ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಕಳೆದ ವರ್ಷ ಹೀರೋ ಎಕ್ಸ್ ಟ್ರೀಮ್ 200 ಆರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಕರಿಜ್ಮಾ ನಂತರದಲ್ಲಿ 200 ಸಿಸಿ ಸೆಗ್ಮೆಂಟಿನಲ್ಲಿ ಬಿಡುಗಡೆ ಮಾಡಲಾದ ಮೊದಲ ಬೈಕ್ ಇದಾಗಿತ್ತು. ಇದಾದ ವರ್ಷದ ನಂತರ ಹೀರೋ ಮೋಟಾರ್ಸ್ ಅಚ್ಚರಿಯ ರೀತಿಯಲ್ಲಿ ಹೊಸ ಎಕ್ಸ್ ಪಲ್ಸ್ 200 ಟ್ವಿನ್ ಬೈಕುಗಳನ್ನು ಬಿಡುಗಡೆ ಮಾಡಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೀರೋ ಕಂಪನಿಯ ಎಕ್ಸ್ ಸರಣಿಯಲ್ಲಿ ಕೊನಯ ಬೈಕ್ ಆದ ಎಕ್ಸ್ ಟ್ರೀಮ್ 200ಎಸ್ ಬಿಡುಗಡೆಯಾಗಿದೆ. ಹೀರೋ ಕಂಪನಿಯ ಎಕ್ಸ್ ಸರಣಿಯ ಎಕ್ಸ್ ಟ್ರೀಮ್ 200 ಆರ್ ರಸ್ತೆಯಾಧಾರಿತವಾಗಿದ್ದರೆ, ಎಕ್ಸ್ ಪಲ್ಸ್ 200 ಆಫ್ ರೋಡ್ ಮಾದರಿಯಲ್ಲಿದೆ. 200ಟಿ ಟೂರಿಂಗ್ ಮಾದರಿಯಲ್ಲಿದೆ. ಹೀರೋ ಪ್ರಕಾರ, ಎಕ್ಸ್ ಸರಣಿಯ ಕೊನೆಯ ಬೈಕ್ ಆದ ಎಕ್ಸ್ ಟ್ರೀಮ್ 200 ಎಸ್ ಸ್ಪೋರ್ಟ್ಸ್ ಮಾದರಿಯ ಬೈಕ್ ಆಗಿದೆ. ಈ ಹೊಸ ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕ್ ಅನ್ನು ಬುದ್ಧ ಇಂಟರ್‍‍ನ್ಯಾಷನಲ್ ಸರ್ಕಿಟ್‍‍ನ ನಾರ್ಥ್ ಲೂಪ್‍‍ನಲ್ಲಿ ಚಲಾಯಿಸಿ ಪರೀಕ್ಷಿಸಲಾಯಿತು.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಡಿಸೈನ್ ಮತ್ತು ಫೀಚರ್

ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕು, ಎಕ್ಸ್ ಟ್ರೀಮ್ 200 ಆರ್ ಪ್ರಿಮೀಯಂ ಕಮ್ಯೂಟರ್ ಮೋಟಾರ್‍‍ಸೈಕಲ್ ಬೈಕಿನ ಸುಧಾರಿತ ಆವೃತ್ತಿಯಾಗಿದೆ. ಬೇರೆ ಮೋಟಾರ್‍‍ಸೈಕಲ್‍‍ಗಳು ಮೊದಲು ನೇಕೆಡ್ ಅಥವಾ ಸ್ಟಾಂಡರ್ಡ್ ಬೈಕುಗಳನ್ನು ಉತ್ಪಾದಿಸಿ ನಂತರ ಫೇರ್ ಬೈಕುಗಳನ್ನು ಬಿಡುಗಡೆ ಮಾಡುತ್ತಾರೆ, ಅದೇ ರೀತಿಯಲ್ಲಿ ಎಕ್ಸ್ ಟ್ರೀಮ್ 200 ಎಸ್ ಬೈಕನ್ನು ಉತ್ಪಾದಿಸಲಾಗಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಮುಂಭಾಗದಲ್ಲಿರುವ ಹೆಡ್‍‍ಲ್ಯಾಂಪ್‍‍ಗಳನ್ನು ನೋಡಿದರೆ ಹಲವು ವರ್ಷಗಳ ಹಿಂದೆ ಇದ್ದ ಜಪಾನ್‍‍ನ ಸೂಪರ್‍‍ಬೈಕುಗಳನ್ನು ನೋಡಿದ ಅನುಭವವಾಗುತ್ತದೆ. ಟ್ರೇಪ್‍‍ಜೊಡಾಯಿಲ್ ಶೇಪಿನಲ್ಲಿರುವ ಹೆಡ್ ಲೈಟ್‍‍ಗಳು ಮೂರು ವಿವಿಧ ಬಗೆಗಳಲ್ಲಿದ್ದು, ಅವುಗಳಲ್ಲಿ ಎರಡು ಟ್ರಯಾಂಗುಲರ್ ಶೇಪಿನ ಎಲ್‍ಇ‍‍‍ಡಿ ಲೈಟ್‍‍ಗಳು, ಹೆಡ್‍‍ಲೈಟ್ ಯೂನಿಟ್‍‍ನಲ್ಲಿವೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ನಲ್ಲಿ ಎರಡು ಭಾಗಗಳಿವೆ, ಅದರಲ್ಲಿ ಲೋ ಬೀಮ್ ಲೈಟನ್ನು ಸ್ವಿಚ್ ಆನ್ ಮಾಡಿದರೆ, ಬಲಭಾಗದ ಅರ್ಧ ಯೂನಿಟ್ ಸ್ವಿಚ್ ಆನ್ ಆಗುತ್ತದೆ. ಹೈ ಬೀಮ್ ಲೈಟನ್ನು ಆನ್ ಮಾಡಿದರೆ, ಎರಡೂ ಭಾಗಗಳಲ್ಲಿರುವ ಹೆಡ್‍‍ಲ್ಯಾಂಪ್‍‍ಗಳು ಆನ್ ಆಗುತ್ತವೆ. ಹೆಡ್‍‍ಲ್ಯಾಂಪ್‍‍ನ ಸುತ್ತಲೂ ಇರುವ ವಸ್ತುವು ಬ್ಲಾಕ್ ಪ್ಲಾಸ್ಟಿಕ್‍‍ನಿಂದ ಮಾಡಲ್ಪಟ್ಟಿದೆ. ಇದಕ್ಕೆ ಕೆಂಪು ಬಣ್ಣವನ್ನು ಅಳವಡಿಸಿದರೆ ಉತ್ತಮವಾದ ಕಾಂಟ್ರಾಸ್ಟ್ ಪಡೆಯಬಹುದು.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೆಡ್‍‍ಲೈಟ್‍‍ನ ಕೆಳಗೆ ಬಂದರೆ ಮುಂಭಾಗದ ವ್ಹೀಲ್‍‍ನ ಮೇಲೆ ಅಳವಡಿಸಿರುವ ಮೆಕಾನಿಕಲ್ ಭಾಗಗಳನ್ನು ಕಾಣಬಹುದು. ಇದರ ಜೊತೆಯಲ್ಲಿ ಕಪ್ಪು ಬಣ್ಣದಲ್ಲಿರುವ ಫ್ರಂಟ್ ಫೋರ್ಕ್‍‍ಗಳನ್ನು ಮತ್ತು ಫ್ರಂಟ್ ಫೆಂಡರ್‍‍ಗಳ ಮೇಲಿರುವ ಎ‍‍ಬಿ‍ಎಸ್ ಸ್ಟಿಕ್ಕರ್‍‍ಗಳನ್ನು ಕಾಣಬಹುದು.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಸೈಡಿನಿಂದ ಈ ಬೈಕನ್ನು ನೋಡಿದರೆ, ಎಕ್ಸ್ ಟ್ರೀಮ್ 200 ಎಸ್ ಉತ್ತಮವಾದ ವಿನ್ಯಾಸದಲ್ಲಿ ರಚಿಸಲಾಗಿರುವುದನ್ನು ಕಾಣಬಹುದು. ಹೀರೋ ಕಂಪನಿಯು ಈ ಬೈಕ್ ಅನ್ನು ಫೇರ್ ಬೈಕ್ ಆಗಿ ನಿರ್ಮಿಸಿದಿಯೇ ಎಂಬ ಪ್ರಶ್ನೆ ಕಾಡದೇ ಇರದು. ಕರಿಜ್ಮಾ ಝಡ್‍ಎಂಆರ್ ಬೈಕಿನಂತೆ, ಎಕ್ಸ್ ಟ್ರೀಮ್ 200 ಎಸ್ ಬೈಕಿನ ವಿನ್ಯಾಸವನ್ನು, ವಿನ್ಯಾಸದ ಅನುಭವಕ್ಕಾಗಿ ಅಲ್ಲದೇ ಬೈಕಿಗಾಗಿಯೇ ರಚಿಸಿದಂತೆ ಕಾಣುವುದು. ಇದರಲ್ಲಿ ಕೆಲವು ಶಾರ್ಪ್ ಲೈನ್‍‍ಗಳಿದ್ದು ಹೀರೋ ಪೂರ್ತಿಯಾಗಿ ವಿನ್ಯಾಸಕ್ಕೆ ಒತ್ತುನೀಡಿಲ್ಲ, ಇದು ಎಕ್ಸ್ ಟ್ರೀಮ್ 200 ಎಸ್ ವಾಹನಕ್ಕೆ ಬ್ಯಾಲೆನ್ಸ್ ಲುಕ್ ನೀಡುತ್ತದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಫೇರಿಂಗ್ ಹೆಚ್ಚು ದೊಡ್ಡದಾಗಿಯೂ ಅಲ್ಲದೇ ಹೆಚ್ಚು ಚಿಕ್ಕದಾಗಿಯೂ ಇಲ್ಲದೇ ಉಳಿದ ಬಾಡಿ ವರ್ಕ್‍‍ಗಳ ಜೊತೆಯಲ್ಲಿ ಇದನ್ನು ಸೇರಿಸುತ್ತದೆ. ಇದನ್ನು ಫ್ಯೂಯಲ್ ಟ್ಯಾಂಕ್ ಮತ್ತು ಬೆಲ್ಲಿ ಪ್ಯಾನ್‍‍ಗಳ ಬಳಿ ಕಾಣಬಹುದು, ಇಲ್ಲಿ ಫೇರ್ ಆಗಿ ಉಳಿದ ಬಾಡಿ ವರ್ಕ್‍‍ಗಳ ಜೊತೆಗೆ ಸೇರುತ್ತದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೀರೋ ತನ್ನ ಲೋಗೋವನ್ನು ಸ್ವಲ್ಪ ಕೆಳಗೆ ಅಳವಡಿಸಿದೆ. ಎಕ್ಸ್ ಟ್ರೀಮ್ 200 ಎಸ್ ನ ಒಂದೇ ಸ್ಟಿಕ್ಕರ್ ಅನ್ನು ಮುಂಭಾಗದಲ್ಲಿರುವ ಫ್ಲಾಂಕ್‍‍ಗಳಲ್ಲಿ ಮತ್ತು ಇನ್ನೊಂದನ್ನು ತಯಾರಕರ ಹೆಸರಿನೊಂದಿಗೆ ಸೀಟಿನ ಕೆಳಗೆ ಹಾಕಲಾಗಿದ್ದು, ಬೈಕಿಗೆ ಮಾಲೀಕರು ಪ್ರಶಂಸಿಸುವಂತಹ ಲುಕ್ ನೀಡಲಾಗಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಎಕ್ಸ್ ಟ್ರೀಮ್ 200 ಎಸ್ ಸಿಂಗಲ್ ಪೀಸಿನ ಒಂದೇ ಸೀಟ್ ಹೊಂದಿದ್ದು, ಜೊತೆಗೆ ಫುಟ್ ಪೆಗ್‍‍ಗಳನ್ನು ಮತ್ತು ಸಿಂಗಲ್ ಪೀಸ್ ಹ್ಯಾಂಡಲ್‍‍ಬಾರ್‍‍ಗಳನ್ನು ಹೊಂದಿದೆ. ನ್ಯೂಟ್ರಲ್ ರೈಡಿಂಗ್ ಪೊಸಿಷನ್ ನಿಂದಾಗಿ ದೂರ ಪಯಣಕ್ಕೆ ಅನುಕೂಲವಾಗಲಿದೆ. ಹಿಂಬದಿಯ ಸವಾರರಿಗಾಗಿ ಸ್ಪ್ಲಿಟ್ ಹ್ಯಾಂಡಲ್‍‍ಗಳನ್ನು ನೀಡಲಾಗಿದೆ. ಎಕ್ಸ್ ಟ್ರೀಮ್ 200 ಆರ್ ಗೆ ಹೋಲಿಸಿದರೆ ದಪ್ಪನಾದ ಎಕ್ಸಾಸ್ಟ್ ಅಳವಡಿಸಲಾಗಿದೆ. ಹಿಂಬದಿಯಲ್ಲಿರುವ ಲೈಟ್ ಸಹ ಎಲ್‍ಇ‍‍ಡಿಯನ್ನು ಹೊಂದಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೊಸ ರೀತಿಯ ಹೆಡ್ ಲ್ಯಾಂಪ್ ಮತ್ತು ಫೇರಿಂಗ್ ಅಲ್ಲದೇ 200 ಆರ್ ಗಿಂತ ಹೊಸ ನಮೂನೆಯ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಈ ಹೊಸ ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಸ ಎಕ್ಸ್ ಪಲ್ಸ್ ಬೈಕಿನಲ್ಲಿ ಅಳವಡಿಸಲಾಗಿತ್ತು, ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಕಾಲ್ ನೋಟಿಫಿಕೇಶನ್ ಮತ್ತು ಸರ್ವಿಸ್ ರಿಮ್ಯಾಂಡರ್‍‍ಗಳನ್ನು ಅಳವಡಿಸಲಾಗಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಎಂಜಿನ್ ಮತ್ತು ಪರ್ಫಾಮೆನ್ಸ್

ಹೀರೋ ಕಂಪನಿಯ ಎಕ್ಸ್ ಸರಣಿಯ ಬೈಕುಗಳಲ್ಲಿ, ಹೊಸ ಎಕ್ಸ್ ಟ್ರೀಮ್ 200 ಎಸ್ ಅನ್ನು ಒಳಗೊಂಡಂತೆ, 199.6 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್‍‍ಗಳನ್ನು ಅಳವಡಿಸಲಾಗಿದ್ದು, ಇದನ್ನು ಮೊದಲ ಬಾರಿಗೆ ಕಳೆದ ವರ್ಷ ಬಿಡುಗಡೆಯಾದ ಎಕ್ಸ್ ಟ್ರೀಮ್ 200 ಆರ್ ನಲ್ಲಿ ಅಳವಡಿಸಲಾಗಿತ್ತು. ಏರ್ ಕೂಲರ್ ನ , 2 ವಾಲ್ವ್ ಸಿಂಗಲ್ ಸಿಲಿಂಡರ್ ಒಹೆಚ್‍‍ಸಿ ಎಂಜಿನ್‍, 18.1 ಬಿಹೆಚ್‍‍ಪಿಯನ್ನು 8000 ಆರ್‍‍ಪಿ‍ಎಂ ನಲ್ಲಿ ಮತ್ತು 17.1 ಎನ್‍ಎಂ ಟಾರ್ಕ್ ಅನ್ನು 6,500 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದ್ದು, ಪವರನ್ನು ಹಿಂಭಾಗದಲ್ಲಿರುವ ವ್ಹೀಲ್‍‍ಗೆ ಚೈನ್ ಡ್ರೈವ್ ಮೂಲಕ ಕಳುಹಿಸುತ್ತದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಈ ಎಂಜಿನ್ ಸ್ವಲ್ಪ ಮಟ್ಟಗಿನ ಶಬ್ದವನ್ನು ಮಾಡುತ್ತದೆ, ಆದರೆ 5 ಸ್ಪೀಡಿನ ಟ್ರಾನ್ಸ್ ಮಿಷನ್ ಗೇರ್‍‍ಗಳನ್ನು ಬದಲಿಸುವಾಗ ಮೆದುವಾಗಿ ಕೆಲಸ ಮಾಡುತ್ತದೆ. ಎಂಜಿನ್ ಅನ್ನು ಸಂಸ್ಕರಿಸಲಾಗಿದೆ ಮತ್ತು ಅತಿ ವೇಗವಾಗಿ ಚಲಿಸಿದರೂ ಗಾಡಿಯು ಅಲುಗಾಡುವುದಿಲ್ಲ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಬುದ್ಧ ಇಂಟರ್‍‍ನ್ಯಾಷನಲ್ ಸರ್ಕಿಟ್‍‍ನಲ್ಲಿ ನಾವು ಚಲಾಯಿಸಿದ ಎಕ್ಸ್ ಟ್ರೀಮ್ 200 ಎಸ್ ಬೈಕ್ ಸ್ವಲ್ಪವು ಅಲುಗಾಡದೇ ನಮ್ಮ ನಿಯಂತ್ರಣದಲ್ಲಿತ್ತು. 5 ನೇ ಗೇರಿನಲ್ಲಿ 110 ಕ್ಕೂ ಹೆಚ್ಚಿನ ಕಿ.ಮೀ ವೇಗದಲ್ಲಿ ಚಲಾಯಿಸಿದಾಗ ಅಷ್ಟು ಕಂಫರ್ಟ್ ಎನಿಸಲಿಲ್ಲ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಚಾಲನೆ ಮತ್ತು ನಿರ್ವಹಣೆ

ಹೀರೋ ಎಕ್ಸ್ ಟ್ರೀಮ್ 200 ಎಸ್ ತನ್ನ ಸ್ಟಾಂಡರ್ಡ್ ಮಾದರಿಯ ಬೈಕಿನಲ್ಲಿದ್ದಂತಹ ಡೈಮಂಡ್ ಫ್ರೇಮ್ ಚಾಸೀಸ್ ಅನ್ನೇ ಹೊಂದಿದೆ. ಸಸ್ಪೆಂಷನ್ 37 ಎಂಎಂ ಗಾತ್ರ ಹೊಂದಿದ್ದು, ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊಶಾಕ್‍‍ಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಹೀರೋ ಕಂಪನಿಯು ಮುಂಭಾಗದಲ್ಲಿರುವ ಫೋರ್ಕ್‍‍‍ಗಳಲ್ಲಿ ಸ್ವಲ್ಪ ತೂಕವನ್ನು ಹೆಚ್ಚು ಮಾಡಿದೆ. ಆದರೆ ಆ ಹೆಚ್ಚಿನ ತೂಕದಿಂದ, ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ, ಹ್ಯಾಂಡ್ಲಿಂಗ್ ಗೆ ಯಾವುದೇ ತೊಂದರೆ ಆಗಲಿಲ್ಲ.

MOST READ: ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕನ್ನು ಯಾವುದೇ ತಿರುವಿನಲ್ಲೂ ಚಲಾಯಿಸಬಹುದು, ತಿರುವುಗಳಲ್ಲಿ ವೇಗವಾಗಿಯೇ ಚಲಿಸುತ್ತದೆ. ಇದರಲ್ಲಿರುವ ಎಂ‍ಆರ್‍ಎಫ್ ಟಯರ್‍‍ಗಳು ಒಳ್ಳೆಯ ಗ್ರಿಪ್ ನೀಡಿ ಚಾಲಕನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇದು ಬೆಸ್ಟ್ ಹ್ಯಾಂಡ್ಲಿಂಗ್ ಬೈಕ್ ಆಗದೇ ಇದ್ದರೂ ತಿರುವು ರಸ್ತೆಗಳಲ್ಲೂ ಸಹ ನಮ್ಮ ಕೈಬಿಡುವುದಿಲ್ಲ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಎಕ್ಸ್ ಟ್ರೀಮ್ 200 ಎಸ್ ನ ಎರಡೂ ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಇವುಗಳಿಗೆ ಸಿಂಗಲ್ ಚಾನೆಲ್ ಎ‍‍ಬಿ‍ಎಸ್ ಗಳು ನೆರವು ನೀಡುತ್ತವೆ. ಮುಂಭಾಗದಲ್ಲಿರುವ ಡಿಸ್ಕ್ ಬ್ರೇಕ್ ನ ಅಳತೆಯು 276 ಎಂಎಂ ಇದ್ದರೆ, ಹಿಂಭಾಗದಲ್ಲಿ 220 ಎಂಎಂ ನ ಗಾತ್ರ ಹೊಂದಿವೆ. ಈ ಬ್ರೇಕ್‍‍ಗಳ ನೆರವಿನಿಂದ ಎಕ್ಸ್ ಟ್ರೀಮ್ 200 ಎಸ್ ಎಷ್ಟೆ ವೇಗದಲ್ಲಿದ್ದರೂ ನಿಯಂತ್ರಿಸಬಹುದು.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ವಿಶೇಷತೆಗಳು

ಎಂಜಿನ್ 199.6 ಸಿಸಿ, ಸಿಂಗಲ್ ಸಿಲಿಂಡರ್
ಪವರ್ 18.1ಬಿಹೆಚ್‍‍ಪಿ @ 8,000ಆರ್‍‍ಪಿ‍ಎಂ
ಟಾರ್ಕ್ 17.1ಎನ್‍ಎಂ @ 6,500ಆರ್‍‍ಪಿ‍ಎಂ
ಗೇರ್‍‍ಬಾಕ್ಸ್ 5-ಸ್ಪೀಡ್

ಸಸ್ಪೆಂಷನ್, ಬ್ರೇಕ್ ಮತ್ತು ಟಯರ್‍‍ಗಳ ಬಗ್ಗೆ:

ಫ್ರೇಮ್ ಡೈಮಂಡ್
ಸಸ್ಪೆಂಷನ್ (ಫ್ರಂಟ್) 37 ಎಂಎಂ ಫೋರ್ಕ್
(ರೇರ್) 7-ಸ್ಟೆಪ್ ಅಡ್ಜಸ್ಟಬಲ್ ಮೊನೊಶಾಕ್
ಬ್ರೇಕ್ (ಫ್ರಂಟ್) 276 ಎಂಎಂ ಡಿಸ್ಕ್
(ರೇರ್) 220 ಎಂಎಂ ಡಿಸ್ಕ್
ವ್ಹೀಲ್ 17-ಇಂಚು
ಟಯರ್‍‍ಗಳು (ಫ್ರಂಟ್) ಎಂ‍ಆರ್‍ಎಫ್ ಜ್ಯಾಪರ್ 100/80-17
(ರೇರ್) ಎಂ‍ಆರ್‍ಎಫ್ ರೇವ್ಸ್ 130/80- ಆರ್17

ಗಾತ್ರ:

ಉದ್ದ 2062 ಎಂಎಂ
ಅಗಲ 778 ಎಂಎಂ
ಎತ್ತರ 1106 ಎಂಎಂ
ವ್ಹೀಲ್ ಬೇಸ್ 1337 ಎಂಎಂ
ಸೀಟಿನ ಎತ್ತರ 795 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ
ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಹೀರೋ ಕಂಪನಿಯು ಎಕ್ಸ್ ಟ್ರೀಮ್ 200 ಎಸ್ ಮಾದರಿಯನ್ನು ಬಿಡುಗಡೆ ಮಾಡಿ ಹೊಳಪಿನ ಮೋಟಾರ್‍‍ಸೈಕಲ್‍‍ಗಳ ಯುಗಕ್ಕೆ ಮರಳಿದೆ. ಹೊಸ ಬೈಕ್ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಹೊಸ ವಿನ್ಯಾಸದಿಂದ ಎಕ್ಸ್ ಟ್ರೀಮ್ 200 ಎಸ್ ಎಲ್ಲರ ಗಮನ ಸೆಳೆಯಲಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಬಹುತೇಕ ಜನರು ಈ ಬೈಕ್ ಬಿಡುಗಡೆಯಾದಾಗ ಹೊಸ ಕರಿಜ್ಮಾದ ಆಗಮನವಾಯಿತು ಎಂದೇ ತಿಳಿದಿದ್ದರು. ಆದರೆ ಹೊಸ ಎಕ್ಸ್ ಟ್ರೀಮ್ 200 ಎಸ್ ತನ್ನ ಸ್ಪೋರ್ಟ್ಸ್ ಲುಕ್‍‍ನಿಂದಾಗಿ ಗಮನ ಸೆಳೆಯುತ್ತದೆ. ಈ ಬೈಕಿಗೆ ನೀಡುವ ಹಣಕ್ಕೆ ತಕ್ಕ ಬೆಲೆ ದೊರೆಯಲಿದೆ.

ರಿವ್ಯೂ: ಹೊಸ ಟ್ರೇಂಡ್‍‍ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಕ್ಸ್ ಟ್ರೀಮ್ 200 ಎಸ್ ಬೈಕ್ ಅನ್ನು ಹಣಕ್ಕೆ ತಕ್ಕ ಪ್ರತಿಫಲ ಎಂಬ ಎಕ್ಸ್ ಟ್ರೀಮ್ 200 ಆರ್ ಬೈಕಿನ ತತ್ವದ ಆಧಾರದ ಮೇಲೆ ತಯಾರಿಸಲಾಗಿದೆ. ಇದರಲ್ಲಿರುವ ಆರಾಮದಾಯಕ ಸೀಟಿಂಗ್ ಪೊಸಿಷನ್, ಬಲಿಷ್ಟವಾದ ಎಂಜಿನ್, ಹ್ಯಾಂಡ್ಲಿಂಗ್‍‍ಗಳು ಇದನ್ನು ಉತ್ತಮವಾಗಿಸಿವೆ. ಇದರಲ್ಲಿರುವ ಹೊಸ ಡಿಸೈನ್, ಹೊಳಪು, ಹೆಡ್‍‍ಲ್ಯಾಂಪ್‍ ಡಿಸೈನ್‍‍ಗಳು ಪ್ರತಿ ಚಾಲಕನು ಈ ಬೈಕನ್ನು ರೈಡ್ ಮಾಡಲು ಆಸಕ್ತಿ ಹೊಂದುವಂತೆ ಮಾಡುತ್ತವೆ. ಈ ಬೈಕಿಗೆ ನೀಡುವ ಬೆಲೆಯು ರೂ.98,500 ಆಗಿದ್ದು, ನೀಡುವ ಹಣಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

Most Read Articles

Kannada
English summary
Hero Xtreme 200S First Ride Review — Sporty Commuter Now In A Slick Suit - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more