ನಿರೀಕ್ಷೆಗೂ ಮೀರಿ ಅಗ್ಗದ ದರದಲ್ಲಿ ಎಂಟ್ರಿ ಕೊಟ್ಟ ಕಾಂಟಿನೆಂಟಲ್ ಜಿಟಿ

Written By:

ದೇಶದ ವಾಹನ ಪ್ರಿಯರು ಕಾತರದಿಂದ ಕಾದು ಕುಳಿತಿದ್ದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಕೊನೆಗೂ ದೇಶದ ರಸ್ತೆ ಪ್ರವೇಶಿಸಿದೆ. ಗ್ರಾಹಕರ ನಿರೀಕ್ಷೆಯನ್ನು ಮೀರಿ ಅಗ್ಗದ ದರದಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಎಂಟ್ರಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಇದಕ್ಕೂ ಮೊದಲು ಐಚರ್ ಮಾತೃಸಂಸ್ಥೆಯ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಎರಡು ವರೆ ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸುವುದಾಗಿ ಅಂದಾಜಿಸಲಾಗಿತ್ತು. ಆದರೆ ಇವೆಲ್ಲವನ್ನು ಮೀರಿ ನಿಂತಿರುವ ಕಾಂಟಿನೆಂಟಲ್ ಜಿಟಿ ದೆಹಲಿ ಎಕ್ಸ್ ಶೋ ರೂಂ ದರ 2.05 ರು.ಗಳಲ್ಲಿ ಆಗಮನವಾಗಿದೆ.

ರಾಯಲ್ ಎನ್‌ಫೀಲ್ಡ್ ವಿಶೇಷ ಸುದ್ದಿಗಳಿಗಾಗಿ ಭೇಟಿ ಕೊಡಿರಿ

ಗೋವಾದಲ್ಲಿ ನಡೆದ ರಾಲಿಯಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಸೇರಿದಂತೆ ದೇಶದ ಪ್ರಮುಖ ಮಾಧ್ಯಮ ಮಿತ್ರರು ಪಾಲ್ಗೊಂಡಿದ್ದರು. ಈ ಮೂಲಕ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಉತ್ತಮ ಅವಕಾಶವೊದಗಿ ಬಂದಿತ್ತು.

To Follow DriveSpark On Facebook, Click The Like Button
ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಕೆಲವು ತಿಂಗಳುಗಳ ಹಿಂದೆಯಷ್ಟೇ ಬ್ರಿಟನ್‌ನಲ್ಲಿ ಜಾಗತಿಕ ಲಾಂಚ್ ಕಂಡಿದ್ದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಇದೀಗ ಭಾರತದಲ್ಲೂ ಸದ್ದು ಮಾಡಲಾರಂಭಿಸಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಎನ್‌ಫೀಲ್ಡ್, ಬುಲೆಟ್, ಕ್ಲಾಸಿಕ್ ಹಾಗೂ ಥಂಡರ್‌ಬರ್ಡ್ ಮಾರಾಟದಲ್ಲಿ ಖ್ಯಾತಿಯನ್ನು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ನೆರೆಯ ತಮಿಳುನಾಡಿನ ಓರಗಡಂ ಘಟಕದಲ್ಲಿ ಉತ್ಪಾದನೆಯಾಗಲಿರುವ ಕಾಂಟಿನೆಂಟಲ್ ಜಿಟಿ ಗ್ರಾಹಕರ ಕೈಸೇರಲಿದೆ. ಹಾಗೆಯೇ ಅತ್ಯಂತ ವೇಗದಲ್ಲಿ ಉತ್ಪಾದನೆ ಕಾರ್ಯ ನಡೆಯುತ್ತಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

2012 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಕಾಂಟಿನೆಂಟಲ್ ಜಿಟಿ 2014 ಆಟೋ ಎಕ್ಸ್ ಪೋ ಆರಂಭಕ್ಕೆ ಮೊದಲೇ ರಸ್ತೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಇದರ ಸಿಂಗಲ್ ಸಿಲಿಂಡರ್ 525 ಸಿಸಿ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ 29 ಬಿಎಚ್‌ಪಿ (44 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಕೆಫೆ ರೇಸರ್ ಮಾದರಿಯಿಂದ ಸ್ಫೂರ್ತಿ ಪಡೆದಿರುವ ಕಾಂಟಿನೆಂಟಲ್ ಜಿಟಿ ದೂರದ ಪ್ರಯಾಣಕ್ಕೆ ಸೂಕ್ತವೆನಿಸಲಿದೆ. ಇದು ಗರಿಷ್ಠ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

5 ಸ್ಪೀಡ್ ಗೇರ್ ಬಾಕ್ಸ್‌ನಿಂದಲೂ ನಿಯಂತ್ರಿಸಲ್ಪಟ್ಟಿರುವ ಈ ಗಾಡಿ ಗಂಟೆಗೆ ಗರಿಷ್ಠ 140 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದ್ದಲ್ಲಿ ಪ್ರತಿ ಲೀಟರ್‌ಗೆ 25 ಕೀ.ಮೀ. ಇಂಧನ ಕ್ಷಮತೆ ನೀಡುವುದಾಗಿ ನಿರೀಕ್ಷಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

500 ಸಿಸಿ ವಿಭಾಗದಲ್ಲಿ ಅತಿ ಹಗುರ ಎನಿಸಿಕೊಂಡಿರುವ ಕಾಂಟಿನೆಂಟಲ್ ಜಿಟಿ ಇಂಧನ ಟ್ಯಾಂಕ್ ಭರ್ತಿ ಮಾಡಿದರೂ 184 ಕೆ.ಜಿ. ಭಾರವನ್ನಷ್ಟೇ ಹೊಂದಿರಲಿದೆ. ಇದು 13.5 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ನೂತನ ಕಾಂಟಿನೆಂಟಲ್ ಜಿಟಿ ಕಳೆದ 60 ವರ್ಷಗಳಲ್ಲೇ ರಾಯಲ್ ಎನ್‌ಫೀಲ್ಡ್‌ನಿಂದ ಆಗಮನವಾಗಿರುವ ಮೊದಲ ಕೆಫೆ ರೇಸರ್ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಬೈಕ್ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

1960ರ ಕಾಲಘಟ್ಟದ ಕೆಫೆ ರೇಸರ್‌ನಿಂದ ಸ್ಫೂರ್ತಿ ಪಡೆದು ನೂತನ ಕಾಂಟಿನೆಂಟಲ್ ಜಿಟಿ ನಿರ್ಮಾಣ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಇದು ತನ್ನದೇ ಆದ ವಿಶಿಷ್ಟ ಕೆಫೆ ರೇಸರ್ ಶೈಲಿಯನ್ನು ಪಡೆದುಕೊಂದಿದ್ದು, ಸಿಂಗಲ್ ಸೀಟರ್ ವ್ಯವಸ್ಥೆ ಪಡೆದುಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಲಾಂಚ್

ಇದು ಇತ್ತೀಚಿನ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್‌ನಿಂದ ಉತ್ಪಾದನೆಯಾದ ಅತ್ಯಂತ ವೇಗವಾದ, ಹಗುರವಾದ ಮತ್ತು ಅತ್ಯಂತ ಶಕ್ತಿಶಾಲಿ ಬುಲೆಟ್ ಎನಿಸಿಕೊಂಡಿದೆ.

English summary
Eicher Motors expanded its motorcycle range in the country with the launch of 'Continental GT' priced at Rs 2.05 lakh (on-road Delhi).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark