ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರವು ಕೂಡ ಮಾಲಿನ್ಯ ತಗ್ಗಿಸುವ ದೃಷ್ಠಿಯಿಂದ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡುತ್ತಿದೆ. ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೊಸ ಅಧ್ಯಾಯವನ್ನು ಆರಂಭಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಕಳೆದ ಒಂದೆರಡು ವರ್ಷಗಳಿಂದ ಹಲವು ಜನಪ್ರಿಯ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಹಕರು ಕೂಡ ಹೆಚ್ಚಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುವ ಸಂದರ್ಭದಲ್ಲಿ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇತ್ತೀಚೆಗೆ ಮರ್ಸಿಡಿಸ್ ಬೆಂಝ್ ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಇಕ್ಯೂಸಿ 400 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಮರ್ಸಿಡಿಸ್ ಬೆಂಝ್ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದ ದೇಶದ ಮೊದಲ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.99.3 ಲಕ್ಷಗಳಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಕಾರಿನ ಫಸ್ಟ್ ಡ್ರೈವ್ ಮಾಡಿದ್ದೇವೆ, ಈ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಕಾರಿನ ಡ್ರೈವಿಂಗ್ ಅನುಭವ, ಫೀಚರ್ಸ್ ಗಳು ಮತ್ತು ಕಾರಿನ ಹೆಚ್ಚಿನ ಕುತೂಹಲಕಾರಿ ವಿಷಯಗಳನ್ನು ನಾವು ನಿಮಗೆ ತಿಳುಸುತ್ತೇವೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಎಸ್‍ಯುವಿಯ ವಿನ್ಯಾಸ

ವಿನ್ಯಾಸ ಮೊದಲ ನೋಟದಲ್ಲಿ, ಇಕ್ಯೂಸಿಯ ವಿನ್ಯಾಸವು ಭಾರತದ ಕಂಪನಿಯ ಪೋರ್ಟ್ಫೋಲಿಯೊದಲ್ಲಿ ಮತ್ತೊಂದು ಎಸ್‍ಯುವಿಯೊಂದಿಗೆ ಬಹಳ ಪರಿಚಿತವಾಗಿದೆ ಎಂದು ನೀವು ಗಮನಿಸಬಹುದು. ಏಕೆಂದರೆ ಇಕ್ಯೂಸಿ ಮೂಲತಃ ಹೊರಭಾಗದ ಮತ್ತು ಒಳಾಂಗಣದಲ್ಲಿ ಮಾಡಿದ ಬದಲಾವಣೆಗಳು ಸ್ಟ್ಯಾಂಡರ್ಡ್ ಜಿಎಲ್ಸಿ ಮಾದರಿಯನ್ನು ಆಧರಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮುಂಭಾಗದಲ್ಲಿ, ನಿಮ್ಮ ಗಮನವನ್ನು ಸೆಳೆಯುವ ವಿಷಯವೆಂದರೆ ಫ್ಯೂಚರಿಸ್ಟಿಕ್ ಎಲ್ಇಡಿ ಹೆಡ್ ಲೈಟ್ ಯುನಿಟ್ ಗಳು ಒಳಗೆ ಕೆಲವು ಬ್ಲೂ ಅಸ್ಸೆಂಟ್ ಗಳನ್ನು ಹೊಂದಿದ್ದು ಅದು ಕಾರಿನ ಇವಿ ಸ್ವರೂಪವನ್ನು ಸೂಚಿಸುತ್ತದೆ. ಇನ್ನು ಈ ಎಸ್‍ಯುವಿಯ ಸೈಡ್ ಪ್ರೊಜೆಕ್ಟರ್ ಸೆಟಪ್ ಅನ್ನು ಸಹ ಹೊಂದಿವೆ. ವಾಹನದ ಗ್ರಿಲ್ ಸುತ್ತಲೂ ನೀವು ಸಾಕಷ್ಟು ಸ್ಟ್ಯಾಂಡರ್ಡ್ ಕ್ರೋಮ್ ಅನ್ನು ಸಹ ಪಡೆಯುತ್ತೀರಿ. ಕ್ರೋಮ್ ಅಸ್ಸೆಂಟ್ ಗಳ ಜೊತೆಗೆ ಕಾರು ಎಸ್‍ಯುವಿಯ ಒಟ್ಟಾರೆ ನೋಟಕ್ಕೆ ಪೂರಕವಾದ ಪಿಯಾನೋ ಬ್ಲ್ಯಾಕ್ ಟ್ರಿಮ್‌ಗಳನ್ನು ಸಹ ಪಡೆಯುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಬಂಪರಿನ ಕೆಳಗಿನ ಭಾಗವು ಕಾರಿನ ಬದಿಗಳಲ್ಲಿ ಏರ್ ವೆಂಟ್ಸ್ ದ್ವಾರಗಳನ್ನು ಒಳಗೊಂಡಿದೆ. ಅಲ್ಲದೆ ಎರಡೂ ಹೆಡ್‌ಲೈಟ್‌ಗಳನ್ನು ಸೇರುವ ಗ್ರಿಲ್‌ನ ಮೇಲ್ಭಾಗದಲ್ಲಿ, ವಾಹನದ ಡಿಆರ್‌ಎಲ್‌ಗಳಲ್ಲಿ ಸ್ಟ್ರಿಪ್ ಲೈಟ್ ಒಳಗೊಂಡಿದೆ. ಈ ಕಾರಿನ ಲೋ ಬೀಮ್ ಆನ್ ಮಾಡಿದಾಗ ಈ ಲೈಟ್ ಸ್ಟ್ರಿಪ್ ಆನ್ ಆಗುತ್ತದೆ, ಉಳಿದ ಸಮಯ ಅದು ಆಫ್ ಆಗಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಸೈಡ್ ಪ್ರೋಪೈಲ್ ಬಗ್ಗೆ ಹೇಳುವುದಾದರೆ, 20 ಇಂಚಿನ ಬೃಹತ್ ಮಲ್ಟಿಸ್ಪೋಕ್ ಅಲಾಯ್ ವ್ಹೀಲ್ ಗಳು ಅದ್ಭುತವಾಗಿ ಕಾಣುತ್ತವೆ ಮತ್ತು ಎಸ್‍ಯುವಿಯ ಒಟ್ಟಾರೆ ಗಾತ್ರದೊಂದಿಗೆ ಮತ್ತಷ್ತು ಆಕರ್ಷಕ ಲುಕ್ ಹೆಚ್ಚಿಸುತ್ತದೆ, ಐದು ಬ್ಲ್ಯಾಕ್ ಹೆಡ್‌ಲೈಟ್‌ಗಳಲ್ಲಿರುವ ಒಂದೇ ಬ್ಲೂ ಅಸ್ಸೆಂಟ್ ಗಳೊಂದಿಗೆ ಫಿನಿಶಿಂಗ್ ಹೊಂದಿದೆ. ಇನ್ನು 360 ಡಿಗ್ರಿ ಪಾರ್ಕಿಂಗ್ ಫೀಚರ್ ಗಾಗಿ ಒಆರ್‌ವಿಎಂಗಳನ್ನು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮುಂಭಾಗದ ಫೆಂಡರ್‌ನ ಎರಡೂ ಬದಿಯಲ್ಲಿ ಬ್ಯಾಡ್ಜ್ ಇದೆ, ಅದು ಇಕ್ಯೂಸಿ ಮತ್ತು 1886 ಇತಿಹಾಸ ಹೇಳುತ್ತದೆ. ಈ 1886 ಬ್ಯಾಡ್ಜ್ ಕಾರ್ಲ್ ಬೆಂಝ್ ಜನವರಿ 1886ರಲ್ಲಿ ಮೊದಲ ಕಾರನ್ನು ತಯಾರಿಸಿದರು: ಬೆಂಝ್ ಪೇಟೆಂಟ್ ಮೋಟರ್ ವ್ಯಾಗನ್, ಇದನ್ನು ಮೊದಲ ವಾಹನ ಎಂದು ಪರಿಗಣಿಸಲಾಗಿದೆ. ಈಗ ಇಕ್ಯೂಸಿ ಕಂಪನಿಯ ಮೊಟ್ಟಮೊದಲ ಆಲ್-ಎಲೆಕ್ಟ್ರಿಕ್ ವಾಹನವಾದ್ದರಿಂದ ಬ್ಯಾಡ್ಜ್ ಅನ್ನು ಕಾರಿನ ಮೇಲೆ ಹಾಕಲಾಗಿದೆ. ಹೊರಭಾಗದಲ್ಲಿ ಮಾತ್ರವಲ್ಲ 1886ರ ಬ್ಯಾಡ್ಜ್ ಮುಂಭಾಗದ ಸೀಟುಗಳಲ್ಲಿ ಮತ್ತು ಫ್ಲೋಟಿಂಗ್ ಡ್ಯಾಶ್‌ನಲ್ಲಿಯೂ ಇದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಎಸ್‍ಯುವಿಯ ಬದಿಗಳಲ್ಲಿ ಅತ್ಯಂತ ಕಡಿಮೆ ಬಾಡಿ ಲೈನ್ ಗಳನ್ನು ಹೊಂದಿದೆ ಮತ್ತು