ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ಹ್ಯುಂಡೈ ವೆನ್ಯೂ ಸ್ಪೋರ್ಟ್

ಹ್ಯುಂಡೈ ಇಂಡಿಯಾ ಕಂಪನಿಯು ಈ ವರ್ಷದ ಆರಂಭದಲ್ಲಿ ತಮ್ಮ ಕಾಂಪ್ಯಾಕ್ಟ್ ಎಸ್‍ಯುವಿ ವೆನ್ಯೂ ಐಎಂಟಿ(ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಕ್ಲಚ್‌ಲೆಸ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ದೇಶದ ಮೊದಲ ಕಾರು ಎಂಬ ಖ್ಯಾತಿಗೆ ವೆನ್ಯೂ ಪಾತ್ರವಾಗಿದೆ. ಹೊಸ ಗೇರ್‌ಬಾಕ್ಸ್‌ನ ಪರಿಚಯದ ಜೊತೆಗೆ ಕಂಪನಿಯು ಹೊಸ 'ಸ್ಪೋರ್ಟ್' ರೂಪಾಂತರವನ್ನು ವೆನ್ಯೂ ಐಎಂಟಿಯೊಂದಿಗೆ ಇತ್ತೀಚೆಗೆ ಪರಿಚಯಿಸಿತು. ನಾವು ಇಲ್ಲಿ ವೆನ್ಯೂ ಕಾಂಪ್ಯಾಕ್ಟ್ ಸ್ಪೋರ್ಟ್' ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಹಾಗಾದರೆ ವೆನ್ಯೂ ಐಎಂಟಿ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಏಕೆ ಪರಿಚಯಿಸಿದರು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಆಟೋಮ್ಯಾಟಿಕ್ ಚಾಲನಾ ಅನುಭವವನ್ನು ಬಯಸುವವರಿಗಾಗಿ ಐಎಂಟಿ ಗೇರ್‌ಬಾಕ್ಸ್ ಮಾದರಿಯಲ್ಲಿ ಪರಿಚಯಿಸಿದ್ದಾರೆ. ವೆನ್ಯೂ ಐಎಂಟಿ ಮಾದರಿಯಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಇನ್ನು ಕ್ಲಚ್ ಹೊರತಾಗಿಯೂ ಈ ಹ್ಯುಂಡೈ ಸ್ಪೋರ್ಟ್ ರೂಪಾಂತರದ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿಯು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದಾರೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವಿನ್ಯಾಸ ಮತ್ತು ಸ್ಟೈಲಿಂಗ್

ಈ ಸ್ಪೂರ್ಟ್ ಮಾದರಿಯು ಮುಂಭಾಗವನ್ನು ಸಾಮಾನ್ಯ ರೂಪಾಂತರಗಳಿಂದ ಪ್ರತ್ಯೇಕಿಸಲು ಒಂದೇ ಒಂದು ಬದಲಾವಣೆ ಎಂದರೆ ಅದು ಬ್ಲ್ಯಾಕ್-ಔಟ್ ಗ್ರಿಲ್‌ನ ಎಡಗೈ ಭಾಗದಲ್ಲಿ ರೆಡ್ ಬ್ಯಾಡ್ಜಿಂಗ್ ಆಗಿದೆ. ಹೆಡ್‌ಲೈಟ್ ಯುನಿಟ್ ಮುಂಭಾಗದ ಬಂಪರ್‌ನಲ್ಲಿ ಇರಿಸಲಾಗಿದ್ದು, ಹೆಚ್ಚಿನ ಮತ್ತು ಕಡಿಮೆ ಬಿಮ್ ಹ್ಯಾಲೊಜೆನ್ ಪ್ರೊಜೆಕ್ಟರ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಕ್ಲಸ್ಟರ್‌ನ ಸುತ್ತಲೂ ಎಲ್‌ಇಡಿ ಡಿಆರ್‌ಎಲ್‌ಗಳಿವೆ, ಅವುಗಳು ಅತ್ಯಂತ ಪ್ರಕಾಶಮಾನವಾಗಿದೆ ಮತ್ತು ಹೆಡ್‌ಲೈಟ್ ಘಟಕಕ್ಕಿಂತ ಕೆಳಗಿರುತ್ತವೆ. ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಹ್ಯಾಲೊಜೆನ್ ಆಗಿರುತ್ತವೆ. ಟರ್ನ್ ಇಂಡಿಕೇಟರ್ ಗಳನ್ನು ಹೆಡ್‌ಲೈಟ್ ಮೇಲೆ ಇರಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಹ್ಯುಂಡೈ ವೆನ್ಯೂ ಸ್ಪೋರ್ಟ್ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ ವ್ಹೀಲ್ ಅರ್ಚರ್, ಬೋರ್ಡ್ ರೂಫ್ ರೈಲ್ ಮೇಲೆ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಈ ರೆಡ್ ಅಸೆಂಟ್ ಗಳಿಂದ ಸ್ಪೋರ್ಟ್ಸ್ ಆವೃತ್ತಿ ಎಂಬುವುದನ್ನು ಸುಲಭವಾಗಿ ಗುರುತಿಸಬಹುದು ಮತ್ತು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಇನ್ನು ಸಿ ಮತ್ತು ಡಿ ಪಿಲ್ಲರ್ ಗಳ ನಡುವೆ ಬಲಭಾಗದಲ್ಲಿ ಮಾತ್ರ 'ಸ್ಪೋರ್ಟ್' ಬ್ಯಾಡ್ಜ್ ಅನ್ನು ಅಳವಡಿಸಿದೆ. ಬ್ಯಾಡ್ಜ್ ಅನ್ನು ಹೊರತುಪಡಿಸಿ ಕಾರುಗಳ ಡೋರುಗಳು ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಮುಂಭಾಗದ ಡಿಸ್ಕ್ ಬ್ರೇಕ್‌ಗಳಿಗೆ ಕೆಂಪು ಕ್ಯಾಲಿಪರ್‌ಗಳನ್ನು ಸಹ ಪಡೆಯುತ್ತದೆ ಮತ್ತು ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವ್ಹೀಲ್ ಗಳು ನಿಜವಾಗಿಯೂ ಆಕರ್ಷಕವಾಗಿ ಕಾಣುತ್ತವೆ. ಕಾರಿನ ಟಯರ್ ಪ್ರೊಫೈಲ್ 215/60/ಆರ್16 ಆಗಿತ್ತು ಮತ್ತು ಎಂಆರ್‌ಎಫ್‌ಗಳ ಗ್ರಿಪ್ ಉತ್ತಮವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಕಾರಿನ ಹಿಂದಿನ ಪ್ರೊಫೈಲ್‌ಗೆ ಬಂದರೆ, ಅದು ಎಡಭಾಗದಲ್ಲಿ ಎಸ್‌ಎಕ್ಸ್ ರೂಪಾಂತರ ಬ್ಯಾಡ್ಜಿಂಗ್, ಮಧ್ಯದಲ್ಲಿ 'ವೆನ್ಯು' ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ. ಇದು ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿರುವುದರಿಂದ, ನೀವು ಬಲಭಾಗದಲ್ಲಿ 'ಟರ್ಬೊ' ಬ್ಯಾಡ್ಜ್ ಅನ್ನು ಹೊಂದಿದೆ, ಹಿಂಭಾಗದಲ್ಲಿ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಅಡಪ್ಟಿವ್ ಗೈಡ್ ಲೈನ್ ಅನ್ನು ಸಹ ಹೊಂದಿದ್ದು, ಇದು ನಿಮಗೆ ಯಾವುದೇ ತೊಂದರೆಯಿಲ್ಲದೆ ಬಿಗಿಯಾದ ಪಾರ್ಕಿಂಗ್ ಮಾಡಲು ಸಹಕಾರಿಯಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಕಾರಿನ ಒಳಾಂಗಣ ವಿನ್ಯಾಸ

