ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್

ಬಿಎಂಡಬ್ಲ್ಯು ಇಂಡಿಯಾ ತನ್ನ 2 ಸೀರಿಸ್ ಗ್ರ್ಯಾನ್ ಕೂಪೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಸೀರಿಸ್ ಗ್ರ್ಯಾನ್ ಕೂಪೆ ಕಾರಿನ ಆರಂಭಿಕ ಬೆಲೆಯು ರೂ.39.3 ಲಕ್ಷಗಳಾದರೆ ಟಾಪ್ ಸ್ಪೆಕ್ ಬೆಲೆಯು ರೂ.41.4 ಲಕ್ಷ ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಭಾರತದಲ್ಲಿ ಈ ಹೊಸ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯು 3 ಸೀರಿಸ್ ಕಾರುಗಳಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಈ ಹೊಸ ಬಿಎಂಡಬ್ಲು ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ಡೀಸೆಲ್ ವೆರಿಯೆಂಟ್ ಕಾರನ್ನು ನಾವು ಒಂದೆರಡು ದಿನಗಳ ಕಾಲ ಡ್ರೈವ್ ಮಾಡಿ, ಅದರ ಅನುಭವ ಮತ್ತು ಈ ಐಷಾರಾಮಿ ಕಾರಿನ ಫೀಚರ್ ಗಳು, ಮ್ಯಾಕನಿಕಲ್ ಅಂಶ ಮತ್ತು ಕಾರಿನ ಫರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವ್ಯೂ ಮೂಲಕ ಇಲ್ಲಿ ನಿಮಗೆ ತಿಳಿಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ವಿನ್ಯಾಸ

ನಮಗೆ ಲಭಿಸಿದ ಕಾರು ಮಿಸಾನೊ ಬ್ಲೂ ಮೆಟಾಲಿಕ್ ಬಣ್ಣದಿಂದ ಕೂಡಿದ್ದು, ಈ ಬಣ್ಣದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಸೀರಿಸ್ ಗ್ರ್ಯಾನ್ ಕೂಪೆ ಕಾರು ಅಕರ್ಷಕ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಬಿಎಂಡಬ್ಲ್ಯು ಕಾರಿನಲ್ಲಿ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದ್ದು, ಇದು ಹೆಚ್ಚು ಅಕರ್ಷಕವಾಗಿ ಕಾಣುತ್ತದೆ. ಹೆಡ್ ಲೈಟ್ ಕೂಡ ಪ್ರಕಾಶಮಾನವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯು ಸೀರಿಸ್ ಗ್ರ್ಯಾನ್ ಕೂಪೆಯ ಬಂಪರ್ ನಲ್ಲಿ ಎಲ್ಇಡಿ ಫಾಗ್ ಲ್ಯಾಂಪ್ ಅನ್ನು ನೀಡಲಾಗಿದೆ. ಮುಂಭಾಗದ ಬಂಪರ್ ಬಗ್ಗೆ ಹೇಳುವುದಾದರೆ, ಇದು ಎಂ ಸ್ಪೋರ್ಟ್ ರೂಪಾಂತರವಾದ್ದರಿಂದ, ಮುಂಭಾಗದ ಬಂಪರ್ ಅತ್ಯಂತ ಸ್ಪೋರ್ಟಿ ಆಗಿ ಕಾಣುತ್ತದೆ ಮತ್ತು ಚಾನಲ್ ಏರ್ ಎರಡೂ ಬದಿಯಲ್ಲಿ ವೆಂಟ್ ಗಳನ್ನು ಹೊಂದಿವೆ. ಈ ಕಾರಿನ ಮುಂಭಾಗದ ಕಿಡ್ನಿ ಗ್ರಿಲ್ ನಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಪಡೆದಿದೆ. ಆದರೆ ಕ್ರೋಮ್ ಭಾಗವನ್ನು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಈ ಐಷಾರಾಮಿ ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಕಾರಿನಲ್ಲಿ 8 ಇಂಚಿನ ಡ್ಯುಯಲ್-ಟೋನ್ ಎಂ ಸ್ಪೋರ್ಟ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಅದು ನಿಜಕ್ಕೂ ಆಕರ್ಷಕವಾಗಿದ್ದು, ಕಾರಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಭಾಗದ ಫೆಂಡರ್ ನಲ್ಲಿ ಮತ್ತು ಬದಿಯಲ್ಲಿ ಎಂ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. 2 ಸೀರಿಸ್ ತೀಕ್ಷ್ಣವಾದ ಬಾಡಿಲೈನ್‌ಗೆ ಬದಲಾಗಿ, ಹೆಡ್‌ಲೈಟ್‌ನಿಂದ ಟೈಲ್‌ಲೈಟ್ ವರೆಗೆ ಚಲಿಸುವ ಸೂಕ್ಷ್ಮ ಲೈನ್ ಮತ್ತು ಕ್ರೀಸ್‌ಗಳನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ನಾವು ಮೊದಲೇ ಹೇಳಿದಂತೆ, ಇದು 2 ಸೀರಿಸ್ ಎಂ ಸ್ಪೋರ್ಟ್ ರೂಪಾಂತರವಾಗಿದೆ, ಇದು ಯಾವುದೇ ಕ್ರೋಮ್ ಅಲಂಕರಣವನ್ನು ಬದಿಗಳಲ್ಲಿ ಪಡೆಯುವುದಿಲ್ಲ. ಅದರ ಬದಲಾಗಿ ಇದು ವಿಂಡೋಗಳ ಸುತ್ತಲೂ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಕಾರು ಫ್ರೇಮ್‌ಲೆಸ್ ಡೋರುಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಕಾರಿನ ಹಿಂಭಾಗದಲ್ಲಿ ಒಂದೆರಡು ವಿಷಯಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ಮೊದಲನೆಯದಾಗಿ ನಯವಾಗಿ ಕಾಣುವ ಟೈಲ್‌ಲೈಟ್ ಮತ್ತು ಅದರೊಂದಿಗೆ ಕ್ರೋಮ್‌ನ ಬದಲಾಗಿ ಬ್ಲ್ಯಾಕ್-ಔಟ್ ಸ್ಟ್ರಿಪ್ ಆಗಿದೆ. ಎರಡನೆಯ ವಿಷಯವೆಂದರೆ ಕಾರಿನ ಸ್ಪೋರ್ಟಿ ಲುಕ್ ಆಗಿ ಕಾಣುವ ದೊಡ್ಡ ಡ್ಯುಯಲ್-ಟಿಪ್ ಎಕ್ಸಾಸ್ಟ್ ಗಳಾಗಿದೆ. ಈ ಎಕ್ಸಾಸ್ಟ್ ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದೆ. ಇವುಗಳ ನಡುವೆ ಹಿಂಭಾಗದ ಡಿಫ್ಯೂಸರ್ ಇದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಇದರಲ್ಲಿರುವ 220ಡಿ ಬ್ಯಾಡ್ಜಿಂಗ್ ಕ್ರೋಮ್‌ ಫಿನಿಶಿಂಗ್ ನಿಂದ ಕೂಡಿದೆ. ಇನ್ನು ಈ ಕಾರಿನ ಹಿಂಭಾಗದಲ್ಲಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಕಾರಿನಾದ್ಯಂತ ಪಾರ್ಕಿಂಗ್ ಸೆನ್ಸರ್‌ಗಳಿವೆ, ಇದು ಪಾರ್ಕಿಂಗ್ ಮಾಡುವಾಗಿ ಹೆಚ್ಚು ಸಹಕಾರಿಯಾಗಿರುತ್ತದೆ. ಇ ಕಾರಿನಲ್ಲಿ ಸ್ಲೋಂಪಿಗ್ ರೂಫ್‌ಲೈನ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇಂಟಿರಿಯರ್ ಮತ್ತು ಫೀಚರ್‌ಗಳು

