2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

2021ರ ಹೊಸ ಸ್ಕೋಡಾ ಆಕ್ಟೀವಿಯಾ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಮೊದಲ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರ್ ಅನ್ನು 2002ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಹೆಚ್ಚು ಜನಪ್ರಿಯವಾಗಿತ್ತು.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ನಂತರ ಕಂಪನಿಯು 2004ರಲ್ಲಿ ಆಕ್ಟೀವಿಯಾ ವಿಆರ್‌ಎಸ್ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಆಕ್ಟೀವಿಯಾದ ಎರಡನೇ ತಲೆಮಾರಿನ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾರಾ ಎಂದು ಕರೆಯಲಾಯಿತು. ಲಾರಾ ಕಾರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು. ನಂತರ ಸ್ಕೋಡಾ ಕಂಪನಿಯು ಈ ಕಾರಿನ ವಿಆರ್‌ಎಸ್ ಆವೃತ್ತಿಯನ್ನು ಪರಿಚಯಿಸಿತು.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಇದಾದ ನಂತರ ಸ್ಕೋಡಾ ಕಂಪನಿಯು ಭಾರತದಲ್ಲಿ ಹೊಸ ವಿನ್ಯಾಸವನ್ನು ಹೊಂದಿದ್ದ ಮೂರನೇ ತಲೆಮಾರಿನ ಆಕ್ಟೀವಿಯಾ ಕಾರ್ ಅನ್ನು ಬಿಡುಗಡೆಗೊಳಿಸಿತು. ಈಗ ಸ್ಕೋಡಾ ಕಂಪನಿಯು ಬಹುನಿರೀಕ್ಷಿತ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ನಾವು ಇತ್ತೀಚಿಗೆ ಈ ಹೊಸ ಕಾರ್ ಅನ್ನು ನಗರದ ಸುತ್ತ ಮುತ್ತ ಚಾಲನೆ ಮಾಡಿದೆವು. 2021ರ ಆಕ್ಟೀವಿಯಾ ಕಾರು ಅದ್ಭುತವಾಗಿದ್ದು, ಹಳೆಯ ತಲೆಮಾರಿನ ಕಾರಿಗಿಂತ ವಿಭಿನ್ನವಾಗಿದೆ. ಈ ಕಾರು ಹಲವಾರು ಫೀಚರ್'ಗಳನ್ನು ಹೊಂದಿದೆ. ಇದರ ರಿವ್ಯೂ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್'ಟಿರಿಯರ್ ಹಾಗೂ ಡಿಸೈನ್

ಮೊದಲ ನೋಟದಲ್ಲಿಯೇ ಹೊಸ ಆಕ್ಟೀವಿಯಾ ಕಾರು ಶಾರ್ಪ್ ಆಗಿ ಹಾಗೂ ಸ್ಪೋರ್ಟಿಯಾಗಿ ಕಾಣುತ್ತದೆ. ಈ ಕಾರಿನಲ್ಲಿ ಕ್ರಿಸ್ಟಲ್ ಲೈಟಿಂಗ್ ಹೊಂದಿರುವ ಸ್ಲೀಕ್ ಆದ ಹೆಡ್ ಲ್ಯಾಂಪ್ ಯುನಿಟ್, ಹೈ ಹಾಗೂ ಲೋ ಬೀಮ್'ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಕಾರಿನಲ್ಲಿರುವ ಡಿಆರ್‌ಎಲ್‌ಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಹೊಸ ಆಕ್ಟೀವಿಯಾ ಕಾರ್ ಅನ್ನು ಸ್ಟೈಲ್ ಹಾಗೂ ಎಲ್ ಅಂಡ್ ಕೆ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ನಾವು ಎಲ್ ಅಂಡ್ ಕೆ ಮಾದರಿಯ ಹೈ ಎಂಡ್ ಮಾದರಿಯನ್ನು ಚಾಲನೆ ಮಾಡಿದೆವು. ಈ ಮಾದರಿಯ ಮುಂಭಾಗದಲ್ಲಿ ಸಾಕಷ್ಟು ಕ್ರೋಮ್ ಅಂಶಗಳನ್ನು ನೀಡಲಾಗಿದೆ. ಇದರ ಜೊತೆಗೆ ಏರೋ ಡೈನಾಮಿಕ್'ಗಾಗಿ ಮುಂಭಾಗದ ಸ್ಪೋರ್ಟಿ ಬಂಪರ್'ನಲ್ಲಿರುವ ಎರಡೂ ಬದಿಗಳಲ್ಲಿ ಏರ್ ವೆಂಟ್ ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಆಕ್ಟೀವಿಯಾದ ಅಂತರರಾಷ್ಟ್ರೀಯ ಮಾದರಿಯಲ್ಲಿ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ನೀಡಲಾಗಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಗಳಲ್ಲಿ ಈ ಫೀಚರ್ ನೀಡಲಾಗಿಲ್ಲ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಎಲ್ ಅಂಡ್ ಕೆ ಮಾದರಿಯ ಸೈಡ್ ಪ್ರೊಫೈಲ್‌ನಲ್ಲಿ ಆಕರ್ಷಕವಾದ ಏರೋ ಬ್ಲ್ಯಾಕ್ 17 ಇಂಚಿನ ಮಲ್ಟಿ ಸ್ಪೋಕ್ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಈ ಮಾದರಿಯಲ್ಲಿ ಫೆಂಡರ್‌ಗಳ ಎರಡೂ ಬದಿಯಲ್ಲಿ ಲಾರಿನ್ ಹಾಗೂ ಕ್ಲೆಮೆಂಟ್ ಬ್ಯಾಡ್ಜಿಂಗ್ ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಕಾರು ಸುಮಾರು 140 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ವಿಂಡೋ ಟ್ರಿಮ್ ಸುತ್ತಲೂ ಕ್ರೋಮ್ ಅಸೆಂಟ್ ಹಾಗೂ ಹೆಡ್‌ಲೈಟ್‌ನಿಂದ ಟೇಲ್‌ಲೈಟ್‌ವರೆಗೆ ಕೆಲವು ಬಾಡಿ ಲೈನ್'ಗಳನ್ನು ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಕಾರಿನ ಹಿಂಭಾಗದಲ್ಲಿ ಸ್ಲೀಕ್ ಆದ ಎಲ್ಇಡಿ ಟೇಲ್ ಲೈಟ್ ನೀಡಲಾಗಿದೆ. ಈ ಕಾರಿನ ಹಿಂಭಾಗದಲ್ಲಿ ಸ್ಕೋಡಾ ಲೋಗೋ ನೀಡಿಲ್ಲ. ಆದರೆ ಬೂಟ್‌ನಲ್ಲಿ ಅಡ್ಡವಾಗಿ ಸ್ಕೋಡಾ ಎಂಬ ಹೆಸರನ್ನು ದಪ್ಪವಾಗಿ ಬರೆಯಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಕಾರಿನಲ್ಲಿ ರೇರ್ ಪಾರ್ಕಿಂಗ್ ಕ್ಯಾಮೆರಾ ನೀಡಲಾಗಿದೆ. ಇಕ್ಕಟ್ಟಾದ ಸ್ಥಳಗಳಲ್ಲಿ ಪಾರ್ಕ್ ಮಾಡಲು ಈ ಕಾರಿನಲ್ಲಿ ಅಳವಡಿಸಿರುವ ಆಟೋ ಪಾರ್ಕ್ ಫೀಚರ್ ನೆರವಾಗುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಇಂಟಿರಿಯರ್ ಹಾಗೂ ಫೀಚರ್

