ಮಾರುತಿ ಹೊಸ ವ್ಯಾಗನಾರ್ ವಿಮರ್ಶೆ: ಎತ್ತರದ ಹುಡುಗ

ಮಾರುತಿ ಸುಜುಕಿ ಫ್ಯಾಮಿಲಿಯ ಎತ್ತರದ ಹುಡುಗನೆಂಬ ಖ್ಯಾತಿಯ ವ್ಯಾಗನಾರ್ ಖರೀದಿಗೆ ಹೆಚ್ಚಿನ ಜನರು ಒಲವು ತೋರಿಸುತ್ತಿದ್ದಾರೆ. ಸಣ್ಣಕಾರುಗಳಲ್ಲಿ ವಿಶಾಲ ಸ್ಥಳಾವಕಾಶ ಮತ್ತು ಆರಡಿ ಎತ್ತರದ ವ್ಯಕ್ತಿಗಳೂ ಆರಾಮವಾಗಿ ಡ್ರೈವಿಂಗ್ ಮಾಡಬಹುದಾದ ಕಾರಾಗಿದೆ.

ಹೊಸ ವ್ಯಾಗನಾರ್ ಕಾರು ಸಿಟಿ ರಸ್ತೆಯಲ್ಲಿ 16.1 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಸುಮಾರು 20.8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 998ಸಿಸಿಯ ಮೂರು ಸಿಲಿಂಡರಿನ 1.0ಲೀಟರ್ ಐ3 ಪೆಟ್ರೋಲ್ ಕೆ10 ಬಿ ಎಂಜಿನ್ ಹೊಂದಿದೆ. ಇದರ ಆರಂಭಿಕ ದರ: 3.47 ಲಕ್ಷ ರು.

ವಿಶೇಷತೆಗಳು: ಹೊಸ ವ್ಯಾಗನಾರ್ ಆವೃತ್ತಿಯು ಸ್ಟೇಟ್ ಆಫ್ ಆರ್ಟ್ ತಂತ್ರಜ್ಞಾನದೊಂದಿಗೆ ಆಗಮಿಸಿದೆ. ವಿನ್ಯಾಸ ಹೆಚ್ಚು ಅತ್ಯಾಧುನಿಕವಾಗಿದೆ. ಹೆಡ್ ಲ್ಯಾಂಪ್ ದೊಡ್ಡದಾಗಿದೆ. ರಿಮೋಟ್ ಕೀಲೆಸ್ ಎಂಟ್ರಿ, ಏರ್ಗೊನಾಮಿಕ್ ಗೇರ್ ನಾಬ್ ಇತ್ಯಾದಿಗಳಿವೆ. ಇಂಟಿರಿಯರ್ ಸ್ಥಳಾವಕಾಶ ಬೊಂಬಾಟ್.

ಮಾರುತಿ ಸುಜುಕಿ ವ್ಯಾಗನಾರ್ ಕಾರು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ದೊರಕುತ್ತದೆ. ಇದು ಹೆಚ್ಚಿನವರಿಗೆ ಇಷ್ಟವಾಗಲಿಕ್ಕಿಲ್ಲ. ಸುರಕ್ಷತೆಯ ಫೀಚರುಗಳಾದ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಡ್ಯೂಯಲ್ ಏರ್ ಬ್ಯಾಗ್ ಕೇವಲ ಹೈಎಂಡ್ ವ್ಯಾಗನಾರ್ ಆವೃತ್ತಿಯಲ್ಲಿ ಮಾತ್ರವಿದೆ.

ಮಾರುತಿ ಸುಜುಕಿ ಆಲ್ ನ್ಯೂ ವ್ಯಾಗನಾರ್ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದರೆ ಎಲ್ ಎಕ್ಸ್ ಎಲ್ಎಕ್ಸ್ಐ ಮತ್ತು ಹೈಎಂಡ್ ಆವೃತ್ತಿ ವಿಎಕ್ಸ್ಐ. ಇನ್ನೊಂದು ಆವೃತ್ತಿ ಯಾವುದೆಂದು ಕೇಳುವಿರಾ? ಅದು ಸಿಎನ್ ಜಿ ಆವೃತ್ತಿ. ಈ ಕಾರು 5 ಸ್ಪೀಡಿನ ಮ್ಯಾನುಯಲ್ ಎಂಜಿನ್ ಹೊಂದಿದೆ.

ವ್ಯಾಗನಾರ್ ಪೂರ್ತಿ ವಿಮರ್ಶೆ ನೋಡಿರಿ.

ಇದನ್ನೂ ಓದಿ: ರಮ್ಯಳಿಗೆ ಒಲಿದ ಎತ್ತರದ ಹುಡುಗ-ವ್ಯಾಗನಾರ್

Most Read Articles

Kannada
English summary
Maruti Suzuki New WagonR Review. WagonR Price, Mileage, Design, specification, interior, exterior, engine. Read Maruti Suzuki WagonR review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X