ಈ ಕಾಂಪ್ಯಾಕ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸಾಕಷ್ಟು ವಿಶಾಲವಾದ ಕ್ಯಾಬಿನ್‌ನೊಂದಿಗೆ ನಿಮ್ಮನ್ನು ಸ್ವಾಗತಿಸಲಾಗುತ್ತದೆ. ಕ್ಯಾಬಿನ್ ಇನ್ನಷ್ಟು ದೊಡ್ಡದಾಗಿ ಕಾಣುವಂತೆ, ಕಾಂಪ್ಯಾಕ್ಟ್ ಎಸ್‌ಯುವಿ ಸನ್‌ರೂಫ್ ಅನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಒಳಭಾಗದಲ್ಲಿಯೂ ಸಹ ಸ್ಪೋರ್ಟ್ ಟ್ರಿಮ್ ಎಸಿ ವೆಂಟ್ಸ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಡಯಲ್‌ಗಳ ಸುತ್ತಲೂ ರೆಡ್ ಅಸೆಂಟ್ ಗಳನು ಒಳಗೊಂಡಿದೆ. ಕಾರಿನ ಸ್ಪೋರ್ಟ್‌ನೆಸ್ ಅನ್ನು ಇನ್ನಷ್ಟು ಹೆಚ್ಚಿಸಲು ಸೀಟುಗಳ ಮೇಲೆ ಮತ್ತು ಸ್ಟೀಯರಿಂಗ್ ವ್ಹೀಲ್ ಸುತ್ತಲೂ ರೆಡ್ ಸ್ಟಿಚಿಂಗ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಸ್ಟೀಯರಿಂಗ್ ವ್ಹೀಲ್ ಬಗ್ಗೆ ಹೇಳುವುದಾದರೆ, ಇದು ಲೆದರ್ ನಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ಚಾಲನೆಗೂ ಅತ್ಯಂತ ಆರಾಮದಾಯಕವಾಗಿದೆ. ಇದು ಸ್ಪೋರ್ಟಿ ಲುಕ್ ನೀಡುವ ಫ್ಲಾಟ್ ಬಾಟಮ್ ಅನ್ನು ಸಹ ಹೊಂದಿದೆ. ಎರಡೂ ಬದಿಯಲ್ಲಿ ಸ್ಟೀರಿಂಗ್ ಮೌಂಟಡ್ ಕಂಟ್ರೋಲ್ ಗಳಿವೆ. ಬಲಭಾಗದಲ್ಲಿ, ನೀವು ಇನ್ಫೋಟೈನ್ಮೆಂಟ್ ಸಿಸ್ಟಂಗಾಗಿ ಕಂಟ್ರೋಲ್ ಗಳನ್ನು ಹೊಂದಿದ್ದರೆ ಎಡಭಾಗದಲ್ಲಿ ಎಂಐಡಿ ಸ್ಕ್ರೀನ್ ಮತ್ತು ಕ್ರೂಸ್ ಕಂಟ್ರೋಲ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಕಂಫರ್ಟ್ ಬಗ್ಗೆ ಹೇಳುವುದಾದರೆ, ವೆನ್ಯೂ ಸ್ಪೋರ್ಟ್ ಮಾದರಿ ಡ್ಯುಯಲ್-ಟೋನ್ ಕಲರ್ ಸೀಟುಗಳನ್ನು ಹೊಂದಿದೆ. ಮುಂಭಾಗದ ಸೀಟುಗಳನ್ನು ನಮ್ಮ ಕೈಯಾರೆ ಮಾನ್ಯುವಲ್ ಆಗಿ ಹೊಂದಾಣಿಕೆ ಮಾಡಬೇಕಾಗುತ್ತದೆ. ಇನ್ನು ಬಿಗಿಯಾದ ತಿರುವುಗಳಲ್ಲಿ ಚಾಲಕರಿಗೆ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಎರಡನೇ ಸಾಲಿಗೆ ಬರುವಾಗ, ಮೂರು ಜನರಿಗೆ ಸ್ಥಳಾವಕಾಶ ಕಲ್ಪಿಸಲು ಸಾಕಷ್ಟು ಸ್ಥಳವಿದೆ ಮತ್ತು ಇಬ್ಬರು ಹಿಂಭಾಗದಲ್ಲಿ ಕುಳಿತಿದ್ದರೆ, ಸೆಂಟರ್ ಆರ್ಮ್‌ಸ್ಟ್ರೆಸ್ಟ್ ಅನ್ನು ನಿಯೋಜಿಸಬಹುದು ಮತ್ತು ಅದು ಕಪ್ ಹೋಲ್ಡರ್ ಸಹ ಹೊಂದಿದೆ. ಇನ್ನು ಈ ಮಾದರಿಯಲ್ಲಿರುವ ಎಸಿ ಅತ್ಯಂತ ಪರಿಣಾಮಕಾರಿಯಾಗಿದೆ ಮತ್ತು ಹಿಂಭಾಗದಲ್ಲಿ ಎಸಿ ವೆಂಟ್ಸ್ ಇರುವುದರಿಂದ ಕ್ಯಾಬಿನ್ ಅತ್ಯಂತ ವೇಗವಾಗಿ ತಣ್ಣಗಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಸ್ಪೋರ್ಟ್ 350-ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ, ಅದು ತುಂಬಾ ದೊಡ್ಡದಲ್ಲ ಅಥವಾ ತುಂಬಾ ಚಿಕ್ಕದಲ್ಲ. ಇದು ನಾಲ್ಕು ಜನರಿಗೆ ಸುಲಭವಾಗಿ ಸಾಮಾನ್ಯ ಲಗೇಜುಗಳನ್ನು ಇಡಬಲ್ಲದು. ಹಿಂಭಾಗದ ಸೀಟ್ 60:40 ವಿಭಜನೆಯನ್ನು ಹೊಂದಿದೆ ಮತ್ತು ನೀವು ಇಡಲು ಬಯಸುವ ಲಗೇಜುಗಳನ್ನು ಅವಲಂಬಿಸಿ, ಎರಡೂ ಬದಿಗಳನ್ನು ಕೆಳಕ್ಕೆ ಮಡಚಬಹುದು.