ಹೋಂಡಾ ಸಿಬಿಆರ್250ಆರ್: ಹೊಸ ಗಾನಾ ಬಜಾನ

ಕಳೆದ ವರ್ಷ ದೇಶದಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದಿರುವ ಬೈಕ್ ಹೋಂಡಾ ಸಿಬಿಆರ್250ಆರ್. ಇದೀಗ ಹೋಂಡಾ ಕಂಪನಿ(ಎಚ್ಎಂಎಸ್ಐ)ಯು ಸಿಬಿಆರ್250ಆರ್ ಬೈಕಿನ ಪರಿಷ್ಕೃತ ಆವೃತ್ತಿಯನ್ನು ಅನಾವರಣ ಮಾಡಿದೆ.

Honda to release new colours in CBR250R

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದೇಶದ ರಸ್ತೆಗೆ 250 ಸಿಸಿಯ ಸಿಬಿಆರ್ ಬೈಕ್ ಆಗಮಿಸಿತ್ತು. ಮುಖ್ಯವಾಗಿ ನಗರಗಳಲ್ಲಿ ಈ ಬೈಕ್ ಖರೀದಿ ಭರಾಟೆ ಜೋರಾಗಿತ್ತು. ಇದೀಗ ಕಂಪನಿಯು ಹೋಂಡಾ ಸಿಬಿಆರ್250ಆರ್ ಬೈಕಿಗೆ ಇನ್ನಷ್ಟು ಬಣ್ಣ ಹಚ್ಚಿದೆ.

ಬೈಕ್ ಪ್ರೇಮಿಗಳಿಗೆ ಇಷ್ಟವಾಗುವಂತೆ ನೀಲಿ ತ್ರಿವರ್ಣ ಬಣ್ಣಗಳಲ್ಲಿ ನೂತನ ಸಿಬಿಆರ್250ಆರ್ ಬರಲಿದೆ. ಅಂದರೆ ಪರ್ಲ್ ಹೆರೊನ್ ಬ್ಲೂ ಟ್ರೈಕಲರ್ ಬಣ್ಣದಿಂದ ಸಿಬಿಆರ್ 250ಆರ್ ಗೆ ಹೆಚ್ಚು ಸ್ಪೋರ್ಟಿ ಲುಕ್ ಬಂದಿದೆ.

ಹೋಂಡಾ ಸಿಬಿಆರ್250ಆರ್ ಬೈಕ್ ಲಿಕ್ವಿಡ್ ಕೂಲ್ಡ್ 250ಸಿಸಿ, 4 ಸ್ಟ್ರೋಕ್, 4 ಕವಾಟದ ಸಿಂಗಲ್ ಸಿಲಿಂಡರ್ ಡಿಒಎಚ್ ಸಿ ಎಂಜಿನ್ ಹೊಂದಿದೆ. ಈ ಎಂಜಿನ್ 25 ಅಶ್ವಶಕ್ತಿ ಮತ್ತು 22.9 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

250ಸಿಸಿ ಸೆಗ್ಮೆಂಟಿನಲ್ಲಿ ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಹೋಂಡಾ ಸಿಬಿಆರ್250ಆರ್ ಬೈಕ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಇನ್ನು ಮುಂದೆ ಹೋಂಡಾ ಸಿಬಿಆರ್250ಆರ್ ಬೈಕ್ ಸ್ಟಾಂಡರ್ಡ್ ಮತ್ತು ಸಿ-ಎಬಿಎಸ್ ಆವೃತ್ತಿಗಳಲ್ಲಿ ದೊರಕುತ್ತಿದೆ.

ಇದನ್ನು ಓದಿ: ಕಾಲೇಜು ತರುಣರಿಗಿಷ್ಟವಾದ ಹೋಂಡಾ ಸಿಬಿಆರ್150ಆರ್ ರಸ್ತೆಗೆ

More from DriveSpark

Article Published On: Wednesday, January 11, 2012, 11:13 [IST]
English summary
Honda to release new colours in CBR250R. New Sporty tri-colour pearl blue introduced for biking enthusiasts. Company unveiled refreshed CBR250R.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+