ಇದು ಜಿಎಲ್‌ಸಿಗೆ ಹೋಲುತ್ತದೆ. ಡೋರಿನ ಹ್ಯಾಂಡಲ್‌ಗಳಲ್ಲಿ ಮತ್ತು ವಿಂಡೋಗಳ ಸುತ್ತಲೂ ನೀವು ಕೆಲವು ಕ್ರೋಮ್ ಅಸ್ಸೆಂಟ್ ಗಳನ್ನು ನೋಡಬಹುದು. ಇದು ಸೈಡ್ ಸ್ಟೆಪ್ ಬೋರ್ಡ್ ಅನ್ನು ಸಹ ಪಡೆಯುತ್ತದೆ. ಅದು ವಾಹನದ ಒಳಗೆ ಪ್ರವೇಶಿಸಲು ಮತ್ತು ಹೊರಗೆ ಹೋಗುವುದಕ್ಕೆ ಹೆಚ್ಚು ಉಪಯುಕ್ತವಾಗಿದೆ. ಈ ಎಸ್‍ಯುವಿಯ ಮೇಲೆ ರೂಫ್ ರೈಲ್ ನೊಂದಿಗೆ ದೊಡ್ಡ ಪನೋರಮಿಕ್ ಸನ್‌ರೂಫ್ ಒಳಗೊಂಡಿದೆ., ಇವುಗಳು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ನಿಂದ ಕೂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಹೊರಭಾಗದ ಕೊನೆಯ ಬಿಟ್‌ಗೆ ಬರುತ್ತಿದೆ, ಅದು ಕಾರಿನ ಹಿಂಭಾಗದ ಕಾರ್ನರ್ ಎಸ್‌ಯುವಿ ಜಿಎಲ್‌ಸಿ ಮಾದರಿಗೆ ಹೋಲುತ್ತದೆ. ಇನ್ನು ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಸ್‍ಯುವಿಯು ನಯವಾಗಿ ಕಾಣುವ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿವೆ. ಅದು ಬೂಟ್‌ನಾದ್ಯಂತ ಚಲಿಸುವ ಲೈಟ್ ಸ್ಟ್ರಿಪ್ ನೊಂದಿಗೆ ಸೇರಿಕೊಳ್ಳುತ್ತದೆ. ಮತ್ತೆ,‘ಇಕ್ಯೂಸಿ 400' ಮತ್ತು ‘4 ಮ್ಯಾಟಿಕ್' ಬ್ಯಾಡ್ಜ್‌ಗಳ ರೂಪದಲ್ಲಿ ಸ್ವಲ್ಪ ಕ್ರೋಮ್ ಹೊಂದಿದ್ದು, ಬಂಪರ್‌ನ ಕೆಳಗಿನ ಭಾಗವು ದೂರದಿಂದ ಎಕ್ಸಾಸ್ಟ್ ಕಟೌಟ್‌ಗಳಂತೆ ಕಾಣುವ ಕ್ರೋಮ್ ಲೈಬನ್ ಗಳನ್ನು ಸಹ ಪಡೆಯುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಎಸ್‍ಯುವಿಯ ಫೀಚರ್‌ಗಳು

ಇನ್ನು ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಸ್‍ಯುವಿಯ ಒಳಬಾಗವನ್ನು ಪ್ರವೇಶಿಸುವಾಗ ಜಿಎಲ್‌ಸಿಯನ್ನು ಮತ್ತೊಮ್ಮೆ ನಿಮಗೆ ನೆನಪಿಸುತ್ತದೆ. ಕ್ಯಾಬಿನ್ ವಿಶಾಲವಾಗಿದೆ ಮತ್ತು ಬೃಹತ್ ಪನರೋಮಿಕ್ ಸನ್‌ರೂಫ್ ನಿಂದ ಗಾಳಿ ಒಳಗೆ ಪ್ರವೇಶಿಸುತ್ತದೆ. ಡ್ಯಾಶ್‌ಬೋರ್ಡ್ ಬ್ಲ್ಯಾಕ್ ಬಣ್ಣದ ಸಿಂಗಲ್ ಟೋನ್ ಫಿನಿಶಿಂಗ್ ಅನ್ನು ಹೊಂದಿದೆ. ಆದರೆ ಎಸಿ ವೆಂಟ್ಸ್ ಗಳು ಅಡ್ಡಲಾಗಿರುತ್ತವೆ. ಎಸಿ ವೆಂಟ್ಸ್ ಕಾಪರ್ ಶೇಡ್ ಪಿನಿಶಿಂಗ್ ಅನ್ನು ಹೊಂದಿದ್ದು, ಇದು ಆಕರ್ಷಕವಾಗಿ ಕಾಣುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಡ್ಯಾಶ್ ಬೋರ್ಡ್ ಮಧ್ಯ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದ್ದು, ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಚೆನ್ನಾಗಿ ಕಾಣುತ್ತದೆ ಮತ್ತು ವಾಹನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಮತ್ತೊಂದೆಡೆ, ಇನ್ಫೋಟೈನ್ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು ಮರ್ಸಿಡಿಸ್ ಎಂಬಿಎಕ್ಸ್ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇಕ್ಯೂಸಿ ಬರ್ಮಿಸ್ಟರ್ನಿಂದ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ, ಅದು ಪ್ರಯಾಣಿಕರನ್ನು ಮೋಡಿಮಾಡುವಂತಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಸ್ಟೀಯರಿಂಗ್ ವ್ಹೀಲ್ ಲೆದರ್ ನಿಂದ ಸುತ್ತಿ ಜಿಎಲ್‌ಸಿಯಿಂದ ಸಾಗಿಸಲಾಗಿದೆ. ಇದು ಉತ್ತಮ ಹಿಡಿತವನ್ನು ನೀಡುತ್ತದೆ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನಿರ್ವಹಿಸುವ ಮೌಂಟೆಡ್ ಕಂಟ್ರೋಲ್ ಗಳನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆ ಎರಡಕ್ಕೂ ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಸೀಟುಗಳು ಬ್ಲೂ ಮತ್ತು ಡಾರ್ಕ್ ಬಣ್ಣದ ಡ್ಯುಯಲ್-ಟೋನ್ ಶೇಡ್ ಫಿನಿಶಿಂಗ್ ಹೊಂದಿದ್ದು, ಇದು ಪ್ರಯಾಣಿಸುವಾಗ ಅತ್ಯಂತ ಆರಾಮದಾಯಕವಾಗಿವೆ. 1886ರ ಬ್ಯಾಡ್ಜ್ ಅನ್ನು ಕಾರಿನ ಹೆಡ್‌ರೆಸ್ಟ್ ಬಳಿ ಇರಿಸಲಾಗಿದೆ. ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಎಲೆಕ್ಟ್ರಿಕ್ ಆಗಿ ತಮ್ಮ ಸೀಟುಗಳನ್ನು ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಎರಡು ಸೀಟುಗಳು ಮಸಾಜ್ ಕಾರ್ಯವನ್ನು ಸಹ ಹೊಂದಿವೆ ಆದರೆ ಅದನ್ನು ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಮೂಲಕ ಅಕ್ಟಿವಿಟಿ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮಧ್ಯದ ಸಾಲು ಉತ್ತಮ ಥೈ ಸಪೂರ್ಟ್ ಅನ್ನು ಪಡೆಯುತ್ತದೆ ಮತ್ತು ತುಂಬಾ ಆರಾಮದಾಯಕವಾಗಿದೆ. ಇಕ್ಯೂಸಿ ಮೂರು ಹಂತದ ಕ್ಲೈಮೆಂಟ್ ಕಂಟ್ರೋಲ್ ಗಳನ್ನು ಪಡೆಯುತ್ತದೆ, ಅದು ಕ್ಯಾಬಿನ್ ಅನ್ನು ವೇಗವಾಗಿ ತಣ್ಣಗಾಗಿಸುತ್ತದೆ. ಸೆಂಟರ್ ಟ್ರಾನ್ಸ್ಮಿಷನ್ ಸ್ಪೇಸ್ ಸ್ವಲ್ಪ ಹೆಚ್ಚು ಮತ್ತು ಮಧ್ಯದ ಪ್ರಯಾಣಿಕರಿಗೆ ಸ್ವಲ್ಪ ಅನಾನುಕೂಲವಾಗಬಹುದು. ಎರಡನೇ ಸಾಲು ಇಬ್ಬರು ಪ್ರಯಾಣಿಕರಿಗೆ ಸೂಕ್ತವಾಗಿರುತ್ತದೆ. ಮುಂಭಾಗದ ಸೀಟುಗಳು ಹಿಂಭಾಗದಲ್ಲಿ ಚಾರ್ಜಿಂಗ್ ಸಾಕೆಟ್ಗಳು ಮತ್ತು ಕೋಟ್ ಹ್ಯಾಂಗರ್ ಅನ್ನು ಸಂಯೋಜಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಸ್‍ಯುವಿ ಸುಮಾರು 500-ಲೀಟರ್ ಗಳಷ್ಟು ಬೂಟ್ ಸ್ಪೇಸ್ ಅನ್ನು ಪಡೆಯುತ್ತದೆ ಮತ್ತು ಹೆಚ್ಚಿನ ಸಾಮಗ್ರಿಗಳು ಇದ್ದಾಗ ಅಥವಾ ಹೆಚ್ಚಿನ ಸ್ಪೇಸ್ ಬೇಕದಾಗ ಮಧ್ಯದ ಸಾಲಿನ ಸೀಟುಗಳನ್ನು ಮಡಚಬಹುದು. ಬೂಟ್ ಲಿಡ್ ಎಲೆಕ್ಟ್ರಾನಿಕ್ ಆಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಎಲೆಕ್ಟ್ರಿಕ್ ಮೋಟಾರ್

ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಎರಡೂ ಬದಿಯಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್ ಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದನ್ನು 80 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ಗೆ ಜೋಡಿಸಲಾಗುತ್ತದೆ ಮತ್ತು ಅದನ್ನು ಕಾರಿನ ಕೆಳಗೆ ಇರಿಸಲಾಗುತ್ತದೆ. ಇಕ್ಯೂಸಿಯಲ್ಲಿನ ಫುಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ 405 ಬಿಹೆಚ್‌ಪಿ ಪವರ್ ಮತ್ತು 765 ಎನ್ಎಂ ಗರಿಷ್ಠ ಪೀಕ್ ಅನ್ನು ಉತ್ಪಾದಿಸುತ್ತದೆ. ಈ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ 470 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಮರ್ಸಿಡಿಸ್ ಬೆಂಜ್ ಹೇಳಿಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ 5.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ಕ್ರಮಿಸುತ್ತದೆ. ಎಲೆಕ್ಟ್ರಿಕ್ ಎಸ್‌ಯುವಿ ಎಲೆಕ್ಟ್ರಾನಿಕ್ ಟಾಪ್ ಸ್ಪೀಡ್ ಅನ್ನು 200 ಕಿ.ಮೀಗೆ ಸೀಮಿತಗೊಳಿಸಿದೆ. ಗೇರುಗಳನ್ನು ಬದಲಾಯಿಸಲು ಪ್ಯಾಡಲ್ ಶಿಫ್ಟರ್‌ಗಳನ್ನು ಬಳಸಲಾಗುವುದಿಲ್ಲ, ಏಕೆಂದರೆ ಅವು ಯಾವುದೂ ಇಲ್ಲ, ಆದರೆ ಲೋ, ಮೀಡಿಯಂ ಮತ್ತು ಹೈ ಸೆಟ್ಟಿಂಗ್ ಅನ್ನು ಸ್ವಿಚ್-ಆಫ್ ಮಾಡುವ ಆಯ್ಕೆಯೂ ಇದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಡ್ರೈವಿಬಿಲಿಟಿ ಬಗ್ಗೆ ಹೇಳುವುದಾದರೆ, ಎಸ್‍ಯುವಿ ಡ್ರೈವ್ ಮಾಡಲು ಅತ್ಯುತ್ತಮ ಅನುಭವನ್ನು ನೀಡುತ್ತದೆ. ತ್ವರಿತವಾಗಿ ಲಭ್ಯವಿರುವ ಟಾರ್ಕ್ ಪ್ರಮಾಣವು ಮತ್ತಷ್ಟು ವೇಗದಲ್ಲಿ ಚಾಲನೆ ಮಾಡಲು ಪ್ರೋತ್ಸಾಹಿಸುವಂತಿದೆ. ಮೋಟರ್‌ಗಳು ನೇರವಾಗಿ ಚಕ್ರಗಳಿಗೆ ಸಂಪರ್ಕಗೊಂಡಿರುವುದರಿಂದ ಟಾರ್ಕ್ ಹೆಚ್ಚು ತ್ವರಿತವಾಗಿದೆ. ಇನ್ನು ಇಕೋ, ಕಂಫರ್ಟ್, ಡೈನಾಮಿಕ್ ಮತ್ತು ಇಂಡಿವಿಚ್ಯೂಲ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿವೆ. ಇಕೋ ಮೋಡ್ ನಲ್ಲಿ ಥ್ರೊಟಲ್ ಪ್ರತಿಕ್ರಿಯೆ ಮತ್ತು ಸ್ಟೀಯರಿಂಗ್ ವೀಲ್ ತುಂಬಾ ಹಗುರವಾಗಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮತ್ತೊಂದೆಡೆ, ಡೈನಾಮಿಕ್ ಮೋಡ್‌ನಲ್ಲಿ, ಥ್ರೊಟಲ್ ಪ್ರತಿಕ್ರಿಯೆ ತೀಕ್ಷ್ಣವಾಗಿರುತ್ತದೆ . ಸ್ಟೀಯರಿಂಗ್ ವ್ಹೀಲ್ ಕೂಡ ಸ್ವಲ್ಪ ಭಾರವಾಗಿರುತ್ತದೆ. ಉತ್ತಮವಾದದ್ದು ಕಂಫರ್ಟ್ ಮೋಡ್, ಇದು ಇತರ ಎರಡು ಮೋಡ್ ಗಳ ನಡುವೆ ಸಮತೋಲನವನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇಕ್ಯೂಸಿಯಲ್ಲಿ ಸಸ್ಪೆಂಕ್ಷನ್ ಸೆಟಪ್ ಎರಡು ವಿಷಯಗಳನ್ನು ಒಳಗೊಂಡಿದೆ, ಮುಂಭಾಗದಲ್ಲಿ ನಿಯಮಿತ ಕಾಯಿಲ್-ಓವರ್ಗಳು ಮತ್ತು ಹಿಂಭಾಗದಲ್ಲಿ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದರರ್ಥ ಎರಡನೇ ಸಾಲಿನಲ್ಲಿರುವ ಆರಾಮ ಮಟ್ಟವು ಮುಂಭಾಗಕ್ಕಿಂತ ಸ್ವಲ್ಪ ಉತ್ತಮವಾಗಿರುತ್ತದೆ. ಕಾರಿನ ಮೇಲೆ ಬಾಡಿ ರೋಲ್ ತುಂಬಾ ಕಡಿಮೆ ಇದೆ. ಆದರೆ ಕ್ರೂಸ್ ರಸ್ತೆಗಳಲ್ಲಿ ಈ ಎಸ್‍ಯುವಿಯು ಉತ್ತಮವಾ ಕಂಟ್ರೋಲ್ ಗಳೊಂದಿಗೆ ಚಲಿಸುತ್ತದೆ. ಎಸ್‌ಯುವಿ 142 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ, ಇದು ದೊಡ್ಡ ಹಂಪ್ ಗಳು ಮತ್ತು ದೊಡ್ಡ ಗುಂಡಿಗಳಲ್ಲಿ ನಿಧಾನವಾಗಿ ಸಾಗಬೇಕು. ಅದೇ ವೇಗದಲ್ಲಿ ಕೆಳಭಾಗ ಸ್ಪರ್ಶಿಸಬಹುದು.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಇಕ್ಯೂಸಿಯಲ್ಲಿ ಟೈರ್ ಪ್ರೊಫೈಲ್ 255/45/ಆರ್20 ಆಗಿದೆ, ಇದು ಸಾಕಷ್ಟು ಅಗಲವಾಗಿರುತ್ತದೆ ಮತ್ತು ಅತ್ಯುತ್ತಮವಾದ ಹಿಡಿತವನ್ನು ನೀಡುತ್ತದೆ. ಇದು ಎಲೆಕ್ಟ್ರಿಕ್ ವಾಹನವಾದ್ದರಿಂದ, ರಸ್ತೆ ಮತ್ತು ಟೈರ್ ಶಬ್ದವನ್ನು ಹೊರತುಪಡಿಸಿ ನೀವು ಚಲಿಸುವಾಗ ಯಾವುದೇ ಶಬ್ದವಿಲ್ಲ. ಕಾರು ಚಲಿಸುವಾಗ ಕ್ಯಾಬಿನ್ ಒಳಗೆ ಅತ್ಯಂತ ಶಾಂತಿಯುತವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈಗ ಇಕ್ಯೂಸಿ 400 ಮಲ್ಟಿಪಲ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದು ವಾಲ್ ಸಾಕೆಟ್ ಚಾರ್ಜರ್ ಆಗಿದ್ದು ಅದು ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. . ಮುಂದಿನದು ಎಸಿ ಚಾರ್ಜರ್ ಎಸ್ಯುವಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಕೊನೆಯದು ಸ್ಪೀಡ್ ಚಾರ್ಜರ್ ಆಗಿದ್ದು ಅದು ಸಂಪೂರ್ಣವಾಗಿ ಚಾರ್ಜ್ ಆಗಲು ಕೇವಲ 90 ನಿಮಿಷಗಳು ಅಥವಾ 1 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸ್ಪೀಡ್ ಚಾರ್ಜಿಂಗ್ ಆಯ್ಕೆಗಾಗಿ, ನೀವು ವಿಶೇಷ ಅನುಮತಿ ಮತ್ತು ಹೆವಿ ಡ್ಯೂಟಿ ಲೈನ್ಸ್ ಪಡೆಯಬೇಕಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಡ್ರೈವ್‌ಸ್ಪಾಕ್ ಅಭಿಪ್ರಾಯ

ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ ಜಿಎಲ್ಸಿ ರೂಪಾಂತರವನ್ನು ಆಧರಿಸಿದ್ದರೂ, ಇದು ಖಂಡಿತವಾಗಿಯೂ ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ ಮತ್ತು ಅದಕ್ಕೆ ಕಣ್ಮನ ಸೆಳೆಯುವ ಲುಕ್ ಅನ್ನು ಹೊಂದಿದೆ. ಇಕ್ಯೂಸಿ 400 ಭಾರತೀಯ ಮಾರುಕಟ್ಟೆಯಲ್ಲಿ ಬ್ರಾಂಡ್‌ನಿಂದ ಪಡೆದ ಮೊದಲ ಫುಲ್ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಈ ಎಸ್‍ಯುವಿಗೆ ಭಾರತದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ, ಆದರೆ ಇದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಆಡಿ ಇ-ಟ್ರಾನ್ ಎಸ್‌ಯುವಿಗೆ ಪೈಪೋಟಿ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇಕ್ಯೂಸಿ ಹಲವಾರು ಫೀಚರ್ ಗಳು ಮತ್ತು ಉತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಪೂರ್ಣ ಪ್ರಮಾಣದ 4X4 ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ವಾಹನಕ್ಕೆ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಸಿಗಬಹುದೆಂದು ನಾವು ಬಯಸಿದ್ದೆವು, ಇದಲ್ಲದೆ ಬೇರೆ ನೆಗೆಟಿವ್ ಅಂಶಗಳು ಏನೂ ಇಲ್ಲ. ಆದ್ದರಿಂದ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ಮತ್ತು ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವವರಿಗೆ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Mercedes-Benz EQC 400 4MATIC First Drive Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X