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಕಾಂಪ್ಯಾಕ್ಟ್ ಎಸ್‌ಯುವಿ ಟ್ಯಾಕೋಮೀಟರ್ ಮತ್ತು ಸ್ಪೀಡೋಮೀಟರ್‌ಗಾಗಿ ಅನಲಾಗ್ ಡಯಲ್‌ಗಳನ್ನು ಪಡೆಯುತ್ತದೆ. ಅವುಗಳ ನಡುವೆ ಇರಿಸಲಾಗಿರುವ 4.5 ಇಂಚಿನ ಎಲ್‌ಸಿಡಿ ಎಂಐಡಿ ಸ್ಕ್ರೀನ್ ಟ್ರಿಪ್ ಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಕ್ಲಾಕ್ ಮತ್ತು ಇನ್ನಿತರ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಸ್ಪೋರ್ಟ್ ಮಾದರಿಯಲ್ಲಿ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂನ್ನು ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಮತ್ತು ಎಂಟು-ಸ್ಪೀಕರ್ ಸೆಟಪ್ ಅನ್ನು ಸಹ ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಂ ಕೆಳಗೆ ಕ್ಲೈಮೆಂಟ್ ಕಂಟ್ರೋಲ್ ಡಯಲ್‌ಗಳಿವೆ ಮತ್ತು ಸೆಂಟ್ರಲ್ ಕ್ಲೈಮೇಂಟ್ ಸೆಟ್ಟಿಂಗ್‌ಗಳಿಗಾಗಿ ಡಿಜಿಟಲ್ ರೀಡ್ ಔಟ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಎಂಜಿನ್ ಸಾಮಾರ್ಥ್ಯ

ವೆನ್ಯೂ ಸ್ಪೋರ್ಟ್ ಮಾದರಿಯಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, 6-ಸ್ಪೀಡ್ ಐಎಂಟಿ ಎಲೆಕ್ಟ್ರೋ-ಮ್ಯಾಕನಿಕಲ್ ಕ್ಲಚ್ ಅನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಡ್ರೈವರ್‌ ಕ್ಲಚ್ ಬದಲಿಸುವ ಅಗತ್ಯವಿಲ್ಲದ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಟೆಕ್ನಾಲಜಿಯು ಗೇರ್ ಲಿವರ್‌ನೊಂದಿಗೆ ಇಂಟೆನ್ಸಿಟಿ ಸೆನ್ಸಾರ್ ಬಳಸುತ್ತದೆ. ಈ ಸೆನ್ಸಾರ್ ಡ್ರೈವರ್ ಗೇರ್‌ ಬದಲಿಸುವಾಗ ಟ್ರಾನ್ಸ್ ಮಿಷನ್ ಕಂಟ್ರೋಲ್ ಯುನಿಟ್ ಗೆ ಸೂಚನೆ ನೀಡುತ್ತದೆ. ಇದರಿಂದಾಗಿ ಕ್ಲಚ್ ಅನ್ನು ಮ್ಯಾನುವಲ್ ಆಗಿ ನಿರ್ವಹಿಸುವ ಅಗತ್ಯವಿಲ್ಲ. ಇದರಿಂದಾಗಿ ನಗರದ ಟ್ರಾಫಿಕ್ ಜಾಮ್ ಸಮಯದಲ್ಲಿ ವಾಹನ ಚಾಲನೆ ಮಾಡುವಾಗ ಮೈಲೇಜ್ ಹಾಗೂ ಪರ್ಫಾಮೆನ್ಸ್ ಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಐಎಂಟಿ ಸ್ಪೋರ್ಟ್ ಮಾದರಿಯು ತಿರುವುಗಳಲ್ಲಿವು ಉತ್ತಮ ಹ್ಯಾಂಡ್ಲಿಂಗ್ ಕಾರ್ ಆಗಿದೆ. ಗುಂಡಿಗಳು ಮತ್ತು ಸ್ಪೀಡ್ ಹಬ್ಸ್ ನಲ್ಲಿ ಉತ್ತಮ ಸಸ್ಪೆಂಕ್ಷನ್ ಅನ್ನು ಹೊಂದಿದ್ದು, ಉದರಲ್ಲಿ 