ದೇಶದಲ್ಲಿ ಟ್ರಯಂಪ್ ಅಬ್ಬರ; 10 ಮಾದರಿ ಲಾಂಚ್

Written By:

ಬ್ರಿಟನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟ್ರಯಂಪ್ ಮೋಟಾರ್ ಸೈಕಲ್ಸ್, ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಅಷ್ಟೇ ಯಾಕೆ ವಾಹನ ಪ್ರಿಯರ ನಿರೀಕ್ಷೆಯಂತೆಯೇ 10 ನೂತನ ಮಾದರಿಗಳನ್ನು ಟ್ರಯಂಪ್ ದೇಶಕ್ಕೆ ಪರಿಚಯಿಸಿದೆ. ಈ ಪೈಕಿ ಆರು ಮಾದರಿಗಳು ದೇಶದಲ್ಲೇ ಸ್ಥಳೀಯವಾಗಿ ಉತ್ಪಾದನೆಯಾಗಲಿದ್ದು, ಉಳಿದ ನಾಲ್ಕು ಮಾಡೆಲ್‌ಗಳು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಆಮದಾಗಲಿದೆ. ಸದ್ಯ ಟ್ರಯಂಟ್ ಬೈಕ್‌ಗಳು ದೇಶಕ್ಕೆ ಎಂಟ್ರಿ ಕೊಟ್ಟಿರುವುದಂತೂ ನಿಜ. ಆದರೆ ದೇಶದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಷ್ಟೇ ಉತ್ತರ ದೊರಕಲಿದೆ.

ಬೆಲೆ ಎಷ್ಟು...?

ಭಾರತೀಯ ಗ್ರಾಹಕರ ಮೊದಲ ಪ್ರಶ್ನೆ ಬೆಲೆ ರೇಂಜ್ ಎಷ್ಟಾಗಿರಬಹುದು ಎಂಬುದಾಗಿದೆ. ಭಾರತದಲ್ಲಿ ಟ್ರಯಂಪ್‌ನ ಅತಿ ಕಡಿಮೆಯ ಬೊನೆವಿಲ್ಲೆ 5.7 ಲಕ್ಷ ರು.ಗಳಿಂದ ದುಬಾರಿ ರಾಕೆಟ್ III ರೋಡ್‌ಸ್ಟರ್ 20 ಲಕ್ಷ ರು.ಗಳಷ್ಟು ಬೆಲೆಬಾಳುತ್ತವೆ. ಉಳಿದಂತೆ ಸ್ಟ್ರೀಟ್ ಟ್ರಿಪಲ್ ಮತ್ತು ಡೇಟೋನಾ ಬೈಕ್‌ಗಳು ಅನುಕ್ರಮವಾಗಿ 7.5 ಮತ್ತು 11.4 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಭಾರತಕ್ಕೆ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಎಂಟ್ರಿ

ನಿರ್ಮಾಣ ಹಾಗೂ ಡೀಲರ್‌ಶಿಪ್

ಅಂದ ಹಾಗೆ ಟ್ರಯಂಪ್ ಬೈಕ್‌ಗಳು ಹರಿಯಾಣದ ಮಾನೇಸರ್ ಘಟಕದಲ್ಲಿ ಜೋಡಣೆಯಾಗಲಿದೆ. ಅಲ್ಲದೆ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಡೀಲರ್‌ಶಿಪ್ ಹೊಂದಿರಲಿದೆ. ಮುಂದಿನ ವರ್ಷದಲ್ಲಿ ಕೊಲ್ಕತ್ತಾ, ಪುಣೆ, ಅಹಮದಾಬಾದ್, ಚಂಡೀಗಡ, ಜೈಪುರ, ಚೆನ್ನೈ, ಕೊಚ್ಚಿ ಮತ್ತು ಗೋವಾ ಕೇಂದ್ರಗಳಿಗೂ ವಿಸ್ತರಿಸಲಾಗುವುದು.

ಟ್ರಯಂಪ್ ಅಬ್ಬರ ಬಲು ಜೋರು

ಬುಕ್ಕಿಂಗ್...

ಡಿಸೆಂಬರ್ ತಿಂಗಳಲ್ಲಿ ಟ್ರಯಂಪ್ ಬೈಕ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ನಮ್ಮ ಬೆಂಗಳೂರು ಹೊರ ವಲಯದಲ್ಲೂ ಸದ್ಯದಲ್ಲೇ ಟ್ರಯಂಪ್ ನೂತನ ಘಟಕ ತೆರೆದುಕೊಳ್ಳಲಿದೆ.

To Follow DriveSpark On Facebook, Click The Like Button
ಟ್ರಯಂಪ್ ಬೊನೆವಿಲ್ಲೆ (Bonneville)

ಟ್ರಯಂಪ್ ಬೊನೆವಿಲ್ಲೆ (Bonneville)

ದರ ಮಾಹಿತಿ: 5.7 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 865 ಸಿಸಿ, 68 ಪಿಎಸ್ @ 7500 ಆರ್‌ಪಿಎಂ ಹಾಗೂ 68 ಎನ್‌ಎಂ @ 5800 ಆರ್‌ಪಿಎಂ.

ಟ್ರಯಂಪ್ ಬೊನೆವಿಲ್ಲೆ ಟಿ100

ಟ್ರಯಂಪ್ ಬೊನೆವಿಲ್ಲೆ ಟಿ100

ದರ ಮಾಹಿತಿ: 6.6 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 865 ಸಿಸಿ, 68 ಪಿಎಸ್ @ 7500 ಆರ್‌ಪಿಎಂ ಹಾಗೂ 68 ಎನ್‌ಎಂ @ 5800 ಆರ್‌ಪಿಎಂ.

ಟ್ರಯಂಪ್ ಡೇಟೋನಾ 675ಆರ್ (Daytona)

ಟ್ರಯಂಪ್ ಡೇಟೋನಾ 675ಆರ್ (Daytona)

ದರ ಮಾಹಿತಿ: 11.4 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 675 ಸಿಸಿ, 128 ಪಿಎಸ್ @ 12500 ಆರ್‌ಪಿಎಂ ಹಾಗೂ 75 ಎನ್‌ಎಂ @ 11900 ಆರ್‌ಪಿಎಂ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್

ಟ್ರಯಂಪ್ ಸ್ಟ್ರೀಟ್ ಟ್ರಿಪಲ್

ದರ ಮಾಹಿತಿ: 7.5 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 675 ಸಿಸಿ, 106 ಪಿಎಸ್ @ 11850 ಆರ್‌ಪಿಎಂ ಹಾಗೂ 98 ಎನ್‌ಎಂ @ 9750 ಆರ್‌ಪಿಎಂ.

ಟ್ರಯಂಪ್ ಸ್ಪೀಡ್ ಟ್ರಿಪಲ್

ಟ್ರಯಂಪ್ ಸ್ಪೀಡ್ ಟ್ರಿಪಲ್

ದರ ಮಾಹಿತಿ: 10.4 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 1050 ಸಿಸಿ, 135 ಪಿಎಸ್ @ 9400 ಆರ್‌ಪಿಎಂ ಹಾಗೂ 111 ಎನ್‌ಎಂ @ 7750 ಆರ್‌ಪಿಎಂ.

ಟ್ರಯಂಪ್ ಥ್ರಕ್ಸ್ಟನ್ (Thruxton)

ಟ್ರಯಂಪ್ ಥ್ರಕ್ಸ್ಟನ್ (Thruxton)

ದರ ಮಾಹಿತಿ: 6.7 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 865 ಸಿಸಿ, 69 ಪಿಎಸ್ @ 7400 ಆರ್‌ಪಿಎಂ ಹಾಗೂ 69 ಎನ್‌ಎಂ @ 5800 ಆರ್‌ಪಿಎಂ.

ಟ್ರಯಂಪ್ ರಾಕೆಟ್ III ರೋಡ್‌ಸ್ಟರ್

ಟ್ರಯಂಪ್ ರಾಕೆಟ್ III ರೋಡ್‌ಸ್ಟರ್

ದರ ಮಾಹಿತಿ: 20 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 2294 ಸಿಸಿ, 148 ಪಿಎಸ್ @ 5750 ಆರ್‌ಪಿಎಂ ಹಾಗೂ 221 ಎನ್‌ಎಂ @ 2750 ಆರ್‌ಪಿಎಂ.

ಟ್ರಯಂಪ್ ಟ್ರಿಗರ್ ಎಕ್ಸ್‌ಪ್ಲೋರರ್

ಟ್ರಯಂಪ್ ಟ್ರಿಗರ್ ಎಕ್ಸ್‌ಪ್ಲೋರರ್

ದರ ಮಾಹಿತಿ: 17.9 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 1215 ಸಿಸಿ, 137 ಪಿಎಸ್ @ 9300 ಆರ್‌ಪಿಎಂ ಹಾಗೂ 121 ಎನ್‌ಎಂ @ 6400 ಆರ್‌ಪಿಎಂ.

ಟ್ರಯಂಪ್ ಟ್ರಿಗರ್ 800 ಎಕ್ಸ್‌ಸಿ

ಟ್ರಯಂಪ್ ಟ್ರಿಗರ್ 800 ಎಕ್ಸ್‌ಸಿ

ದರ ಮಾಹಿತಿ: 12 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 800 ಸಿಸಿ, 95 ಪಿಎಸ್ @ 9300 ಆರ್‌ಪಿಎಂ ಹಾಗೂ 79 ಎನ್‌ಎಂ @ 7850 ಆರ್‌ಪಿಎಂ.

 ಟ್ರಯಂಪ್ ಥಂಡರ್‌ಬರ್ಡ್ ಸ್ಟ್ರೋಮ್

ಟ್ರಯಂಪ್ ಥಂಡರ್‌ಬರ್ಡ್ ಸ್ಟ್ರೋಮ್

ದರ ಮಾಹಿತಿ: 12.49 ಲಕ್ಷ ರು.

ಎಂಜಿನ್ ಮತ್ತು ನಿರ್ವಹಣೆ: 1699 ಸಿಸಿ, 98 ಪಿಎಸ್ @ 5200 ಆರ್‌ಪಿಎಂ ಹಾಗೂ 156 ಎನ್‌ಎಂ @ 2950 ಆರ್‌ಪಿಎಂ.

English summary
Triumph Motorcycles has officially arrived in India, with the launch of a total 10 new models. That's right, the British motorcycle maker has brought almost its entire lineup, but only 6 of these will be assembled locally, while the remaining four will arrive through the Completely Built-up Unit (CBU) route.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark