ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

2006ರಲ್ಲಿ ಮಾರುಕಟ್ಟೆಗೆ ಬಂದ ಹೀರೋ ಹೋಂಡಾ ಪ್ಲೆಶರ್ ಸ್ಕೂಟರ್‍‍ನ ಜಾಹೀರಾತಿನಲ್ಲಿ, ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಹೇಳುವ ವೈ ಶುಡ್ ಬಾಯ್ಸ್ ಹ್ಯಾವ್ ಆಲ್ ದಿ ಫನ್ ಎಂಬ ಟ್ಯಾಗ್‍‍ಲೈನ್ ಬಹು ಜನಪ್ರಿಯವಾಗಿತ್ತು. ಈ ಟ್ಯಾಗ್ ಲೈನ್‍‍ನಿಂದಾಗಿ ಬಹು ಸಂಖ್ಯೆಯ ಮಹಿಳಾ ಗ್ರಾಹಕರನ್ನು ಸ್ಕೂಟರ್ ಸೆಗ್‍‍ಮೆಂಟಿಗೆ ಸೆಳೆದು, ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಾಗಿತ್ತು.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಕಡಿಮೆ ತೂಕವನ್ನು ಹೊಂದಿದ್ದು ಸಹ ಮಾರಾಟದಲ್ಲಿ ಏರಿಕೆಯಾಗಲು ಕಾರಣವಾಗಿತ್ತು. ಇದೇ ರೀತಿಯ ಮಾರಾಟ ಪ್ರಮಾಣವನ್ನು ಮುಂದುವರೆಸಲು ಈ ಸ್ಕೂಟರ್‍‍ನಿಂದ ಸಾಧ್ಯವಾಗಲಿಲ್ಲ. ಮಾರಾಟದಲ್ಲಿ ಕುಸಿತ ಕಂಡ ಕಾರಣ ಈ ವಾಹನದಲ್ಲಿ ಹೊಸತನ ಬೇಕಾಗಿತ್ತು. ಕೊನೆಗೆ ಹೀರೋ ಮೋಟೊಕಾರ್ಪ್, ಹೊಸ ಸ್ಕೂಟರ್ ಅನ್ನು ಪ್ಲೆಶರ್ ಪ್ಲಸ್ 110 ಹೆಸರಿನಲ್ಲಿ, ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್‍‍ನ ಜೊತೆಯಲ್ಲಿ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿತು. 2019ರ ಹೊಸ ಪ್ಲೆಶರ್ ಪ್ಲಸ್ 110 ಸ್ಕೂಟರ್ ಅನ್ನು ಚಲಾಯಿಸಿದ ನಂತರ ಅದರ ವಿಮರ್ಶೆಯನ್ನು ಮಾಡಲಾಗಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಡಿಸೈನ್ ಮತ್ತು ಸ್ಟೈಲ್

ಡಿಸೈನ್ ಮತ್ತು ಸ್ಟೈಲ್‍‍ನ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಪ್ಲೆಶರ್ ಪ್ಲಸ್ ಹೊಸತನದಿಂದ ಕೂಡಿದೆ. ಸ್ಕೂಟರ್‍ ನೋಡಲು ಮೊದಲಿಗಿಂತ ಆಕರ್ಷಕವಾಗಿದ್ದು, ಸ್ಟೈಲ್ ಅನ್ನು ಹೆಚ್ಚು ಅಭಿವೃದ್ದಿ ಪಡಿಸಲಾಗಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಮೊದಲಿದ್ದ ಹೀರೋ ಪ್ಲೆಶರ್ ನ ಡಿಸೈನ್ ಮತ್ತು ಗಾತ್ರವನ್ನು ಮಹಿಳಾ ಗ್ರಾಹಕರಿಗೆಂದು ತಯಾರಿಸಲಾಗಿತ್ತು. ಈ ಹೊಸ ಸ್ಕೂಟರ್‍‍ನೊಂದಿಗೆ ಹೀರೋ ತನ್ನ ದೃಷ್ಟಿಕೋನವನ್ನು ಬದಲಿಸಿದ್ದರೂ, ಮಹಿಳಾ ಗ್ರಾಹಕರನ್ನೇ ಗುರಿಯಾಗಿಟ್ಟುಕೊಳ್ಳಲಾಗಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ವಾಹನಗಳ ಡಿಸೈನ್ ಭಾಷೆಯಾದ ನಿಯೋ-ರೆಟ್ರೋ ಇತ್ತೀಚಿಗೆ ಬರುತ್ತಿರುವ ವಾಹನಗಳಲ್ಲಿ ಜನಪ್ರಿಯವಾಗುತ್ತಿದ್ದು, ಈ ವಿನ್ಯಾಸವನ್ನೇ ಸುಜುಕಿಯ ಆಕ್ಸೆಸ್ ಮತ್ತು ವೆಸ್ಪಾ ಸರಣಿಯ ಸ್ಕೂಟರ್‍‍ಗಳಲ್ಲಿ ಬಳಸಲಾಗಿದೆ. ಹೊಸ ಹೀರೊ ಪ್ಲೆಶರ್ ಪ್ಲಸ್ 110 ಸ್ಕೂಟರ್‍‍ನಲ್ಲಿರುವ ಹೆಡ್‍‍ಲ್ಯಾಂಪ್ ಅನ್ನು ಸುಜುಕಿ ಆಕ್ಸೆಸ್ ನಲ್ಲಿರುವ ಹೆಡ್‍‍ಲ್ಯಾಂಪ್‍‍ನ ಪ್ರೇರಣೆಯಿಂದ ತಯಾರಿಸಲಾಗಿದೆ. ಪ್ಲೆಶರ್ ಪ್ಲಸ್ 110 ನಲ್ಲಿರುವ ಹೆಡ್‍‍ಲ್ಯಾಂಪ್‍‍ನ ಸುತ್ತಲೂ ಸಿಲ್ವರ್ ಬಣ್ಣವನ್ನು ಅಳವಡಿಸಲಾಗಿದೆ. ಇದರಿಂದ ಸ್ಕೂಟರ್‍‍ಗೆ ಪ್ರಿಮೀಯಂ ಫೀಲ್ ಬರಲಿದೆ. ಸೈಡಿನಲ್ಲಿರುವ ಪ್ಯಾನೆಲ್‍‍ಗಳು ಸಿಲ್ವರ್ ಬಣ್ಣವನ್ನು ಹೊಂದಿದ್ದು, ಅಂದವನ್ನು ಹೆಚ್ಚಿಸಿವೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಸರಳವಾಗ ಬಹುದಾದ ಸ್ಕೂಟರ್‍‍ನ ಅಂದವನ್ನು ಆಕರ್ಷಕವಾಗಿಸಲಾಗಿದೆ. ಸ್ಕೂಟರ್‍‍ನ ಹಿಂಭಾಗದಲ್ಲಿ ಒಂದೇ ಯೂನಿಟ್‍‍ನಲ್ಲಿರುವ ಬ್ರೇಕ್ ಲೈಟ್ ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ.

MOST READ: ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಿಲ್ವರ್ ಬಣ್ಣವನ್ನು ಹೊಂದಿದೆ. ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್ 6 ವಿವಿಧ ಬಣ್ಣಗಳಲ್ಲಿ ದೊರೆಯಲಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಈ ಸ್ಕೂಟರ್‍‍ನಲ್ಲಿ ಹಿಂಬದಿ ಸವಾರ ಇಲ್ಲದೇ ಹೋದರೆ, ಹಿಂಬದಿಯ ಸೀಟುಗಳು ಮೇಲಕ್ಕೆ ಬಂದು, ಸೀಟನ್ನು ಲಾಕ್ ಮಾಡಲಾಗಿಲ್ಲವೆಂಬ ಭಾವನೆ ಬರುವಂತೆ ಮಾಡುತ್ತವೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಎಂಜಿನ್ ಮತ್ತು ಪರ್ಫಾಮೆನ್ಸ್

2006 ರಲ್ಲಿ ಮೊದಲ ಬಾರಿಗೆ ಹೀರೊ ಪ್ಲೆಶರ್ ಸ್ಕೂಟರನ್ನು ಬಿಡುಗಡೆ ಮಾಡಿದಾಗ, ಸ್ಕೂಟರ್ ಸೆಗ್‍‍ಮೆಂಟಿನಲ್ಲಿ ದೊಡ್ಡದಾದ ಮತ್ತು ಪವರ್‍‍ಫುಲ್ ಆದ ಎಂಜಿನ್ ಹೊಂದಿತ್ತು. ಏರ್ ಕೂಲ್‍‍ನ 102 ಸಿಸಿಯ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 6.9 ಬಿ‍‍ಹೆಚ್‍‍ಪಿ ಮತ್ತು 8.10 ಎನ್‍ಎಂ ಟಾರ್ಕ್ ಉತ್ಪಾದಿಸುತಿತ್ತು.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಆಗ ಈ ಸ್ಕೂಟರಿನ ಪ್ರತಿಸ್ಪರ್ಧಿಗಳಾದ ಟಿವಿ‍ಎಸ್ ಸ್ಕೂಟಿ ಮತ್ತು ಹೋಂಡಾ ಆಕ್ಟಿವಾ 80 ಸಿಸಿ ಮತ್ತು 98 ಸಿಸಿ ಹೊಂದಿದ್ದವು. ಅವುಗಳಿಗೆ ಹೋಲಿಸಿದರೆ ಹೀರೊ ಪ್ಲೆಶರ್ ಹೆಚ್ಚು ಬಲಶಾಲಿಯಾದ ಸ್ಕೂಟರ್ ಆಗಿತ್ತು. ಈಗಿನ ಪರಿಸ್ಥಿತಿಯಲ್ಲಿ 110 ಸಿಸಿಯ ಸ್ಕೂಟರ್ ಖರೀದಿಯು ಅಪರೂಪವಾಗಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಪ್ಲೆಶರ್‍‍ನ ಮಾರಾಟವು ಕುಸಿಯಲು ಇದೂ ಸಹ ಒಂದು ಕಾರಣವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಹೀರೋ, ತನ್ನ ಪ್ಲೆಶರ್ ಪ್ಲಸ್ ಸ್ಕೂಟರ್‍‍ನಲ್ಲಿ 110.9 ಸಿಸಿಯ ಸಿಂಗಲ್ ಸಿಲಿಂಡರ್ ಅಳವಡಿಸಿದ್ದು, ಇದು 8 ಬಿಹೆಚ್‍‍ಪಿ ಮತ್ತು 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಹೊಸ ಸ್ಕೂಟರಿನಲ್ಲಿ ಮೊದಲಿದ್ದ ಸ್ಕೂಟರ್ ಗಿಂತ ಕೇವಲ 8.9 ಸಿಸಿ ಹೆಚ್ಚಿನ ಎಂಜಿನ್ ನೀಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಎಂಜಿನ್ ಚಾಲ್ತಿಯಲ್ಲಿದ್ದು, ಹೀರೋ ಡ್ಯೂಯಟ್, ಹೀರೊ ಮ್ಯಾಸ್ಟ್ರೊ ಎಡ್ಜ್ 110 ಮತ್ತು ಹೋಂಡಾದ 110 ಸಿಸಿ ಸ್ಕೂಟರ್ ಸರಣಿಗಳಲ್ಲಿ ಈ ರೀತಿಯ ಎಂಜಿನ್‍‍ಗಳನ್ನು ಕಾಣಬಹುದು. ಈ ಸ್ಕೂಟರ್‍‍ನ ತೂಕವು 101 ಕೆ.ಜಿಯಷ್ಟಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಸ್ಕೂಟರ್ ನ ಪವರ್ ಹೆಚ್ಚಾಗಿದ್ದು, ತೂಕ ಕಡಿಮೆ ಇದ್ದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಇದನ್ನು ನಾವು ಹೀರೋ ಪ್ಲೆಶರ್ ಪ್ಲಸ್ ನಲ್ಲಿ ಕಾಣಬಹುದು. ಈ ಸ್ಕೂಟರ್‍‍ನ ವೇಗವನ್ನು ಕ್ಷಣಾರ್ಧದಲ್ಲಿ ಹೆಚ್ಚಿಸಬಹುದಾಗಿದೆ, ಹೆಚ್ಚಿನ ಟಾರ್ಕ್ ಅನ್ನು 5,500 ಆರ್‍‍ಪಿ‍ಎಂ ಮತ್ತು ಹೆಚ್ಚಿನ ಪವರ್ ಅನ್ನು 7,500 ಆರ್‍‍ಪಿ‍ಎಂ ನಲ್ಲಿ ಪಡೆಯಬಹುದು.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಈ ಸ್ಪೀಡ್‍‍ಗಳಲ್ಲಿ ಸ್ಕೂಟರ್ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸ್ಕೂಟರನ್ನು ಗರಿಷ್ಠ ಪ್ರತಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಾಯಿಸಬಹುದು.

MOST READ: 150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಚಾಲನೆ ಮತ್ತು ನಿರ್ವಹಣೆ

ಈ ಸ್ಕೂಟರ್ ಕಡಿಮೆ ತೂಕದ ಹ್ಯಾಂಡಲ್ ಹೊಂದಿದೆ. ಹೀರೋ ಪ್ಲೆಶರ್ ಪ್ಲಸ್ ಹೊಸದಾಗಿ ಸ್ಕೂಟರ್ ಚಲಾಯಿಸುವವರನ್ನು ಮತ್ತು ಕಡಿಮೆ ತೂಕದ ಸ್ಕೂಟರನ್ನು ಇಷ್ಟಪಡುವವರನ್ನು ಗುರಿಯಾಗಿಸಿಕೊಂಡಿದೆ. ನೀವು ಈಗಾಗಲೇ ಬೇರೆ ಸ್ಕೂಟರ್ ಮತ್ತು ಬೈಕ್‍‍ಗಳನ್ನು ಚಲಾಯಿಸಿದ್ದರೆ, ಹೀರೋ ಪ್ಲೆಶರ್ ಪ್ಲಸ್ ತನ್ನ ಕಡಿಮೆ ತೂಕದಿಂದ ನಿಮ್ಮ ಗಮನ ಸೆಳೆಯಲಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಈ ಸ್ಕೂಟರ್ ಮೊದಲಿಗಿಂತ ಸ್ವಲ್ಪ ಹೆಚ್ಚಿನ ಗಾತ್ರ ಹೊಂದಿದ್ದು, ಇದನ್ನು ನೋಡಿದರೆ ವಾಹನವು ಹೆಚ್ಚು ತೂಕವನ್ನು ಹೊಂದಿರುವಂತೆ ಭಾಸವಾಗುತ್ತದೆ. ಆದರೆ ಚಲಾಯಿಸಿದ ನಂತರ ಪ್ಲೆಶರ್ ಪ್ಲಸ್ ಹಗುರವಾದ ತೂಕದಿಂದ ಮತ್ತು ಅದರಲ್ಲಿರುವ ಇನ್‍‍ಪುಟ್ ಗಳಿಂದ ಚಾಲಕನಿಗೆ ಇಷ್ಟವಾಗುತ್ತದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಹೀರೊ ಪ್ಲೆಶರ್ ಪ್ಲಸ್ 110 ಸ್ಕೂಟರಿನ 10 ಇಂಚಿನ ವ್ಹೀಲ್‍‍ನಲ್ಲಿ ಸಿಯೆಟ್ ಟಯರ್‍‍ಗಳಿವೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಈ ಸ್ಕೂಟರ್‍‍ನ ಮುಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್ ಗಳಿದ್ದರೆ, ಹಿಂಭಾಗದಲ್ಲಿ ಸ್ವಿಂಗ್ ಆರ್ಮ್ ಹೊಂದಿರುವ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್‍‍ಗಳಿವೆ. ಸರಳವಾಗಿ ಹೇಳಬೇಕೆಂದರೆ, ಮೊನೊಶಾಕ್ ಗಳನ್ನು ಹಿಂಭಾಗದಲ್ಲಿ ಮತ್ತು ಹಳೆ ಮಾದರಿಯ ಲಿಂಕ್ ಸಸ್ಪೆಂಷನ್‍‍ಗಳನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಮುಂಭಾಗದ ಸಸ್ಪೆಂಷನ್ ಗಟ್ಟಿಯಾಗಿದ್ದು, ಸ್ಕೂಟರಿನ ತೂಕವು ಹಗುರವಾಗಿರುವ ಕಾರಣ ಮುಂಭಾಗದಲ್ಲಿ ಸ್ವಲ್ಪ ಮಟ್ಟಿನ ಅವಸ್ಥೆಯಾಗುತ್ತದೆ. ಸೀಟುಗಳು ಆರಾಮದಾಯಕ ಅನುಭವವನ್ನು ನೀಡುತ್ತವೆ. ಬ್ರೇಕಿಂಗ್‍‍ನ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 130 ಎಂಎಂ ಬ್ರೇಕ್‍‍ಗಳಿದ್ದರೆ, ಹಿಂಭಾಗದಲ್ಲಿ ಹೀರೋವಿನ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂಗಳಿದ್ದು, ಪ್ಲೆಶರ್ ಪ್ಲಸ್ ನಲ್ಲಿ ಸ್ಟಾಂಡರ್ಡ್ ಆಗಿ ಬರುತ್ತವೆ.

