ಇನ್ನೋವಾ, ಎರ್ಟಿಗಾ, ಮೊಬಿಲಿಯೊ ಮೀರಿಸಿತೇ ಲೊಡ್ಜಿ?

Written By:

ಈಗಷ್ಟೇ ಬಿಡುಗಡೆಯಾಗಿರುವ ರೆನೊ ಲೊಡ್ಜಿ ಬಹು ಬಳಕೆಯ ವಾಹನವು (ಎಂಪಿವಿ) ಎಲ್ಲ ಹಂತದಲ್ಲೂ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎಂದು ವಾಹನ ತಜ್ಞರು ಅಭಿಪ್ರಾಡುತ್ತಾರೆ. ಹೀಗೆ ಒಂದು ಸರಳ ಲೇಖನದಲ್ಲಿ ದೇಶದ ಜನಪ್ರಿಯ ಎಂಪಿವಿಗಳನ್ನು ಇಲ್ಲಿ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು.

ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಟೊಯೊಟಾ ಇನ್ನೋವಾ, ಮಾರುತಿ ಸುಜುಕಿ ಎರ್ಟಿಗಾ ಹಾಗೂ ಹೋಂಡಾ ಮೊಬಿಲಿಯೊ ಎಂಪಿವಿಗಳ ಜೊತೆ ಹೊಸತಾದ ರೆನೊ ಲೊಡ್ಜಿ ಹೋಲಿಕೆ ಮಾಡಲಾಗಿದೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ದರ ಹೋಲಿಕೆ (ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ)

ದರ ಹೋಲಿಕೆ (ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ)

ರೆನೊ ಲೊಡ್ಜಿ: 8.19 ಲಕ್ಷ ರು.

ಟೊಯೊಟಾ ಇನ್ನೋವಾ: 12.29 ಲಕ್ಷ ರು.

ಮಾರುತಿ ಸುಜುಕಿ ಎರ್ಟಿಗಾ: 6.00 ಲಕ್ಷ ರು.

ಹೋಂಡಾ ಮೊಬಿಲಿಯೊ: 6.75 ಲಕ್ಷ ರು.

ವಿನ್ಯಾಸ - ರೆನೊ ಲೊಡ್ಜಿ

ವಿನ್ಯಾಸ - ರೆನೊ ಲೊಡ್ಜಿ

ಅದ್ಭುತ ರಸ್ತೆ ಸಾನಿಧ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ರೆನೊ ಎಂಜಿನಿಯರ್ ಗಳು ಹೊರಮೈ ವಿನ್ಯಾಸವನ್ನು ರಚಿಸಿದ್ದಾರೆ. ಇದು ಮುಂಭಾಗದಲ್ಲಿ ಕ್ರೋಮ್ ಸ್ಪರ್ಶ ಪಡೆದ ಫ್ರಂಟ್ ಗ್ರಿಲ್, ಟು ಟೋನ್ ಬಂಪರ್ ಜೊತೆ ರೂಫ್ ರೈಲ್, ಡೈಟೈಮ್ ರನ್ನಿಂಗ್ ಲೈಟ್ಸ್, ಟೈಲ್ ಲ್ಯಾಂಪ್ ಹಾಗೂ 15 ಇಂಚುಗಳ ಅಲಾಯ್ ವೀಲ್ ಗಳನ್ನು ಹೊರಭಾಗದಲ್ಲಿ ಕೊಡಲಾಗಿದೆ.

ವಿನ್ಯಾಸ - ಟೊಯೊಟಾ ಇನ್ನೋವಾ

ವಿನ್ಯಾಸ - ಟೊಯೊಟಾ ಇನ್ನೋವಾ

ಇನ್ನು ಸ್ವಲ್ಪ ದುಬಾರಿಯಾಗಿರುವ ಟೊಯೊಟಾ ಬೆಲೆಗೆ ತಕ್ಕಂತೆ ಹೆಚ್ಚು ಪ್ರೀಮಿಯಂ ಕ್ರೋಮ್ ವೈಶಿಷ್ಟ್ಯಗಳನ್ನು ಹೊರಮೈಯಲ್ಲಿ ಪಡೆದುಕೊಂಡಿದೆ. ಇದರಲ್ಲಿ ಕ್ರೀಡಾತ್ಮಕ ಶೈಲಿಗೆ ತಕ್ಕಂತೆ ಬದಿಯಲ್ಲಿ ಗ್ರಾಫಿಕ್ಸ್, ಡ್ಯುಯಲ್ ಟೋನ್ 15 ಇಂಚುಗಳ ಅಲಾಯ್ ವೀಲ್ಸ್, ಕ್ರೋಮ್ ಡೋರ್ ಹೋದಿಕೆ ಮುಂತಾದ ಸೌಲಭ್ಯಗಳನ್ನು ಕಾಣಬಹುದಾಗಿದೆ.

ವಿನ್ಯಾಸ - ಮಾರುತಿ ಸುಜುಕಿ ಎರ್ಟಿಗಾ

ವಿನ್ಯಾಸ - ಮಾರುತಿ ಸುಜುಕಿ ಎರ್ಟಿಗಾ

ಮುಂಭಾಗದಲ್ಲಿ ಹ್ಯಾಚ್ ಬ್ಯಾಕ್ ಕಾರಿಗೆ ಸಮಾನವಾದ ವಿನ್ಯಾಸವನ್ನು ಪಡೆದುಕೊಂಡಿರುವ ಮಾರುತಿ ಸುಜುಕಿ ಎರ್ಟಿಗಾ ಮೂಲತ: ಸ್ವಿಫ್ಟ್ ತಳಹದಿಯಲ್ಲಿ ಅಭಿವೃದ್ಧಿಗೊಂಡಿದೆ. ಹಾಗೆಯೇ ಸ್ವಿಫ್ಟ್ ಜೊತೆಗೆ ಕೆಲವೊಂದು ವಿನ್ಯಾಸವನ್ನು ಹಂಚಿಕೊಂಡಿದೆ. ಎರ್ಟಿಗಾದಲ್ಲಿ ಡೇಟೈಮ್ ರನ್ನಿಂಗ್ ಲೈಟ್ಸ್ ಯಾಗಲಿ ಪ್ರೊಜೆಕ್ಟರ್ ಲ್ಯಾಂಪ್ ಸೌಲಭ್ಯಗಳು ಇರುವುದಿಲ್ಲ. ಆದರೂ 15 ಇಂಚುಗಳ ಚಕ್ರಗಳು ಲಭ್ಯವಿರುತ್ತದೆ.

ವಿನ್ಯಾಸ - ಹೋಂಡಾ ಮೊಬಿಲಿಯೊ

ವಿನ್ಯಾಸ - ಹೋಂಡಾ ಮೊಬಿಲಿಯೊ

ಡೈನಾಮಿಕ್ ದೇಹ, ಆಕರ್ಷಕ ನೋಟ, ಆಕ್ರಮಣಕಾರಿ ಫ್ರಂಟ್ ಗ್ರಿಲ್, ತೀಕ್ಷ್ಣವಾದ ಸ್ಪಾಯ್ಲರ್, ಬದಿಯಲ್ಲಿ ಸ್ವಭಾವ ರೇಖೆ ಹಾಗೂ 15 ಇಂಚುಗಳ ಅಲಾಯ್ ವೀಲ್ ಗಳು ಹೋಂಡಾ ಮೊಬಿಲಿಯೊ ವಿಶಿಷ್ಟತೆಯಾಗಿದೆ.

 ವಿಶೇಷತೆ - ರೆನೊ ಲೊಡ್ಜಿ

ವಿಶೇಷತೆ - ರೆನೊ ಲೊಡ್ಜಿ

ಏಳು ಅಥವಾ ಎಂಟು ಸೀಟುಗಳ ಆಯ್ಕೆಗಳಲ್ಲಿ ರೆನೊ ಲೊಡ್ಜಿ ಲಭ್ಯವಾಗಲಿದೆ. ಅಲ್ಲದೆ ಕ್ಲೈಮೇಟ್ ಕಂಟ್ರೋಲ್, ಮೀಡಿಯಾ ನೇವ್ ಮಲ್ಟಿಮೀಡಿಯಾ ಸಿಸ್ಟಂ ಜೊತೆ ಏಳು ಇಂಚುಗಳ ಟಚ್ ಸ್ಕ್ರೀನ್, ರಿಯರ್ ಪಾರ್ಕಿಂಗ್ ಏಡ್, ಇಕೊ ಮೋಡ್ ಮತ್ತು ಕ್ರೋಮ್ ಎಸಿ ವೆಂಟ್ಸ್ ಗಳಂತಹ ಸೌಲಭ್ಯಗಳಿರಲಿದೆ.

ವಿಶೇಷತೆ - ಟೊಯೊಟಾ ಇನ್ನೋವಾ

ವಿಶೇಷತೆ - ಟೊಯೊಟಾ ಇನ್ನೋವಾ

ಕಾರಿನೊಳಗೂ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಇನ್ನೋವಾದಲ್ಲೂ ಏಳು ಹಾಗೂ ಎಂಟು ಸೀಟುಗಳ ಆಸನ ವ್ಯವಸ್ಥೆ ಒದಗಿಸಲಾಗಿದೆ. ಇದರಲ್ಲಿ ಮಿಡಿಯಾ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್ ಇನ್ ಪುಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಗಳಂತಹ ಸೌಲಭ್ಯಗಳಿರುತ್ತದೆ.

ವಿಶೇಷತೆ - ಮಾರುತಿ ಎರ್ಟಿಗಾ

ವಿಶೇಷತೆ - ಮಾರುತಿ ಎರ್ಟಿಗಾ

ಏಳು ಸೀಟುಗಳ ಆಯ್ಕೆ ಹೊಂದಿರುವ ಎರ್ಟಿಗಾದ ಎರಡನೇ ಸಾಲಿನಲ್ಲೂ ವೈಯಕ್ತಿಕ ಎಸಿ ವೆಂಟ್ಸ್, ಯುಎಸ್ ಬಿ, ಆಕ್ಸ್ ಇನ್ ಪುಟ್, ಮ್ಯೂಸಿಕ್ ಸಿಸ್ಟಂ ಹಾಗೂ ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು ವ್ಯವಸ್ಥೆಗಳನ್ನು ಹೊಂದಿರುತ್ತದೆ.

ವಿಶೇಷತೆ- ಹೋಂಡಾ ಮೊಬಿಲಿಯೊ

ವಿಶೇಷತೆ- ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ ಸಹ ಏಳು ಸೀಟುಗಳ ಆಯ್ಕೆಯೊಂದಿಗೆ ಬಂದಿದೆ. ಇದರಲ್ಲೂ ಎರಡನೇ ಸಾಲಿನಲ್ಲಿ ವೈಯಕ್ತಿಕ ಎಸಿ ನಿಯಂತ್ರಣ ವ್ಯವಸ್ಥೆ. ಯುಎಸ್ ಬಿ, ಆಕ್ಸ್, ಮ್ಯೂಸಿಕ್ ಸಿಸ್ಟಂ ಮತ್ತು ಹೊಂದಾಣಿಸಬಹುದಾದ ಚಾಲಕ ಸೀಟುಗಳನ್ನು ಹೊಂದಿದೆ.

 ಎಂಜಿನ್ ತಾಂತ್ರಿಕತೆ, ಆಯಾಮ - ಲೊಡ್ಜಿ

ಎಂಜಿನ್ ತಾಂತ್ರಿಕತೆ, ಆಯಾಮ - ಲೊಡ್ಜಿ

ಸದ್ಯ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿರುವ ರೆನೊ ಲೊಡ್ಜಿ 1.5 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 85 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. ಇದೇ ಎಂಜಿನ್ ಅನ್ನು ವಿಶೇಷವಾಗಿ ಟ್ಯೂನ್ ಮಾಡಲಾಗಿದ್ದು, 110 ಅಶ್ವಶಕ್ತಿ (6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನು 2810 ಎಂಎಂ ಚಂಕ್ರಾಂತರ, 174 ಎಂಎಂ ಗ್ರೌಂಡ್ ಕ್ಲಿಯರನ್ಸ್ ಮತ್ತು 207 ಲೀಟರ್ ಗಳ ಢಿಕ್ಕಿ ಜಾಗ ಪಡೆಯಲಿದೆ.

ಎಂಜಿನ್ ತಾಂತ್ರಿಕತೆ, ಆಯಾಮ - ಇನ್ನೋವಾ

ಎಂಜಿನ್ ತಾಂತ್ರಿಕತೆ, ಆಯಾಮ - ಇನ್ನೋವಾ

ಇನ್ನೊಂದೆಡೆ ಇನ್ನೋವಾ ಕಾರಿನಡಿಯಲ್ಲಿ 4 ಸಿಲಿಂಡರ್, ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 101 ಅಶ್ವಶಕ್ತಿ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇದರಲ್ಲಿದೆ. ಅಂತೆಯೇ 2750 ಎಂಎಂ ಚಂಕ್ರಾಂತರ, 176 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹಾಗೂ 300 ಲೀಟರ್ ಢಿಕ್ಕಿ ಜಾಗವನ್ನು ಹೊಂದಿರುತ್ತದೆ.

ಎಂಜಿನ್ ತಾಂತ್ರಿಕತೆ, ಆಯಾಮ - ಎರ್ಟಿಗಾ

ಎಂಜಿನ್ ತಾಂತ್ರಿಕತೆ, ಆಯಾಮ - ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ 1.4 ಲೀಟರ್ ಪೆಟ್ರೋಲ್ (95 ಅಶ್ವಶಕ್ತಿ) ಹಾಗೂ 1.3 ಲೀಟರ್ ಡೀಸೆಲ್ (90 ಅಶ್ವಶಕ್ತಿ) ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಅಂತೆಯೇ 2740 ಎಂಎಂ ಚಂಕ್ರಾಂತರ, 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹಾಗೂ 135 ಲೀಟರ್ ಢಿಕ್ಕಿ ಜಾಗವನ್ನು ಹೊಂದಿರುತ್ತದೆ.

ಎಂಜಿನ್ ತಾಂತ್ರಿಕತೆ, ಆಯಾಮ - ಮೊಬಿಲಿಯೊ

ಎಂಜಿನ್ ತಾಂತ್ರಿಕತೆ, ಆಯಾಮ - ಮೊಬಿಲಿಯೊ

ಇನ್ನೊಂದೆಡೆ ಹೋಂಡಾ ಮೊಬಿಲಿಯೊದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಆಯ್ಕೆಗಳಿರುತ್ತದೆ. ಇದು 1.5 ಲೀಟರ್ ವಿಟೆಕ್ ಪೆಟ್ರೋಲ್ (119 ಅಶ್ವಶಕ್ತಿ) ಹಾಗೂ 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್ (100 ಅಶ್ವಶಕ್ತಿ) ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 2652 ಎಂಎಂ ಚಂಕ್ರಾಂತರ, 189 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹಾಗೂ 223 ಲೀಟರ್ ಗಳ ಢಿಕ್ಕಿ ಜಾಗವನ್ನು ಹೊಂದಿರುತ್ತದೆ.

ಸುರಕ್ಷತೆ

ಸುರಕ್ಷತೆ

ಎಲ್ಲ ನಾಲ್ಕು ಮಾದರಿಗಳ ಟಾಪ್ ವೆರಿಯಂಟ್ ಗಳಲ್ಲಿ ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್ ಬ್ಯಾಗ್ ಗಳ ಸೌಲಭ್ಯಗಳಿರುತ್ತದೆ. ಈ ಪೈಕಿ ಇನ್ನೋವಾದಲ್ಲಿ ಇವುಗಳು ಸ್ಟ್ಯಾಂಡರ್ಡ್ ಫೀಚರ್ ಆಗಿ ದೊರಕಲಿದೆ. ಇನ್ನು ಇನ್ನೋವಾ ಸೇರಿದಂತೆ ಮೊಬಿಲಿಯೊ ಹಾಗೂ ಲೊಡ್ಜಿ ಮಾದರಿಗಲಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ದೊರಕಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಬಹು ಬಳಕೆಯ ವಾಹನಗಳ ವಿಭಾಗದಲ್ಲಿ ಹಣದ ಮೌಲ್ಯಕ್ಕೆ ತಕ್ಕಂತೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸುವ ಇನ್ನೋವಾ ಲೀಡರ್ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೂ ಇತರ ಮಾದರಿಗಳಿಗೆ ಹೋಲಿಸಿದಾಗ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ರೆನೊ ಲೊಡ್ಜಿ, ಇನ್ನೋವಾಗಿಂತಲೂ ನಾಲ್ಕು ಲಕ್ಷ ರು.ಗಳಷ್ಟು ಕಡಿಮೆ ಬೆಲೆಗಳಲ್ಲಿ ಗ್ರಾಹಕರಿಗೆ ನ್ಯಾಯವೊದಗಿಸುತ್ತದೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ಎಂಪಿವಿ ಕಾರು ಆಯ್ಕೆದಾರರಿಗೆ ಇಂದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ. ಇನ್ನೊಂದೆಡೆ ಈ ಎಲ್ಲ ನಾಲ್ಕು ಮಾದರಿಗಳಲ್ಲಿ ಎರ್ಟಿಗಾ ಅತ್ಯಂತ ಅಗ್ಗದ ಹಾಗೂ ಮೊಬಿಲಿಯೊ ಅತ್ಯಂತ ಕ್ರೀಡಾತ್ಮಕ ವಿನ್ಯಾಸಿತ ಕಾರೆನಿಸಿಕೊಂಡಿದೆ. ಈಗ ಈ ನಾಲ್ಕು ಮಾದರಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
So on a straight out battle, which of these four will emerge as the winner, in terms of pricing, features, specification and safety of course. Which of the four will prove to be the best value for money? Read on:
Story first published: Monday, April 13, 2015, 14:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark