್ ವಿನ್ಯಾಸವನ್ನು ಹೋಂಡಾ ನಿಯೋ ಹೊಂದಿದೆ.

ಸೂಪರ್ಬ್ ಮೈಲೇಜ್

ಸೂಪರ್ಬ್ ಮೈಲೇಜ್

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಭಾರತೀಯ ಅಧ್ಯಯನ ಸಂಸ್ಥೆಯಿಂದ ಪಡೆದಿರುವ ಮಾನ್ಯತೆಯ ಪ್ರಕಾರ ಡ್ರೀಮ್ ನಿಯೋ ಪ್ರತಿ ಲೀಟರ್‌ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸ್ಮಾರ್ಟ್ ಇನ್ಸ್ಟ್ರುಮೆಂಟ್ ಪ್ಯಾನೆಲ್

ಸ್ಮಾರ್ಟ್ ಇನ್ಸ್ಟ್ರುಮೆಂಟ್ ಪ್ಯಾನೆಲ್

ಬಿಳಿ ವೃತ್ತಕಾರವನ್ನು ಹೊಂದಿರುವ ಮೀಟರ್ ಕನ್ಸೋಲ್ ಸೇರಿದ ಇನ್ಸ್ಟ್ರುಮೆಂಟ್ ಪ್ಯಾನೆಲ್ ಹೆಚ್ಚು ಆಕರ್ಷಕವೆನಿಸಿದೆ.

ಉದ್ದವಾದ ಸೀಟು

ಉದ್ದವಾದ ಸೀಟು

ಉದ್ದವಾದ ಆಸನ ವ್ಯವಸ್ಥೆ ಲಗತ್ತಿಸಿರುವುದರೊಂದಿಗೆ ಸಹ ಚಾಲಕರಿಗೂ ಉತ್ತಮ ಚಾಲನಾ ಅನುಭವ ನೀಡಲಿದೆ.

ಸೊಗಸಾದ ಅಲಾಯ್ ವೀಲ್

ಸೊಗಸಾದ ಅಲಾಯ್ ವೀಲ್

ಇದರ ಆರು ಸ್ಪೋಕ್ ಅಲಾಯ್ ವೀಲ್‌ಗಳು ಬೈಕ್‌ನ ಒಟ್ಟಾರೆಯಾದ ವಿನ್ಯಾಸವನ್ನು ಹೆಚ್ಚಿಸುತ್ತಿದೆ.

Most Read Articles

Kannada
English summary
It was seen that Dream Neo, the 110cc bike introduced just four months, ago was a major seller, with sales already touching the 1 lakh unit mark.
Story first published: Saturday, November 16, 2013, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X