ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಬೊಲೆರೊ ಎಸ್‌ಯುವಿಯನ್ನು ಮೊದಲ ಬಾರಿಗೆ 2000ನೇ ಇಸವಿಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಹಲವು ಎಸ್‌ಯುವಿಗಳ ಪೈಪೋಟಿಯ ನಡುವೆಯೂ ಬೊಲೆರೊ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು. ಮಹೀಂದ್ರಾ ಕಂಪನಿಯು ಈಗ ಬೊಲೆರೊ ನಿಯೋ ಆವೃತ್ತಿಯನ್ನು ಬಿಡುಗಡೆಗೊಳಿಸುವ ಮೂಲಕ ಬೊಲೆರೊ ಕುಟುಂಬವನ್ನು ವಿಸ್ತರಿಸಿದೆ. ಬೊಲೆರೊ ನಿಯೋ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.48 ಲಕ್ಷಗಳಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ನಿಯೋ ಎಸ್‌ಯುವಿಯು ಮಹೀಂದ್ರಾ ಟಿಯುವಿ 300ಯ ನವೀಕರಿಸಿದ ಬಿಎಸ್ 6 ಆವೃತ್ತಿಯಾಗಿದೆ. ಈ ಎಸ್‌ಯುವಿಯನ್ನು ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಬಹುದು. ನಿಯೋ ಎಸ್‌ಯುವಿಯ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ನಾವು ಇತ್ತೀಚಿಗೆ ಮಹಾರಾಷ್ಟ್ರದ ಚಕನ್‌ನಲ್ಲಿರುವ ಮಹೀಂದ್ರಾ ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದಾಗ ಈ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಯ ಚಾಲನೆಯ ಬಗೆಗಿನ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ವಿನ್ಯಾಸ ಹಾಗೂ ಶೈಲಿ

ಬೊಲೆರೊ ನಿಯೋದ ಹೊಸ ಮಾದರಿಯು ಸ್ಟಾಂಡರ್ಡ್ ಬೊಲೆರೊದಂತೆಯೇ ಹಳೆಯ ಬಾಕ್ಸೀ ಸಿಲೂಯೆಟ್ ಅನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಗೆಹೊಸ ಆಕರ್ಷಣೆ ನೀಡಲು ಕೆಲವು ವಿನ್ಯಾಸಗಳಲ್ಲಿ ಬದಲಾವಣೆ ಮಾಡಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ನಿಯೋ ಎಸ್‌ಯುವಿಯು ಮಹೀಂದ್ರಾ ಟಿಯುವಿ 300ಯ ವಿನ್ಯಾಸದಂತಿದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಹೈ ಬೀಮ್ ಹಾಗೂ ಲೋ ಬೀಮ್'ಗಾಗಿ ರಿಫ್ಲೆಕ್ಟರ್ ಹೊಂದಿರುವ ಹೆಡ್‌ಲ್ಯಾಂಪ್ ನೀಡಲಾಗಿದೆ. ಕ್ಲಸ್ಟರ್‌ನ ಮೇಲ್ಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಸಹ ನೀಡಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯ ಮುಂಭಾಗದಲ್ಲಿ ಆರು ವರ್ಟಿಕಲ್ ಸ್ಲ್ಯಾಟ್‌ ಹೊಂದಿರುವ ಸಿಗ್ನೆಚರ್ ಮಹೀಂದ್ರಾ ಗ್ರಿಲ್ ನೀಡಲಾಗಿದೆ. ನಿಯೋ ಎಸ್‌ಯುವಿಯು ಮುಂಭಾಗದಲ್ಲಿ ಸಾಕಷ್ಟು ಕ್ರೋಮ್ ಅಂಶಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಬಂಪರ್ ಕೆಳ ಭಾಗದಲ್ಲಿ, ಫಾಗ್ ಲ್ಯಾಂಪ್ ನೀಡಲಾಗಿದೆ. ಈ ಎಸ್‌ಯುವಿಯು ಸೈಡ್ ಪ್ರೊಫೈಲ್'ನಲ್ಲಿ 15 ಇಂಚಿನ ಫೈವ್ ಸ್ಪೋಕ್ ಅಲಾಯ್ ವ್ಹೀಲ್, ಬಾಡಿ ಕಲರ್ ಒಆರ್‌ವಿ‌ಎಂಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಹೊಸ ಬೊಲೆರೊ ನಿಯೋ ಬಾಡಿ ಕ್ಲಾಡಿಂಗ್ ಅನ್ನು ಸಹ ಹೊಂದಿದೆ. ನಿಯೋ ಎಸ್‌ಯುವಿಯಲ್ಲಿ ಸ್ಪೋರ್ಟಿ ಲುಕ್ ಹೊಂದಿರುವ ಇಂಟಿಗ್ರೇಟೆಡ್ ರೇರ್ ಸ್ಪಾಯ್ಲರ್, ಅದರ ಕೆಳಗೆ ಎಲ್ಇಡಿ ಸ್ಟಾಪ್ ಲೈಟ್ ಬಾರ್ ನೀಡಲಾಗಿದೆ. ಟೇಲ್ ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹೊಂದಿದೆ. ಅದು ಎಕ್ಸ್ ಹಾಗೂ ಬೊಲೆರೊ ಆಕಾರದಲ್ಲಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯ ಟೇಲ್ ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್ ಪಕ್ಕದಲ್ಲಿ ಬೊಲೆರೊ ನಿಯೋ ಬ್ಯಾಡ್ಜಿಂಗ್ ಹಾಗೂ ಟೇಲ್ ಗೇಟ್ ಬಲಭಾಗದಲ್ಲಿ ಎನ್ 10 ಬ್ಯಾಡ್ಜಿಂಗ್ ಅನ್ನು ಕಾಣಬಹುದು. ಈ ಎಸ್‌ಯುವಿಯಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್'ಗಳನ್ನು ನೀಡಲಾಗಿದೆ. ಆದರೆ ಕ್ಯಾಮರಾ ನೀಡಿಲ್ಲ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಕಾಕ್‌ಪಿಟ್ ಹಾಗೂ ಇಂಟಿರಿಯರ್

