ಮೊದಲ ಚಾಲನಾ ವಿಮರ್ಶೆ: ಟಿವಿಎಸ್ ಅಪಾಚೆ ಆರ್‌ಆರ್ 310

ಬೈಕ್ ರೇಸಿಂಗ್ ಎನ್ನುವ ವಿಚಾರವು ಟಿವಿಎಸ್ ಮೋಟರ್ಸ್ ಕಂಪನಿಗೆ ಚಿರಪರಿಚಿತ ವಿಭಾಗ ಎನ್ನಬಹುದು. 1983ರಲ್ಲಿ ಮೊದಲ ಬಾರಿಗೆ ಆರಂಭವಾದ ಈ ರೇಸಿಂಗ್ ಡಿಎನ್ಎ ಸತತ 35 ವರ್ಷಗಳಿಂದ ನೆಡೆದುಕೊಂಡು ಬಂದಿದೆ.

By Girish

ಬೈಕ್ ರೇಸಿಂಗ್ ಎನ್ನುವ ವಿಚಾರವು ಟಿವಿಎಸ್ ಮೋಟರ್ಸ್ ಕಂಪನಿಗೆ ಚಿರಪರಿಚಿತ ವಿಭಾಗ ಎನ್ನಬಹುದು. 1983ರಲ್ಲಿ ಮೊದಲ ಬಾರಿಗೆ ಆರಂಭವಾದ ಈ ರೇಸಿಂಗ್ ಡಿಎನ್ಎ ಸತತ 35 ವರ್ಷಗಳಿಂದ ನೆಡೆದುಕೊಂಡು ಬಂದಿದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಸರಳವಾಗಿ ಹೇಳುವುದಾದರೆ, ಭಾರತದಲ್ಲಿ ಮೋಟಾರ್ ಸೈಕಲ್ ರೇಸಿಂಗ್ ವಿಚಾರ ಬಂದಾಗ ಟಿವಿಎಸ್ ಮೋಟಾರ್ಸ್ ಹಿರಿಯ ತಲೆ ಎನ್ನಬಹುದು. ಇಷ್ಟೆಲ್ಲಾ ಇತಿಹಾಸ ಹೊಂದಿರುವ ಟಿವಿಎಸ್ ಮೋಟರ್ಸ್ ಕಂಪನಿ, ಸದ್ಯ ರೇಸಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಹೊಸ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್ ಬಿಡುಗಡೆಗೊಳಿಸಿದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಬಿಎಂಡಬ್ಲ್ಯೂ ಮೊಟ್ರಾಡ್‌ನ ತಾಂತ್ರಿಕ ಸಹಯೋಗದೊಂದಿಗೆ ಅಪಾಚೆ ಆರ್‌ಆರ್ 310 ಬೈಕ್‌ಗೆ ಜನ್ಮ ನೀಡಿದೆ. ಈ ವಾಹನವನ್ನು 2016ರಲ್ಲಿ ನೆಡೆದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಮಾಡಿತ್ತು.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಟಿವಿಎಸ್ ಮೋಟಾರ್ಸ್ ಕಂಪನಿಗೆ ಅಪಾಚೆ ಆರ್‌ಆರ್ 310 ಬೈಕ್ ದೊಡ್ಡ ಲೀಗ್ ಮೋಟಾರ್ ಸೈಕಲ್ ಆಗಿದೆ. ಇನ್ನು, ಈ ಆರ್‌ಆರ್ 310 ವಾಹನವು ಚುರುಕಾದ ಕೆಟಿಎಂ ಆರ್‌ಸಿ 390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ ವಾಹನಗಳ ಜೊತೆ ಸ್ಪರ್ಧಿಸುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ನಾವು ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕನ್ನು ಚೆನ್ನೈನ ಇರುಂಗಟ್ಟುಕೋಟೈನಲ್ಲಿರುವ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್(ಎಂಎಂಆರ್‌ಟಿ)ಯಲ್ಲಿ ಸವಾರಿ ಮಾಡುವ ಮೂಲಕ, ಈ ರೇಸಿಂಗ್ ಬೈಕಿನ ಸಂಪೂರ್ಣ ವಿಶೇಷತೆ ಮತ್ತು ರೈಡ್ ಬಗ್ಗೆ, ತಾಂತ್ರಿಕ ವಿಚಾರಗಳ ಬಗ್ಗೆ, ವಿನ್ಯಾಸದ ಬಗ್ಗೆ ವಿಚಾರಗಳನ್ನು ಹೊತ್ತು ತಂದಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಭಾರತದಲ್ಲಿ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಹೆಚ್ಚು ಭರವಸೆ ಮೂಡಿಸಿರುವ ಈ ಬೈಕ್, ದೈತ್ಯ ಟಿವಿಎಸ್ ಸಂಸ್ಥೆ ಹೊರತಂದಿರುವ ಸಂಪೂರ್ಣವಾಗಿ ಅಂದಗೊಂಡಿರುವ ಇಂಡಿಯನ್ ಮೋಟಾರ್ ಸೈಕಲ್ ಎನ್ನಬಹುದು.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

