ಟಾಟಾ ಸಫಾರಿ ಸ್ಟ್ರೋಮ್: ರೀ ಇದು ಸೂಪರ್ ಸಫಾರಿ
ದೆಹಲಿ ವಾಹನ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್ ನೂತನ ತಲೆಮಾರಿನ ಟಾಟಾ ಸ್ಟ್ರೋಮ್ ಸಫಾರಿ ಕಾರನ್ನು ಪರಿಚಯಿಸಿದೆ. ಇದು ಆಕರ್ಷಕ ಸ್ಟೈಲ್ ಮತ್ತು ಕಾರ್ಯಕ್ಷಮತೆಯ ಸಫಾರಿಯಾಗಿದೆ. ಇದರ ಎಕ್ಸ್ ಟೀರಿಯರ್ ಮತ್ತು ಇಂಟಿರಿಯರ್ ಆಕರ್ಷಕವಾಗಿದೆ.

ಟಾಟಾ ಸ್ಟ್ರೋಮ್ ಸಫಾರಿಯ ಐಷಾರಾಮಿ ಸೀಟುಗಳು, ಡ್ಯೂಯಲ್ ಏರ್ ಕಂಡಿಷನ್ ಇತ್ಯಾದಿಗಳು ಆರಾಮದಾಯಕತೆ ಸವಾರಿಗೆ ಪೂರಕವಾಗಿದೆ. ಸಫಾರಿ ಸ್ಟ್ರೋಮ್ 2.2 ಲೀಟರಿನ 16 ಕವಾಟದ ಕಾಮನ್ ರೈಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿರುವ ಸ್ಟ್ರೋಮ್ ನಲ್ಲಿ ಹತ್ತು ಹಲವು ಫೀಚರುಗಳಿವೆ.
ಸುರಕ್ಷಿತ ಸವಾರಿಗೆ ಪೂರಕವಾಗಿ ಇಬಿಡಿಯೊಂದಿಗೆ ಆಂಡಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಡಿಸ್ಕ್ ಬ್ರೇಕ್, ನೂತನ ವಿನ್ಯಾಸದ ಸ್ಟಿಯರಿಂಗ್ ವೀಲ್, ಡ್ಯೂಯಲ್ ಎಸ್ಆರ್ಎಸ್ ಏರ್ ಬ್ಯಾಗ್ ಮುಂತಾದ ಫೀಚರುಗಳಿವೆ.
ಟಾಟಾ ಮೋಟರ್ಸ್ ಹೊರತಂದ ಕಾನ್ಸೆಪ್ಟ್ ವಾಹನಗಳನ್ನು ಮುಂದಿನ ಪುಟದಲ್ಲಿ ನೋಡಿ.


Click it and Unblock the Notifications








