ದಟ್ಸನ್‌ಗೆ ವರದಾನವಾದಿತೇ ಗೊ ಪ್ಲಸ್ ಎಂಪಿವಿ - ಓದಿ ಸಂಪೂರ್ಣ ವಿಮರ್ಶೆ

By Nagaraja

ಜಪಾನ್ ಮೂಲದ ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ಕಳೆದ ವರ್ಷವಷ್ಟೇ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿತ್ತು. ಇದರಂತೆ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಸಂಸ್ಥೆಯು ಮಗದೊಂದು ಆಕರ್ಷಕ ಗೊ ಪ್ಲಸ್ ಬಹು ಬಳಕೆಯ ವಾಹನದ (ಎಂಪಿವಿ) ಬಿಡುಗಡೆಯ ತಯಾರಿಯಲ್ಲಿದೆ.

ಇವನ್ನೂ ಓದಿ: ದಟ್ಸನ್ ಗೊ ಹ್ಯಾಚ್ ಬ್ಯಾಕ್ ಟೆಸ್ಟ್ ಡ್ರೈವ್ ರಿವ್ಯೂ

ಈ ನಡುವೆ ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ಗೊ ಪ್ಲಸ್ ಎಂಪಿವಿ ಕಾರನ್ನು ಪರೀಕ್ಷೆ ಮಾಡುವ ವಿಶೇಷ ಅವಕಾಶವೂ ದೊರಕಿತ್ತು. ಇದರಂತೆ ಉತ್ತರಖಂಡ್‌ಗೆ ತೆರಳಿದ ನಮ್ಮ ವಿಶ್ಲೇಷಕರು ಕಾರಿನ ಧನಾತ್ಮಕ ಹಾಗೂ ನಕರಾತ್ಮಕ ಅಂಶಗಳ ಬಗ್ಗೆ ಪಟ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ದಟ್ಸನ್ ಗೊ ಪ್ಲಸ್ ದೇಶದ ರಸ್ತೆ ಪರಿಸ್ಥಿತಿಗೆ ಎಷ್ಟರ ಮಟ್ಟಿಗೆ ಹೊಂದಿಕೆಯಾಗಲಿದೆ? ಹಣಕ್ಕೆ ತಕ್ಕ ಮೌಲ್ಯ ನೀಡಲಿದೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ನಮ್ಮ ಚಾಲನಾ ಪರೀಕ್ಷಾ ವರದಿ ಮೂಲಕ ತಿಳಿದುಕೊಳ್ಳೋಣವೇ...

ದಟ್ಸನ್ ಗೊ ಪ್ಲಸ್ ಟೆಸ್ಟ್ ಡ್ರೈವ್ ವಿಮರ್ಶೆ

ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ಕಾಯ್ದುಕೊಂಡಿರುವ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಿನ ಮೇಲೆ ದೇಶದ ಮಧ್ಯಮ ವರ್ಗದ ಗ್ರಾಹಕರು ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದು ಐದು ಲಕ್ಷ ರು.ಗಳ ಬೆಲೆ ವ್ಯಾಪ್ತಿಯನ್ನು ಹೊಂದುವ ಸಾಧ್ಯತೆಯಿದೆ (ಅಧಿಕೃತ ಬೆಲೆ ಬಿಡುಗಡೆ ವೇಳೆಯಷ್ಟೇ ಬಹಿರಂಗವಾಗಲಿದೆ). ನಿರ್ಮಾಣ ಗುಣಮಟ್ಟತೆಯು ದಟ್ಸನ್ ಗೊ ಪ್ಲಸ್ ಪಾಲಿಗೆ ನಿರ್ಣಾಯಕೆವೆನಿಸಲಿದೆ. ಈ ಎಲ್ಲ ನಿರೀಕ್ಷೆಗಳನ್ನು ತಲುಪಲಿದೆಯೇ ಎಂಬುದನ್ನು ಟೆಸ್ಟ್ ಡ್ರೈವ್ ವರದಿ ಮೂಲಕ ತಿಳಿಯೋಣ.

ಅವಲೋಕನ

ಅವಲೋಕನ

ಪರೀಕ್ಷಾರ್ಥ ಮಾದರಿ: ದಟ್ಸನ್ ಗೊ ಪ್ಲಸ್ ಟಿ (ಟಾಪ್ ಎಂಡ್ ವೆರಿಯಂಟ್)

ಟೆಸ್ಟ್ ಡ್ರೈವ್: ಸಂತೋಷ್ ಸೊಲೊಮಾನ್ ರಾಜ್ ಕುಮಾರ್ (ಹಿರಿಯ ಸಂಪಾದಕರು, ಡ್ರೈವ್ ಸ್ಪಾರ್ಕ್)

ಚಾಲನಾ ಪರೀಕ್ಷೆ ಮಾಡಿದ ಜಾಗ: ಡೆಹ್ರಾಡೂನ್‌ನಿಂದ ಹೃಷಿಕೇಶ್ (ಉತ್ತರಾಖಂಡ್)

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಮುಂಭಾಗದ ವಿನ್ಯಾಸವನ್ನು ಗಮನಿಸಿದಾಗ ಹಿಂದಿನ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಹಾಗೂ ಹೊಸ ಗೊ ಪ್ಲಸ್ ಎಂಪಿವಿ ಕಾರಿಗೆ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ ಪ್ಲಸ್ ಕಾರಿನ ಮಧ್ಯ ಭಾಗದಲ್ಲಿ ಬ್ರಾಂಡ್ ಲೊಗೊ ಎದ್ದು ಕಾಣಿಸುತ್ತಿದೆ. ಇನ್ನು ಕಾರಿಗೆ ಹೆಚ್ಚಿನ ಆಕರ್ಷಣೆ ನೀಡುವ ನಿಟ್ಟಿನಲ್ಲಿ ಉಬ್ಬು ತಬ್ಬುಗಳು ಗಮನಕ್ಕೆ ಬರಬಹುದು. ಹಾಗಿದ್ದರೂ ಫಾಗ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳ ಕೊರತೆ ಕಾಡಲಿದೆ. ಪ್ರಮುಖವಾಗಿಯೂ ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಂತಹದೊಂದು ನೀತಿ ಅನುಸರಿಸಲಾಗಿದೆ.

ವಿನ್ಯಾಸ - ಬದಿ

ವಿನ್ಯಾಸ - ಬದಿ

ಬದಿಯಿಂದ ನೋಡಿದಾಗ ಇದು ಒಂದು ಅಪ್ಪಟ ಎಂಪಿವಿ ಎಂಬಂತೆ ಭಾಸವಾಗುತ್ತಿದೆ. ತೆರೆಗೆ ವಿನಾಯಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಹಳ ನಾಜೂಕಾಗಿ ನಾಲ್ಕು ಮೀಟರ್ ಒಳಗಿನ ಪರಿಧಿಯಲ್ಲೇ ಇದನ್ನು ರಚಿಸಲಾಗಿದೆ. ಈ ಪೈಕಿ 'ಬಿ' ಹಾಗೂ 'ಸಿ' ಪಿಲ್ಲರ್ ಕಪ್ಪು ವರ್ಣವನ್ನು ಪಡೆದುಕೊಡಿದೆ. ಇನ್ನು ಆಕರ್ಷಕ ಬಾಡಿ ಲೈನ್, ಹಿಂದುಗಡೆ ಬಾಗಿದಂತಹ (ಮೇಲ್ಚಾವಣಿ) ವಿನ್ಯಾಸ ಹಾಗೂ ಚಕ್ರಗಳು ಹೆಚ್ಚಿನ ಆಕರ್ಷಣೆ ನೀಡುತ್ತದೆ.

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಹಾಗೂ ಎಂಪಿವಿ ಹಿಂಭಾಗದ ವಿನ್ಯಾಸಕ್ಕೂ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಹಾಗಿದ್ದರೂ ಮೇಲ್ಗಡೆಯಾಗಿ ಲಗತ್ತಿಸಲಾಗಿರುವ ನಂಬರ್ ಪ್ಲೇಟ್ ಹಾಗೂ ಟೈಲ್ ಲ್ಯಾಂಪ್‌ಗಳು ಆಕರ್ಷವೆನಿಸಿದೆ. ಇದು ಸಣ್ಣದಾದ ವಿಂಡ್ ಶೀಲ್ಡ್ ಪಡೆದುಕೊಂಡಿದ್ದು, ಹಿಂಬದಿಯ ಬಂಪರ್ ವಿಶಿಷ್ಟ ನೋಟ ಪ್ರದಾನ ಮಾಡುತ್ತಿದೆ.

ಒಳಮೈ

ಒಳಮೈ

ಮಗದೊಂದು ಗೊ ಹ್ಯಾಚ್‌ಬ್ಯಾಕ್ ಕಾರಿಗೆ ಸಮಾನವಾದ ಡ್ಯಾಶ್ ಬೋರ್ಡ್ ಅನ್ನು ಗೊ ಪ್ಲಸ್ ಎಂಪಿವಿ ಕಾರಿನಲ್ಲೂ ಕಾಯ್ದುಕೊಳ್ಳಲಾಗಿದೆ. ಇದು ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್, ಬೆಳ್ಳಿ ಲೇಪಿತ ಎಸಿ ವೆಂಟ್, ಸ್ಮಾರ್ಟ್ ಫಾನ್ ಡಾಕಿಂಗ್ ಸ್ಟೇಷನ್ ಹಾಗೂ ಪ್ಲಾಸ್ಟಿಕ್ ಗುಣಮಟ್ಟತೆಯು ಮೆಚ್ಚುಗೆಗೆ ಪಾತ್ರವಾಗಿದೆ.

ಗೇರ್ ಲಿವರ್

ಗೇರ್ ಲಿವರ್

ಇತರ ಮಾದರಿಗಿಂತಲೂ ಭಿನ್ನವಾಗಿ ದಟ್ಸನ್ ಗೊ ಸೆಂಟ್ರಲ್ ಕನ್ಸಾಲ್ ಕೆಳಗಡೆ ಗೇರ್ ಲಿವರ್ ಪಡೆದುಕೊಂಡಿದೆ. ಇದು ಮೊದಲ ಸಾಲಿನಲ್ಲೇ ಸಂಪರ್ಕಿತ ಆಸನ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದು, ಮುಂಭಾಗದಲ್ಲಿ ಚಾಲಕ ಸೇರಿದಂತೆ ಮೂವರಿಗೆ ಪಯಣಿಸಲು ಅನುವು ಮಾಡಿಕೊಡುವುದರ ಜೊತೆಗೆ ಇಕ್ಕಟ್ಟಿನ ಪಾರ್ಕಿಂಗ್ ಪ್ರದೇಶದಲ್ಲೂ ಕಾರಿನಿಂದ ಹೊರಗಿಳಿಯಲು ಸಹಕಾರಿಯೆನಿಸುತ್ತದೆ.

ಹ್ಯಾಂಡ್ ಬ್ರೇಕ್ ಲಿವರ್

ಹ್ಯಾಂಡ್ ಬ್ರೇಕ್ ಲಿವರ್

ಸಹಜವಾಗಿಯೇ ಗೇರ್ ಲಿವರ್ ಮೇಲಕ್ಕೆತ್ತಲ್ಪಟ್ಟಾಗ ಹ್ಯಾಂಡ್ ಬ್ರೇಕ್ ಲಿವರ್ ಲಗತ್ತಿಸುವುದು ಕಷ್ಟಕರೆನಿಸಿದೆ. ಹೀಗಾಗಿ ಸ್ಟೀರಿಂಗ್ ಎಡಭಾಗದಲ್ಲಿ ಗೇರ್ ಲಿವರ್ ಪಕ್ಕದಲ್ಲಿ ಜೋಡಣೆ ಮಾಡುವ ಮೂಲಕ ದಟ್ಸನ್ ತಪ್ಪು ಮಾಡಿದೆ ಎಂದು ಹೇಳಬಹುದು. ಯಾಕೆಂದರೆ ಉದ್ದನೆಯ ಚಾಲಕರಿಗಿದು ಚಾಲನೆ ವೇಳೆ ಇಕ್ಕಟ್ಟಿನ ಪರಿಸ್ಥಿತಿಯನ್ನುಂಟು ಮಾಡಲಿದೆ. ಮೊದ ಮೊದಲು ಇದರ ಕಾರ್ಯ ನಿರ್ವಹಣೆ ಕಷ್ಟವೆನಿಸುತ್ತದೆ.

ಪವರ್ ವಿಂಡೋ

ಪವರ್ ವಿಂಡೋ

ಚಾಲಕ ಹಾಗೂ ಮುಂಭಾಗದ ಪ್ರಯಾಣಿಕ ಬದಿಯ ಬಾಗಿಲುಗಳಲ್ಲಿ ಮಾತ್ರ ಪವರ್ ವಿಂಡೋ ಸೌಲಭ್ಯವಿರುತ್ತದೆ. ಇಲ್ಲೂ ವೆಚ್ಚ ಕಡಿತದ ಗುರಿಯಿರಿಸಿಕೊಂಡಿರುವ ದಟ್ಸನ್ ಗೊ ಪ್ಲಸ್ ಎಂಪಿವಿ, ಸ್ಪಷ್ಟವಾಗಿ ಮಾಸ್ಟರ್ ಪವರ್ ವಿಂಡೋ ನಿಯಂತ್ರಣದ ಅಭಾವ ಎದುರಿಸುತ್ತದೆ.

ಗ್ಲೋವ್ ಬಾಕ್ಸ್

ಗ್ಲೋವ್ ಬಾಕ್ಸ್

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಗ್ಲೋವ್ ಬಾಕ್ಸ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುವುದಿಲ್ಲ. ಇದು ಕಾರು ಚಲನೆ ವೇಳೆಯಲ್ಲೇ ಅದರಲ್ಲಿಟ್ಟ ವಸ್ತುಗಳು ಕೆಳಕ್ಕೆ ಬೀಳುವ ಸಾಧ್ಯತೆಯ ಬಗ್ಗೆ ಆತಂಕವನ್ನು ಸೃಷ್ಟಿಸುತ್ತದೆ.

ಡಾಕಿಂಗ್ ಸ್ಟೇಷನ್ (docking)

ಡಾಕಿಂಗ್ ಸ್ಟೇಷನ್ (docking)

ಮೊಬೈಲ್ ಫೋನ್ ಡಾಕಿಂಗ್ ಸ್ಟೇಷನ್ ನಿಮಗೆ ದಟ್ಸನ್ ಗೊ ಪ್ಲಸ್ (ಎಂಡಿಎಸ್) ಕಾರಿನಲ್ಲಿ ಲಭ್ಯವಾಗಲಿದೆ. ಈ ಮೂಲಕ ಮೊಬೈಲನ್ನು ಕಾರಿಗೆ ಕನೆಕ್ಟ್ ಮಾಡುವ ಮೂಲಕ ಸಂಗೀತ ಆಲಿಸಬಹುದು. ಅಂತೆಯೇ ಯುಎಸ್‌ಬಿ ಚಾರ್ಜಿಂಗ್ ಹಾಗೂ ಧ್ವನಿ ನಿಯಂತ್ರಣ ಬಟನ್ ಕೂಡಾ ಇರುತ್ತದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇಲ್ಲೂ ಕೂಡಾ ಗೊ ಹ್ಯಾಚ್‌ಬ್ಯಾಕ್ ಕಾರಿನಲ್ಲಿರುವುದಕ್ಕೆ ಸಮಾನವಾದ ಇನ್ಸ್ಟುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ. ಇದು ಅನಾಲಾಗ್ ಸ್ಪೀಡೋಮೀಟರ್, ಡಿಜಿಟ ಸ್ಪೀಡೋ ಮೀಟರ್‌ನಲ್ಲಿ ಆರ್‌ಪಿಎಂ ರೀಡರ್ ಮುಂತಾದ ಅಗತ್ಯ ಮಾಹಿತಿಗಳು ಲಭ್ಯವಾಗಲಿದೆ. ಇನ್ನು ಎಷ್ಟು ವೇಗದಲ್ಲಿ ಯಾವ ಗೇರ್ ಆಳವಡಿಸಬೇಕು ಎಂಬುದನ್ನು ಇದರಲ್ಲಿ ಸೂಚಿಸುತ್ತದೆ.

ಬಾಟಲಿ ಹೋಲ್ಡರ್, ಸ್ಪೀಕರ್

ಬಾಟಲಿ ಹೋಲ್ಡರ್, ಸ್ಪೀಕರ್

ಮುಂಭಾಗದ ಬಾಗಿಲಿನಲ್ಲಿ ಬಾಟಲಿ ಹೋಲ್ಡರ್ ನೀಡಲಾಗಿದೆ. ಇನ್ನು ನಿಮ್ಮ ಪ್ರವಾಸವನ್ನು ಇನ್ನಷ್ಟು ಆನಂದದಾಯಕವಾಗಿಸಲು ಎರಡು ಸ್ಪೀಕರುಗಳ ಸೇವೆಯೂ ಸಿಗಲಿದೆ. ಆದರೆ ಕಾರಿನ ಹೊರಗಡೆ ಏಕ ಮಾತ್ರ ವೈಪರ್ ಕೊಡಲಾಗಿದೆ.

ಎಸಿ ವೆಂಟ್ಸ್

ಎಸಿ ವೆಂಟ್ಸ್

ಎಸಿ ವೆಂಟ್ಸ್ ಚಕ್ರಾಕಾರಾದಲ್ಲಿ ತಿರುಗುವ ರೀತಿಯಲ್ಲಿದ್ದು, ಇದರ ನಿರ್ವಹಿಸುವುದು ತುಂಬಾನೇ ಸುಲಭವಾಗಿದೆ. ಆದರೆ ಮೂರು ಸಾಲುಗಳ ಆಸನ ವ್ಯವಸ್ಥೆಯಲ್ಲಿ ರಿಯರ್ ಎಸಿ ವೆಂಟ್ಸ್ ಕೊರತೆ ಇರುವುದರಿಂದಲೂ ಹಿಂಭಾಗದ ಸಾಲುಗಳಲ್ಲಿ ಎಸಿ ಕೂಲಿಂಗ್ ತುಂಬಾನೇ ನಿಧಾನವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಇದು ತುಂಬಾನೇ ಕಿರಿಕಿರಿಯನ್ನುಂಟು ಮಾಡಲಿದೆ.

ಮುಂಭಾಗದ ಸಾಲಿನ ಆಸನ

ಮುಂಭಾಗದ ಸಾಲಿನ ಆಸನ

ಮುಂಭಾಗದ ಸಾಲಿನ ಆಸನವು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ಕಾರಿನೊಳಗೆ ಪ್ರವೇಶ ಹಾಗೂ ಹೊರಬರುವುದು ತುಂಬಾನೇ ಸುಲಭವಾಗಿದೆ. ಇದರ ಸರಳ ವಿನ್ಯಾಸವು ಸಾಮಾನ್ಯ ಎತ್ತರದ ಚಾಲಕರಿಗೂ ನಿರ್ವಹಣೆ ತುಂಬಾನೇ ಸುಲಭವೆನಿಸಲಿದೆ.

ಎರಡನೇ ಸಾಲಿನ ಸೀಟು

ಎರಡನೇ ಸಾಲಿನ ಸೀಟು

ಎರಡು ಹಾಗೂ ಮೂರನೇ ಸಾಲಿನ ಆಸನವನ್ನು ಮಡಚಬಹುದಾಗಿದೆ. ಇದು ಪ್ರಯಾಣಿಕರಿಗೆ ಒಳ ಪ್ರವೇಶಿಸುವುದು ಹಾಗೂ ಲಗ್ಗೇಜ್ ಇಡಲು ತುಂಬಾನೇ ಅನುಕೂಲವೆನಿಸಲಿದೆ. ಇತರ ಕಾರುಗಳಲ್ಲಿ ಎರಡನೇ ಸಾಲನ್ನು ಸಂಪೂರ್ಣವಾಗಿ ಮಡಚುವ ವ್ಯವಸ್ಥೆಗಳಿರುವುದಿಲ್ಲ ಎಂಬದು ಇಲ್ಲಿ ಗಮನಾರ್ಹವೆನಿಸುತ್ತದೆ.

ಸ್ಥಳಾವಕಾಶ

ಸ್ಥಳಾವಕಾಶ

ಕಾರಿನೊಳಗಿನ ಸ್ಥಳಾವಕಾಶದ ವಿಚಾರಕ್ಕೆ ಬಂದಾಗ ದಟ್ಸನ್ ಗೊ ಅಷ್ಟೊಂದು ಪ್ರೀತಿ ಪಾತ್ರವಾಗಿಲ್ಲ. ಈ ನಾಲ್ಕು ಮೀಟರ್ ಕಾಂಪಾಕ್ಟ್ ಎಂಪಿವಿ ಕಾರಿನ ಎರಡನೇ ಸಾಲಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದರೂ ಮೂರನೇ ಸಾಲಿನಲ್ಲಿ ಅತ್ಯಂತ ಕಳಪೆ ಮಟ್ಟದ ಆಸನ ಹೊಂದಿರುತ್ತದೆ. ಚಿತ್ರ ಸಮೇತ ಮಾಹಿತಿಗಾಗಿ ಮುಂದುವರಿಯಿರಿ...

ಆಯಾಮ (ಎಂಎಂ)

  • ಒಟ್ಟು ಉದ್ದ - 3,995
  • ಒಟ್ಟಾರೆ ಅಗಲ - 1635
  • ಒಟ್ಟಾರೆ ಎತ್ತರ - 1490
  • ವೀಲ್ ಬೇಸ್ - 1450
  • ಫ್ರಂಟ್ ಟ್ರ್ಯಾಕ್ - 1445
  • ಕನಿಷ್ಠ ಗ್ರೌಂಡ್ ಕ್ಲಿಯರನ್ಸ್ - 170
  • ಕನಿಷ್ಠ ಟರ್ನಿಂಗ್ ರೇಡಿಯಸ್ - 4.6
  • ಇಂಧನ ಟ್ಯಾಂಕ್ ಸಾಮರ್ಥ್ಯ - 35
  • ಸೀಟು - 7
  • ಮೂರನೇ ಸಾಲಿನ ಆಸನ ವ್ಯವಸ್ಥೆ

    ಮೂರನೇ ಸಾಲಿನ ಆಸನ ವ್ಯವಸ್ಥೆ

    ಖಂಡಿತವಾಗಿಯೂ ಇನ್ನೋವಾ ಕಾರನ್ನು ನೆನಪಿನಲ್ಲಿಟ್ಟುಕೊಂಡು ನೀವಿದರ ಒಳ ಪ್ರವೇಶಿಸಬಾರದು. ಯಾಕೆಂದರೆ ಇಂದೊಂದು ಬಜೆಟ್ ಕಾಂಪಾಕ್ಟ್ ಕಾರಾಗಿದ್ದು, ಮೂರನೇ ಸಾಲಿನ ಆಸನ ವ್ಯವಸ್ಥೆಯು ತೀರಾ ನಿರಾಸೆಗೆ ಪಾತ್ರವಾಗಿದೆ. ಇಲ್ಲಿ ದೊಡ್ಡವರು ಕುಳಿತುಕೊಳ್ಳುವುದು ದೂರದ ಮಾತು. ಇನ್ನೇನಾದರೂ ಕುಳಿತುಕೊಳ್ಳುವ ಪ್ರಯತ್ನಕ್ಕೆ ಮುಂದಾದ್ದಲ್ಲಿ ಕೈ ಕಾಲು ನೋವು ಗ್ಯಾರಂಟಿ. ನಾವಿಲ್ಲಿ ಸಣ್ಣ ಮಕ್ಕಳಿಗೆ ಮಾತ್ರ ಕುಳಿತುಕೊಳ್ಳುವಂತೆ ಸಲಹೆ ಮಾಡಲಿದ್ದೇವೆ.

    ಲಗ್ಗೇಜ್ ಸ್ಪೇಸ್

    ಲಗ್ಗೇಜ್ ಸ್ಪೇಸ್

    ನೀವು ದೂರ ಪ್ರಯಾಣದಲ್ಲಿದ್ದು ಮೂರು ಸಾಲಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರೆ ನಿಮಗೆ ಲಗ್ಗೇಜ್ ಜಾಗದ ಸಮಸ್ಯೆ ಕಾಡಲಿದೆ. ಇಲ್ಲಿ ನಿಮಗೆ 48 ಲೀಟರ್ ಬೂಟ್ ಸ್ಪೇಸ್ ಅಷ್ಟೇ ಸಿಗಲಿದೆ.

    ಲಗ್ಗೇಜ್ ಸ್ಪೇಸ್

    ಲಗ್ಗೇಜ್ ಸ್ಪೇಸ್

    ಇನ್ನು ಲಗ್ಗೇಜ್ ಜಾಗ ಹೆಚ್ಚಿಸುವ ಆಯ್ಕೆ ನಿಮ್ಮ ಮುಂದಿದ್ದು, ಮೂರನೇ ಸಾಲನ್ನು ಮಡಚುವ ಮೂಲಕ ನೀವು ಲಗ್ಗೇಜ್ ಸ್ಪೇಸ್ ಜಾಗವನ್ನು 374 ಲೀಟರ್‌ಗೆ ಹೆಚ್ಚಿಸಬಹುದು. ಈ ವೇಳೆಯಲ್ಲಿ ಐದು ಜನರಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶವಿರಲಿದೆ.

    ಲಗ್ಗೇಜ್ ಜಾಗ

    ಲಗ್ಗೇಜ್ ಜಾಗ

    ಇತರ ಮಾದರಿಗಿಂತಲೂ ಭಿನ್ನವಾಗಿ ಮೂರನೇ ಸಾಲಿನ ಜೊತೆಗೆ ಎರಡನೇ ಸಾಲನ್ನು ಮಡಚುವ ಮೂಲಕ ನಿಮ್ಮ ಲಗ್ಗೇಜ್ ಸ್ಪೇಸ್ ಇನ್ನಷ್ಟು ಜಾಸ್ತಿ ಮಾಡಬಹುದಾಗಿದೆ. ಇದೊಂದು ಅತ್ಯುತ್ತಮ ಆಯ್ಕೆಯಾಗಿದ್ದು, ಸಣ್ಣ ವ್ಯವಹಾರ ಮಾಡಿಕೊಂಡು ಜೀವನ ನಡೆಸುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

    ಒಳ ಪ್ರವೇಶ

    ಒಳ ಪ್ರವೇಶ

    ನಾವು ಈ ಮೊದಲೇ ಉಲ್ಲೇಖ ಮಾಡಿರುವಂತೆಯೇ ದಟ್ಸನ್ ಗೊ ಮೊದಲ ಸಾಲಿನ ಬಾಗಿಲನ್ನು ಪೂರ್ಣವಾಗಿಯೂ ತೆರೆಯುವ ಮೂಲಕ ದಪ್ಪನೆಯ ವ್ಯಕ್ತಿಗಳಿಗೂ ಒಳ ಪ್ರವೇಶಿಸುವುದು ಸುಲಭವೆನಿಸಲಿದೆ. ಎರಡನೇ ಸಾಲಿನ ಆಸನ ಕೂಡಾ ಒಳ ಹಾಗೂ ಹೊರ ಹೋಗುವುದಕ್ಕೆ ನೆರವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

    ಎಂಜಿನ್

    ಎಂಜಿನ್

    ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಕಾರಿನಲ್ಲಿ ತ್ರಿ ಸಿಲಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇದು 104 ಎನ್‌ಎಂ ತಿರುಗುಬಲವನ್ನು ಹೊಂದಿರಲಿದೆ. ಹಾಗಿದ್ದರೂ ನಮ್ಮ ವಿಶ್ಲೇಷಕರ ಪ್ರಕಾರ ಕಾರಿನ ಶಬ್ದ ಅಷ್ಟು ತೃಪ್ತಿದಾಯಕವಾಗಿಲ್ಲ. ಅಂತೆಯೇ ಕ್ಯಾಬಿನ್ ನಾಯ್ಸ್ ಜಾಸ್ತಿಯಾಗಿರುತ್ತದೆ.

    ಗೇರ್ ಶಿಫ್ಟ್

    ಗೇರ್ ಶಿಫ್ಟ್

    ದಟ್ಸನ್ ಗೊ ಪ್ಲಸ್ ಎಂಪಿವಿ ಫೈವ್ ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದರ ನಿರ್ವಹಣೆ ತುಂಬಾನೇ ಸರಳವಾಗಿದೆ. ಹಾಗಿದ್ದರೂ ಕಾಲಿನಿಂದ ಕ್ಲಚ್ ಪೆಡಲು ಅಂತರ ಜಾಸ್ತಿಯಾಗಿದೆ.

    ನಿರ್ವಹಣೆ

    ನಿರ್ವಹಣೆ

    ಇದರ 1.2 ಲೀಟರ್ ಎಂಜಿನ್ 67 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 0-100 ಕೀ.ಮೀ. ದೂರವನ್ನು 14.5 ಸೆಕೆಂಡುಗಳಲ್ಲಿ ವೇಗವರ್ಧಿಸಲಿದೆ. ನಮ್ಮ ವಿಶ್ಲೇಷಕರ ಪ್ರಕಾರ ಹೆಚ್ಚು ಭಾರವನ್ನು ಹೊತ್ತುಕೊಂಡು ಹೋಗುವುದು ಕಾರಿಗೆ ಕಷ್ಟಕರವೆನಿಸಲಿದೆ.

    ಸ್ಟೀರಿಂಗ್

    ಸ್ಟೀರಿಂಗ್

    ಟಾಪ್ ಎಂಡ್ ವೆರಿಯಂಟ್‌ನಲ್ಲಿ ಮಾತ್ರ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ವ್ಯವಸ್ಥೆಯಿರುತ್ತದೆ. ಅಂತೆಯೇ ಸ್ಟೀರಿಂಗ್ ವೀಲ್ ಹೋದಿಕೆಯ ಕೊರತೆಯನ್ನು ಕಾಡುತ್ತದೆ.

    ಚಾಲನಾ ಅನುಭವ

    ಚಾಲನಾ ಅನುಭವ

    ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಕಾರನ್ನು ಚಾಲನೆ ತುಂಬಾನೇ ಸುಲಭವಾಗಿದ್ದು, ಗೋಚರತೆಯು ಉತ್ತಮವೆನಿಸಿದೆ. ಆದರೆ ವಿಂಡ್ ಶೀಲ್ಡ್ ಚಿಕ್ಕದಾಗಿರುವುದರಿಂದ ರಿವರ್ಸ್ ತೆಗೆದುಕೊಳ್ಳುವಾಗ ಮಾತ್ರ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

    ಹ್ಯಾಂಡ್ಲಿಂಗ್

    ಹ್ಯಾಂಡ್ಲಿಂಗ್

    ದಟ್ಸನ್ ಗೊ ಪ್ಲಸ್ ಎಂಪಿವಿ ಕಾರು 4.6 ಮೀಟರ್ ಕನಿಷ್ಠ ಟರ್ನಿಂಗ್ ರೇಡಿಯಸ್ ಹೊಂದಿದ್ದು, ತಿರುವುಗಳಲ್ಲಿ ಉತ್ತಮ ಅನುಭವ ನೀಡಲಿದೆ. ಆದರೆ ಅಧಿಕ ವೇಗದಲ್ಲಿ ಗಾಡಿಯ ದೇಹ ಸಂಪೂರ್ಣವಾಗಿ ಉರುಳುವುದಂತೆ ಅನುಭವವಾಗುತ್ತದೆ. ಹಾಗಾಗಿ ಅಧಿಕ ವೇಗದಲ್ಲಿ ಸೇಫ್ ಡ್ರೈವ್‌ಗೆ ಆದ್ಯತೆ ಕೊಡುವುದು ಒಳಿತು.

    ಮೈಲೇಜ್

    ಮೈಲೇಜ್

    ದಟ್ಸನ್ ಸಂಸ್ಥೆಯ ಪ್ರಕಾರ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರು ಪ್ರತಿ ಲೀಟರ್‌ಗೆ 20.62 ಕೀ.ಮೀ. ಮೈಲೇಜ್ ನೀಡಲಿದೆ. ಬೆಲೆ, ನಿರ್ವಹಣೆ ಹಾಗೂ ಎಂಪಿವಿ ವಿಭಾಗವನ್ನು ಗಮನಿಸಿದಾಗ ಇದು ಪ್ರಸಂಶನೀಯವಾಗಿದೆ.

    ಸಸ್ಪೆಷನ್, ಗ್ರೌಂಡ್ ಕ್ಲಿಯರನ್ಸ್

    ಸಸ್ಪೆಷನ್, ಗ್ರೌಂಡ್ ಕ್ಲಿಯರನ್ಸ್

    ಭಾರತೀಯ ರಸ್ತೆ ಪರಿಸ್ಥಿತಿಗೆ ಹೊಂದಿಕೆಯಾಗುವಂತೆ ಸಸ್ಪೆಷನ್ ಹಾಗೂ ಗ್ರೌಂಡ್ ಕ್ಲಿಯರನ್ಸ್ ಫೈನ್ ಟ್ಯೂನ್ ಮಾಡಲಾಗಿದೆ. ಇದು 170 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿದ್ದು, ಅತ್ಯುತ್ತಮವೆನಿಸಿದೆ. ಇದು ಮುಂಭಾಗದಲ್ಲಿ ಮ್ಯಾಕ್‌ಫೆರ್ಸನ್ ಸ್ಟ್ರಟ್ ವಿತ್ ಸಸ್ಪೆಷನ್ ಮೆಂಬರ್ ಆಂಡ್ ಡಬಲ್ ಪೈವಟ್ ಲೊವರ್ ಆರ್ಮ್ ಮತ್ತು ಹಿಂಭಾಗದಲ್ಲಿ ಎಚ್ ಟೈಪ್ ಟಾರ್ಸನ್ ಬೀಮ್ ಜೊತೆ ಹೈ ಫರ್ಫಮೆನ್ಸ್ ಲಿನಿಯರ್ ಡ್ಯಾಂಪರ್ ಪಡೆದುಕೊಂಡಿರುತ್ತದೆ.

    ಬ್ರೇಕ್

    ಬ್ರೇಕ್

    ಅದೇ ರೀತಿ ಮುಂದುಗಡೆ ಡಿಸ್ಕ್ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಇರುತ್ತದೆ. ಇದು ಕೂಡಾ ಉತ್ತಮ ಗ್ರಿಪ್ ಪ್ರದಾನ ಮಾಡುತ್ತಿದೆ.

    ಚಕ್ರ

    ಚಕ್ರ

    ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಿನಲ್ಲಿ ಟ್ಯೂಬ್ ಲೆಸ್ ಚಕ್ರಗಳನ್ನು ಬಳಕೆ ಮಾಡಲಾಗಿದೆ. ಆದರೆ ನಿಸ್ಸಶಂಯವಾಗಿಯೂ ಬೆಲೆ ಕಡಿತ ಮಾಡುವ ನಿಟ್ಟಿನಲ್ಲಿ ಅಲಾಯ್ ವೀಲ್‌ಗಳನ್ನು ಕಳೆದುಕೊಂಡಿದೆ.