2016ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದಿದ್ದ ಶಾರ್ಕ್ ವಿನ್ಯಾಸದ ಡಿಸೈನ್ ಉಳಿಸಿಕೊಂಡಿರುವ ಅಪಾಚೆ ಆರ್‌ಆರ್ 310 ಬೈಕ್, ಆಕ್ರಮಣಶೀಲ ವಿನ್ಯಾಸದೊಂದಿಗೆ 'ಟ್ರ್ಯಾಕ್‌ಗೆ ನಾನು ಸರಿಹೊಂದುತ್ತೇನೆ' ಎಂಬುದನ್ನು ಸಾರಿ ಹೇಳುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಮುಂಭಾಗದಲ್ಲಿ ರಾಮ್ ಏರ್ ಇಂಟಕ್‌ಗಳ ಮೇಲೆ ಇರುವಂತಹ ಪ್ರಥಮ ದರ್ಜೆಯ ಬೈ ಎಲ್ಇಡಿ ಅವಳಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಹೆಚ್ಚು ಪ್ರಾಬಲ್ಯ ಸಾಧಿಸುತ್ತವೆ. ಈ ಇಂಟಕ್‌ಗಳ ಎಂಜಿನ್‌ಗೆ ಹೆಚ್ಚು ಗಾಳಿಯನ್ನು ಪೂರೈಕೆ ಮಾಡುವ ಮೂಲಕ, ಕಾರ್ಯಕ್ಷಮತೆ ಮತ್ತು ಕೂಲಿಂಗ್ ಬಲಪಡಿಸುತ್ತವೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಅಪಾಚೆ ಆರ್‌ಆರ್ 310 ಬೈಕಿನ ಬದಿಯು ಎಲ್ಲಾ ಟಿವಿಎಸ್ ವಾಹನಗಳಿಗಿಂತ ಮೇಲುಗೈ ಸಾಧಿಸುತ್ತದೆ. ಗಿಲ್ ವೆಂಟ್‌ಗಳ ಜೊತೆ ಪೇಟೆಂಟ್ ಪಡೆದ ಡೇಫ್ಲೆಕ್ಟರ್ ಕೌಲ್ ಬೈಕಿಗೆ ಹೆಚ್ಚು ಅಂದ ನೀಡಿದೆ ಎನ್ನಬಹುದು. ಈ ಗಿಲ್ ವೆಂಟ್‌ಗಳು ಬೈಕಿನಲ್ಲಿ ಉತ್ಪಾದನೆಯಾಗುವ ಬಿಸಿ ಗಾಳಿಯನ್ನು ಹೊರ ಹಾಕಲು ಸಹಾಯ ಮಾಡುತ್ತವೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಈ ಬೈಕಿನಲ್ಲಿ ಕಂಡು ಬರುವ ಸ್ನೇಕ್ ಫ್ಯಾಂಗ್ ಟೈಲ್ ಲೈಟ್‌ಗಳು ತನ್ನ ಪ್ರತಿಸ್ಪರ್ಧಿಗಳಲ್ಲಿ ಕಂಡುಬರುವ ವರ್ಟಿಕಲ್ ಬಾರ್ ಮತ್ತು ಲೈನ್‌ಗಳಿಗೆ ಹೋಲಿಸಿದರೆ ಅನನ್ಯವಾಗಿವೆ. ಸ್ವಲ್ಪ ಮೇಲಕ್ಕೆ ಸೂಚಿಸುವ ರೀತಿಯಲ್ಲಿ ವಿನ್ಯಾಸ ಮಾಡಿರುವ ಎಕ್ಸ್‌ಸಾಸ್ಟ್‌ಗಳು ಜನಸಮೂಹದ ಮದ್ಯೆ ಹಾದುಹೋಗುವ ಸಹಾಯ ಮಾಡುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಲಂಬವಾಗಿ ಜೋಡಿಸಲಾದ ಸೂಚಕ ಉಪಕರಣವು ಟಕೋಮೀಟರ್‌ನೊಂದಿಗೆ ಗೇರ್ ಪೊಸಿಷನ್ ಸೂಚಕ, ರೇಂಜ್ ಮತ್ತು ಮೈಲೇಜ್ ಇಂಡಿಕೇಟರ್ ಸೇರಿಕೊಂಡ ಸ್ಪೀಡೊಮೀಟರ್ ಪಡೆಯುತ್ತದೆ. ಇದು 0 - 60 ಕಿ.ಮೀ ಸ್ಪ್ರಿಂಟ್‌ಗಳು ಮತ್ತು ಲ್ಯಾಪ್ ಅಳತೆ ಮಾಡುವ ಎರಡು ರೇಸಿ ಟೈಮರ್‌ಗಳನ್ನು ಪಡೆಯುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಸವಾರಿ ಮಾಡಲು ಪ್ರಾರಂಬಿಸೋಣವೇ ?

ಅಪಾಚೆ ಆರ್‌ಆರ್ 310 ಮೋಟಾರ್‌ಸೈಕಲ್ ಬೈಕ್ ಹೆಚ್ಚಿನ ಸಂಶೋಧನೆ, ಅಭಿವೃದ್ಧಿ ಮತ್ತು ಟ್ರ್ಯಾಕ್ ಉತ್ಕೃಷ್ಟತೆಯನ್ನು ಪ್ರತಿನಿಧಿಸುತ್ತದೆ. ಅಪಾಯವಿಲ್ಲದ ಶಕ್ತಿ ಮತ್ತು ರೇಸ್ ಮಾಡಲು ಯೂಗ್ಯವಾದ ಹ್ಯಾಂಡಲಿಂಗ್ ಮತ್ತು ಕಾರ್ನೆರಿಂಗ್ ಗ್ರಿಪ್ ಸಹಾಯದೊಂದಿಗೆ ಬೈಕನ್ನು ಸುಲಭವಾಗಿ ಚಾಲನೆ ಮಾಡಬಹುದು.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಥ್ರೊಟಲ್ ನೀಡಿದಂತೆಲ್ಲಾ ಈ ಬೈಕ್ ಹೆಚ್ಚು ಕಠಿಣವಾಗುತ್ತದೆ ಮತ್ತು 313 ಸಿಸಿ ಸಿಂಗಲ್ ಸಿಲಿಂಡರ್, ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್‌ನೊಂದಿಗೆ ಪವರ್ ಬ್ರ್ಯಾಂಡ್ ಚಾಲಕನ ಅನುಭವವನ್ನು ಹೆಚ್ಚಿಸುವುದು ಖಂಡಿತ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ನೇರ ರಸ್ತೆಗಳಲ್ಲಿ ಮಾತ್ರ 34 ಬಿಎಚ್‌ಪಿ ಶಕ್ತಿಯು ಕೆಟಿಎಂ 390 ಸರಿಸಮವಾಗಿ ನಿಲ್ಲುತ್ತದೆ. ಈ ಬೈಕಿನ ಅಂದಾಜು ಗರಿಷ್ಠ ವೇಗ ಮತ್ತು ಮೈಲೇಜ್ ಕ್ರಮವಾಗಿ 160 ಕಿ.ಮೀ ಮತ್ತು 25 ರಿಂದ 30 ಕಿ.ಮೀ ಇದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

170 ಕೆಜಿ ತೂಗುವ ಅಪಾಚೆ ಆರ್‌ಆರ್ 310 ಬೈಕ್, ಕಯಾಬಾ 41 ಎಂಎಂ ವ್ಯಾಸದ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಪ್ರಿ ಲೋಡ್ ಆಗಿರುವ ಮತ್ತು ಹೊಂದಿಸಬಹುದಾದ ಹಿಂಭಾಗದ ಮೊನೊ ಶಾಕ್ ಪಡೆಯುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಬ್ರ್ಯಾಕಿಂಗ್ ಕರ್ತವ್ಯಗಳ ಬಗ್ಗೆ ಹೇಳುವುದಾದರೆ, ಡ್ಯುಯಲ್ ಚಾನೆಲ್ ಎಬಿಎಸ್ ಜೊತೆ ಮುಂಭಾಗದಲ್ಲಿ 300 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾದಲ್ಲಿ 240 ಎಂಎಂ ಡಿಸ್ಕ್‌ನೊಂದಿಗೆ ರಿಯರ್ ವೀಲ್ ಲಿಫ್ಟ್-ಆಫ್ ರಕ್ಷಣೆಯನ್ನು ಪಡೆಯುತ್ತದೆ. ಇದು ಒಂದಲ್ಲಾ ಒಂದು ದಿನ ಜೀವರಕ್ಷಕ ಕಾರ್ಯನಿರ್ವಹಿಸುವುದು ಖಚಿತ ಎಂದು ನಾವು ಹೇಳುತ್ತೇವೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಈ ಬೈಕಿನ ಎಲ್ಲಾ ಅಂಶಗಳೂ ಸರಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಸ್ಟೀರಿಂಗ್ ಪಿನ್ ಚೂಪಾಗಿಲ್ಲದೆ ಇರುವುದು ನಾವು ಗಮನಿಸಿದ್ದೇವೆ ಮತ್ತು ಅಪಾಚೆ ಆರ್‌ಆರ್ 310 ಬೈಕನ್ನು ನೀವು ಎಲ್ಲಿಗೆ ಬೇಕೋ ಅಲ್ಲಿಗೆ ನಿಖರವಾಗಿ ತೋರಿಸುವುದಕ್ಕೆ ಕೊಂಚ ಮಟ್ಟಿಗೆ ಪಾಯಾಸ ಪಡಬೇಕಾಗುತ್ತದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಕೊನೆಯ ಮಾತು :

ಕೆಲವೊಂದು ವಿಚಾರಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಅಪಾಚೆ ಆರ್‌ಆರ್ 310 ಅದ್ಭುತವಾಗಿದೆ. 300 ಸಿಸಿ ವಿಭಾಗಕ್ಕೆ ಅಪಾಚೆ ಅಪಾಚೆ ಆರ್‌ಆರ್ 310ನೊಂದಿಗೆ ಟಿವಿಎಸ್ ಮೋಟಾರ್ಸ್ ತಡವಾಗಿ ಆಗಮಿಸಿದ್ದರೂ ಸಹ ತನ್ನ ನಿರ್ಮಾಣ ಶೈಲಿಯಿಂದ ಮತ್ತು ರೇಸಿಂಗ್ ಸರ್ಕ್ಯೂಟ್ ವಿಚಾರದಿಂದ ಹೆಚ್ಚು ಚುರುಕುತನ, ಭಾವ ಮತ್ತು ಸಮತೋಲನವನ್ನು ಕಾಯ್ದುಕೊಂಡಿದೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಬಿಎಂಡಬ್ಲ್ಯೂ ಮತ್ತು ಟಿವಿಎಸ್ ಮೈತ್ರಿಯ ಫಾಲ್ಟ್‌ಫಾರಂ ಆದರದ ಮೇಲೆ ಈ ಬೈಕನ್ನು ಅಪಾಚೆ ಆರ್‌ಆರ್ 310 ಬೈಕನ್ನು ಅಭಿವೃದ್ಧಿಪಡಿಸಲಾಗಿದೆ. ಬಿಎಂಡಬ್ಲ್ಯೂ ಜಿ 310 ಆರ್ ವಾಹನಕ್ಕೆ ಹೋಲಿಸಿದರೆ ಆರ್‌ಆರ್ 310 ಬೈಕ್ ಇದೇ ರೀತಿಯ ಪ್ಯಾಕೇಜ್ ನೀಡುತ್ತದೆ. ಚಾರ್ಸಿ, ಎಂಜಿನ್, ಗೇರ್‌ಬಾಕ್ಸ್, ಬ್ರೇಕಿಂಗ್, ಸಸ್ಪೆನ್‌ಷನ್ ಮತ್ತು ಎಲೆಕ್ಟ್ರಿಕಲ್‌ಗಳು ಬಹುತೇಕ ಒಂದೇ ಆಗಿವೆ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಆದಾಗ್ಯೂ, ಭಾರತೀಯ ಪರಿಸ್ಥಿತಿಗಳನ್ನು ಪೂರೈಸುವ ಸಲುವಾಗಿ ಸಿದ್ಧಪಡಿಸಲಾಗಿರುವ ಆರ್‌ಆರ್ 310 ಬೈಕ್ ರೇಸಿಂಗ್ ಪ್ರಿಯರಿಗೆ ಹಬ್ಬದೂಟ ನೀಡುವುದು ಗ್ಯಾರಂಟಿ.

ಮೊದಲ ಚಾಲನಾ ವಿಮರ್ಶೆ : ಟಿವಿಎಸ್ ಅಪಾಚೆ ಆರ್‌ಆರ್ 310

ಬೆಲೆ ಮತ್ತು ತಾಂತ್ರಿಕ ವಿವರಗಳು ;

ಈ ಬಲಿಷ್ಠ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್, ರೂ.2.05 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿದೆ. ಕೊಟ್ಟ ಹಣಕ್ಕೆ ಸರಿಯಾದ ಮೌಲ್ಯವೆಂದು ತೋರುತ್ತದೆ.

Design 1-cylinder, 4-stroke, reverse inclined engine
Displacement 312.2cc
Max. Power Output 34bhp at 9,700rpm
Max. Torque 28Nm at 7,700rpm
Top Speed (est.) 160kph
0-100kph 7.71 seconds
0-60kph 2.93 seconds
Mileage (est.) 25 - 30kpl
Fuel Tank Capacity 11 litres
Gearbox 6-speed
Clutch Wet Multiple Disc

Suspension (Front)

Kayaba 41mm Upside-Down Forks
Suspension (Rear)

Kayaba 41mm Mono-shock
Brakes Front (Disc)

300mm Petal Type
Brakes Rear (Disc)

240mm Petal Type
ABS

Dual-Channel ABS
Tyre (Front)

Michelin 110/70-R17 54H Tubeless

Tyre (Rear)

Michelin 150/60-R17 66H Tubeless

Chassis Trellis frame, split chassis
Dimensions (L×W×H) 2,001 x 786 x 1,135mm
Kerb Weight 169.5kg
Seat Height 810mm
Wheelbase 1,365mm

More from DriveSpark

Article Published On: Tuesday, December 19, 2017, 17:26 [IST]
English summary
First Ride Review: TVS Apache RR 310
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+