ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ರೀಟ್ ಬೈಕ್‍‍ಗಳ ಬೇಡಿಕೆಯು ಹೆಚ್ಚುತ್ತಿದ್ದು, ಸುಜುಕಿ ಮೋಟರ್‍‍ಸೈಕಲ್ಸ್ ಇಂಡಿಯಾ ಸಧ್ಯ 150ಸಿಸಿ ಮತ್ತು ಹೆಚ್ಚಿನ ಸಾಮರ್ಥ್ಯದ ಬೈಕ್‍‍ಗಳನ್ನು ತಯಾರಿ ಮಾಡುವ ಕಾರ್ಯದಲ್ಲಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ರೀಟ್ ಬೈಕ್‍‍ಗಳ ಬೇಡಿಕೆಯು ಹೆಚ್ಚುತ್ತಿದ್ದು, ಸುಜುಕಿ ಮೋಟರ್‍‍ಸೈಕಲ್ಸ್ ಇಂಡಿಯಾ ಸಧ್ಯ 150ಸಿಸಿ ಮತ್ತು ಹೆಚ್ಚಿನ ಸಾಮರ್ಥ್ಯದ ಬೈಕ್‍‍ಗಳನ್ನು ತಯಾರಿ ಮಾಡುವ ಕಾರ್ಯದಲ್ಲಿದೆ. ಆದರೆ ಇನ್ನು ಕೆಲವರು ಕ್ರೂಸರ್ ವಿನ್ಯಾಸದ ಬೈಕ್‍‍ಳಿಗೆ ಹೆಚ್ಚು ಒಲವನ್ನು ನೀಡುತ್ತಿದ್ದಾರೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ವಿಷಾದಕರ ವಿಷಯವೇನೆಂದರೆ ಮಾರುಕಟ್ಟೆಯಲ್ಲಿನ ಅಧಿಕ ಕ್ರೂಸರ್‍‍ಗಳ ಬೆಲೆಯು ಹೆಚ್ಚಾಗಿಯೆ ಇದೆ, ಆದ್ದರಿಂದ ಕ್ರೂಸರ್ ಬೈಕ್‍‍ಗಳ ಮೇಲೆ ಆಸಕ್ತಿ ಇದ್ದರೂ ಅಧಿಕ ಬೆಲೆಯ ಕಾರಣದಿಂದಾಗಿ ಕೊಳ್ಳಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಜುಕಿ ಸಂಸ್ಥೆಯು ಇದನ್ನು ಗಮನಿಸಿ ಎಂಟ್ರಿ ಲೆವೆಲ್ ಕ್ರೂಸರ್ ಇಂಟ್ರೂಡರ್ 150 ಬೈಕ್ ಅನ್ನು 2017ರಲ್ಲಿ ಬಿಡುಗಡೆಗೊಳಿಸಿತು.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 98.340 ಸಾವಿರದ ಬೆಲೆಯನ್ನು ಪಡೆದಿರುವ ಸುಜುಕಿ ಇಂಟ್ರೂಡರ್ 150 ಬೈಕ್ ಅನ್ನು ರೋಡ್ ಟೆಸ್ಟ್ ಡ್ರೈವ್ ಮಾಡಲು ಡ್ರೈವ್‍‍ಸ್ಪಾರ್ಕ್ ಕನ್ನಡಕ್ಕೆ ನೀಡಿದೆ. ಇಂದಿನ ಲೇಖನದಲ್ಲಿ ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೇ ನೀಡಲಿದ್ದೇವೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಮೊದಲ ನೋಟದಲ್ಲಿಯೆ ಹಲವರು ಈ ಬೈಕಿನ ಗಾತ್ರವನ್ನು ನೋಡಿ ಬೆರಗಾಗುವುದು ಖಚಿತ. ಇಂಟ್ರೂಡರ್ 150 ಬೈಕ್ ಸುಜುಕಿ ಸಂಸ್ಥೆಯ ಇಂಟ್ರೂಡರ್ ಎಂ1800 ಮತ್ತು ಎಂ800 ಬೈಕ್‍‍ಗಳ ವಿನ್ಯಾಸದ ಮೇಲೆ ತಯಾರಿಸಲಾಗಿದ್ದು, ಜಿಕ್ಸರ್ 150 ಬೈಕಿನ ಫ್ಲಾಟ್‍‍ಫಾರ್ಮ್ ಅನ್ನು ಆದರಿಸಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಬೈಕಿನ ಮುಂಭಾಗದಲ್ಲಿ ತ್ರಿಕೋನಾಕಾರದ ಮೇಲೆ ದೊಡ್ಡದಾದ ಕೌಲ್‍‍ನಿಂದ ಸುತ್ತುವರೆಸಲಾಗಿದೆ. ಹ್ಯಾಲೊಗನ್ ಯೂನಿಟ್‍‍ನಲ್ಲಿರುವ ಹೆಡ್‍‍ಲ್ಯಾಂಪ್ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದ್ದು, ಜಿಕ್ಸರ್ ಮೋಟರ್‍‍ಸೈಕಲ್‍‍ನಂತೆಯೆ ಸಸ್ಪೆಂಷನ್ ಅನ್ನು ಒದಗಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಇದಲ್ಲದೇ ಜಿಕ್ಸರ್‍‍ನಿಂದ ಪಡೆದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಇದು ಬೈಕಿನ ವೇಗ, ಎರಡೂ ಕಡೆಯ ಟ್ರಿಪ್ ಮೀಟರ್, ಓಡೊ ಮೀಟರ್, ಗೇರ್ ಇಂಡಿಕೇಟರ್, ಟಾಚೋಮೀಟರ್, ಫ್ಯುಯಲ್ ಇಂಡೀಕೇಟರ್ ಮತ್ತು ಸಮಯವನ್ನು ತೋರಿಸುತ್ತದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಸುಜುಕಿ ಇಂಟ್ರೂಡರ್ 150 ಬೈಕಿನ ಎರಡೂ ಕಡೆ ಫ್ಯುಯಲ್ ಟ್ಯಾಂಕ್ ಅನ್ನು ಒದಗಿಸಲಾಗಿದ್ದು, ಇದು ಜಿಕ್ಸರ್ ಬೈಕ್‍‍ಗಿಂತ ಕಡಿಮೆ ಗಾತ್ರವನ್ನು ಹೊಂದಿದೆ. ಸುಮಾರು 11 ಲೀಟರ್ ಫ್ಯುಯಲ್ ಕೆಪಾಸಿಟಿ ಹೊಂದಿರುವ ಈ ಫ್ಯುಯಲ್ ಟ್ಯಾಂಕ್ ಕ್ರೂಸರ್ ಬೈಕ್‍‍ಗಳಿಗೆ ಸೂಕ್ತವಲ್ಲವೆಂದೆ ಹೇಳಬಹುದು. ಅಲ್ಲದೇ ಬೈಕಿನ ಆಕಾರವನ್ನು ಸುಂದರವಾಗಿ ಕಾಣಿಸಲು 150ಸಿಸಿ ಎಂಜಿನ್‍‍ನ ಮೇಲೆ ಮಾಸ್ಕಿಂಗ್ ಅನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಫ್ಯುಯಲ್ ಟ್ಯಾಂಕ್‍‍ನ ಮುಂಭಾಗದಲ್ಲಿ ಆಕರ್ಷಕವಾದ ಏರ್ ಕೇಬಲ್ ಮತ್ತು ಇಂಟ್ರೂಡರ್ ಚಿಹ್ನೆಯಿಂದ ಸಜ್ಜುಗೊಳಿಸಲಾಗಿದೆ. ಫ್ಯುಯಲ್ ಟ್ಯಾಂಕ್‍‍ನ ಹಿಂಭಾಗವು ಸೀಟ್‍‍ನೊಂದಿಗೆ ಜೋಡಣೆ ಹೊಂದಿರುವ ಹಾಗೆ ವಿನ್ಯಾಸ ಮಾಡಲಾಗಿದೆ. ಸ್ಪ್ಲಿಟ್ ಸೀಟಿಂಗ್ ಸೌಲಭ್ಯವುಳ್ಳ ಇದು ಚಾಲಕರಿಗೆ ಧೀರ್ಘ ಕಾಲ ಪ್ರಯಾಣದ ಸೌಕರ್ಯಕ್ಕೆಂದೆ ವಿನ್ಯಾಸ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಸುಜುಕಿ ಇಂಟ್ರೂಡರ್ 150 ಬೈಕಿನ ಹಿಂಭಾಗದಲ್ಲಿ ವಿಶಾಲವಾದ ಮತ್ತು ದಪ್ಪನೆಯ ಪ್ಲಾಸ್ಟಿಕ್ ಫಲಕಗಳನ್ನು ಹೊಂದಿದ್ದು, ಇದು ದುಂಡಾದ ಗ್ರ್ಯಾಬ್ ಹ್ಯಾಂಡಲ್ ಮತ್ತು ನಯವಾದ ಎಲ್ಇಡಿ ಟೈಲ್ ಲ್ಯಾಂಪ್‍‍ಗಳನ್ನು ಪಡೆಯುತ್ತದೆ. ಈ ಬೈಕ್ ಜಿಕ್ಸರ್ ಬೈಕಿನಿಂದ ಪಡೆದ ಪ್ರೀ ಲೋಡ್ ಅಡ್ಜಸ್ಟಬಲ್ ರಿಯರ್ ಮೊನೊಶಾಕ್ ಅನ್ನು ಅಳವಡಿಸಲಾಗಿದ್ದು, ವಿಶಾಲವಾದ ವ್ಹೀಲ್ ಬೇಸ್ ಅನ್ನು ಪಡೆದಿದೆ. ಒಟ್ಟಾರೆಯಾಗಿ ಈ ಬೈಕಿನ ವಿನ್ಯಾಸವು ಆಕರ್ಷಕರವಾಗಿದ್ದು ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಜಿಕ್ಸರ್ ಬೈಕ್‍‍ಗಳಿಂದ ಪಡೆದ ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಬಳಸಲಾಗಿದ್ದು, ಇದನ್ನು ಹೊಸ ಪ್ಯಾನಲ್ ವಿನ್ಯಾಸದೊಂದಿಗೆ ಮರೆಮಾಡಲಾಗಿದೆ. ಸುಜುಕಿ ಇಂಟ್ರೂಡರ್ 150 ಒಂದು ಹೊಸ ವಿನ್ಯಾಸವನ್ನು ಹೊಂದಿದ್ದು, ಇದು ಮೋಟರ್ಸೈಕಲ್‍‍‍ನ ಒಟ್ಟಾರೆಯಾಗಿ ಹೊಂದಾಣಿಕೆ ಮಾಡುತ್ತದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ತೂಕವಾದ ಪ್ಲಾಸ್ಟಿಕ್‍‍ನೊಂದಿಗೆ ಈ ಬೈಕ್ 155ಸಿಸಿ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. ಆದರೆ ಈ ಬಾರಿ ಈ ಬೈಕ್‍‍ನಲ್ಲಿ ಮರುವಿನ್ಯಾಸಗೊಳಿಸಲಾದ ಏರ್‍‍ಬಾಕ್ಸ್ ಮತ್ತು ಮರು ವಿನ್ಯಾಸಗೊಳಿಸಲಾದ ಎಕ್ಸಾಸ್ಟ್ ಅನ್ನು ಒದಗಿಸಲಾಗಿದ್ದು, ಇದು 14.5 ಬಿಹೆಚ್‍‍ಪಿ ಮತ್ತು 14 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಮತ್ತು ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಸುಜುಕಿ ಇಂಟ್ರೂಡರ್ 150 ಬೈಕ್‍‍ನ ಮುಂಭಾಗದಲ್ಲಿ 100/87 ಆರ್17 ಮತ್ತು ಹಿಂಭಾಗದಲ್ಲಿ 140/60 ಆರ್17 ಎಮ್‍‍ಆರ್‍ಎಫ್ ಟೈರ್‍‍ಗಳನ್ನು ನೀಡಲಾಗಿದೆ. ಥಾರ್ ರಸ್ತೆಗಳ ಮೇಲೆ ಸುಲಭವಾಗಿ ಚಲಿಸಬಲ್ಲ ಈ ಬೈಕ್ 148 ಕಿಲೋಗ್ರಾಂ ತೂಕವನ್ನು ಹೊಂದಿದೆ. ಕೆಳ ದರ್ಜೆಯ ವಿನ್ಯಾಸವುಳ್ಳ ಈ ಬೈಕ್‍‍ನ ಫುಟ್‍‍ಪೆಗ್‍‍ಗಳು ಶೀಘ್ರವೇ ತಮ್ಮ ಕೌಶಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ಇಂಟ್ರೂಡರ್ 150 ಉತ್ತಮವಾದ ಕಾರ್ಯರೂಪವನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕಿನ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಆಳವಡಿಸಲಾಗಿದೆ, ಜೊತೆಗೆ ಮುಂಭಾಗದ ಚಕ್ರಗಳಿಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಜಿಕ್ಸರ್ ಬೈಕ್‍‍ಗಿಂತ ಇಂಟ್ರೂಡರ್ ಕಳಪೆ ರಸ್ತೆಗಳ ಮೇಲೆ ಸುಲಭವಾಗಿ ಚಲಿಸಬಲ್ಲದು. ಬೈಕಿನ ಮುಂಭಾಗವು ಸುಲಭವಾಗಿ ವಾಹನವನ್ನು ಸಾಗಿಸಿದರು, ಹಿಂಭಾಗವು ಕೊಂಚ ನಿರಾಷೆಯನ್ನುಂಟು ಮಾಡುತ್ತದೆ. ಅಂದರೆ ಏರುಪೇರಿನ ರಸ್ತೆಗಳಲ್ಲಿ ಈ ಬೈಕ್ ಅನ್ನು ಚಲಾಯಿಸಲು ಕೊಂಚ ಕಷ್ಟಕರವಾಗಬಹುದು. ಒಟ್ಟಾರೆಯಾಗಿ ಇಂಟ್ರೂಡರ್ ಬೈಕ್ ಪಾತ್‍ಹೋಲ್ ಮತ್ತು ಬ್ರೇಕರ್‍‍ಗಳಲ್ಲಿ ಸುಲಭವಾಗಿ ಚಲಿಸಬಲ್ಲದು.

ಫಸ್ಟ್ ರೈಡ್ ರಿವ್ಯೂ - ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕ್ರೂಸರ್ ಸುಜುಕಿ ಇಂಟ್ರೂಡರ್ 125..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಸುಜುಕಿ ಇಂಟ್ರೂಡರ್ 150 ಬೈಕ್ ತನ್ನ ವಿನ್ಯಾಸದಿಂದ ಹೆಚ್ಚು ಜನರನ್ನು ಆಕರ್ಷಿಸಿಸುತ್ತದೆ. ಈ ಬೈಕ್ ಅನ್ನು ರಿವ್ಯೂ ಮಾಡಲು ನಮಗೆ ನೀಡಿದಾಗ ರಸ್ತೆಯಲ್ಲಿನ ಹಲವಾರು ಮಂದಿಯ ಆಕರ್ಷಣೆಯನ್ನು ಸುಲಭವಾಗಿ ತನ್ನತ್ತ ಸೆಳೆಯಿತು. ಕಡಿಮೆ ಬೆಲೆಯಲ್ಲಿ ಕ್ರೂಸರ್‍ ಬೈಕ್ ಅನ್ನು ಕೊಳ್ಳುವ ಆಲೋಚನೆಯಿದ್ದರೆ ಅಂತವರು ಸುಜುಕಿ ಇಂಟ್ರೂಡರ್ 150 ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

Most Read Articles

Kannada
English summary
Suzuki Intruder 150 Road Test Review.
Story first published: Thursday, August 30, 2018, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X