ವಾಹನ ಪ್ರದರ್ಶನದಲ್ಲಿ ಷೆವರ್ಲೆ ಕಾರುಗಳ ರಾಶಿ
2008ರ ವಾಹನ ಪ್ರದರ್ಶನದಲ್ಲಿ ಷೆವರ್ಲೆ ಕ್ಯಾಪ್ಟಿವಾ ಅನಾವರಣಗೊಂಡಿತ್ತು. ಇದೀಗ 2012ರ ವಾಹನ ಪ್ರದರ್ಶನದಲ್ಲಿ ಜನರಲ್ ಮೋಟರ್ಸ್ ಕಂಪನಿಯು Chevrolet Captiva 2.2 AT ಆವೃತ್ತಿಯನ್ನು ಅನಾವರಣ ಮಾಡಿದೆ. ಈ ಕಾರು ಶೀಘ್ರದಲ್ಲಿ ದೇಶದ ಮಾರುಕಟ್ಟೆಯಲ್ಲಿ ದೊರಕಲಿದೆ.

ಕ್ಯಾಪ್ಟಿವಾ 2.0 ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆವೃತ್ತಿಯು 2.2 ಲೀಟರಿನ ಎಂಜಿನ್, 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಇದರ ಸ್ಪೋರ್ಟಿ ಮತ್ತು ಆಕರ್ಷಕ ಹೊರ ವಿನ್ಯಾಸ ಗಮನಸೆಳೆಯುತ್ತದೆ. ಡ್ಯೂಯಲ್ ರೋ ಹೀಟಿಂಗ್, ವೆಂಟಿಲೇಷನ್ ಮತ್ತು ಏರ್ ಕಂಡಿಷನ್ ಇತ್ಯಾದಿ ಫೀಚರುಗಳು ಇವೆ.
ದೆಹಲಿ ವಾಹನ ಪ್ರದರ್ಶನದಲ್ಲಿ ಕಾಮರೊ ಕನ್ವರ್ಟಿಬಲ್, ಕೊರ್ ವೆಟ್ ಸ್ಟ್ರಿಂಗರಿ ಕಾನ್ಸೆಪ್ಟ್, ಕ್ರೂಝ್ ರೇಸಿಂಗ್ ಕಾರು ಮುಂತಾದ ಕಾರುಗಳಿದ್ದವು. ಜೊತೆಗೆ ಕಾರುಗಳ ಸುತ್ತ ಮುತ್ತ ಹಿಮಾಲಯ 2011 ಅಡ್ವಾಂಚರ್ ರೇಸಿನಲ್ಲಿ ಗೆಲುವು ಪಡೆದ ರೈಡರುಗಳು ಹಾಯ್ ಎನ್ನುತ್ತಿದ್ದರು.
ಷೆವರ್ಲೆ ನೆಕ್ಸ್ಟ್ ವಿಭಾಗದಲ್ಲಿ ನೂತನ ಹ್ಯಾಚ್ ಬ್ಯಾಕ್ ಕಾರು ಷೆವರ್ಲೆ ಸೇಲ್ ಮತ್ತು ಷೆವರ್ಲೆ ಎಂಪಿವಿ ಕೂಡ ಇತ್ತು. ಈ ಕಾರುಗಳು ನಾಳೆ ಅಂದರೆ ಜನವರಿ 6ರಂದು ಅನಾವರಣಗೊಳ್ಳಲಿವೆ. ಉಳಿದಂತೆ ಷೆವರ್ಲೆ ಬೀಟ್ ಡೀಸಲ್ ಮತ್ತು ಷೆವರ್ಲೆ ಬೀಟ್ ಮ್ಯೂಸಿಕ್ ಅಡಿಷನ್ ಕಾರುಗಳು ಕೂಡ ಇದ್ದವು.
ಷೆವರ್ಲೆ ತಂತ್ರಜ್ಞಾನ ಮತ್ತು ಅನ್ವೆಷಣೆ ವಿಭಾಗದಲ್ಲಿ ಷೆವರ್ಲೆ ವೋಲ್ಟ್, ಬ್ಯಾಟರಿ ವಾಹನ ಷೆವರ್ಲೆ ಬೀಟ್ ಬಿಇವಿ, ಷೆವರ್ಲೆ ಇಎನ್ ವಿ ಮತ್ತು ಷೆವರ್ಲೆ ಸ್ಪಾರ್ಕ್ ಎಲ್ ಪಿಜಿ ಆವೃತ್ತಿಗಳಿದ್ದವು.
ಷೆವರ್ಲೆ ಪರ್ಫಾಮೆನ್ಸ್ ಮಳಿಗೆಗಳಲ್ಲಿ ಅತ್ಯಧಿಕ ಕಾರ್ಯಕ್ಷಮತೆಯ ಕಾರುಗಳನ್ನು ಕಂಪನಿ ಜೋಡಿಸಿತ್ತು. ಷೆವರ್ಲೆ ಕಮರೊ ಕನ್ವರ್ಟಿಬಲ್, ಷೆವರ್ಲೆ ಕೊವರ್ಟೆ ಕಾನ್ಸೆಪ್ಟ್ ಸೇರಿದಂತೆ ಒಟ್ಟು ಹದಿನೈದು ಕಾರುಗಳನ್ನು ಕಂಪನಿಯು ಪ್ರದರ್ಶನದಲ್ಲಿ ಜೋಡಿಸಿತ್ತು. (ದೆಹಲಿ ವಾಹನ ಜಾತ್ರೆಯ ನೇರ ಪ್ರಸಾರ)


Click it and Unblock the Notifications








