ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

Written By:

ಸ್ಪೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ತನ್ನ ಹೊಸ ಮಾದರಿಯ ರೋಡ್‌ಸ್ಟರ್ ಬೈಕ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಹೊಸ ಬೈಕಿನ ಹತ್ತಾರು ವಿನೂತನ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಬೈಕ್ ಉತ್ಪಾದನೆಯಲ್ಲಿ 100 ವರ್ಷಗಳ ಅನುಭವ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಸ್ಟೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ತನ್ನದೇ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ವಿಶ್ವದ ಮೂಲೆ ಮೂಲೆಗಳಲ್ಲೂ ಜನಪ್ರಿಯತೆ ಪಡೆದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಸದ್ಯ ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ರೋಡ್‌ಸ್ಟರ್ ಬೈಕ್ ಪರಿಚಯ ಮಾಡಲು ಸಿದ್ಧಗೊಂಡಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಆಪ್ ರೋಡಿಂಗ್ ಬೈಕ್ ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿರುವ ರೋಡ್‌ಸ್ಟರ್ ಬೈಕ್, ವಿನೂತನ ವಿನ್ಯಾಸಗಳಿಂದಾಗಿ ದೀರ್ಘ ಕಾಲದ ಪ್ರಯಾಣದಲ್ಲೂ ಹೊಸ ಅನುಭುತಿ ನೀಡಲಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಸ್ಪೋರ್ಟ್ಸ್ ಬೈಕ್ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಲು ಮುಂದಾಗಿರುವ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್ ಬೈಕ್ 1200ಸಿಸಿ ಎಂಜಿನ್ ಹೊಂದಿದ್ದು, ಮೈಲೇಜ್ ವಿಚಾರದಲ್ಲೂ ಉತ್ತಮವಾಗಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ರೋಡ್‌ಸ್ಟರ್ ಬೈಕ್ ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಸೀಟು ಮತ್ತು ಫ್ಯೂಲ್ ಟ್ಯಾಂಕ್ ವಿನ್ಯಾಸ ಅದ್ಬುತವಾಗಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಹೊಸ ಮಾದರಿಯ ರೋಡ್‌ಸ್ಟರ್ ಬೈಕ್ ಮಾದರಿಯು 12.5 ಲೀಟರ್ ಫ್ಯೂಲ್ ಟ್ಯಾಂಕ್ ವ್ಯವಸ್ಥೆ ಹೊಂದಿದ್ದು, ವಿಶೇಷ ವಿನ್ಯಾಸದ ಹೆಡ್‌ಲ್ಯಾಂಪ್, ಹ್ಯಾಂಡಲ್ ಬಾರ್ ಮತ್ತು 5 ಸ್ಪೋಕ್ ವೀಲ್ಹ್ ವ್ಯವಸ್ಥೆ ಹೊಂದಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಬೈಕ್‌ನಲ್ಲಿ ಎಲ್ಲ ಮಾಹಿತಿಗಳನ್ನು ನೀಡುವ ಡಿಜಿಟಲ್ ಅನ್‌ಲಾಗ್ ವ್ಯವಸ್ಥೆ ಇದ್ದು, ಇದರಲ್ಲಿನ ಕೆಲವು ಹೊಸ ವೈಶಿಷ್ಟ್ಯತೆಗಳು ಬೈಕ್ ಸವಾರಿಗೆ ಅನುಕೂಲವಾಗಲಿವೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

1200ಸಿಸಿ ಎಂಜಿನ್ ಹೊಂದಿರುವ ರೋಡ್‌ಸ್ಟರ್ ಬೈಕ್ ಮಾದರಿಯಲ್ಲಿ ಏರ್-ಕೂಲ್ಡ್ ಅಳವಡಿಕೆ ಇದ್ದು, 96ಎನ್ಎಂ ಮತ್ತು 3500ಆರ್‌ಪಿಎಂ ಉತ್ಪಾದನೆ ಮಾಡಬಲ್ಲದು.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಹೊಚ್ಚ ಹೊಸ ರೋಡ್‌ಸ್ಟರ್ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅಳವಡಿಕೆ ಇದ್ದು, ಧೀರ್ಘ ಕಾಲದ ಪ್ರಯಾಣದ ಅವಧಿಯಲ್ಲೂ ಎಂಜಿನ್ ಶಾಖವನ್ನು ಹೊರಹಾಕಿ ಬಹುಬೇಗ ತಂಪು ಮಾಡಬಲ್ಲ ತಂತ್ರಜ್ಞಾನ ಹೊಂದಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ರೋಡ್‌ಸ್ಟರ್ ಬೈಕ್ 250 ಕೆಜಿ ತೂಕ ಹೊಂದಿದ್ದು, ನಗರಪ್ರದೇಶಗಳಲ್ಲಿನ ಟ್ರಾಫಿಕ್‌ನಲ್ಲೂ ಸಲೀಸಾಗಿ ನುಗ್ಗುವಂತೆ ಬೈಕ್ ವಿನ್ಯಾಸಗೊಳಿಸಲಾಗಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಇನ್ನು ಹೊಸ ಬೈಕಿನಲ್ಲಿರುವ ಸುರಕ್ಷಾ ವಿಚಾರಗಳ ಬಗ್ಗೆ ಮಾತಾನಾಡುವುದಾರೆ, ರೋಡ್‌ಸ್ಟರ್ ಮಾದರಿಯಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದು, 150ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ರೋಡ್‌ಸ್ಟರ್ ಮಾದರಿಯಲ್ಲಿ ಸುರಕ್ಷೆತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬೈಕಿನ ಎರಡು ಬದಿಯಲ್ಲೂ 300ಎಂಎಂ ಡಿಸ್ಕ್ ಬ್ರೇಕ್ ಅಳವಡಿಕೆ ಮಾಡಲಾಗಿದೆ.

ಮೊದಲ ಚಾಲನಾ ವಿಮರ್ಶೆ- ಹೊಸ ಖದರ್‌ ಪಡೆದ ಹಾರ್ಲೆ ಡೇವಿಡ್ಸನ್ ರೋಡ್‌ಸ್ಟರ್

ಹೊಸ ಬೈಕ್ ಬಗ್ಗೆ ನನ್ನ ಅನಿಸಿಕೆ

ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.9,85,000ಗಳಿಗೆ ಬಿಡುಗಡೆಯಾಗಲಿರುವ ರೋಡ್‌ಸ್ಟರ್ ಬೈಕ್ ಆಪ್ ರೋಡಿಂಗ್ ಪ್ರಿಯರಿಗೆ ಹೇಳಿ ಮಾಡಿದ ಬೈಕ್. ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ರೋಡ್‌ಸ್ಟರ್ ಹೊಸ ದಾಖಲೆ ಸೃಷ್ಠಿಸುವುದಲ್ಲಿ ಯಾವುದೇ ಸಂದೇಹವಿಲ್ಲ.

English summary
The Roadster is the most sport-oriented version in Harleys’ Sportster line-up.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark