ಸ್ಕೂಟರ್ ಉತ್ಸಾಹಿಗಳಿಗಾಗಿ 6 ಮೈಲೇಜ್ ಪ್ರೇಮಿ ಸ್ಕೂಟರ್ ಗಳು

Written By:

ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಸ್ಕೂಟರ್ ಗಳು ಜನಪ್ರಿಯವಾಗ ತೊಡಗಿದೆ. ಸ್ಕೂಟರ್ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅತಿ ಹೆಚ್ಚು ಮಾರಾಟದಲ್ಲಿರುವ ಹೋಂಡಾ ಆಕ್ಟಿವಾ ಸ್ಕೂಟರ್. ಅಷ್ಟಕ್ಕೂ ಹೋಂಡಾ ಆಕ್ಟಿವಾ ನೀಡುವ ಮೈಲೇಜ್ ಎಷ್ಟು? ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿರುವ ಸ್ಕೂಟರ್ ಗಳು ಯಾವುವು?

ಹೀಗೆ ಸುಲಭ ದಣಿವು ರಹಿತ ಚಾಲನೆಗೆ ಹೆಸರು ಮಾಡಿರುವ ಆರು ಮೈಲೇಜ್ ಸ್ಕೂಟರ್ ಗಳನ್ನು ನಾವಿಂದು ಪರಿಚಯಿಸಲಿದ್ದೇವೆ. ದೈನಂದಿನ ಮನೆಯಿಂದ ಆಫೀಸಿಗೆ ತೆರಳಲು, ತುರ್ತಾಗಿ ಸ್ನೇಹಿತರನ್ನು ಭೇಟಿಯಾಗಲು, ಮನೆಗೆ ಸಾಮಾಗ್ರಿಗಳನ್ನು ತರಲು ಹೀಗೆ ಬಹುಪಯೋಗಿ ಸ್ಕೂಟರ್ ಗಳು ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿದೆ.

ಆಕ್ಟಿವಾ ಐ

ಆಕ್ಟಿವಾ ಐ

2013ನೇ ಸಾಲಿನಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಆಕ್ಟಿವಾದ ಮಗದೊಂದು ಆವೃತ್ತಿ ಆಕ್ಟಿವಾ-ಐ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ಇದರಲ್ಲಿರುವ 109.2 ಸಿಸಿ ಎಂಜಿನ್ 8.74 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆಕ್ಟಿವಾ ಐ

ಆಕ್ಟಿವಾ ಐ

ಕಾಂಬಿ ಬ್ರೇಕ್ ಸಿಸ್ಟಂ (ಸಿಬಿಎಸ್) ವ್ಯವಸ್ಥೆಯನ್ನು ಹೊಂದಿರುವ ಆಕ್ಟಿವಾ ಐ, ಪ್ರತಿ ಲೀಟರ್ ಗೆ 69.6 ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸಂಸ್ಥೆಯು ತಿಳಿಸುತ್ತದೆ. ಹಾಗಿದ್ದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ 50ರಿಂದ 60 ಕೀ.ಮೀ. ಗಳ ವರೆಗೆ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಯಮಹಾ ರೇ ಝಡ್ ಆರ್

ಯಮಹಾ ರೇ ಝಡ್ ಆರ್

ಕ್ರೀಡಾ ಸ್ನೇಹಿ ಬೈಕ್ ಪ್ರಿಯ ಸಂಸ್ಥೆ ಯಮಹಾ ಸ್ಕೂಟರ್ ಗಳ ನಿರ್ಮಾಣದಲ್ಲಿ ಅಷ್ಟೊಂದು ಖ್ಯಾತಿ ಪಡೆದಿಲ್ಲ. ಹಾಗಿದ್ದರೂ ರೇ ಝಡ್ ಆರ್ ಗಳಂತಹ ಆಕರ್ಷಕ ಮಾದರಿಗಳನ್ನು ಸಂಸ್ಥೆಯು ಒದಗಿಸುತ್ತಿದೆ. ನವ ಯುವತಿಯರಿಗೆ ಹೆಚ್ಚು ಪ್ರಿಯವೆನಿಸಲಿರುವ ಯಮಹಾ ರೇ ಝಡ್ ಆರ್ ಸ್ಕೂಟರ್ ನಲ್ಲಿರುವ 113 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 8.1 ಎನ್ ಎಂ ತಿರುಗುಬಲದಲ್ಲಿ 7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಯಮಹಾ ರೇ ಝಡ್ ಆರ್

ಯಮಹಾ ರೇ ಝಡ್ ಆರ್

ಸಿಟಿವಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ ಯಮಹಾ ರೇ ಝಡ್ ಆರ್ ಗಂಟೆಗೆ 86 ಕೀ.ಮೀ. ವೇಗದಲ್ಲಿ ಸಾಗಲಿದ್ದು, ಪ್ರತಿ ಲೀಟರ್ ಗೆ 66 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ. ಇದು ನೈಜ ರಸ್ತೆ ಪರಿಸ್ಥಿತಿಯಲ್ಲಿ 50ರಿಂದ 55 ಕೀ.ಮೀ. ವರೆಗೆ ಮೈಲೇಜ್ ಕಾಪಾಡಿಕೊಳ್ಳಲಿದೆ.

ಹೀರೊ ಡ್ಯುಯೆಟ್

ಹೀರೊ ಡ್ಯುಯೆಟ್

ಹೋಂಡಾ ಜೊತೆಗೆ ಬೇರ್ಪಟ್ಟ ಬಳಿಕ ಹೀರೊ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿರುವ ಡ್ಯುಯೆಟ್ ಸ್ಕೂಟರ್ ಆಕರ್ಷಕ ವಿನ್ಯಾಸದ ಜೊತೆಗೆ ಏಕಕಾಲಕ್ಕೆ ಪುರುಷ ಹಾಗೂ ಮಹಿಳಾ ಗ್ರಾಹಕರನ್ನು ಗುರಿ ಮಾಡುತ್ತಿದೆ. ಇದರಲ್ಲಿ ಆಳವಡಿಸಲಾಗಿರುವ 110.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8.30 ಎನ್ ಎಂ ತಿರುಗುಬಲದಲ್ಲಿ 8.31 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಡ್ಯುಯೆಟ್

ಹೀರೊ ಡ್ಯುಯೆಟ್

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ ಹೀರೊ ಡ್ಯುಯೆಟ್ ಪ್ರತಿ ಲೀಟರ್ 63.8 ಕೀ.ಮೀ. ಮೈಲೇಜ್ ನೀಡಲಿದೆ. ಆದರೆ ನೈಜ ರಸ್ತೆ ಪರಿಸ್ಥಿಯಲ್ಲಿ 45ರಿಂದ 55 ಕೀ.ಮೀ. ವರೆಗೆ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಸುಜುಕಿ ಲೆಟ್ಸ್

ಸುಜುಕಿ ಲೆಟ್ಸ್

ಜಪಾನ್ ಮೂಲದ ಸುಜುಕಿ ಸಹ ಲೆಟ್ಸ್ ಎಂಬ ವಿನೂತನ ಸ್ಕೂಟರ್ ನೊಂದಿಗೆ ಮುಂದೆ ಬಂದಿದೆ. ಇದರಲ್ಲಿರುವ ಸುಜುಕಿ ಇಕೊ ಫರ್ಫಾಮನ್ಸ್ ತಂತ್ರಜ್ಞಾನವು ಗರಿಷ್ಠ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಿದೆ. ಸುಜುಕಿ ಲೆಟ್ಸ್ ಸ್ಕೂಟರ್ 112.8 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು 9 ಎನ್ ಎಂ ತಿರುಗುಬಲದಲ್ಲಿ 8.7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸುಜುಕಿ ಲೆಟ್ಸ್

ಸುಜುಕಿ ಲೆಟ್ಸ್

ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿರುವ ಸುಜುಕಿ ಲೆಟ್ಸ್ ಪ್ರತಿ ಲೀಟರ್ ಗೆ 63.8 ಕೀ.ಮೀ. ಗಳಷ್ಟು ಮೈಲೇಜ್ ನೀಡಲಿದ್ದು, ಗಂಟೆಗೆ ಗರಿಷ್ಠ 85 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳಲಿದೆ. ನೈಜ ರಸ್ತೆ ಪರಿಸ್ಥಿತಿಯಲ್ಲಿ ಸುಜುಕಿ ಲೆಟ್ಸ್ 45ರಿಂದ 55 ಕೀ.ಮೀ.ಗಳಷ್ಟು ಇಂಧನ ಕ್ಷಮತೆಯನ್ನು ನೀಡಲಿದೆ.

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

ಪುಣೆಯಲ್ಲಿ ಸ್ಥಿತಗೊಂಡಿರುವ ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ ನಿರ್ಮಾಣಗೊಂಡಿರುವ ಮಹೀಂದ್ರ ಸಂಸ್ಥೆಯ ಮೊದಲ ಇನ್ ಹೌಸ್ ಉತ್ಪನ್ನ ಗಸ್ಟೊ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಕಾಪಿಡೆಕೂಂಡಿದೆ. ಇದರಲ್ಲಿರುವ 109.6 ಸಿಸಿ ಫೋರ್ ಸ್ಟ್ರೋಕ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 9 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ ಗಂಟೆಗೆ ಗರಿಷ್ಠ 80 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 63 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ. ಆದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ ಗಸ್ಟೊ 50ರಿಂದ 55 ಕೀ.ಮೀ. ಗಳ ಮೈಲೇಜ್ ಕಾಪಾಡಿಕೊಳ್ಳಲಿದೆ.

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

ಹೋಂಡಾ ಆಕ್ಟಿವಾಗೆ ಪ್ರಬಲ ಎದುರಾಳಿಯಾಗಿ ಮೂಡಿ ಬಂದಿರುವ ಟಿವಿಎಸ್ ಜೂಪಿಟರ್ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ. ದೈನಂದಿನ ಬಳಕೆಗೆ ಹೆಚ್ಚು ಸೂಕ್ತವೆನಿಸಿರುವ ಟಿವಿಎಸ್ ಜೂಪಿಟರ್ ನಲ್ಲಿರುವ 109.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 8 ಎನ್ ಎಂ ತಿರುಗುಬಲದಲ್ಲಿ 7.88 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್ ಪ್ರತಿ ಲೀಟರ್ ಗೆ 62 ಕೀ.ಮೀ. ಮೈಲೇಜ್ ನೀಡಲಿದೆ. ಅಂದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 45ರಿಂದ 55 ಕೀ.ಮೀ. ಇಂಧನ ಕ್ಷಮತೆ ನೀಡುವುದು ಗ್ಯಾರಂಟಿ.

ಸ್ಕೂಟರ್ ಉತ್ಸಾಹಿಗಳಿಗಾಗಿ 6 ಮೈಲೇಜ್ ಪ್ರೇಮಿ ಸ್ಕೂಟರ್ ಗಳು

ಈಗ ನಿಮ್ಮ ನೆಚ್ಚಿನ ಸ್ಕೂಟರ್ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯವನ್ನು ತಿಳಿಸಿರಿ.

English summary
Top 6 Most Fuel-Efficient Scooters in India
Story first published: Monday, August 29, 2016, 10:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark