ಫಸ್ಟ್ ಡ್ರೈವ್ ರಿವ್ಯೂ: ದೇಶಿಯ ಮಾರುಕಟ್ಟೆ ಪ್ರವೇಶಿಸಿದ ಆಡಿ ಮೊದಲ ಇವಿ ಕಾರು ಇ-ಟ್ರಾನ್ ಕ್ವಾಟ್ರೋ 55

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದನ್ನು ಎದುರಿಸಲು ವಾಹನ ತಯಾರಕ ಕಂಪನಿಗಳು ಪರ್ಯಾಯ ಇಂಧನ ಮೂಲಗಳತ್ತ ಮುಖ ಮಾಡಿವೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಪರ್ಯಾಯ ಇಂಧನಗಳಲ್ಲಿ ಜನಪ್ರಿಯವಾಗಿರುವುದು ಎಲೆಕ್ಟ್ರಿಕ್. ಹಲವು ವಾಹನ ತಯಾರಕ ಕಂಪನಿಗಳು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ. ಈಗ ಆಡಿ ಕಂಪನಿಯು ತನ್ನ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮೊದಲ ಬಾರಿಗೆ 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪ್ರದರ್ಶಿಸಲಾಯಿತು. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕಳೆದ ವರ್ಷವೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕಿತ್ತಾದರೂ ಕೋವಿಡ್ 19 ಕಾರಣಕ್ಕೆ ಬಿಡುಗಡೆಯನ್ನು ಮುಂದೂಡಲಾಯಿತು.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ನಾವು ಇತ್ತೀಚಿಗೆ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಲೆಕ್ಟ್ರಿಕ್ ಎಸ್‌ಯುವಿಯ ಫಸ್ಟ್ ಡ್ರೈವ್ ರಿವ್ಯೂ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್ ಟಿರಿಯರ್ ಹಾಗೂ ಡಿಸೈನ್

ನಾವು ಟ್ಯಾಂಗೋ ರೆಡ್ ಮೆಟಾಲಿಕ್ ಬಣ್ಣದ ಆಡಿ ಇ-ಟ್ರಾನ್ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಬಣ್ಣವು ಎಸ್‌ಯುವಿಯನ್ನು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ಗಳನ್ನು ವಿಶಿಷ್ಟ ರೀತಿಯಲ್ಲಿ ಇರಿಸಲಾಗಿರುವ ನಯವಾದ ಹೆಡ್‌ಲೈಟ್ ಯುನಿಟ್ ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಈ ಹೆಡ್‌ಲ್ಯಾಂಪ್‌ಗಳು ಸುಮಾರು 500 ಮೀಟರ್‌ವರೆಗೆ ಬೆಳಕು ನೀಡುತ್ತವೆ. ಆಡಿ ಇ-ಟ್ರಾನ್ ಎಸ್‌ಯುವಿಲ್ಲಿ ಎರಡೂ ಬದಿಯಲ್ಲಿ ಕಪ್ಪು ಬಣ್ಣವನ್ನು ಹೊಂದಿರುವ ಸ್ಪೋರ್ಟಿ ಬಂಪರ್ ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಈ ಎಲೆಕ್ಟ್ರಿಕ್ ಎಸ್‌ಯುವಿಯ ಮುಂಭಾಗದಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿಲ್ಲ. ಮುಂಭಾಗದ ಗ್ರಿಲ್ ಸರೌಂಡ್ ಬ್ರಷ್ಡ್ ಸಿಲ್ವರ್ ಬಣ್ಣವನ್ನು ಹೊಂದಿದೆ. ಆಡಿ ಲೋಗೋ ಕೆಳಗೆ ಫ್ರಂಟ್ ಪಾರ್ಕಿಂಗ್ ಕ್ಯಾಮೆರಾ ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಫೆಂಡರ್‌ನ ಎರಡೂ ಬದಿಯಲ್ಲಿ ಇ-ಟ್ರಾನ್ ಬ್ಯಾಡ್ಜ್ ನೀಡಲಾಗಿದೆ. ಈ ಬ್ಯಾಡ್ಜ್ ಪಕ್ಕದಲ್ಲಿರುವ ಬಟನ್ ಅನ್ನು ಎರಡು ಸೆಕೆಂಡುಗಳ ಕಾಲ ಪ್ರೆಸ್ ಮಾಡಿದರೆ ಪ್ಯಾನೆಲ್ ಎಸ್‌ಯುವಿ ಚಾರ್ಜಿಂಗ್ ಸಾಕೆಟ್ ಅನ್ನು ಬಹಿರಂಗಪಡಿಸುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಚಾರ್ಜರ್ ಅನ್ನು ಅನ್ ಪ್ಲಗ್ ಮಾಡಿದ ನಂತರ, ಮುಚ್ಚಲು ಮತ್ತೆ ಎರಡು ಸೆಕೆಂಡುಗಳ ಕಾಲ ಬಟನ್ ಪ್ರೆಸ್ ಮಾಡಬೇಕು. ಈ ಎಸ್‌ಯುವಿಯಲ್ಲಿ 20-ಇಂಚಿನ ಡ್ಯುಯಲ್-ಟೋನ್ ಫೈವ್ ಸ್ಪೋಕ್ ಆಲಾಯ್ ವ್ಹೀಲ್, ಹಳದಿ ಬಣ್ಣದ ದೊಡ್ಡ ಬ್ರೇಕ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಇನ್ನು ಹಿಂಭಾಗದಲ್ಲಿ ಸ್ಲೀಕ್ ಆದ ಟೇಲ್ ಲೈಟ್, ಬೂಟ್ ಲಿಡ್'ನ ಎರಡೂ ಬದಿಯಲ್ಲಿ ಇ-ಟ್ರಾನ್ ಹಾಗೂ 55 ಕ್ವಾಟ್ರೋ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿರುವ ರೇರ್ ಪಾರ್ಕಿಂಗ್ ಕ್ಯಾಮೆರಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಾರ್ಕ್ ಮಾಡಲು ನೆರವಾಗುತ್ತದೆ. ಈ ಎಸ್‌ಯುವಿಯಲ್ಲಿ 360 ಡಿಗ್ರಿ ಪಾರ್ಕಿಂಗ್ಕ್ಯಾಮೆರಾವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಕಾಕ್‌ಪಿಟ್ ಹಾಗೂ ಇಂಟಿರಿಯರ್

ಕ್ಯಾಬಿನ್ ಒಳಗೆ ಕಾಲಿಡುತ್ತಲೇ ಕಪ್ಪು ಬಣ್ಣದಲ್ಲಿರುವ ಇಂಟಿರಿಯರ್ ಅನ್ನು ಗಮನಿಸಬಹುದು. ಇದನ್ನು ಹೊರತುಪಡಿಸಿ, ಕಾರಿನ ಕ್ಯಾಬಿನ್‌ನ ಸುತ್ತಲೂ ಬ್ರಷ್ಡ್ ಅಲ್ಯೂಮಿನಿಯಂ ಅಂಶಗಳಿವೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಬೆಂಬಲಿಸುವ 10.1-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಫೋರ್ ಝೋನ್ ಕ್ಲೈಮೇಟ್ ಕಂಟ್ರೋಲ್'ಗಳನ್ನು ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇನ್ಸ್ ಟ್ರೂಮೆಂಟೆಷನ್ ಅನ್ನು ಆಡಿ ಕಂಪನಿಯು ವರ್ಚುವಲ್ ಕಾಕ್‌ಪಿಟ್ ಎಂದು ಕರೆಯುವ ಎಲ್‌ಸಿಡಿ ಯುನಿಟ್ ನಿರ್ವಹಿಸುತ್ತದೆ. ಆಡಿ ಇ-ಟ್ರಾನ್ ಎಸ್‌ಯುವಿಯಲ್ಲಿ ನೀಡಲಾಗಿರುವ ಫ್ಯಾನ್ಸಿ ಟೂ ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಚಾಲಕನಿಗೆ ಹೆಚ್ಚು ಗ್ರಿಪ್ ನೀಡುವುದರ ಜೊತೆಗೆ ಚಾಲಕನ ಗಮನವನ್ನು ರಸ್ತೆಯ ಮೇಲಿರುವಂತೆ ಮಾಡುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಸ್ಪೋರ್ಟಿ ಭಾವನೆಯನ್ನು ನೀಡುತ್ತದೆ. ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಾನಿಕ್ ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಅಡ್ಜಸ್ಟಬಲ್ ಫೀಚರ್ ಅನ್ನು ಸಹ ಹೊಂದಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಮುಂಭಾಗದ ಸೀಟುಗಳನ್ನು 12 ರೀತಿಯಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದು. ಡ್ರೈವರ್ ಸೀಟಿನಲ್ಲಿ ಮಾತ್ರ ಮೆಮೊರಿ ಫಂಕ್ಷನ್ ನೀಡಲಾಗಿದೆ. ಹಿಂದಿನ ಸೀಟಿನಲ್ಲಿ ಥೈ ಸಪೋರ್ಟ್ ಹಾಗೂ ಸಾಫ್ಟ್ ಬ್ಯಾಕ್ ಸಪೋರ್ಟ್ ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಹಿಂಭಾಗದಲ್ಲಿ ಇಬ್ಬರು ಪ್ರಯಾಣಿಕರಿದ್ದಾಗ ಸೆಂಟರ್ ಆರ್ಮ್‌ಸ್ಟ್ರೆಸ್ಟ್ ಅನ್ನು ನಿಯೋಜಿಸಬಹುದು. ಹಿಂಭಾಗದ ಎಸಿ ಜೋನ್ ಕಂಟ್ರೋಲ್'ಗಳನ್ನು ಮಧ್ಯದಲ್ಲಿ ನೀಡಲಾಗಿದೆ. ಹಿಂದಿನ ಪ್ರಯಾಣಿಕರಿಗಾಗಿ ಎರಡು ಟೈಪ್-ಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಆಡಿ ಇ-ಟ್ರಾನ್ ಎಸ್‌ಯುವಿಯು 4,901 ಎಂಎಂ ಉದ್ದ, 1,935 ಎಂಎಂ ಅಗಲ, 1,629 ಎಂಎಂ ಎತ್ತರ, 2,928 ಎಂಎಂ ವ್ಹೀಲ್‌ಬೇಸ್, 600 ಲೀಟರ್ ಬೂಟ್ ಸ್ಪೇಸ್, 172 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಹಾಗೂ ನಿರ್ವಹಣೆ

ಆಡಿ ಇ-ಟ್ರಾನ್ ಎಸ್‌ಯುವಿಯನ್ನು 50 ಕ್ವಾಟ್ರೊದಿಂದ ಆರಂಭಿಸುವ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 50 ಕ್ವಾಟ್ರೋ 71.2 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಹೊಂದಿದ್ದು, 312 ಬಿಹೆಚ್‌ಪಿ ಪವರ್ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಹೆಚ್ಚು ಶಕ್ತಿಶಾಲಿಯಾದ 55 ಕ್ವಾಟ್ರೋ ಹಾಗೂ ಎಸ್ ಮಾದರಿಗಳು ಒಂದೇ ರೀತಿಯ 95 ಕಿ.ವ್ಯಾ ಬ್ಯಾಟರಿ ಪ್ಯಾಕ್ ಹೊಂದಿವೆ. ಎಸ್ ಮಾದರಿಯು 435 ಬಿಹೆಚ್‌ಪಿ ಪವರ್ ಹಾಗೂ 808 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೂಸ್ಟ್ ಮೋಡ್‌ನಲ್ಲಿ 503 ಬಿಹೆಚ್‌ಪಿ ಪವರ್ ಹಾಗೂ 973 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ನಾವು 360 ಬಿಹೆಚ್‌ಪಿ ಪವರ್ ಹಾಗೂ 561 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ 55 ಕ್ವಾಟ್ರೋ ಮಾದರಿಯನ್ನು ಚಾಲನೆ ಮಾಡಿದೆವು. ಬೂಸ್ಟ್ ಮೋಡ್‌ನಲ್ಲಿ ಈ ಮಾದರಿಯು 408 ಬಿಹೆಚ್‌ಪಿ ಪವರ್ ಹಾಗೂ 664 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇ-ಟ್ರಾನ್‌ಗೆ ಎಸ್‌ಯುವಿಯ ಮುಂಭಾಗದಲ್ಲಿ 125 ಕಿ.ವ್ಯಾ ಮೋಟಾರ್ ಹಾಗೂ ಹಿಂಭಾಗದಲ್ಲಿ 140 ಕಿ.ವ್ಯಾ ಮೋಟಾರ್ ಅಳವಡಿಸಲಾಗಿದೆ. ಆಡಿಯ ಕ್ವಾಟ್ರೋ ಎಡಬ್ಲ್ಯೂಡಿ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸಲಾಗುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ ಇ-ಟ್ರಾನ್ ಎಸ್‌ಯುವಿಯು 441 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಆಡಿ ಕಂಪನಿ ಹೇಳಿಕೊಂಡಿದೆ. ನಾವು ಈ ಶ್ರೇಣಿಯನ್ನು ಪರೀಕ್ಷಿಸಲು ಸಾಧ್ಯವಾಗದಿದ್ದರೂ ಚಾಲನಾ ಸ್ಥಿತಿಗತಿಗಳ ಆಧಾರದ ಮೇಲೆ ಈ ಎಸ್‌ಯುವಿ ಅಷ್ಟು ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

150 ಕಿ.ವ್ಯಾ ಡಿಸಿ ಚಾರ್ಜರ್ ಬಳಸಿ ಆಡಿ ಇ-ಟ್ರಾನ್ ಎಸ್‌ಯುವಿಯನ್ನು ಕೇವಲ 30 ನಿಮಿಷಗಳಲ್ಲಿ 0-80%ವರೆಗೂ ಚಾರ್ಜ್ ಮಾಡಬಹುದು. 11 ಕಿ.ವ್ಯಾ ಎಸಿ ಚಾರ್ಜರ್ ಬಳಸಿ ಸುಮಾರು 8.5 ಗಂಟೆಗಳಲ್ಲಿ 0-80%ವರೆಗೂ ಚಾರ್ಜ್ ಮಾಡಬಹುದು.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಆಡಿ ಇ-ಟ್ರಾನ್ ಎಸ್‌ಯುವಿಯ ಜೊತೆಗೆ ನೀಡಲಾಗುವ ಎಸಿ ಚಾರ್ಜರ್‌ ಅನ್ನು ಹುಡ್ ಅಡಿಯ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಲಾಗುತ್ತದೆ. ಸ್ಪೋರ್ಟ್ಸ್ ಮೋಡ್‌ನಲ್ಲಿ ಇ-ಟ್ರಾನ್ ಎಸ್‌ಯುವಿಯು ಕೇವಲ 5.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಿ 200 ಕಿ.ಮೀ ವೇಗವನ್ನು ತಲುಪುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇ-ಟ್ರಾನ್ ಎಸ್‌ಯುವಿಯಲ್ಲಿ ಆರು ವಿಭಿನ್ನ ಡ್ರೈವಿಂಗ್ ಮೋಡ್‌ ಹಾಗೂ ರಿಜನರೇಟಿವ್ ಬ್ರೇಕಿಂಗ್ ನೀಡಲಾಗಿದೆ. ಆಡಿ ಇ-ಟ್ರಾನ್ ಎಸ್‌ಯುವಿಯಲ್ಲಿರುವ ಅಡಾಪ್ಟಿವ್ ಏರ್ ಸಸ್ಪೆಂಷನ್ ಆನ್-ರೋಡ್, ಆಫ್-ರೋಡ್, ಕಂಫರ್ಟ್ ಅಥವಾ ಡೈನಾಮಿಕ್ ಮೋಡ್'ಗಳಲ್ಲಿ ಎಸ್‌ಯುವಿಯಯ ಎತ್ತರವನ್ನು ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಮಾಡುತ್ತದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಕಂಫರ್ಟ್ ಮೋಡ್‌ನಲ್ಲಿ ಹೆಚ್ಚು ಸೂಕ್ತವಾಗಿದೆ. ಈ ಎಸ್‌ಯುವಿಯಲ್ಲಿರುವ ಥ್ರೊಟಲ್ ರೆಸ್ಪಾನ್ಸ್, ಸ್ಟೀಯರಿಂಗ್ ವ್ಹೀಲ್ ಹಾಗೂ ಸಸ್ಪೆಂಷನ್ ಎಲ್ಲವೂಬ್ಯಾಲೆನ್ಸ್ ಆಗಿದ್ದು, ಆರಾಮದಾಯಕ ಸವಾರಿ ನೀಡುತ್ತವೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಅಡಾಪ್ಟಿವ್ ಏರ್ ಸಸ್ಪೆಂಷನ್ ಅತ್ಯುತ್ತಮವಾಗಿದ್ದು, ಇ ಟ್ರಾನ್ ಎಸ್‌ಯುವಿಯು ಯಾವುದೇ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಸರಾಗವಾಗಿ ಸಾಗುತ್ತದೆ. ಕ್ಯಾಬಿನ್ ಒಳಗೆ ಇನ್ಸುಲೇಷನ್ ಲೆವೆಲ್ ಅತ್ಯುತ್ತಮವಾಗಿದು, ಹೊರಗಿನಿಂದ ಯಾವುದೇ ಶಬ್ದವೂ ಕ್ಯಾಬಿನ್‌ನೊಳಗೆ ಕೇಳಿಸುವುದಿಲ್ಲ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ಐಸಿ ಎಂಜಿನ್ ಹೊಂದಿರದ ಕಾರಣ, ಎಂಜಿನ್ ಬೇಯಿಂದ ಯಾವುದೇ ವೈಬ್ರೇಷನ್ ಆಗಲಿ ಅಥವಾ ಶಬ್ದವಾಗಲಿ ಬರುವುದಿಲ್ಲ. ಹೆಚ್ಚಿನ ವೇಗದಲ್ಲಿ ಸಾಗುವಾಗ ಟಯರ್‌ಗಳಿಂದ ಶಬ್ದ ಕೇಳಿ ಬರುತ್ತದೆಯಾದರೂ ಅದನ್ನು ಮ್ಯೂಸಿಕ್ ಕೇಳುವ ಮೂಲಕ ಮ್ಯಾನೇಜ್ ಮಾಡಬಹುದು.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಅದನ್ನು ಹೊರತುಪಡಿಸಿ ಹೆಚ್ಚಿನ ವೇಗದಲ್ಲಿ ಚಲಿಸಿದಾಗ ಎಲೆಕ್ಟ್ರಿಕ್ ಮೋಟರ್'ನಿಂದ ಸ್ವಲ್ಪ ಮಟ್ಟದ ಶಬ್ದವನ್ನು ಕೇಳಬಹುದು. ಆದರೆ ಅದರಿಂದ ಹೆಚ್ಚು ತೊಂದರೆಯಾಗುವುದಿಲ್ಲ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಆಡಿ ಇ-ಟ್ರಾನ್ ಎಸ್‌ಯುವಿಯ ಅದ್ಭುತವಾಗಿದ್ದು, ಸ್ಟೀಯರಿಂಗ್ ವ್ಹೀಲ್ ಅತ್ಯುತ್ತಮವಾದ ರೆಸ್ಪಾನ್ಸ್ ಹೊಂದಿದೆ. ವಿಭಿನ್ನ ಡ್ರೈವ್ ಮೋಡ್‌ಗಳನ್ನು ಬಳಸಿ ಅದನ್ನು ಗಟ್ಟಿಗೊಳಿಸಬಹುದು ಅಥವಾ ಮೃದುಗೊಳಿಸಬಹುದು.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಅಭಿರುಚಿಗೆ ತಕ್ಕಂತೆ ಮೋಟಾರ್, ಗೇರ್‌ಬಾಕ್ಸ್ ಮತ್ತು ಸ್ಟೀಯರಿಂಗ್ ರೆಸ್ಪಾನ್ಸ್ ಅನ್ನು ಕಾನ್ಫಿಗರ್ ಮಾಡಲು ಇಂಡಿವಿಶುಯಲ್ ಮೋಡ್ ಸಹ ನೀಡಲಾಗಿದೆ.ಗಾತ್ರದ ಹೊರತಾಗಿಯೂ ಈ ಎಸ್‌ಯುವಿಯು ಅದ್ಭುತವಾಗಿದ್ದು, ಬಾಡಿ ರೋಲ್ ಸಹ ಉತ್ತಮವಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಆಡಿ ಇ-ಟ್ರಾನ್ 55 ಕ್ವಾಟ್ರೋ ಆಕರ್ಷಕ ನಿಲುವನ್ನು ಹೊಂದಿದೆ. ಇ-ಟ್ರಾನ್ ಆಡಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಇ-ಟ್ರಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಇಕ್ಯೂಸಿ 400 ಹಾಗೂ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ. ಆಡಿ ಇ-ಟ್ರಾನ್ ಹಲವಾರು ಫೀಚರ್'ಗಳನ್ನು ಹೊಂದಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಫಸ್ಟ್ ಡ್ರೈವ್ ರಿವ್ಯೂ

ಫ್ಯಾನ್ಸಿ ಕಾರಿನಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಲು ಹಾಗೂ ಪರಿಸರ ಸ್ನೇಹಿ ಎಸ್‌ಯುವಿ ಖರೀದಿಸಲು ಬಯಸುವವರು ಖಂಡಿತವಾಗಿಯೂ ಹೊಸ ಆಡಿ ಇ-ಟ್ರಾನ್ ಎಸ್‌ಯುವಿಯನ್ನು ಖರೀದಿಸಬಹುದು. ಹೊಸ ಆಡಿ ಇ-ಟ್ರಾನ್‌ ಎಸ್‌ಯುವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ಸುಮಾರು ರೂ.1 ಕೋಟಿಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Audi e tron Quattro 55 first drive review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X