ವೆಸ್ಪಾದಿಂದ ಪ್ರೀಮಿಯಂ ಸ್ಕೂಟರ್ ಸದ್ಯದಲ್ಲೇ ಬಿಡುಗಡೆ
ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಟಲಿ ಮೂಲದ ಪಿಯಾಜಿಯೊ ಕಂಪನಿಯು, ದೇಶಕ್ಕೆ ಮತ್ತೊಂದು ವೆಸ್ಪಾ ಬ್ರಾಂಡ್ ಸದ್ಯದಲ್ಲೇ ಪರಿಚಯಿಸಲಿದೆ.
ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಅತ್ಯಧಿಕ ಯಶಸ್ಸು ಸಾಧಿಸಿರುವ ಪಿಯೊಜಿಯಾ, ಪ್ರಸಕ್ತ ಸಾಲಿನಲ್ಲೇ ವೆಸ್ಪಾ 946 ಬಿಡುಗಡೆ ಮಾಡಲಿದೆ.
ನಿಮ್ಮ ಮಾಹಿತಿಗಾಗಿ, ಕಳೆದ ತಿಂಗಳಷ್ಟೇ ಯುರೋಪ್ ಮಾರುಕಟ್ಟೆಗೆ ವೆಸ್ಪಾ 946 ಆಗಮನವಾಗಿತ್ತು. ಇದೀಗ ಭಾರತ ರಸ್ತೆಗಿಳಿಯಲು ಸಜ್ಜಾಗುತ್ತಿದೆ ಎಂದು ಕಂಪನಿಯು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಭಾರತದ ವೆಸ್ಪಾ ಅಭಿಮಾನಿಗಳು ವೆಸ್ಪಾ 946 ಬ್ರಾಂಡ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಮೂಲಕ ದೇಶದಲ್ಲಿ ಹೆಚ್ಚಿನ ಮಾರುಕಟ್ಟೆ ಪಡೆಯುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಪಿಯಾಜಿಯೊಗೆ ವೆಸ್ಪಾ 946 ಬ್ರಾಂಡ್ ದೇಶದಲ್ಲಿ ಲಾಂಚ್ ಮಾಡಲು ಆಟೋಮೋಟಿಕ್ ಅಧ್ಯಯನ ಸಂಸ್ಥೆಯಿಂದ ಅಂಗೀಕಾರ ಪಡೆಯುವ ಅಗತ್ಯವಿದೆ.

ಪ್ರಸ್ತುತ ಪುಣೆ ತಲಹದಿಯ ಆಟೋಮೋಟಿಕ್ ಅಧ್ಯಯನ ಸಂಸ್ಥೆ, ಪಿಯಾಜಿಯೊ ನೂತನ ಮಾಡೆಲನ್ನು ಪರಿಶೀಲಿಸುತ್ತಿದೆ.

ಸಿಬಿಯು ಅಥವಾ ಕಂಪ್ಲೀಟ್ ಬಿಲ್ಡ್ ಯುನಿಟ್ ಮುಖಾಂತರ ಪಿಯಾಜಿಯೊ ನೂತನ ವೆಸ್ಪಾ 946 ಬ್ರಾಂಡ್ ದೇಶಕ್ಕೆ ಪರಿಯಚವಾಗಲಿದೆ.

ವೆಸ್ಪಾ 946 ಜತೆಗೆ ಇನ್ನೊಂದು ಮಾಡೆಲನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ. ಹಾಗೆಯೇ ಮುಂದಿನ ವರ್ಷ ಒಂದೆರಡು ಹೊಸ ಮಾಡೆಲ್ ಕೂಡಾ ಆಗಮನವಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ವೆಸ್ಪಾ ಎಲ್‌ಎಕ್ಸ್ ಲಾಂಚ್‌ನೊಂದಿಗೆ ದೇಶದಲ್ಲಿ ನೂತನ ಪ್ರೀಮಿಯಂ ಸ್ಕೂಟರ್ ವಿಭಾಗವನ್ನು ಪಿಯಾಜಿಯೊ ಸೃಷ್ಟಿ ಮಾಡಿತ್ತು.

ಪಿಯಾಜಿಯೊ ಈಗಾಗಲೇ 50,000ಕ್ಕೂ ಹೆಚ್ಚು ವೆಸ್ಪಾ ಮಾದರಿಗಳನ್ನು ಮಾರಾಟ ಮಾಡಿವೆ.

ವೆಸ್ಪಾ ವಿಎಕ್ಸ್ ಮಾದರಿ ಎಕ್ಸ್ ಶೋ ರೂಂ ದರ 71,911 ರು.ಗಳಾಗಿವೆ.

ಕ್ಲಾಸಿಕ್ ವೆಸ್ಪಾ ಇತಿಹಾಸದತ್ತ ಹದ್ದುನೋಟ

ರಿಂಗಣಿಸಲಿದೆ ವೆಸ್ಪಾ ಟೇಬಲ್ ಅಲಾರ್ಮ್

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ವೆಸ್ಪಾದಿಂದ ಇನ್ನೊಂದು ಕ್ಲಾಸಿಕ್ ಸ್ಕೂಟರ್ ಲಾಂಚ್



Click it and Unblock the Notifications








