ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಆಡಿ ಕಂಪನಿಯು ತನ್ನ ಕ್ಯೂ 2 ಎಸ್‌ಯುವಿಯನ್ನು 2016ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯು ಆಡಿ ಕಂಪನಿಯ ಅತ್ಯುತ್ತಮ ವಾಹನಗಳಲ್ಲಿ ಒಂದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಆಡಿ ಕಂಪನಿಯು ಇತ್ತೀಚೆಗೆ ಕ್ಯೂ 2 ಎಸ್‌ಯುವಿಯ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಕ್ಯೂ 2 ಎಸ್‌ಯುವಿಯ ಪ್ರೀ ಫೇಸ್ ಲಿಫ್ಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಕೆಲ ತಿಂಗಳ ಹಿಂದೆ ಬಿಡುಗಡೆಗೊಳಿಸಿತ್ತು.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯು ಭಾರತದಲ್ಲಿರುವ ಕಂಪನಿಯ ಕ್ಯೂ ಸರಣಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಎಸ್‌ಯುವಿಯನ್ನು ಎರಡು ದಿನಗಳ ಕಾಲ ಚಾಲನೆ ಮಾಡಿದೆವು. ಆಡಿ ಕ್ಯೂ 2 ಎಸ್‌ಯುವಿಯ ಬಗೆಗಿನ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಡಿಸೈನ್ ಹಾಗೂ ಸ್ಟೈಲಿಂಗ್

ನಾವು ಕ್ಯೂ 2 ಎಸ್‌ಯುವಿಯ ಟಾಪ್ ಎಂಡ್ ಮಾದರಿಯಾದ ಟೆಕ್ನಾಲಜಿಯ ಸ್ಪೋರ್ಟಿ ಎಸ್-ಲೈನ್ ರೂಪಾಂತರವನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಯು ಕ್ರೋಮ್ ಅಂಶಗಳ ಬದಲು ಬ್ಲಾಕ್ ಫಿನಿಷಿಂಗ್ ಅನ್ನು ಪಡೆದಿದೆ. ಮುಂಭಾಗದಲ್ಲಿರುವ ದೊಡ್ಡ ಗಾತ್ರದ ಗ್ರಿಲ್ ಸುತ್ತಲೂ ಕಪ್ಪು ಬಣ್ಣವನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಆಡಿ ಲೋಗೋ ಹಾಗೂ ಗ್ರಿಲ್‌ನ ಬಲಭಾಗದಲ್ಲಿರುವ ಕ್ವಾಟ್ರೋ ಬ್ಯಾಡ್ಜ್, ಕ್ರೋಮ್ ಬಣ್ಣವನ್ನು ಹೊಂದಿವೆ. ಮುಂಭಾಗದ ಬಂಪರ್'ನ ಎರಡೂ ಬದಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಲ್ಲಿರುವ ವೆಂಟ್ ಈ ಎಸ್‌ಯುವಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಹೆಡ್‌ಲೈಟ್‌ಗಳು ಪೂರ್ತಿಯಾಗಿ ಎಲ್‌ಇಡಿಯಾಗಿದ್ದು, ಟಿ ಶೇಪಿನ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಈ ಎಸ್‌ಯುವಿಯು ಲೋ ಬೀಮ್ ಗಾಗಿ ಪ್ರೊಜೆಕ್ಟರ್ ಯೂನಿಟ್ ಹಾಗೂ ಹೈ ಬೀಮ್ ಗಾಗಿ ರಿಫ್ಲೆಕ್ಟರ್ ಗಳನ್ನು ಹೊಂದಿದ್ದರೂ ಫಾಗ್ ಲ್ಯಾಂಪ್ ಗಳನ್ನು ಹೊಂದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಆಕರ್ಷಕವಾದ 17 ಇಂಚಿನ ಮಲ್ಟಿಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಇದರ ಜೊತೆಗೆ ಕಪ್ಪು ಬಣ್ಣದ ಒಆರ್‌ವಿಎಂ ಹಾಗೂ ಸೈಡ್ ಫೆಂಡರ್‌ನಲ್ಲಿ ಎಸ್-ಲೈನ್ ಬ್ಯಾಡ್ಜ್ ಗಳನ್ನು ಅಳವಡಿಸಲಾಗಿದೆ. ಈ ಒಆರ್‌ವಿಎಂಗಳು ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್ ಗಳನ್ನು ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯ ರೂಫ್ ಅರ್ಧ ಕಪ್ಪು ಹಾಗೂ ಅರ್ಧ ಕೆಂಪು ಬಣ್ಣವನ್ನು ನೀಡಲಾಗಿದ್ದು, ಶಾರ್ಕ್ ಫಿನ್ ಆಂಟೆನಾವನ್ನು ಅಳವಡಿಸಲಾಗಿದೆ. ಈ ಎಸ್‌ಯುವಿಯ ಬಾಡಿಯ ಮೇಲಿರುವ ಶಾರ್ಪ್ ಗೆರೆಗಳು ಹಾಗೂ ಕ್ರೀಸ್‌ಗಳು ಕ್ಯೂ 2 ಎಸ್‌ಯುವಿಯು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯ ಹಿಂಭಾಗದಲ್ಲಿರುವ ಬ್ಯಾಡ್ಜ್‌ಗಳು ಕ್ರೋಮ್ ಬಣ್ಣವನ್ನು ಹೊಂದಿವೆ. ಟೇಲ್‌ಲೈಟ್ ವಿಶಿಷ್ಟವಾದ ವಿನ್ಯಾಸದೊಂದಿಗೆ ಉತ್ತಮವಾಗಿ ಕಾಣುತ್ತದೆ. ಕ್ಯೂ 2 ಎಸ್‌ಯುವಿಯ ಹಿಂಭಾಗದಲ್ಲಿ ಡೈನಾಮಿಕ್ ಇಂಡಿಕೇಟರ್'ಗಳನ್ನು ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಇದರ ಜೊತೆಗೆ ಅಡಾಪ್ಟಿವ್ ಗೈಡ್ ಲೈನ್ಸ್ ಹಾಗೂ ಸೆನ್ಸಾರ್'ಗಳನ್ನು ಹೊಂದಿರುವ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಕ್ಯಾಮೆರಾದಿಂದ ಎಸ್‌ಯುವಿಯನ್ನು ಇಕ್ಕಟ್ಟಾದ ಜಾಗಗಳಲ್ಲಿ ಸುಲಭವಾಗಿ ಪಾರ್ಕಿಂಗ್ ಮಾಡಲು ಸಾಧ್ಯವಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಇಂಟಿರಿಯರ್ ಹಾಗೂ ಫೀಚರ್'ಗಳು

ಈ ಎಸ್‌ಯುವಿಯ ಕ್ಯಾಬಿನ್ ವಿಶಾಲವಾಗಿದ್ದು, ಸುತ್ತಲೂ ಸಿಲ್ವರ್ ಹಾಗೂ ಡಾರ್ಕ್ ಗ್ರೇ ಅಂಶಗಳನ್ನು ಹೊಂದಿರುವ ಕಪ್ಪು ಬಣ್ಣದ ಇಂಟಿರಿಯರ್ ಅನ್ನು ನೀಡಲಾಗಿದೆ. ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿ ಟಚ್‌ಸ್ಕ್ರೀನ್ ಇಲ್ಲದ 8.3-ಇಂಚಿನ ಡಿಸ್ ಪ್ಲೇ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಗೇರ್-ಲಿವರ್‌ನ ಹಿಂಭಾಗದಲ್ಲಿ ಎಂಎಂಐ ಟಚ್ ಕಂಟ್ರೋಲರ್ ನೀಡಲಾಗಿದ್ದು, ಸ್ಕ್ರೀನ್ ಮೇಲಿನ ಫಂಕ್ಷನ್'ಗಳ ನಡುವೆ ಟಾಗಲ್ ಮಾಡಲು ಬಳಸಲಾಗುತ್ತದೆ.ಆಡಿ ಕ್ಯೂ 2 ಕಂಪನಿಯ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯಲ್ಲಿರುವ ಪೂರ್ಣ ಪ್ರಮಾಣದ ಎಲ್ಇಡಿ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಎಸ್‌ಯುವಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಮ್ಯಾಪ್ ಬಳಸಲು ಸ್ಟೀಯರಿಂಗ್ ವ್ಹೀಲ್'ನಲ್ಲಿರುವ ವೀವ್ ಬಟನ್ ಪ್ರೆಸ್ ಮಾಡಿದಾಗ ಸ್ಪೀಡೋ ಹಾಗೂ ಟ್ಯಾಕೋಮೀಟರ್‌ಗಳು ಚಿಕ್ಕದಾಗಿ ಮ್ಯಾಪ್ ಪೂರ್ಣ ಕ್ಲಸ್ಟರ್‌ನಲ್ಲಿ ಪ್ರದರ್ಶಿತವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯು ಲೆದರ್ ನಿಂದ ವ್ರಾಪ್ ಮಾಡಲಾದ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಕ್ಯೂ 2 ಎಸ್‌ಯುವಿಯ ಡ್ಯಾಶ್‌ಬೋರ್ಡ್ ಪ್ರೀಮಿಯಂ ಅಲ್ಲದಿದ್ದರೂ ತನ್ನ ಕೆಲಸವನ್ನು ಉತ್ತಮವಾಗಿ ನಿಭಾಯಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿರುವ ಈ ಎಸ್‌ಯುವಿಯಲ್ಲಿ ಹಿಂಭಾಗದ ಎಸಿ ವೆಂಟ್'ಗಳನ್ನು ನೀಡಿಲ್ಲ. ಈ ಎಸ್‌ಯುವಿಯು ಪನೋರಾಮಿಕ್ ಗ್ಲಾಸ್ ಸನ್‌ರೂಫ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯ ಮುಂಭಾಗದಲ್ಲಿರುವ ಸೀಟುಗಳು ಆರಾಮದಾಯಕ ಹಾಗೂ ಸ್ಪೋರ್ಟಿಯಾಗಿದ್ದು, ಸೈಡ್ ಬೋಲ್ ಸ್ಟರ್, ಥೈ ಸಪೋರ್ಟ್, ಅಡ್ಜಸ್ಟಬಲ್ ಹೆಡ್ ರೆಸ್ಟ್ ಗಳನ್ನು ಹೊಂದಿವೆ. ಕ್ಯೂ 2 ಎಸ್‌ಯುವಿಯು ಎಲೆಕ್ಟ್ರಿಕ್ ಸೀಟುಗಳನ್ನು ಹೊಂದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಎರಡನೇ ಸಾಲಿನಲ್ಲಿರುವ ಸೀಟುಗಳು ಆರಾಮದಾಯಕವಾಗಿದ್ದರೂ ಎತ್ತರವಾಗಿರುವವರಿಗೆ ಸ್ವಲ್ಪ ಕಷ್ಟವಾಗಬಹುದು. ಸೆಂಟರ್ ಆರ್ಮ್ ರೆಸ್ಟ್ ಹೊಂದಿರುವ ಎರಡನೇ ಸಾಲಿನಲ್ಲಿ ಮೂರು ಜನ ಕುಳಿತುಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಕ್ಯೂ 2 ಎಸ್‌ಯುವಿಯು 355-ಲೀಟರ್ ಬೂಟ್ ಅನ್ನು ಹೊಂದಿದೆ. ಆಡಿ ಕಂಪನಿಯು ಕ್ಯೂ 2 ಎಸ್‌ಯುವಿಯಲ್ಲಿ ಫೋಲ್ಡ್ ಮಾಡಬಹುದಾದ ಹಿಂಭಾಗದ ಸೀಟುಗಳನ್ನು ನೀಡಿದ್ದು, ಅಗತ್ಯವಿದ್ದಾಗ ಲಗೇಜ್ ಸ್ಪೇಸ್ ಅನ್ನು ವಿಸ್ತರಿಸಿಕೊಳ್ಳಬಹುದು.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಎಂಜಿನ್ ಹಾಗೂ ಹ್ಯಾಂಡ್ಲಿಂಗ್

ಕ್ಯೂ 2 ಎಸ್‌ಯುವಿಯಲ್ಲಿ 2.0 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 188 ಬಿಹೆಚ್ ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಏಳು-ಸ್ಪೀಡಿನ ಡಿಎಸ್‌ಜಿ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಂಜಿನ್ ಕ್ವಾಟ್ರೊ ಪರ್ಮನೆಂಟ್ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ. ಕ್ಯೂ 2 ಎಸ್‌ಯುವಿಯು ವಿಡಬ್ಲ್ಯೂ ಗ್ರೂಪ್‌ನ ಎಂಕ್ಯೂಬಿ ಪ್ಲಾಟ್‌ಫಾರಂ ಅನ್ನು ಆಧರಿಸಿದ್ದು, ಟ್ರಾನ್ಸ್‌ವರ್ಸ್ ಎಂಜಿನ್‌ನೊಂದಿಗೆ ಬರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯು ಮಲ್ಟಿ-ಪ್ಲೇಟ್ ಕ್ಲಚ್ ಅನ್ನು ಆಧರಿಸಿದ ಆನ್-ಡಿಮಾಂಡ್ ಎಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‌ಯುವಿಯ ಪವರ್ ಡೆಲಿವರಿ ಅತ್ಯುತ್ತಮವಾಗಿದೆ. ಕ್ಯೂ 2 ಎಸ್‌ಯುವಿಯು ಇಕೋ, ಕಂಫರ್ಟ್, ಡೈನಾಮಿಕ್, ಇಂಡಿವಿಜುವಲ್ ಹಾಗೂ ಆಟೋ ಎಂಬ ಐದು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಇಕೋ ಮೋಡ್‌ನಲ್ಲಿ ಸ್ಟೀಯರಿಂಗ್ ಹಾಗೂ ಥ್ರೊಟಲ್ ರೆಸ್ಪಾನ್ಸ್ ನಿಧಾನವಾಗಿದ್ದರೆ, ಡೈನಾಮಿಕ್ ಮೋಡ್‌ನಲ್ಲಿ, ಸ್ಟೀಯರಿಂಗ್ ವ್ಹೀಲ್'ಗಳು ಗಟ್ಟಿಯಾಗಿದ್ದು, ಥ್ರೊಟಲ್ ರೆಸ್ಪಾನ್ಸ್ ವೇಗವಾಗಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ನಾವು ಹೆಚ್ಚಿನ ಚಾಲನೆಗಾಗಿ ಕಂಫರ್ಟ್ ಮೋಡ್ ಅನ್ನು ಶಿಫಾರಸು ಮಾಡುತ್ತೇವೆ. ಈ ಮೋಡ್‌ನಲ್ಲಿ ಕ್ಯೂ 2 ಎಸ್‌ಯುವಿಯು ಅತ್ಯುತ್ತಮವಾಗಿ ಚಲಿಸುತ್ತದೆ. ಶಿಫ್ಟ್‌ಗಳು ವಿಳಂಬವನ್ನುಂಟು ಮಾಡುವುದಿಲ್ಲ. ಡಿಎಸ್‌ಜಿ ಗೇರ್‌ಬಾಕ್ಸ್ ವೇಗವಾಗಿ ಶಿಫ್ಟ್ ಆಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯಲ್ಲಿರುವ ಪ್ಯಾಡಲ್ ಶಿಫ್ಟರ್‌ಗಳು ಶಿಫ್ಟಿಂಗ್ ಅನ್ನು ಸುಲಭಗೊಳಿಸುತ್ತವೆ. ಬಿಎಸ್ 6 ಮಾನದಂಡಗಳಿಂದಾಗಿ ಕಾರಿನ ಎಲೆಕ್ಟ್ರಿಕ್ ಸಪ್ಲೈ ಲಿನಿಯರ್ ಆಗಿದೆ. ರೆವ್ಸ್ ನಿರ್ಮಾಣವಾಗುತ್ತಿದ್ದಂತೆ ಪವರ್ ಸಪ್ಲೈ ಸುಲಭವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಕ್ಯೂ 2 ಎಸ್‌ಯುವಿಯಲ್ಲಿರುವ ಸಸ್ಪೆಂಷನ್ ಸ್ವಲ್ಪ ಗಟ್ಟಿಯಾಗಿದ್ದರೂ ಸವಾರಿಯ ಗುಣಮಟ್ಟಕ್ಕೆ ಅಡ್ಡಿಯಾಗುವುದಿಲ್ಲ. ಕ್ಯೂ 2 ಎಸ್‌ಯುವಿಯು ಸಿಟಿಯೊಳಗಿನ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿಯೂ ಸುಲಭವಾಗಿ ಸಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಸ್ಟೀಯರಿಂಗ್ ರೆಸ್ಪಾನ್ಸ್ ಅತ್ಯುತ್ತಮವಾಗಿದ್ದು, ಸ್ವಲ್ಪ ಫ್ಲಿಕ್ ನೊಂದಿಗೆ ಎಸ್‌ಯುವಿಯು ರಸ್ತೆಗಳನ್ನು ಬದಲಿಸಲು ನೆರವಾಗುತ್ತದೆ. ಸಸ್ಪೆಂಷನ್ ಸ್ವಲ್ಪ ಗಟ್ಟಿಯಾಗಿರುವ ಕಾರಣಕ್ಕೆ ಕ್ಯೂ 2 ಎಸ್‌ಯುವಿಯು ಹೈವೇಗಳಲ್ಲಿ ಹೆಚ್ಚಿನ ವೇಗದಲ್ಲಿ ಸಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಈ ಎಸ್‌ಯುವಿಯಲ್ಲಿರುವ ಮಿಚೆಲಿನ್ ಟಯರ್‌ಗಳು ಒಳ್ಳೆಯ ಗ್ರಿಪ್ ಹೊಂದಿದ್ದು, ಚಾಲಕನು ವೇಗವಾಗಿ ಸಾಗಲು ನೆರವಾಗುತ್ತವೆ. 1,500 ಕೆ.ಜಿ ತೂಕವನ್ನು ಹೊಂದಿರುವ ಈ ಎಸ್‌ಯುವಿಯು 6.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಗಂಟೆಗೆ 228 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಕ್ಯೂ 2 ಎಸ್‌ಯುವಿಯನ್ನು ಸಿಟಿಯೊಳಗೆ ಚಾಲನೆ ಮಾಡಿದಾಗ 8.4 ರಿಂದ 11.2 ಕಿ.ಮೀ ಹಾಗೂ ಹೈವೇನಲ್ಲಿ 14.5ರಿಂದ 16.8 ಕಿ.ಮೀ ಮೈಲೇಜ್ ಪಡೆದೆವು.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ಯೂ 2 ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.35 ಲಕ್ಷಗಳಾಗಿದೆ. ನಾವು ಚಾಲನೆ ಮಾಡಿದ ಟೆಕ್ನಾಲಜಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.48.89 ಲಕ್ಷಗಳಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಕ್ಯೂ 2 ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ ಬಿಎಂಡಬ್ಲ್ಯು ಎಕ್ಸ್ 1 ಹಾಗೂ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲಿ ಸದ್ದು ಮಾಡಲಿದೆ ಆಡಿ ಕ್ಯೂ2

ಯೋಗ್ಯ ಗಾತ್ರದ ವಾಹನಕ್ಕಾಗಿ ಹಣವನ್ನು ಖರ್ಚು ಮಾಡಲು ಆಡಿ ಕಂಪನಿಯ ಎಸ್‌ಯುವಿಯನ್ನು ಖರೀದಿಸಲು ಸಿದ್ಧರಿದ್ದರೆ ಆಡಿ ಕ್ಯೂ 2 ಎಸ್‌ಯುವಿಯನ್ನು ಖರೀದಿಸಬಹುದು.

Most Read Articles

Kannada
English summary
Audi Q 2 first drive review. Read in Kannada.
Story first published: Thursday, December 17, 2020, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X