ನಿಜಕ್ಕೂ ನಿಸ್ಸಾನ್ ಟೆರನೊ ಗೇಮ್ ಚೇಂಜರ್ ಆಗಲಿದೆಯೇ?

By Nagaraja

ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರನೊ ಈಗಾಗಲೇ ಭಾರತದಲ್ಲಿ ಭರ್ಜರಿ ಅನಾವರಣ ಕಂಡಿದೆ. ಇದರ ಬೆನ್ನಲ್ಲೇ ಟೆರನೊ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಪ್ರಾರಂಭವಾಗಿದ್ದು, ಅಕ್ಟೋಬರ್ ತಿಂಗಳಾರಂಭದಿಂದ ವಿತರಣೆ ಕಾರ್ಯ ಕೂಡಾ ನಡೆಯಲಿದೆ.

ಎಂಜಿನ್ ಮಾನದಂಡಗಳಲ್ಲಿ ಡಸ್ಟರ್ ಸಾಮ್ಯತೆ ಪಡೆದುಕೊಂಡಿದ್ದರೂ ನಿಸ್ಸಾನ್ ಟೆರನೊ ರೆನೊಕ್ಕಿಂತ ಸಂಪೂರ್ಣ ವಿಭಿನ್ನ ವಿನ್ಯಾಸವನ್ನು ಪಡೆದುಕೊಂಡಿದೆ. 10 ಲಕ್ಷ ರು.ಗಳ ಬಜೆಟ್‌ನೊಳಗೆ ಆಗಮನವಾಗಲಿರುವ ಟೆರನೊ, ನಿಜಕ್ಕೂ ಭಾರತೀಯ ರಸ್ತೆಗಳಲ್ಲಿ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆಯೇ ಎಂಬುದು ಸದ್ಯ ಎದ್ದಿರುವ ಪ್ರಶ್ನೆ.

ಒಂದೆಡೆ ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಈಗಾಗಲೇ ದೇಶದ ರಸ್ತೆಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಇಕೊಸ್ಪೋರ್ಟ್ ವಿತರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಹಾಗೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್ ನಿಸ್ಸಾನ್ ಟೆರನೊ ಕಾರನ್ನು ಇತರ ಸ್ಪರ್ಧಿಗಳಿಗಿಂತ ಭಿನ್ನವಾಗಿಸಲಿದೆ.

ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲೂ ಟೆರನೊ ಲಭ್ಯವಾಗಲಿದೆ. ಇಂದಿನ ಈ ಲೇಖನದ ಮೂಲಕ ನಿಸ್ಸಾನ್ ಕಾರಿನ ವೈಶಿಷ್ಟ್ಯ, ವೆರಿಯಂಟ್, ಎಂಜಿನ್, ವಿನ್ಯಾಸ ಹಾಗೂ ಮೈಲೇಜ್ ಬಗ್ಗೆ ಚರ್ಚಿಸಲಿದ್ದೇವೆ.

ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ

ಮುಂದಿನ ಸ್ಲೈಡರನ್ನು ಒಂದೊಂದಾಗಿ ಕ್ಲಿಕ್ಕಿಸುವ ಮೂಲಕ ನಿಸ್ಸಾನ್ ಟೆರನೊ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ವಿವರಣೆಯನ್ನು ಪಡೆದುಕೊಳ್ಳಿರಿ...

ಆಯಾಯ

ಆಯಾಯ

ಉದ್ದ: 4,331 ಎಂಎಂ

ಅಗಲ: 1822 ಎಂಎಂ

ಎತ್ತರ: 1671 ಎಂಎಂ

ವೀಲ್ ಬೇಸ್: 2673 ಎಂಎಂ

ಗ್ರೌಂಡ್ ಕ್ಲಿಯರನ್ಸ್: 205 ಎಂಎಂ

ಟರ್ನಿಂಗ್ ರೇಡಿಯಸ್: 5.2 ಮೀಟರ್ (ಡಸ್ಟರ್‌ಗೆ ಸಮಾನ)

ಹೊರಮೈ ವಿನ್ಯಾಸ

ಹೊರಮೈ ವಿನ್ಯಾಸ

ಮೊದಲ ನೋಟಕ್ಕೆ ಡಸ್ಟರ್‌ಗೆ ಸಮಾನ ವಿನ್ಯಾಸವನ್ನು ಟೆರನೊ ಪಡೆದುಕೊಂಡಿದೆ ಎಂದು ಅನಿಸಿದರೂ ಸಾಕಷ್ಟು ಬದಲಾವಣೆ ನೀಡಲು ಪ್ರಯಾಣಿಕ ಪ್ರಯತ್ನ ಮಾಡಲಾಗಿದೆ. ಪ್ರೀಮಿಯಂ ಲುಕ್ ನೀಡುವ ಸಲುವಾಗಿ ಫ್ರಂಟ್ ಗ್ರಿಲ್‌ಗೆ ಕ್ರೋಮ್ ಟಚ್ ನೀಡಲಾಗಿದ್ದು, ಹಾಗೆಯೇ ಹೆಡ್‌ಲೈಟ್ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ.

ವಿನ್ಸಾಸ

ವಿನ್ಸಾಸ

ಡಸ್ಟರ್‌ಗೆ ಸಮಾನವಾದ ಗ್ರೌಂಡ್ ಕ್ಲಿಯರನ್ಸ್ ಪೆಡೆದುಕೊಂಡರೂ ಟೆರನೊ 16 ಎಂಎಂಗಳಷ್ಟು ಉದ್ದವಾಗಿರಲಿದೆ. ಇದು ಹೆಚ್ಚು ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

ಫ್ರಂಟ್ ಗ್ರಿಲ್

ಫ್ರಂಟ್ ಗ್ರಿಲ್

'ಹೆರಿಟೇಜ್ ಗ್ರಿಲ್' ಎಂದು ಹೆಸರಿಸಿಕೊಳ್ಳುವ 'ವಿ' ಆಖಾರದ ಕ್ರೋಮ್ ಬಾರ್, ನಿಸ್ಸಾನ್‌ನ ಆಧುನಿಕ ತಂತ್ರಜ್ಞಾನದ ಭಾಗವಾಗಿದೆ. ಇದು ನಿಸ್ಸಾನ್ ದುಬಾರಿ ಎಸ್‌ಯುವಿ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದೆ.

ಹೆಡ್‌ಲೈಟ್

ಹೆಡ್‌ಲೈಟ್

ಇನ್ನೊಂದು ಪ್ರಮುಖ ಅಂಶವೆಂದರೆ ಡಸ್ಟರ್ ಹೆಡ್‌ಲೈಟ್‌ಗಿಂತ ಟೆರೆನೊ ಸಂಪೂರ್ಣ ವಿಭಿನ್ನವಾಗಿ ಗೋಚರಿಸಲಿದೆ. ಇಲ್ಲೂ ಆಧುನಿಕ ತಂತ್ರಗಾರಿಕೆಯನ್ನು ನೆಚ್ಚಿಕೊಳ್ಳಲಾಗಿದೆ.

ರಿಯರ್ ಲುಕ್

ರಿಯರ್ ಲುಕ್

ಹಾಗಿದ್ದರೂ ಹಿಂದುಗಡೆ ವಿನ್ಯಾಸವು ಡಸ್ಟರ್‌ಗೆ ಸಮಾನವಾದ ರೂಪ ಕಾಯ್ದುಕೊಳ್ಳಲಿದೆ. ಆದರೆ ಇದರ ಟೈಲ್ ಲ್ಯಾಂಪ್ ಮಾತ್ರ ಬೂಟ್ ಬಾಗಿಲನ್ನು ವಿಭಜಿಸಲಿದೆ. ಇದು ನಿಸ್ಸಾನ್ ಟೆರನೊ ವಿಭಿನ್ನತೆಗೆ ಕಾರಣವಾಗಿದೆ.

ಬದಿಗಳು

ಬದಿಗಳು

ಇನ್ನು ಕಾರಿನ ಬದಿಗಳ ಬಗ್ಗೆ ಮಾತನಾಡುವುದಾದರೆ ಡಸ್ಟರ್ 'ಎ' ಹಾಗೂ 'ಬಿ' ಪಿಲ್ಲರುಗಳು ದೇಹ ವಿನ್ಯಾಸವನ್ನು ಪಡೆದುಕೊಂಡ್ಡಲ್ಲಿ ಇದರಿಂದ ವಿಭಿನ್ನವಾಗಿರುವ ಟೆರನೊದ ಕಪ್ಪು ಬಣ್ಣದ ಪಿಲ್ಲರುಗಳು ಇದಕ್ಕಿಂತ ಸುಂದರವಾಗಿ ಗೋಚರಿಸಲಿದೆ.

ರೂಫ್ ರೈಲ್

ರೂಫ್ ರೈಲ್

ಇನ್ನು ಟೆರನೊದ ವಿಶೇಷ ರೂಫ್ ರೈಲ್, ಪ್ರೀಮಿಯಂ ಲುಕ್ ಪ್ರದಾನ ಮಾಡುತ್ತಿದೆ.

ಚಕ್ರಗಳು

ಚಕ್ರಗಳು

ಟೆರನೊ ಚಕ್ರಗಳು ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಳ್ಳಲಿದ್ದು, ಎರಡು ಟಾಪ್ ವೆರಿಯಂಟ್‌ಗಳು 16 ಇಂಚು ಡೈಮಂಡ್ ಕಟ್ ಮೆಷಿನ್ ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಒಆರ್‌ವಿಎಂ

ಒಆರ್‌ವಿಎಂ

ಇನ್ನು ಹೊರಗಿನ ರಿಯರ್ ವ್ಯೂ ಮಿರರ್‌ಗೆ ಸ್ಟಾಂಡರ್ಡ್ ಹೋದಿಕೆ ನೀಡಲಾಗಿದೆ.

ಒಳಮೈ

ಒಳಮೈ

ಡಸ್ಟರ್ ಕಾರಿನೊಳಗೆ ಕೂತಿರುವ ಪ್ರತಿಯೊಬ್ಬರಿಗೂ ಟೆರನೊದಲ್ಲೂ ಅದೇ ಅನುಭವ ಪಡೆಯಬಹುದಾಗಿದೆ. ಆದರೆ ಟೆರನೊ ಆಯತಕಾರದ ಏಸಿ ವೆಂಟ್ಸ್ ಪಡೆದುಕೊಂಡಿರಲಿದೆ.

ಸ್ಟೀರಿಂಗ್ ವೀಲ್

ಸ್ಟೀರಿಂಗ್ ವೀಲ್

ಹಾಗೆಯೇ ಸಿಲ್ವರ್ ಬಣ್ಣದ ಸ್ಟೀರಿಂಗ್ ವೀಲ್ ಪಡೆದುಕೊಂಡಿದೆ. ಅಚ್ಚರಿಯೆಂಬಂತೆ ಸ್ಟೀರಿಂಗ್ ವೀಲ್‌ನಲ್ಲಿ ತ್ವರಿತ ಗತಿಯಲ್ಲಿ ನಿರ್ವಹಿಸಬಹುದಾದ ಬಟನ್ ಮಿಸ್ ಮಾಡಿಕೊಳ್ಳುತ್ತಿದೆ.

ಸ್ಟೋರೆಜ್ ಕಂಪಾರ್ಟ್‌ಮೆಂಟ್

ಸ್ಟೋರೆಜ್ ಕಂಪಾರ್ಟ್‌ಮೆಂಟ್

ಇನ್ನು ಹೆಚ್ಚು ಬಳಕೆ ಬರುವಂತಹ ಸ್ಟೋರೆಜ್ ಕಂಪಾರ್ಟ್‌ಮೆಂಟ್ ಕೂಡಾ ಮೊದಲ ಸಾಲಿನಲ್ಲಿ ನೀಡಲಾಗಿದೆ.

ಆಡಿಯೋ ಸಿಸ್ಟಂ

ಆಡಿಯೋ ಸಿಸ್ಟಂ

ಹಾಗೆಯೇ ಡಸ್ಟರ್‌ಗಿಂತ ವಿಭಿನ್ನವಾದ ಆಡಿಯೋ ಸಿಸ್ಟಂ ಲಗತ್ತಿಸುವಲ್ಲಿ ಟೆರನೊ ಯಶಸ್ವಿಯಾಗಿದೆ.

ಲೆಗ್ ರೂಂ

ಲೆಗ್ ರೂಂ

ಒಟ್ಟಿನಲ್ಲಿ ಮುಂಭಾಗದಲ್ಲಿ ಹೆಚ್ಚು ಜಾಗವಿದ್ದು, ಉತ್ತಮ ಲೆಗ್ ರೂಂ ಕೂಡಾ ನೀಡಲಾಗಿದೆ. ಡ್ರೈವರ್ ಸೀಟಿನಲ್ಲಿ ಟು ಸೆಟ್ಟಿಂಗ್ ವ್ಯವಸ್ಥೆ ಇರಲಿದೆ.

ರಿಯರ್ ಸೀಟು

ರಿಯರ್ ಸೀಟು

ಹಿಂದುಗಡೆ ಮೂವರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ. ಇ್ನನು ಬೂಟ್ ಸ್ಪೇಸ್ ಹೆಚ್ಚಿಸುವ ನಿಟ್ಟಿನಲ್ಲಿ ಸೀಟುಗಳನ್ನು ಮಡಚಬಹುದಾಗಿದೆ.

ಡೋರ್ ಹ್ಯಾಂಡಲ್

ಡೋರ್ ಹ್ಯಾಂಡಲ್

ಸಿಲ್ವರ್ ಹೋದಿಕೆಯ ಡೋರ್ ಹ್ಯಾಂಡಲ್, ಪವರ್ ವಿಂಡೋ ಕಂಟ್ರೋಲ್ ಮತ್ತು ಡೋರಿಗೆ ಹೊಂದಿಕೊಂಡಿರುವ ಸ್ಪೀಕರುಗಳು ಮಗದೊಮ್ಮೆ ಡಸ್ಟರ್‌ ತಂತ್ರವನ್ನು ನಕಲು ಮಾಡಲಾಗಿದೆ.

ಬೂಟ್ ಸ್ಪೇಸ್

ಬೂಟ್ ಸ್ಪೇಸ್

ನೂತನ ಟೆರನೊದಲ್ಲಿ 475 ಲೀಟರ್ ಸ್ಟೋರೆಜ್ ಸ್ಪೇಸ್ ಲಗತ್ತಿಸಲಾಗಿದೆ. ಇನ್ನು ಹಿಂದುಗಡೆ ಸೀಟು ಮಡಚಿದರೆ ಬರೋಬ್ಬರಿ 1064 ಲೀಟರ್ ಬೂಟ್ ಸ್ಪೇಸ್ ಸಿಗಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಮೂರು ಎಂಜಿನ್ ಆಯ್ಕೆಗಳಲ್ಲಿ ನಿಸ್ಸಾನ್ ಟೆರನೊ ಆಗಮನವಾಗಿದೆ.

1.6 ಲೀಟರ್ ಪೆಟ್ರೋಲ್

1.5 ಕೆ9ಕೆ ಟರ್ಬೊ ಡೀಸೆಲ್

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಆರು ಹಾಗೂ ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ತಂತ್ರಗಾರಿಕೆಯಲ್ಲಿ ಡಸ್ಟರ್‌ಗೆ ಸಮಾನವಾದ ಮಾನದಂಡಗಳನ್ನು ಟೆರನೊ ಹೊಂದಿದೆ. ಇದು ವಾಹನ ದಟ್ಟಣೆ ಸೇರಿದಂತೆ ಹೆದ್ದಾರಿಗಳಲ್ಲಿ ನಯವಾದ ಚಾಲನೆ ನೀಡಲಿದೆ.

ಮೈಲೇಜ್

ಮೈಲೇಜ್

ನಿಸ್ಸಾನ್ ಪ್ರಕಾರ ಟೆರನೊ ಪೆಟ್ರೋಲ್ ಆವೃತ್ತಿ ಪ್ರತಿ ಲೀಟರ್‌ಗೆ 13.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಡೀಸೆಲ್ ಯುನಿಟ್ ಭರ್ಜರಿ 20.45 ಕೀ.ಮೀ ಮೈಲೇಜ್ ನೀಡಲಿದೆ. ಎಸ್‌ಯುವಿ ಕಾರುಗಳನ್ನು ಪರಿಗಣಿಸಿದಾಗ ಇದು ಶ್ರೇಷ್ಠವೆನಿಸಿಕೊಳ್ಳುತ್ತದೆ.

ಎಲ್ಲ ವೆರಿಯಂಟ್‌ಗಳಲ್ಲಿರುವ ಸ್ಟಾಂಡರ್ಡ್ ಫೀಚರ್ಸ್

ಎಲ್ಲ ವೆರಿಯಂಟ್‌ಗಳಲ್ಲಿರುವ ಸ್ಟಾಂಡರ್ಡ್ ಫೀಚರ್ಸ್

ಟೆರನೊ ಐದು ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ- ಎಕ್ಸ್‌ಇ, ಎಕ್‌ಎಲ್,ಎಕ್ಸ್‌ಎಲ್ ಪ್ಲಸ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ

  • ಡ್ರೈವರ್ ಏರ್‌ಬ್ಯಾಗ್,
  • ಎಂಜಿನ್ ಇಂಮೊಬಿಲೈಜರ್ ,
  • ಸೆಂಟ್ರಲ್ ಲಾಕಿಂಗ್,
  • ಸೀಟ್ ಬೆಲ್ಟ್,
  • ಪವರ್ ವಿಂಡೋ ,
  • ಕೀಲೆಸ್ ಎಂಟ್ರಿ ,
  • ಹೊಂದಾಣಿಸಬಹುದಾದ ಪವರ್ ಸ್ಟೀರಿಂಗ್,
  • ಹೊಂದಾಣಿಸಬಹುದಾದ ರಿಯರ್ ಸೀಟು,
  • ಹೊಂದಾಣಿಸಬಹುದಾದ ಫ್ರಂಟ್ ಸೀಟು ಹೆಡ್ ರೈಸ್ಟ್,
  • 2 ಡಿನ್ ಆಡಿಯೋ ಸಿಸ್ಟಂ ಜತೆ ಸಿಡಿ/ಎಂಪಿ3/ಎಎಂ/ಎಫ್‌ಎಂ, ಯುಎಸ್‌ಬಿ, ಆಕ್ಸ್-ಇನ್ ಹಾಗೂ ಬ್ಲೂಟೂತ್.
  • ಎಕ್ಸ್‌ವಿ ಹಾಗೂ ಎಕ್ಸ್‌ವಿ ಪ್ರೀಮಿಯಂ

    ಎಕ್ಸ್‌ವಿ ಹಾಗೂ ಎಕ್ಸ್‌ವಿ ಪ್ರೀಮಿಯಂ

    • 16 ಇಂಚು ಅಲಾಯ್ ವೀಲ್,
    • ಸಿಲ್ವರ್ ಫಿನಿಶ್ ರೂಫ್ ರೈಲ್,
    • ಕ್ರೋಮ್ ಎಕ್ಸ್‌ಹಾಸ್ಟ್,
    • ಲೆಥರ್ ಸಿಟು ಕವರ್ ,
    • ಲೆಥರ್ ಸ್ಟೀರಿಂಗ್ ವೀಲ್ (ಎಕ್ಸ್‌ವಿ ಪ್ರೀಮಿಯಂ),
    • ಲಂಬರ್ ಬೆಂಬಲ,
    • ಪ್ಯಾಸೆಂಜರ್ ಸೈಡ್ ಏರ್ ಬ್ಯಾಗ್,
    • ರಿಯರ್ ಪಾರ್ಕಿಂಗ್ ಸೆನ್ಸಾರ್,
    • ರಿಯರ್ ಎಸಿ ವೆಂಟ್ ,
    • ಟಚ್ ಸ್ಕ್ರೀನ್ ಮಾಹಿತಿ ಸಿಸ್ಟಂ (ಆಪ್ಫನಲ್)
    • ಬಣ್ಣಗಳು

      ಬಣ್ಣಗಳು

      Bronze Grey,

      Pearl White,

      Blade Silver,

      Sapphire Black,

      Sterling Grey,

      Fire Red.

      ದರ ಮಾಹಿತಿ

      ದರ ಮಾಹಿತಿ

      ಆಗಸ್ಟ್ 10ರಂದು ಅನಾವರಣಗೊಳ್ಳುವ ಸಂದರ್ಭದಲ್ಲಿ 10 ಲಕ್ಷದ ರು.ಗಳ ಬಜೆಟ್‌ನೊಳಗೆ ಡಸ್ಟರ್ ಪರಿಚಯಿಸುವುದಾಗಿ ನಿಸ್ಸಾನ್ ತಿಳಿಸಿತ್ತು. ಒಟ್ಟಿನಲ್ಲಿ ಇದಕ್ಕೆ ಪೂರಕವಾದ ಮಾಹಿತಿಗಳು ಬಿಡುಗಡೆ ಸಂದರ್ಭದಲ್ಲಿ ದೊರಕಲಿದೆ.

      ಅಂತಿಮ ತೀರ್ಪು

      ಅಂತಿಮ ತೀರ್ಪು

      ನೀವು ಆಡಂಬರದ ಎಸ್‌ಯುವಿಗಳನ್ನು ಇಷ್ಟಪಡುವುದಾದ್ಧಲ್ಲಿ ಟೆರನೊ ಉತ್ತಮ ಆಯ್ಕೆಯಾಗಿರಲಿದೆ. ಇದು ಡಸ್ಟರ್‌ಗಿಂತಲೂ 50,000 ರು.ಗಳಷ್ಟು ದುಬಾರಿಯೆನಿಸಲಿದೆ. ಆದರೆ ಇದರ ಸ್ಟೈಲಿಷ್ ವಿನ್ಯಾಸ ಕ್ರೀಡಾ ಬಳಕೆಯ ವಾಹನ ಪ್ರಿಯರಿಗೆ ನಿಜಕ್ಕೂ ಉತ್ತಮ ಡ್ರೈವಿಂಗ್ ಅನುಭವ ನೀಡಲಿದೆ.

Most Read Articles

Kannada
English summary
The ‘Terrano' name is not new to Nissan. Various other models, in different countries have been sold by Nissan under the Terrano name tag. So, will the Nissan Terrano in India be a game changer? We have for you below a detailed look at the compact SUV, highlighting the features, specifications, variants, engine performance mileage & more.
Story first published: Friday, September 27, 2013, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X