    ಟೈರ್

    155ಯ70ಆರ್13

    ಟ್ಯೂಬ್ ಲೆಸ್

    ಬೂಟ್ ಲಿಡ್

    ಬೂಟ್ ಲಿಡ್

    ಬೂಟ್ ಲಿಡ್ ನಿರ್ವಹಣೆ ತುಂಬಾನೇ ಕಷ್ಟಕರವೆನಿಸುತ್ತದೆ. ಯಾವುದೇ ರಿಮೋಟ್ ಬೂಟ್ ಲಾಕ್‌ಗಳಂತಹ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ಬಾರಿಯೂ ಲಗ್ಗೇಜ್ ನಿರ್ವಹಣೆಗಾಗಿ ಡೋರ್ ಓಪನ್ ಮಾಡ್ಬಿಟ್ಟು ಬೂಟ್ ಲಿಡ್ ಮೇಲೆಕ್ಕೆತ್ತಬೇಕಾಗುತ್ತದೆ.

    ಸುರಕ್ಷತೆ

    ಸುರಕ್ಷತೆ

    ಈ ಬಜೆಟ್ ಕಾರಿನಲ್ಲಿ ತ್ರಿ ಪಾಯಿಂಟ್ ಸೀಟು ಬೆಲ್ಟ್ ಕೊರತೆ ಕಾಡುತ್ತಿದ್ದು, ಲ್ಯಾಪ್ ಬೆಲ್ಟ್ (ಸೊಂಟ) ಮಾತ್ರ ಕಾಣಸಿಗುತ್ತದೆ. ಉಳಿದಂತೆ ಎಬಿಎಸ್ ಹಾಗೂ ಏರ್ ಬ್ಯಾಗ್‌ಗಳಂತಹ ಸೌಲಭ್ಯಗಳು ಕನಿಷ್ಠ ಐಚ್ಛಿಕ ಆಯ್ಕೆಯನ್ನು ನೀಡದಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

    ಮುನ್ನಡೆ

    ಮುನ್ನಡೆ

    • ಕಾಂಪಾಕ್ಟ್ ಎಂಪಿವಿ ಮಾದರಿ (ಸಬ್ ಫೋರ್ ಮೀಟರ್),
    • ದೈನಂದಿನ ಪ್ರಯಾಣಕ್ಕೆ ಸೂಕ್ತ,
    • ಬಜೆಟ್ ಕಾರು,
    • ಪ್ರಭಾವಿ ಮೈಲೇಜ್,
    • ಏಳು ಸೀಟು
    • ಹಿನ್ನಡೆ

      ಹಿನ್ನಡೆ

      • ಮೂಲಭೂತ ಸುರಕ್ಷಾ ಮಾನದಂಡಗಳ ಅಭಾವ,
      • ಗುಣಮಟ್ಟತೆಯ ಕೊರತೆ,
      • ಸ್ಥಳಾವಕಾಶದ ಕೊರತೆ (ಎರಡನೇ ಹಾಗೂ ಮೂರನೇ ಸಾಲಿನಲ್ಲಿ),
      • ಕಾರಿನ ಕೆಳಭಾಗದಲ್ಲಿ ಹೆಚ್ಚುವರಿ ಚಕ್ರ,
      • ಎಕ್ಸ್ ಫಾಕ್ಟರ್

        ಎಕ್ಸ್ ಫಾಕ್ಟರ್

        ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ದೇಶದ ಮಾರುಕಟ್ಟೆಯಲ್ಲಿ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದು, ಗೊ ಹ್ಯಾಚ್‌ಬ್ಯಾಕ್ ಬಳಿಕ ಮಗದೊಂದು ಆಕರ್ಷಕ ಎಂಪಿವಿ ಕಾರನ್ನು ಪರಿಚಯಿಸುತ್ತಿದೆ. ಖಂಡಿತವಾಗಿಯೂ ಕೆಲವೊಂದು ಕುಂದು ಕೊರತೆಗಳನ್ನು ಬದಿಗೆ ಸರಿಸಿದ್ದಲ್ಲಿ ದಟ್ಸನ್ ಇಂತಹದೊಂದು ಪ್ರಯತ್ನವನ್ನು ಮೆಚ್ಚಲೇಬೇಕಾಗುತ್ತದೆ. ಇದರಂತೆ ಐದು ಲಕ್ಷ ರು.ಗಳ ದರ ವ್ಯಾಪ್ತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ್ದಲ್ಲಿ ದೇಶದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

        ಹಿಟ್ ಆದಿತೇ?

        ಹಿಟ್ ಆದಿತೇ?

        ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಪರೀಕ್ಷೆಯಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿಗೆ ಎದುರಾಗಿರುವ ಹಿನ್ನಡೆಯ ಬಳಿಕ ದಟ್ಸನ್ ಗೊ ಪ್ಲಸ್ ಕಾರಿಗೂ ಇದೇ ತೊಂದರೆ ಕಾಡಲಿದೆಯೇ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ನೀಡಲಿದೆ.


Most Read Articles

Kannada
English summary
The team from Drivespark drove the latest MPV from Datsun, the Datsun GO+ in the twisty roads of Utrakand. Here is exclusive road test review Datsun MPV. 
Story first published: Friday, December 19, 2014, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X