ಇನ್ನು ಕಾರಿನ ಇಂಟಿರಿಯರ್ ಪ್ರೀಮಿಯಂ ಆಗಿದ್ದು, ಉತ್ತಮ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ. ಇದರಲ್ಲಿ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗಿದೆ. ಅದು ಕ್ಯಾಬಿನ್ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ ಅತ್ಯಾಧುನಿಕ ಫೀಚರ್‌ಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಡ್ಯಾಶ್‌ಬೋರ್ಡ್‌ನಲ್ಲಿನ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಆದರೆ ಇದರಲ್ಲಿ ಆಂಡ್ರಾಯ್ಡ್ ಆಟೋವನ್ನು ಪಡೆಯುವುದಿಲ್ಲ, ಬದಲಾಗಿ, ಇದು ಆಪಲ್ ಕಾರ್ ಪ್ಲೇ ಅನ್ನು ಮಾತ್ರ ಪಡೆಯುತ್ತದೆ. ಆಂಡ್ರಾಯ್ಡ್ ಆಟೋ ಫೀಚರ್ ಅನ್ನು ಕಂಪನಿಯು ನಂತರದ ದಿನಗಳಲ್ಲಿ ಸೇರಿಸುತ್ತದೆ ಎಂದು ನಾವು ಭಾವಿಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಈ ಕಾರಿನ ಇಂಟಿರಿಯರ್ ನಲ್ಲಿ ಸಂಪೂರ್ಣ ಡಿಜಿಟಲ್ ಆಗಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಕ್ಲಸ್ಟರ್ ಕಾರಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ ಮತ್ತು ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕಾನ್ಫಿಗರ್ ಮಾಡಬಹುದು. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿನ ಡಿಸ್ ಪ್ಲೇ ಕಾರಿನ ಮೋಡ್ ಅನ್ನು ಯಾವಾಗ ಬದಲಾಯಿಸಬಹುದು ಎಂಬುದನ್ನು ತಿಳಿಸುವ ಫೀಚರ್ ಅನ್ನು ಕೂಡ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಗೇರ್ ಲಿವರ್‌ನ ಮುಂದೆ ಇರಿಸಲಾಗಿರುವ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಅನ್ನು ಸಹ ಕಾರು ಪಡೆಯುತ್ತದೆ. ಇನ್ನು ಅಂಬಿಯೆಟ್ ಲೈಟಿಂಗ್ ಅನ್ನು ಡೋರ್ ಪ್ಯಾನೆಲ್ ಗಳಲ್ಲಿ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಅಂದವಾಗಿ ಸಂಯೋಜಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಈ ಐಷಾರಾಮಿ ಕಾರಿನ ಸ್ಟಿಯರಿಂಗ್ ವ್ಹೀಲ್ ಲೆದರ್ ನಿಂದ ಸುತ್ತಿಡಲಾಗಿದೆ. ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನು ಉತ್ತಮವಾಗಿ ಇರಿಸಲಾಗುತ್ತದೆ. ಸ್ಟೀಯರಿಂಗ್ ನಲ್ಲೇ ಹಲವು ಕಂಟ್ರೋಲ್ ಗಳನ್ನು ಹೊಂದಿರುವುದರಿಂದ ಚಾಲಕನಿಗೆ ಹೆಚ್ಚು ಸಹಕಾರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಈ ಕಾರಿನ ಸೀಟುಗಳ ಬಗ್ಗೆ ಹೇಳುವುದಾದರೆ, ಡ್ರೈವರ್ ಸೀಟ್ ಮಾತ್ರ ಎರಡು ಸೆಟ್ಟಿಂಗ್‌ಗಳೊಂದಿಗೆ ಸೀಟ್ ಮೆಮೊರಿ ಫಂಕ್ಷನ್ ಅನ್ನು ಪಡೆದಿದೆ ಮುಂಭಾಗದ. ಸೀಟುಗಳು ಆರಾಮದಾಯಕವಾಗಿದ್ದರೂ ಸ್ವಲ್ಪ ಹೆಚ್ಚು ಮೆತ್ತನೆಯಿರಬೇಕಿತ್ತು, ಬದಲಾಗಿ, ಅವು ಕಾರಿನ ಸ್ಪೋರ್ಟಿ ಸ್ವರೂಪವನ್ನು ಉಳಿಸಿಕೊಳ್ಳಲು ಸ್ವಲ್ಪ ಗಟ್ಟಿಯಾಗಿರುತ್ತವೆ

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಹಿಂಭಾಗದ ಸೀಟಿನಲ್ಲಿ ಎತ್ತರದ ಜನರಿಗೆ ಲೆಗ್ ರೂಂ ಮತ್ತು ಹೆಡ್ ರೂಂ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಿಂಭಾಗದ ಸೀಟ್ ಎರಡು ಜನರಿಗೆ ಸೂಕ್ತವಾಗಿದೆ. ಮೂರನೇ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ ಆದರೆ ಸೆಂಟರ್ ಟನಲ್ ಅಡಚಣೆಯಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಎಂಜಿನ್

ಹೊಸ ಬಿಎಂಡಬ್ಲ್ಯು ಸೀರಿಸ್ ಗ್ರ್ಯಾನ್ ಕೂಪೆ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 188 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಈ 2 ಸೀರಿಸ್ ಗ್ರ್ಯಾನ್ ಕೂಪೆ ಫ್ರಂಟ್-ವ್ಹೀಲ್ -ಡ್ರೈವ್ ಕಾರ್ ಆಗಿರುವುದರಿಂದ ಇದರಲ್ಲಿ ಸಾಕಷ್ಟು ಟಾರ್ಕ್ ಸ್ಟಿಯರ್ ಇರುತ್ತದೆ. ನೀವು ಟಾರ್ಕ್ ಸ್ಟಿಯರ್ ಮತ್ತು ಫ್ರಂಟ್-ವ್ಹೀಲ್-ಡ್ರೈವ್ ಸೆಟಪ್ ಕಾರಣದಿಂದಾಗಿ ಕಾರು ಎಲ್ಲೆಡೆ ಹೋಗುವುದರಿಂದ ನೀವು ಸ್ಟೀಯರಿಂಗ್ ವ್ಹೀಲ್ ಅನ್ನು ಸಾಕಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯು ಸೀರಿಸ್ ಗ್ರ್ಯಾನ್ ಕೂಪೆ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಇಕೋ ಮೋಡ್‌ನಲ್ಲಿ, ಸ್ಟೀರಿಂಗ್ ಹಗುರವಾಗಿರುತ್ತದೆ ಮತ್ತು ಥ್ರೊಟಲ್ ರೆಸ್ಪಾನ್ಸ್ ತುಂಬಾ ಮಂದಗತಿಯಾಗುತ್ತದೆ. ಆದರೆ ಉತ್ತಾಮ್ ಮೈಲೇಜ್ ನೀಡುತ್ತದೆ. ಕಂಫರ್ಟ್ ಮೋಡ್‌ನಲ್ಲಿ, ಸ್ಟೀಯರಿಂಗ್ ಮತ್ತು ಥ್ರೊಟಲ್ ರೆಸ್ಪಾನ್ಸ್ ಸ್ವಲ್ಪ ಸುಧಾರಿಸುತ್ತದೆ. ಇನ್ನು ಸ್ಪೋರ್ಟ್ಸ್ ಮೋಡ್‌ನಲ್ಲಿ, ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಇನ್ನು ಈ ಸೀರಿಸ್ ಗ್ರ್ಯಾನ್ ಕೂಪೆ ಕಾರಿನಲ್ಲಿ ಸ್ಪೀಡ್ ಆಗಿ ಹೈವೇಗಳಲ್ಲಿ ಸ್ಪೀಡ್ ಆಗಿ ಚಲಿಸಬೇಕದಾಗ ಅಥವಾ ಓವರ್ ಟೇಕ್ ಮಾಡುವಾಗ ಪ್ಯಾಡಲ್ ಶಿಫ್ಟರ್‌ಗಳು ನಿಜವಾಗಿಯೂ ಉಪಯುಕ್ತವಾಗಿವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಸಸ್ಪೆಂಕ್ಷನ್ ಸೆಟಪ್ ಸ್ವಲ್ಪ ಮೃದುವಾದ ಬದಿಯಲ್ಲಿದೆ ಮತ್ತು ಇದಕ್ಕೆ ಕಾರಣ ಕಂಪನಿಯು ಕಾರಿನ ಸ್ಪೋರ್ಟಿ ಅನುಭವದ ಜೊತೆಗೆ ಆರಾಮದಾಯಕ ಸವಾರಿಯನ್ನು ನೀಡಲು ಬಯಸಿದೆ. ಗುಂಡಿ ಮತ್ತು ಹಳ್ಳಗಳ ಜಾಗದಲ್ಲಿ ಚಲಿಸುವಾಗ ಒಳಗೆ ಅಷ್ಟು ಅನುಭವಾಗುವುದಿಲ್ಲ. ಆದರೆ ಕಾರು ಕಡಿಮೆ ಪ್ರೊಫೈಲ್ ಟೈರ್‌ಗಳಲ್ಲಿ ಓಡುತ್ತಿರುವುದರಿಂದ, ಅಲ್ಲಿ ಕೆಲವು ಶಬ್ದಗಳು ಹರಿದಾಡುತ್ತಿದ್ದವು. ಅಲ್ಲದೆ ಎನ್‌ವಿಹೆಚ್ ಮತ್ತು ಇನ್ಸ್ಲೇಷನ್ ಲೆವಲ್ ಅತ್ಯುತ್ತಮವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

2 ಸೀರಿಸ್ ಗ್ರ್ಯಾನ್ ಕೂಪೆ ಮೃದುವಾದ ಸಸ್ಪೆಂಕ್ಷನ್ ನಿಂದ ನೀವು ಸ್ವಲ್ಪ ಪ್ರಮಾಣದ ಬಾಡಿ ರೋಲ್ ಅನ್ನು ಅನುಭವವಾಗುತ್ತದೆ. ಇನ್ನು ಈ ಕಾರಿನ ಮೈಲೇಜ್ ಅಂಕಿ ಅಂಶಗಳ ಬಗ್ಗೆ ಹೇಳುವುದಾದರೆ, ಸಿಟಿಗಳಲ್ಲಿ 11.2 ರಿಂದ 12.6 ಕಿಮೀ.ಗಳ ನಡುವೆ ನೀಡುತ್ತದೆ. ಆದರೆ ನಾವು ಹೆದ್ದಾರಿ ಮೈಲೇಜ್ ಅನ್ನು ಕಾರಣಾಂತರಗಳಿಂದ ಪರಿಶೀಲಿಸಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಈ ಕಾರು 12 ರಿಂದ 14 ಕಿಮೀ ನಡುವ ಮೈಲೇಜ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ವೆರಿಯೆಂಟ್

ಡ್ರೈವ್‌ಸ್ಪಾಕ್ ಅಭಿಪ್ರಾಯ

ಹೊಸ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಜರ್ಮನ್ ಬ್ರ್ಯಾಂಡ್‌ನಿಂದ ಎಂಟ್ರಿ ಲೆವೆಲ್ ಕೊಡುಗೆಯಾಗಿದೆ. ಕಾರು ಆರಾಮದಾಯಕವಾಗಿದೆ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಈ ಬಿಎಂಡಬ್ಲು 2 ಸೀರಿಸ್ ಗ್ರ್ಯಾನ್ ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಸೆಡಾನ್ ಮಾದರಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
All-New BMW 2 Series Gran Coupe M Sport (First Drive) Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X