215 ವಿಭಾಗದ ಟಯರುಗಳು ಉತ್ತಮ ಗ್ರಿಪ್ ಅನ್ನು ನೀಡುತ್ತದೆ. ಬ್ರೇಕಿಂಗ್ ಸಿಸ್ಟಂ ಕೂಡ ಅತ್ಯುತ್ತಮವಾಗಿದೆ. ಈ ಮಾದರಿಯಲ್ಲಿ ಎಬಿಎಸ್ ಮತ್ತು ಸ್ವಚ್‍ಬಲ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಸಾಕಷ್ಟು ಬಾಡಿ ರೋಲ್ ಇಲ್ಲ, ಉತ್ತಮ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ, ವಿಶೇಷವಾಗಿ ಹೆಚ್ಚಿನ ವೇಗದಲ್ಲಿ. ಎಂಜಿನ್ ಅಥವಾ ಹೊರಗಿನಿಂದ ಕ್ಯಾಬಿನ್ ಒಳಗೆ ಕಡಿಮೆ ಶಬ್ದ ಬರುತ್ತಿರುವುದರಿಂದ ಕಾರು ಉತ್ತಮ ಎನ್ವಿಹೆಚ್ ಮಟ್ಟವನ್ನು ಸಹ ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಐಎಂಟಿ ಮಾದರಿಯನ್ನು ಎಸ್ಎಕ್ಸ್, ಎಸ್ಎಕ್ಸ್ (ಒ) ಹಾಗೂ ಎಸ್ಎಕ್ಸ್ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುವುದು. ಹ್ಯುಂಡೈ ವೆನ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರಾ ಎಕ್ಸ್‌ಯುವಿ 300, ಟಾಟಾ ನೆಕ್ಸಾನ್ ಮತ್ತು ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ಡ್ರೈವ್‌ಸ್ಪಾಕ್ ಅಭಿಪ್ರಾಯ

ಹ್ಯುಂಡೈ ವೆನ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ವೆನ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಸ್ಪೋರ್ಟ್ ಮಾದರಿಯನ್ನು ಪರಿಚಯಿಸಿರುವುದರಿಂದ ಹೆಚ್ಚಿನ ಗ್ರಾಹಕರ ಗಮನವನ್ನು ಸೆಳೆಯಬಹುದು. ಐಎಂಟಿ ಗೇರ್‌ಬಾಕ್ಸ್‌ನ ಪರಿಚಯಿಸಿರುವುದು ಹ್ಯುಂಡೈ ವೆನ್ಯೂ ಅತ್ಯುತ್ತಮ ಆಯ್ಕೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ರಸ್ತೆಗಿಳಿದ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಮ್ಯಾನುವಲ್ ಮತ್ತು ಐಎಂಟಿ ರೂಪಾಂತರದ ನಡುವಿನ ಬೆಲೆ ವ್ಯತ್ಯಾಸ ಕೇವಲ ರೂ,25 ಸಾವಿರಗಳಾಗಿದೆ. ವೆನ್ಯೂ ಒಂದು ಉತ್ತಮ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು ಉತ್ತಮ ಚಾಲನ ಅನುಭವ ನೀಡುತ್ತದೆ ಮತ್ತು ಪವರ್ ಫುಲ್ ಮಾದರಿಯಾಗಿದೆ. ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಖರೀದಿಸಲು ಬಯಸುವವರಿಗೆ ಹ್ಯುಂಡೈ ವೆನ್ಯೂ ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Hyundai Venue iMT Sport Trim Variant First Drive Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X