ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ಮೆಂಟ್‌ನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಹೊಸ ಟ್ಯೂಸಾನ್?

ಹ್ಯುಂಡೈ ಕಂಪನಿಯು ತನ್ನ ಟ್ಯೂಸಾನ್ ಎಸ್‌ಯುವಿಯನ್ನು 2015ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಟ್ಯೂಸಾನ್ ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‌ಯುವಿಯಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಬಿಡುಗಡೆಯಾದ ನಂತರ ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು. ಇದಾದ ನಂತರ ಹ್ಯುಂಡೈ ಕಂಪನಿಯು ಟ್ಯೂಸಾನ್ ಎಸ್‌ಯುವಿಯನ್ನು ಹಲವು ಬಾರಿ ಅಪ್ ಡೇಟ್ ಮಾಡಿದೆ. ಟ್ಯೂಸಾನ್ ಎಸ್‌ಯುವಿಯ ಇತ್ತೀಚಿನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಈ ವರ್ಷದ ಆರಂಭದಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಹ್ಯುಂಡೈ ಕಂಪನಿಯು ಜುಲೈ ತಿಂಗಳಿನಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಈ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.22.3 ಲಕ್ಷಗಳಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ನಾವು ಇತ್ತೀಚಿಗೆ ಹೊಸ ಟ್ಯೂಸಾನ್ ಜಿಎಲ್‌ಎಸ್ 4 ಡಬ್ಲ್ಯೂಡಿ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಯ ಫಸ್ಟ್ ಡ್ರೈವ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಡಿಸೈನ್ ಹಾಗೂ ಸ್ಟೈಲ್

ಈ ಎಸ್‌ಯುವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್ಲೈಟ್ ಯುನಿಟ್, ಫಾಗ್‌ಲೈಟ್‌, ಹ್ಯಾಲೊಜೆನ್ ಬಲ್ಬ್ ಸೆಟಪ್ ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯ ಎಕ್ಸ್ ಟಿರಿಯರ್ ನಲ್ಲಿ ಲೈಟಿಂಗ್ ಗಳಿಗಾಗಿ ಪೂರ್ಣ ಪ್ರಮಾಣದ ಎಲ್ಇಡಿ ಸೆಟಪ್ ಗಳನ್ನು ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಇದರ ಜೊತೆಗೆ ಈ ಎಸ್‌ಯುವಿಯ ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಹೊಂದಿರುವ ದೊಡ್ಡ ಗ್ರಿಲ್‌ ಅನ್ನು ಕಾಣಬಹುದು. ಗ್ರಿಲ್ ಹಾಗೂ ಫಾಗ್ ಲ್ಯಾಂಪ್ ಗಳ ಸುತ್ತಲೂ ಪಿಯಾನೋ-ಬ್ಲಾಕ್ ಫಿನಿಷಿಂಗ್ ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಹೊಸ 18 ಇಂಚಿನ ಮಲ್ಟಿ-ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೀಡಲಾಗಿದೆ. ವ್ಹೀಲ್ ಗಳ ಸುತ್ತಲೂ ಬ್ಲಾಕ್ ಫಿನಿಷಿಂಗ್ ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯು ಈ ಸೆಗ್ ಮೆಂಟಿನಲ್ಲಿಯೇ ಕಡಿಮೆ ಎನ್ನಬಹುದಾದ 172 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಗಾತ್ರವು ಆಫ್ ರೋಡಿಂಗ್ ಗೆ ಸೂಕ್ತವಾಗಿಲ್ಲದಿದ್ದರೂ ಒರಟು ಭೂಪ್ರದೇಶಗಳಲ್ಲಿ ನೆರವಿಗೆ ಬರುತ್ತದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯ ಎರಡೂ ಬದಿಗಳಲ್ಲಿ ಯಾವುದೇ ಬ್ಯಾಡ್ಜ್‌ಗಳಿಲ್ಲ. ಟ್ಯೂಸಾನ್ ಎಸ್‌ಯುವಿಯು ಇಂಟಿಗ್ರೇಟೆಡ್ ಇಂಡಿಕೇಟರ್ ಹೊಂದಿರುವ ಬಾಡಿ ಒಆರ್ ವಿಎಂಗಳನ್ನು ಹೊಂದಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಎಸ್‌ಯುವಿಯ ರೂಫ್ ಕಪ್ಪು ಬಣ್ಣದಲ್ಲಿದ್ದು, ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದೆ. ಈ ಎಸ್‌ಯುವಿಯ ಹಿಂಭಾಗದಲ್ಲಿ ಬಾಡಿ ಹಾಗೂ ಬೂಟ್ ಲಿಡ್ ಗಾಗಿ ಎಲ್ಇಡಿ ಟೇಲ್‌ಲೈಟ್‌ಗಳನ್ನು ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಟೇಲ್‌ಲೈಟ್‌ ಪೂರ್ತಿಯಾಗಿ ಎಲ್‌ಇಡಿಯಾಗಿಲ್ಲ. ಟರ್ನ್ ಸಿಗ್ನಲ್ ಹಾಗೂ ರಿವರ್ಸ್ ಲೈಟ್ ಗಳು ಹ್ಯಾಲೊಜೆನ್‌ಗಳಾಗಿವೆ. ಈ ಎಸ್‌ಯುವಿಯ ಬೂಟ್‌ನ ಎರಡೂ ಬದಿಯಲ್ಲಿ ಟ್ಯೂಸಾನ್, ಹೆಚ್‌ಟಿಆರ್ ಎಸಿ (4x4) ಬ್ಯಾಡ್ಜ್‌ಗಳನ್ನು ಅಳವಡಿಸಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಬೂಟ್ ಲಿಡ್ ಎಲೆಕ್ಟ್ರಾನಿಕ್ ಆಗಿದ್ದು ಆರಾಮವಾಗಿ ಎಸ್‌ಯುವಿಯೊಳಗೆ ಪ್ರವೇಶಿಸಬಹುದು. ಈ ಎಸ್‌ಯುವಿಯು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಗಳನ್ನು ಹೊಂದಿದೆ. ಆದರೆ ಈ ಎಸ್‌ಯುವಿಯಲ್ಲಿ 360 ಡಿಗ್ರಿ ಕ್ಯಾಮೆರಾ ಸೆಟಪ್ ನೀಡಲಾಗಿಲ್ಲ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಇಂಟಿರಿಯರ್

ಹೊಸ ಟ್ಯೂಸಾನ್ ಎಸ್‌ಯುವಿಯು ವಿಶಾಲವಾದ ಕಪ್ಪು ಬಣ್ಣದ ಕ್ಯಾಬಿನ್ ಅನ್ನು ಹೊಂದಿದೆ. ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಹೊಂದಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು ಚಾಲಕನಿಗೆ ರಸ್ತೆಯ ಮೇಲೆ ಹೆಚ್ಚು ಗಮನ ಹರಿಸಲು ನೆರವಾಗುತ್ತವೆ. ಕ್ರೂಸ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ಸ್ಟೀಯರಿಂಗ್ ವ್ಹೀಲ್ ಬಲಭಾಗಕ್ಕೆ ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಟ್ಯೂಸಾನ್ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕಂಪನಿಯ ಬ್ಲೂ ಲಿಂಕ್ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಿರುವ ಇನ್ಫೋಟೆನ್ ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯಲ್ಲಿ ಡಿಜಿಟಲ್ ಕ್ಲಸ್ಟರ್ ಗೆ ಬದಲು ಟ್ಯಾಕೋಮೀಟರ್ ಹಾಗೂ ಸ್ಪೀಡೋಮೀಟರ್‌ಗಾಗಿ ಅನಲಾಗ್ ಡಯಲ್‌ಗಳನ್ನು ನೀಡಲಾಗಿದೆ. ಮುಂಭಾದಲ್ಲಿರುವ ಸೀಟುಗಳನ್ನು ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾಗಿದ್ದು, ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತವೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಹಿಂದೆ ಇರುವ ಸೀಟುಗಳು ಸಾಕಷ್ಟು ಹೆಡ್ ರೂಂ ಹಾಗೂ ಲೆಗ್ ರೂಂಗಳನ್ನು ಹೊಂದಿವೆ. ಈ ಎಸ್‌ಯುವಿಯು ದೊಡ್ಡ ಗಾತ್ರದ ಪನೋರಾಮಿಕ್ ರೂಫ್ ಅನ್ನು ಹೊಂದಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಹೊಸ ಟ್ಯೂಸಾನ್ ಎಸ್‌ಯುವಿಯು ಸುಮಾರು 500-ಲೀಟರ್ ಬೂಟ್ ಹೊಂದಿದೆ. ಮಧ್ಯದಲ್ಲಿರುವ 60:40 ಸ್ಪ್ಲಿಟ್ ಸೀಟುಗಳನ್ನು ಫೋಲ್ಡ್ ಮಾಡಿದರೆ ಹೆಚ್ಚಿನ ಲಗೇಜ್ ಇಡಬಹುದು.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಎಂಜಿನ್ ಹಾಗೂ ಹ್ಯಾಂಡ್ಲಿಂಗ್

ಟ್ಯೂಸಾನ್ ಎಸ್‌ಯುವಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. ಟಾಪ್-ಎಂಡ್ ಡೀಸೆಲ್ ಮಾದರಿಯಾದ ಜಿಎಲ್ಎಸ್ ನಲ್ಲಿ 4 ಡಬ್ಲ್ಯೂಡಿ ಆಯ್ಕೆಯನ್ನು ನೀಡಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎರಡೂ ಎಂಜಿನ್ ಗಳು 2-ಲೀಟರಿನ ಟರ್ಬೋಚಾರ್ಜ್ಡ್ ಯುನಿಟ್ ಗಳಾಗಿವೆ. ನಾವು ಡೀಸೆಲ್ ಮಾದರಿಯನ್ನು ಚಾಲನೆ ಮಾಡಿದೆವು. ಈ ಎಂಜಿನ್ 180 ಬಿಹೆಚ್ ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳಲ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯಲ್ಲಿ ಪ್ಯಾಡಲ್ ಶಿಫ್ಟರ್ ನೀಡಿಲ್ಲ. ಈ ಎಸ್‌ಯುವಿಯಲ್ಲಿರುವ ಸಸ್ಪೆಂಷನ್ ಸೆಟಪ್ ಮೃದುವಾಗಿದ್ದರೂ ಆರಾಮದಾಯಕ ಸವಾರಿಯನ್ನು ನೀಡುತ್ತದೆ. ಈ ಎಸ್‌ಯುವಿಯಲ್ಲಿರುವ ಡಿಫರೆನ್ಷಿಯಲ್-ಲಾಕ್ ನಾಲ್ಕು-ವ್ಹೀಲ್-ಡ್ರೈವ್‌ಗಳಿಗೆ ಬದಲಾಗಲು ಅನುವು ಮಾಡಿಕೊಡುತ್ತದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ನಗರ ಪ್ರದೇಶಗಳಲ್ಲಿ ಅದನ್ನು ಸ್ವಿಚ್ ಆಫ್ ಮಾಡಿದಾಗ ಮುಂಭಾಗದ ವ್ಹೀಲ್ ಗಳು ಮಾತ್ರ ಕಾರ್ಯ ನಿರ್ವಹಿಸಿ, ಸ್ವಲ್ಪ ಇಂಧನವನ್ನು ಉಳಿಸಲು ನೆರವಾಗುತ್ತದೆ. ಈ ಎಸ್‌ಯುವಿಯು ಆಟೋ ಹೋಲ್ಡ್, ಹಿಲ್-ಕ್ಲೈಂಬ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟ್ರಾಕ್ಷನ್ ಕಂಟ್ರೋಲ್ ನಂತಹ ಫೀಚರ್ ಗಳನ್ನು ಸಹ ಹೊಂದಿದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಈ ಎಸ್‌ಯುವಿಯು ಇಕೋ, ಕಂಫರ್ಟ್ ಹಾಗೂ ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಇಕೋ ಮೋಡ್‌ನಲ್ಲಿ ಹೆಚ್ಕಿನ ಫ್ಯೂಯಲ್ ಎಫಿಶಿಯನ್ಸಿಯನ್ನು ಪಡೆಯಬಹುದು. ಇದರಿಂದಾಗಿ ಥ್ರೊಟಲ್ ರೆಸ್ಪಾನ್ಸ್ ಹಾಗೂ ಸ್ಟೀಯರಿಂಗ್ ಹಗುರವಾಗುತ್ತವೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಹೆಚ್ಕಿನ ಥ್ರೊಟಲ್ ರೆಸ್ಪಾನ್ಸ್ ಬೇಕಾದಾಗ ಕಂಫರ್ಟ್ ಮೋಡ್ ಬಳಸಬಹುದು. ಸ್ಪೋರ್ಟ್ ಮೋಡ್‌ನಲ್ಲಿ ಎಸ್‌ಯುವಿಯು ಹೆಚ್ಚು ರೆಸ್ಪಾನ್ಸ್ ಮಾಡುವುದರ ಜೊತೆಗೆ ಸ್ಟೀಯರಿಂಗ್ ವ್ಹೀಲ್ ಕೂಡ ಗಟ್ಟಿಯಾಗುತ್ತದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಟ್ಯೂಸಾನ್ ಉತ್ತಮವಾದ ಮಿಡ್ ರೇಂಜ್ ಹೊಂದಿದ್ದರೂ ಟಾಪ್ ಎಂಡ್ ಅಷ್ಟೊಂದು ಉತ್ತಮವಾಗಿಲ್ಲ. ಟರ್ಬೊ ಪೆಟ್ರೋಲ್ ಎಂಜಿನ್ ಉತ್ತಮ ಟಾಪ್ ಎಂಡ್ ಹೊಂದುವ ಸಾಧ್ಯತೆಗಳಿವೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಡೀಸೆಲ್ ರೂಪಾಂತರದಲ್ಲಿ ಟಾರ್ಕ್ 1700 ಆರ್ ಪಿಎಂನಲ್ಲಿ ಆರಂಭವಾಗಿ, 4000 ಆರ್ ಪಿಎಂವರೆಗೂ ಇರಲಿದೆ. ಮ್ಯಾನುವಲ್ ಮೋಡ್‌ನಲ್ಲಿ ಅಪ್‌ಶಿಫ್ಟ್ ಮಾಡದಿದ್ದರೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಮೈಲೇಜ್ ಬಗ್ಗೆ ಹೇಳುವುದಾದರೆ ನಾವು ಈ ಎಸ್‌ಯುವಿಯನ್ನು ಕಡಿಮೆ ಅವಧಿಗೆ ಚಾಲನೆ ಮಾಡಿದ ಕಾರಣ ಪ್ರತಿ ಲೀಟರ್ ಡೀಸೆಲ್ ಗೆ ಎಷ್ಟು ಮೈಲೇಜ್ ನೀಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ದೊರೆಯಲಿಲ್ಲ. ಆದರೆ ಈ ಎಸ್‌ಯುವಿಯಲ್ಲಿರುವ 62-ಲೀಟರ್ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿದರೆ ಎಸ್‌ಯುವಿಯು ಸುಮಾರು 550 ಕಿ.ಮೀಗಳವರೆಗೆ ಚಲಿಸುತ್ತದೆ.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಆಗಿರುವ ಎಲ್ಲಾ ಬದಲಾವಣೆಗಳಿಂದಾಗಿ ಫೇಸ್‌ಲಿಫ್ಟೆಡ್ ಹ್ಯುಂಡೈ ಟ್ಯೂಸಾನ್ ಅದ್ಭುತವಾಗಿದೆ. ಈ ಎಸ್‌ಯುವಿಯಲ್ಲಿ ಪ್ಯಾಡಲ್-ಶಿಫ್ಟರ್‌, 360-ಡಿಗ್ರಿ ಕ್ಯಾಮೆರಾ ಸೆಟಪ್, ಪೂರ್ಣ ಪ್ರಮಾಣದ ಎಲ್ಇಡಿ ಲೈಟಿಂಗ್ ಸೆಟಪ್ ಹಾಗೂ ಇನ್ನೂ ಹೆಚ್ಕಿನ ಗ್ರೌಂಡ್ ಕ್ಲಿಯರೆನ್ಸ್ ಗಳನ್ನು ನೀಡಬೇಕಿತ್ತು.

ಹ್ಯುಂಡೈ ಟ್ಯೂಸಾನ್ ಫಸ್ಟ್ ಡ್ರೈವ್ ರಿವ್ಯೂ: ಮಿಡ್ ರೇಂಜ್ ಸೆಗ್ ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಹ್ಯುಂಡೈ ಟ್ಯೂಸಾನ್?

ಇವುಗಳನ್ನು ಹೊರತುಪಡಿಸಿದರೆ ಆರಾಮದಾಯಕವಾದ ಹಾಗೂ ವೇಗವಾದ ಎಸ್‌ಯುವಿಗಳನ್ನು ಖರೀದಿಸ ಬಯಸುವವರು ಈ ಫೇಸ್‌ಲಿಫ್ಟೆಡ್ ಟ್ಯೂಸಾನ್ ಎಸ್‌ಯುವಿಯನ್ನು ಖರೀದಿಸಬಹುದು.

Most Read Articles

Kannada
English summary
Hyundai Tucson First drive review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X