MOST READ: 250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಫೀಚರ್ಸ್‍‍ಗಳು

ಹೀರೋ ಪ್ಲೆಶರ್ ಪ್ಲಸ್ ಪ್ರಿಮೀಯಂ ಮಾದರಿಯ ಸ್ಕೂಟರ್ ಅಲ್ಲದೇ ಇರುವುದರಿಂದ ಟಾಪ್ ಫೀಚರ್‍‍ಗಳನ್ನು ಒಳಗೊಂಡಿಲ್ಲ. ಈ ಸ್ಕೂಟರ್‍‍ನ ಮುಂಭಾಗದಲ್ಲಿ ಗ್ಲೌಸ್ ಬಾಕ್ಸ್, ಯೂ‍ಎಸ್‍‍ಬಿ ಮೊಬೈಲ್ ಫೋನ್ ಚಾರ್ಜರ್, ಸೀಟಿನ ಕೆಳಗೆ ದೊಡ್ಡ ಸ್ಟೋರೆಜ್ ಮತ್ತು ಎಲ್‍ಇ‍‍ಡಿ ಬೂಟ್ ಲೈಟ್‍‍ಗಳಿವೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಅನಲಾಗ್ ಸೆಟ್‍ಅಪ್ ಮಾಡಲಾಗಿದ್ದು, ಸ್ಪೀಡೊ ಮೀಟರ್, ಓಡೋ ಮೀಟರ್, ಫ್ಯೂಯಲ್ ಗೇಜ್, ಸೈಡ್ ಸ್ಟಾಂಡ್ ಇಂಡಿಕೇಟರ್ ಮತ್ತು ಟರ್ನ್ ಸಿಗ್ನಲ್ ನಲ್ಲಿ ಆನ್ / ಆಫ್ ಇಂಡಿಕೇಟರ್‍‍ಗಳಿವೆ.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಅಭಿಪ್ರಾಯ

ಹೀರೋ ಪ್ಲೆಶರ್ ಉತ್ತಮವಾದ ಸ್ಟೈಲ್, ಹೊಸ ಪವರ್‍‍ಫುಲ್ ಎಂಜಿನ್ ಮತ್ತು ಆಕರ್ಷಕವಾದ ಬಣ್ಣಗಳಲ್ಲಿ ಲಭ್ಯವಿದೆ. ಮೊದಲ ಬಾರಿಗೆ ಸ್ಕೂಟರ್ ಚಲಾಯಿಸುವವರಿಗೆ ಹೇಳಿ ಮಾಡಿಸಿದ ಸ್ಕೂಟರ್ ಆಗಿದೆ. ಆರಾಮದಾಯಕ ಚಾಲನೆ, ಸುಲಭವಾದ ಮೆಂಟೆನೆನ್ಸ್ ಗಾಗಿ ಹೀರೊ ಪ್ಲೆಶರ್ ಪ್ಲಸ್ ಸ್ಕೂಟರನ್ನು ಖರೀದಿಸಬಹುದು.

ರಿವ್ಯೂ: ಹೋಂಡಾ ಆಕ್ಟಿವಾ ಹಿಂದಿಕ್ಕಲು ಬಂದ ಹೀರೋ ಪ್ಲೆಶರ್ ಪ್ಲಸ್ 110 ಸ್ಪೆಷಲ್ ಏನು?

ಹೀರೋ ಮೋಟೊಕಾರ್ಪ್ ತನ್ನ ಪ್ರತಿಸ್ಪರ್ಧಿ ಸ್ಕೂಟರ್‍‍ಗಳಿಗಿಂತ ಕಡಿಮೆ ಬೆಲೆಯನ್ನು ಪ್ಲೆಶರ್ ಪ್ಲಸ್ ಸ್ಕೂಟರಿಗೆ ನಿಗದಿಪಡಿಸಿದೆ. ಪ್ಲೆಶರ್ ಪ್ಲಸ್ 110 ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.47,300 ಗಳಾಗಿದ್ದರೆ, ಹೋಂಡಾ ಆಕ್ಟಿವಾದ ಬೆಲೆ ರೂ.50,974 ಹಾಗೂ ಟಿವಿ‍ಎಸ್ ವೆಗೋದ ಬೆಲೆಯು ರೂ.52,162 ಗಳಾಗಿದೆ. ಹೀರೊ ಪ್ಲೆಶರ್ ಅಷ್ಟೇನೂ ವೆಚ್ಚದಾಯಕವಾಗಿಲ್ಲ.

More from DriveSpark

Article Published On: Thursday, May 16, 2019, 12:56 [IST]
English summary
Hero Pleasure+ 110 First Ride Review — Can It Take On The 110cc Giants? - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+