ಬೊಲೆರೊ ನಿಯೋ ವಿಶಾಲವಾದ ಕ್ಯಾಬಿನ್ ಹೊಂದಿದೆ. ಈ ಎಸ್‌ಯುವಿಯ ಇಂಟಿರಿಯರ್ ಅನ್ನು ಇಟಲಿಯ ವಿಶ್ವ ವಿಖ್ಯಾತ ಆಟೋಮೋಟಿವ್ ಡಿಸೈನ್ ಕಂಪನಿಯಾದ ಪಿನಿನ್‌ಫರೀನಾ ವಿನ್ಯಾಸಗೊಳಿಸಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಡ್ಯಾಶ್‌ಬೋರ್ಡ್ ಡ್ಯುಯಲ್-ಟೋನ್ ಫಿನಿಶಿಂಗ್ ಹೊಂದಿದೆ. ಪ್ಲಾಸ್ಟಿಕ್‌ಗಳು ಡೋರ್ ಟ್ರಿಮ್ ಹಾಗೂ ಸೆಂಟರ್ ಕನ್ಸೋಲ್‌ನಲ್ಲಿ ಕಂಡುಬರುತ್ತವೆ. ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿ ಸ್ಟೋರೆಜ್ ಸ್ಪೇಸ್ ನೀಡಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯ ಇಂಟಿರಿಯರ್'ನಲ್ಲಿ 7 ಇಂಚಿನ ಟಚ್-ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಚಾರ್ಜಿಂಗ್ ಸಾಕೆಟ್‌, ಪವರ್ ವಿಂಡೋ ಸ್ವಿಚ್‌ಗಳನ್ನು ನೀಡಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಬೊಲೆರೊ ನಿಯೋ ಎಸ್‌ಯುವಿಯಲ್ಲಿರುವ ಸ್ಟೀಯರಿಂಗ್ ವ್ಹೀಲ್ ಅನ್ನು ಸಾಫ್ಟ್ ಟಚ್ ಮೆಟಿರಿಯಲ್'ಗಳಿಂದ ವ್ರಾಪ್ ಮಾಡಲಾಗಿದೆ. ಇದರಿಂದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಸ್ಟೀಯರಿಂಗ್ ವ್ಹೀಲ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಾಗೂ ಎಂಐಡಿ ಸ್ಕ್ರೀನ್ ಮೂಲಕ ಟಾಗಲ್ ಮಾಡುವ ಕೆಲವು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್'ಗಳನ್ನು ಸಹ ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿರುವ 3.5 ಇಂಚಿನ ಎಂಐಡಿ ಸ್ಕ್ರೀನ್ ಎಸ್‌ಯುವಿ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಈ ಕ್ಲಸ್ಟರ್ ಸೆಮಿ ಡಿಜಿಟಲ್ಆಗಿರುವುದರಿಂದ ಎಂಐಡಿ ಸ್ಕ್ರೀನ್ ಎರಡೂ ಬದಿಯಲ್ಲಿ ಟ್ಯಾಕೋಮೀಟರ್ ಹಾಗೂ ಸ್ಪೀಡೋಮೀಟರ್'ಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಕಂಫರ್ಟ್, ಪ್ರಾಕ್ಟಿಕಾಲಿಟಿ ಹಾಗೂ ಬೂಟ್ ಸ್ಪೇಸ್

ಡ್ರೈವರ್ ಹಾಗೂ ಪ್ಯಾಸೆಂಜರ್ ಸೀಟುಗಳು ಮ್ಯಾನುಯಲ್ ಅಡ್ಜಸ್ಟಬಲ್ ಆದರೂ ಡ್ರೈವರ್ ಸೀಟ್ ಹೈಟ್ ಅಡ್ಜಸ್ಟಬಲ್ ಹೊಂದಿದೆ. ಫ್ರಂಟ್ ಸೀಟುಗಳು ಆರಾಮದಾಯಕವಾಗಿದ್ದರೂ ಥೈ ಸಪೋರ್ಟ್ ನೀಡಲಾಗಿಲ್ಲ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಸ್ಟೀಯರಿಂಗ್ ವ್ಹೀಲ್ ಟಿಲ್ಟ್ ಆಯ್ಕೆಯನ್ನು ಮಾತ್ರ ಹೊಂದಿರುವುದರಿಂದ, ಸರಿಯಾದ ಡ್ರೈವಿಂಗ್ ಪೊಸಿಷನ್ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ.ಎರಡನೇ ಸಾಲು ಆರಾಮದಾಯಕವಾಗಿದ್ದು, ಉತ್ತಮವಾದ ಥೈ ಸಪೋರ್ಟ್ ಹೊಂದಿದೆ. ಇಬ್ಬರು ಪ್ರಯಾಣಿಸುವಾಗ ಸೆಂಟರ್ ಆರ್ಮ್‌ಸ್ಟ್ರೆಸ್ಟ್ ನಿಯೋಜಿಸಬಹುದು.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಬೊಲೆರೊ ನಿಯೋ ಹಿಂಭಾಗದಲ್ಲಿ ಪರಸ್ಪರ ಎದುರಾಗಿರುವ ಎರಡು ಜಂಪ್ ಸೀಟುಗಳನ್ನು ಹೊಂದಿದೆ. ಇವು ಮಕ್ಕಳಿಗೆ ಅಥವಾ ಕಡಿಮೆ ಎತ್ತರವನ್ನು ಹೊಂದಿರುವವರಿಗೆ ಸೂಕ್ತವಾಗಿವೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಲಗೇಜ್'ಗೆ ಹೆಚ್ಚಿನ ಸ್ಥಳ ಬೇಕಾದರೆ ಜಂಪ್‌ಸೀಟ್‌ಗಳನ್ನು ಫೋಲ್ಡ್ ಮಾಡಬಹುದು. ಈ ಎಸ್‌ಯುವಿಯು 384 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.ಹೆಚ್ಕು ಸ್ಪೇಸ್ ಬೇಕಾದರೆ ಎರಡನೇ ಸಾಲನ್ನೂ ಸಹ ಫೋಲ್ಡ್ ಮಾಡಬಹುದು.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಗಾತ್ರ

ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯು 3,995 ಎಂಎಂ ಉದ್ದ, 1,795 ಎಂಎಂ ಅಗಲ, 1,817 ಎಂಎಂ ಎತ್ತರ, 2,680 ಎಂಎಂ ವ್ಹೀಲ್‌ಬೇಸ್, 384 ಲೀಟರ್ ಬೂಟ್ ಸ್ಪೇಸ್, 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಎಂಜಿನ್ ಪರ್ಫಾಮೆನ್ಸ್ ಹಾಗೂ ಚಾಲನಾ ಅಭಿಪ್ರಾಯ

ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯಲ್ಲಿ 1.5 ಲೀಟರ್ ಎಮ್ಹಾಕ್ ಟರ್ಬೋ ಡೀಸೆಲ್ ಎಂಜಿನ್ 3,750 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಪವರ್ ಹಾಗೂ 2,250 ಆರ್‌ಪಿಎಂನಲ್ಲಿ 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಂಜಿನ್ ಅನ್ನು ಸ್ಟಾಂಡರ್ಡ್ ಆಗಿ 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಡೆಲಿವರಿ ಮೊದಲಿಗೆ ನಿಧಾನವೆನಿಸಿದರೂ ನಂತರ ವೇಗವಾಗುತ್ತದೆ. ಬೊಲೆರೊ ನಿಯೋ ಸಮರ್ಥ ಚಾಲನೆಗಾಗಿ ಇಕೋ ಡ್ರೈವ್ ಮೋಡ್ ಹಾಗೂ ಇಎಸ್‌ಎಸ್ ಹೊಂದಿರುವ ಮೈಕ್ರೊ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ನಿಯೋ ಎಸ್‌ಯುವಿಯು ಕಂಪನಿಯ ಮಲ್ಟಿ ಟೆರೈನ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದು ಹೆಚ್ಚು ಟ್ರಾಕ್ಷನ್'ನೊಂದಿಗೆ ವ್ಹೀಲ್'ಗೆ ಪವರ್ ಕಳುಹಿಸಲುಡಿಫರೆನ್ಷಿಯಲ್‌ನಂತೆ ಕಾರ್ಯನಿರ್ವಹಿಸುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಬೊಲೆರೊ ನಿಯೋ ರೇರ್ ವ್ಹೀಲ್ ಡ್ರೈವ್ ಸೆಟಪ್ ಹೊಂದಿದೆ. ಕ್ಲಚ್ ಹಗುರವಾಗಿರುವುದರಿಂದ ಗೇರ್‌ಗಳನ್ನು ಶಿಫ್ಟ್ ಮಾಡುವುದು ಸುಲಭವಾಗಿದೆ. ಸ್ಟೀಯರಿಂಗ್ ವ್ಹೀಲ್ ಹೆಚ್ಚು ರೆಸ್ಪಾನ್ಸ್ ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿರುವ ಬಾಡಿ ರೋಲ್ ಹೆಚ್ಚು ವೇಗದಲ್ಲಿ ಎಕ್ಸೆಸಿವ್ ಆಗುತ್ತದೆ. ಟಾರ್ಕ್ ಅಂಕಿ ಅಂಶಗಳು ಉತ್ತಮವಾಗಿರುವುದರಿಂದ ಕಡಿಮೆ ವೇಗದಲ್ಲಿ ಹೆಚ್ಚಿನಗೇರ್‌ನಲ್ಲಿದ್ದಾಗಲೂ ಎಸ್‌ಯುವಿ ವೇಗವನ್ನು ಹೆಚ್ಚಿಸುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಟರ್ಬೊ ಮಂದವಾಗಿರುವುದರಿಂದ ಇನ್ ಸ್ಟಾಂಟ್ ಆಕ್ಸಲರೇಷನ್ ಲಭ್ಯವಿಲ್ಲ. ತ್ವರಿತ ಅಕ್ಸಲರೇಷನ್'ಗಾಗಿ ಸರಿಯಾದ ವೇಗದಲ್ಲಿ ಸರಿಯಾದ ಗೇರ್‌ನಲ್ಲಿರಬೇಕು. ಬೊಲೆರೊ ನಿಯೋ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಬ್ರೇಕ್‌ಗಳು ಅತ್ಯುತ್ತಮವಾಗಿರುವುದರಿಂದ ನಿಯೋ ಎಷ್ಟೇ ವೇಗದಲ್ಲಿದ್ದರೂ ತಕ್ಷಣವೇ ನಿಲ್ಲುತ್ತದೆ. ಬೊಲೆರೊ ನಿಯೋದಲ್ಲಿ ಸಾಫ್ಟ್ ಸಸ್ಪೆಂಷನ್ ನೀಡಲಾಗಿದೆ. ಈ ಸಸ್ಪೆಂಷನ್ ಸೆಟಪ್'ನಿಂದಾಗಿ ಸ್ಟೀಯರಿಂಗ್ ಅನ್ನು ಎರಡೂ ಬದಿಗೆ ತಿರುಗಿಸಿದರೆ, ವಾಹನವು ಉರುಳುತ್ತದೆ ಎಂಬ ಭಾವನೆ ಮೂಡುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ನಾವು ಈ ಎಸ್‌ಯುವಿಯ ಮೈಲೇಜ್ ಅಂಕಿ ಅಂಶಗಳನ್ನು ಪರೀಕ್ಷಿಸಲು ಸಾಧ್ಯವಾಗಲಿಲ್ಲ. ಈ ಎಸ್‌ಯುವಿಯು ಸಿಟಿಯೊಳಗೆ ಪ್ರತಿ ಲೀಟರ್ ಡೀಸೆಲ್'ಗೆ 12 ಕಿ.ಮೀ ಹಾಗೂ ಹೈವೇಗಳಲ್ಲಿ 15 ಕಿ.ಮೀ ಮೈಲೇಜ್ ನೀಡುವ ನಿರೀಕ್ಷೆಗಳಿವೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷತೆ ಹಾಗೂ ಪ್ರಮುಖ ಫೀಚರ್'ಗಳು

ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯು ಹೈ ಸ್ಟ್ರೆಂಥ್ ಸ್ಟೀಲ್ ಬಾಡಿ ಶೆಲ್, ಚಾಲಕ ಹಾಗೂ ಸಹ ಚಾಲಕರಿಗಾಗಿ ಡ್ಯುಯಲ್ ಏರ್‌ಬ್ಯಾಗ್‌, ಎಬಿಎಸ್ ವಿಥ್ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಆಟೋಮ್ಯಾಟಿಕ್ ಡೋರ್ ಲಾಕ್, ಹೈಸ್ಪೀಡ್ ಅಲರ್ಟ್ ವಾರ್ನಿಂಗ್ ಸೇರಿದಂತೆ ಹಲವು ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಇದರ ಜೊತೆಗೆ ಈ ಎಸ್‌ಯುವಿಯು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 3.5-ಇಂಚಿನ ಎಂಐಡಿ ಡಿಸ್ ಪ್ಲೇ, ಅನಲಾಗ್ ಡಯಲ್‌, ಚಾಲಕ ಹಾಗೂ ಸಹ-ಚಾಲಕರಿಗಾಗಿ ಮುಂಭಾಗದ ಆರ್ಮ್‌ಸ್ಟ್ರೆಸ್ಟ್‌, ಎಸಿ ವೆಂಟ್'ಗಳಲ್ಲಿ ಕಲರ್ ಅಸೆಂಟ್, ಬ್ಲೂಟೂತ್, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ 6 ಸ್ಪೀಕರ್ ಆಡಿಯೊ ಸಿಸ್ಟಂಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬೊಲೆರೊ ನಿಯೋ ಎಸ್‌ಯುವಿಯು ಐದು ವಿಭಿನ್ನ ಬಣ್ಣಗಳಲ್ಲಿ ಹಾಗೂ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಬೊಲೆರೊ ನಿಯೋ ಎಸ್‌ಯುವಿಯಲ್ಲಿರುವ ಡೋರುಗಳು ಒಮ್ಮೆಗೇ ಮುಚ್ಚುವುದಿಲ್ಲ. ಅವುಗಳನ್ನು ಮುಚ್ಚಲು ಬಲ ಪ್ರಯೋಗಿಸಬೇಕಾಗುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಎನ್‌ವಿಹೆಚ್ ಹಾಗೂ ಇನ್ಸುಲೇಷನ್ ಲೆವೆಲ್ ಇನ್ನೂ ಉತ್ತಮವಾಗಿರಬೇಕಾಗಿತ್ತು. 3,000 ಆರ್‌ಪಿಎಂ ನಂತರ ಎಂಜಿನ್ ಬೇಯಿಂದ ಹೆಚ್ಚಿನ ಶಬ್ದ ಕ್ಯಾಬಿನ್‌ನೊಳಗೆ ಕೇಳುತ್ತದೆ. ಗೇರ್ ಲಿವರ್ ನ್ಯೂಟ್ರಲ್'ನಲ್ಲಿರುವಾಗ ಸಾಕಷ್ಟು ವೈಬ್ರೇಷನ್ ಉಂಟಾಗುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಡೋರ್ ಪ್ಯಾನೆಲ್'ಗಳು ಮತ್ತಷ್ಟು ದೃಢವಾಗಿರಬೇಕಾಗಿತ್ತು. ಬೊಲೆರೊ ನಿಯೋ ಅದ್ಭುತವಾದ ಪ್ರಾಯೋಗಿಕ ವಾಹನವಾಗಿದ್ದು, ಆಫ್-ರೋಡಿಂಗ್ ಅನ್ನು ಸಹ ಮಾಡಬಹುದು. ಈ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

ಮಹೀಂದ್ರಾ ಬೊಲೆರೊ ನಿಯೋ ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯು ರೇರ್ ವ್ಹೀಲ್ ಡ್ರೈವ್ ಸೆಟಪ್'ನೊಂದಿಗೆ ಲ್ಯಾಡರ್ ಆನ್ ಫ್ರೇಮ್ ಚಾಸಿಸ್'ನಿಂದ ಆಧಾರವಾಗಿದೆ. ಪ್ರಾಯೋಗಿಕವಾದ, ಒರಟಾದ ಹಾಗೂ ಮೊಜಿನ ಎಸ್‌ಯುವಿಯನ್ನು ಖರೀದಿಸಲು ಬಯಸಿದರೆ ಹೊಸ ಮಹೀಂದ್ರಾ ಬೊಲೆರೊ ನಿಯೋವನ್ನು ಖರೀದಿಸಬಹುದು.

Most Read Articles

Kannada
English summary
Mahindra Bolero Neo first drive review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X