ಈ ಹೊಸ ಕಾರಿನ ಕ್ಯಾಬಿನ್ ಒಳಗೆ ಸಾಕಷ್ಟು ಪ್ರಮಾಣದಲ್ಲಿ ಲೆದರ್ ಹಾಗೂ ಅಲ್ಕಾಂಟರಾ ಬಳಸಲಾಗಿದೆ. ಡ್ಯಾಶ್‌ಬೋರ್ಡ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದ್ದು, ಅಲ್ಕಾಂಟರಾ ಜೊತೆಗೆ ಸಾಫ್ಟ್-ಟಚ್ ವಸ್ತುಗಳನ್ನು ಬಳಸಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಡೋರ್ ಹ್ಯಾಂಡಲ್‌ಗಳು ಸಾಕಷ್ಟು ಕ್ರೋಮ್ ಅಂಶವನ್ನು ಹೊಂದಿವೆ. ಈ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಮೂಲಕ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟ್ ಆಗುವ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಸಿಸ್ಟಂ ಕಾರಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಎಲ್ ಅಂಡ್ ಕೆ ಮಾದರಿಯು ಕ್ಯಾಂಟನ್ ಸರೌಂಡ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಟೂ-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ ಹೊಂದಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಸ್ಟೀಯರಿಂಗ್-ಮೌಂಟೆಡ್ ಬಟನ್'ಗಳು ಕ್ರೋಮ್ ಬಣ್ಣವನ್ನು ಹೊಂದಿವೆ. ಈ ಬಟನ್'ಗಳನ್ನು ಬಳಸಿ ವಿವಿಧ ಫಂಕ್ಷನ್'ಗಳನ್ನು ನ್ಯಾವಿಗೇಟ್ ಮಾಡುವುದು ಸುಲಭವಾದ ಕಾರಣ ಡ್ರೈವರ್ ರಸ್ತೆ ಮೇಲೆ ಗಮನ ಹರಿಸಬಹುದು.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಹೊಸ ಸ್ಕೋಡಾ ಆಕ್ಟೀವಿಯಾ 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದನ್ನು ಕಂಪನಿಯು ವರ್ಚುವಲ್ ಕಾಕ್‌ಪಿಟ್ ಎಂದು ಕರೆಯುತ್ತದೆ. ಎಲ್ಲಾ ಸೀಟುಗಳನ್ನು ಲೆದರ್'ನಿಂದ ವ್ರಾಪ್ ಮಾಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಮುಂಭಾಗದ ಎರಡು ಸೀಟುಗಳು 12 ವೇ ಎಲೆಕ್ಟ್ರಿಕ್ ಅಡ್ಜಸ್ಟ್ ಮೆಂಟ್ ಪಡೆಯುತ್ತವೆ. ಚಾಲಕನ ಬದಿಯಲ್ಲಿ ಮಾತ್ರ ಮೆಮೊರಿ ಫಂಕ್ಷನ್ ನೀಡಲಾಗಿದೆ.ಮುಂಭಾಗದ ಎರಡು ಸೀಟುಗಳು ಆರಾಮದಾಯಕವಾಗಿದ್ದು ಸೈಡ್ ಬೋಲ್ಸ್ಟರಿಂಗ್ ಹೊಂದಿದ್ದು ಪ್ರಯಾಣಿಕರನ್ನು ಸ್ಥಳದಲ್ಲಿ ಹಿಡಿದಿಡುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಹಿಂಭಾಗದ ಸೀಟುಗಳು ಅತ್ಯಂತ ಆರಾಮದಾಯಕವಾಗಿದ್ದು, ಥೈ ಸಪೋರ್ಟ್ ಹೊಂದಿವೆ. ಲಾಂಗ್ ಡ್ರೈವ್‌ಗಳಲ್ಲಿ ಈ ಸೀಟುಗಳು ಆರಾಮದಾಯಕ ಅನುಭವವನ್ನು ನೀಡುತ್ತವೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಹಿಂಭಾಗದಲ್ಲಿ ಎಸಿ ವೆಂಟ್ ಸಹ ನೀಡಲಾಗಿದೆ. ರೇರ್ ಎಸಿ ವೆಂಟ್'ಗಳ ಕೆಳಗೆ ಎರಡು ಟೈಪ್ ಸಿ ಚಾರ್ಜಿಂಗ್ ಸಾಕೆಟ್‌ಗಳಿವೆ. ಹೊಸ ಆಕ್ಟೀವಿಯಾ ಸುಮಾರು 600-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹಿಂದಿನ ಸೀಟಿನಲ್ಲಿ 60:40 ಸ್ಪ್ಲಿಟ್ ಆಯ್ಕೆ ನೀಡಲಾಗಿದ್ದು, ಬೂಟ್‌ನಲ್ಲಿ ಹೆಚ್ಚು ಸ್ಪೇಸ್ ಬೇಕಾದಲ್ಲಿ ಈ ಸೀಟುಗಳನ್ನು ಫೋಲ್ಡ್ ಮಾಡಬಹುದು.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಎಂಜಿನ್ ಹಾಗೂ ಪರ್ಫಾಮೆನ್ಸ್

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಎರಡೂ ಮಾದರಿಗಳನ್ನು 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.ಈ ಎಂಜಿನ್ 4,180 ಆರ್‌ಪಿ‌ಎಂನಲ್ಲಿ 187.4 ಬಿ‌ಹೆಚ್‌ಪಿ ಪವರ್ ಹಾಗೂ 1,500 - 3,990 ಆರ್‌ಪಿ‌ಎಂನಲ್ಲಿ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಈ ಎಂಜಿನ್ ಎಲ್ಲಾ ಪವರ್ ಹಾಗೂ ಟಾರ್ಕ್ ಅನ್ನು ಏಳು ಸ್ಪೀಡಿನ ಡಿಎಸ್‌ಜಿ ಗೇರ್ ಬಾಕ್ಸ್ ಮೂಲಕ ಫ್ರಂಟ್ ವ್ಹೀಲ್'ಗಳಿಗೆ ಕಳುಹಿಸುತ್ತದೆ. ಕಂಪನಿಯು ಶಿಫ್ಟ್-ಬೈ-ವೈರ್ ಟೆಕ್ನಾಲಜಿಯನ್ನು ಬಳಸಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಡಿಎಸ್‌ಜಿ ಗೇರ್‌ಬಾಕ್ಸ್‌ನಲ್ಲಿ ಫ್ರಂಟ್ ಅಥವಾ ರಿವರ್ಸ್ ಗೇರ್‌ಗಳನ್ನು ಒಂದರಿಂದ ಇನ್ನೊಂದಕ್ಕೆ ಬದಲಿಸುವಾಗ ನೆರವಾಗಲು ಲಿಂಕೇಜ್ ಹಾಗೂ ವೈರ್'ಗಳಿದ್ದವು.ಈಗ ಶಿಫ್ಟ್-ಬೈ-ವೈರ್ ಟೆಕ್ನಾಲಜಿಯಲ್ಲಿ ಗೇರ್ ಬದಲಿಸುವ ಎಲ್ಲಾ ಕೆಲಸಗಳನ್ನು ಕಂಪ್ಯೂಟರ್‌ನೊಂದಿಗೆ ಸೆನ್ಸಾರ್'ಗಳಿಂದ ಮಾಡಲಾಗುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಇನ್ನು ಪವರ್ ಡೆಲಿವರಿ ಬಗ್ಗೆ ಹೇಳುವುದಾದರೆ ಹೊಸ ಆಕ್ಟೀವಿಯಾ ಕಾರಿನ ಎಂಜಿನ್ ಅನ್ನು ರಿಫೈನ್ ಮಾಡಲಾಗಿದೆ. ಪವರ್ ಹೊರಹಾಕುವ ವಿಧಾನವು ಲಿನಿಯರ್ ಆಗಿದೆ. ಈ ಕಾರಿನಲ್ಲಿ ಯಾವುದೇ ಡ್ರೈವ್ ಮೋಡ್‌ಗಳಿಲ್ಲ. ಬದಲಿಗೆ ಗೇರ್‌ಬಾಕ್ಸ್‌ನಲ್ಲಿ ಡಿ ಹಾಗೂ ಎಸ್ ಮೋಡ್‌ಗಳಿವೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಪ್ಯಾಡಲ್ ಶಿಫ್ಟರ್‌ಗಳ ನೆರವಿನಿಂದ ಡ್ರೈವರ್ ಶಿಫ್ಟ್‌ಗಳ ಕಂಟ್ರೋಲ್ ಪಡೆಯಬಹುದು. ಡಿಎಸ್‌ಜಿ ಶಿಫ್ಟ್-ಬೈ-ವೈರ್ ಅನ್ನು ಶಿಫ್ಟ್ ಲಿವರ್ ಮೂಲಕ ಕಂಟ್ರೋಲ್ ಮಾಡಲಾಗುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ರೈಡ್ ಹಾಗೂ ಹ್ಯಾಂಡ್ಲಿಂಗ್

ಹೊಸ ಸ್ಕೋಡಾ ಆಕ್ಟೀವಿಯಾದ ಸವಾರಿಯು ಸರಿಯಾಗಿ ಬ್ಯಾಲೆನ್ಸ್ ಆಗಿದೆ. ಸಸ್ಪೆಂಷನ್ ಸೆಟಪ್ ಸಾಫ್ಟ್ ಅಥವಾ ಹಾರ್ಡ್ ಆಗಿಲ್ಲ. ಈ ಮೂಲಕ ಕಂಪನಿಯು ಗ್ರಾಹಕರಿಗೆ ಎರಡೂ ಬಗೆಯ ಅನುಭವವನ್ನು ನೀಡಲು ಮುಂದಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಹೊಸ ಆಕ್ಟೀವಿಯಾದಲ್ಲಿನ ಎನ್‌ವಿಹೆಚ್ ಹಾಗೂ ಇನ್ಸುಲೇಷನ್ ಲೆವೆಲ್ ಉತ್ತಮವಾಗಿದ್ದು, ಹೊರಗಿನ ಶಬ್ದವು ಕೇಳಿಸುವುದಿಲ್ಲ. ಆದರೆ ಹೆಚ್ಚಿನ ರೆವ್'ನಲ್ಲಿ ಕೆಲವು ಪ್ರಮಾಣದ ಶಬ್ದವು ಕೇಳಿಸುತ್ತದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷತಾ ಫೀಚರ್'ಗಳು

ಸುರಕ್ಷತೆಗಾಗಿ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ಫ್ರಂಟ್ ಹಾಗೂ ರೇರ್ ಏರ್‌ಬ್ಯಾಗ್‌, ಡ್ರೈವರ್ ಹಾಗೂ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಕರ್ಟೇನ್ ಏರ್‌ಬ್ಯಾಗ್‌ ಸೇರಿದಂತೆ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಎಬಿಎಸ್, ಇಬಿಡಿ, ಪಾರ್ಕ್ ಅಸಿಸ್ಟ್, ಇಬುಜ್ ಫ್ಯಾಟಿಗ್ ಅಲರ್ಟ್, ಮಲ್ಟಿ-ಕೊಲಿಷನ್ ಬ್ರೇಕ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಬಣ್ಣಗಳು

ಸ್ಟೈಲ್ ಮಾದರಿಯನ್ನು ಕ್ಯಾಂಡಿ ವೈಟ್, ಲಾವಾ ಬ್ಲೂ ಹಾಗೂ ಮ್ಯಾಜಿಕ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಎಲ್ ಅಂಡ್ ಕೆ ಮಾದರಿಯನ್ನು ಬ್ರಿಲಿಯಂಟ್ ಸಿಲ್ವರ್, ಮ್ಯಾಪಲ್ ಬ್ರೌನ್, ಕ್ಯಾಂಡಿ ವೈಟ್, ಲಾವಾ ಬ್ಲೂ ಹಾಗೂ ಮ್ಯಾಜಿಕ್ ಬ್ಲ್ಯಾಕ್ ಎಂಬ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಾವು ಮ್ಯಾಜಿಕ್ ಬ್ಲ್ಯಾಕ್ ಬಣ್ಣದ ಕಾರ್ ಅನ್ನು ಚಾಲನೆ ಮಾಡಿದೆವು.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಕಂಪನಿಯು ಆಕ್ಟೀವಿಯಾ ಹೆಸರಿನ ಕಾರ್ ಅನ್ನು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. 2021ರ ಸ್ಕೋಡಾ ಆಕ್ಟೀವಿಯಾ ಪೂರ್ತಿಯಾಗಿ ಹೊಸದಾಗಿದ್ದು, ಹಳೆಯ ಮಾದರಿ ಕಾರುಗಳಿಗಿಂತ ಭಿನ್ನವಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

2021ರ ಸ್ಕೋಡಾ ಆಕ್ಟೀವಿಯಾ ಸನ್‌ರೂಫ್‌ ಹೊಂದಿಲ್ಲ. ಎಲ್ ಅಂಡ್ ಕೆ ಮಾದರಿಯ ಟಾಪ್ ಎಂಡ್ ಕಾರು ಸಹ ಸನ್‌ರೂಫ್ ಹೊಂದಿಲ್ಲ. ಈ ಕಾರಿನ ಕ್ಯಾಬಿನ್ ವಿಶಾಲವಾಗಿದ್ದು, ಕಾರ್ ಡ್ರೈವ್ ಉತ್ತಮವಾಗಿದೆ.

2021 ಸ್ಕೋಡಾ ಆಕ್ಟೀವಿಯಾ ಫಸ್ಟ್ ಡ್ರೈವ್ ರಿವ್ಯೂ

ರೂ.25 ಲಕ್ಷದಿಂದ 30 ಲಕ್ಷಗಳವರೆಗಿನ ಸೆಡಾನ್ ಕಾರು ಖರೀದಿಸಲು ಬಯಸುವವರು ಹೊಸ ಸ್ಕೋಡಾ ಆಕ್ಟೀವಿಯಾ ಕಾರ್ ಅನ್ನು ಖರೀದಿಸಬಹುದು. ಈ ಸೆಡಾನ್‌ ಕಾರಿನ ಅಧಿಕೃತ ಬೆಲೆಗಳನ್ನು ಜೂನ್ 10ರಂದು ಬಹಿರಂಗಪಡಿಸಲಾಗುತ್ತದೆ.

Most Read Articles

Kannada
English summary
2021 Skoda Octavia first drive review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X