ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಉತ್ಪನ್ನಗಳನ್ನು ಹಂಚಿಕೊಳ್ಳುವ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಟೊಯೊಟಾ ಹಾಗೂ ಸುಜುಕಿ ಕಂಪನಿಗಳು 2019ರ ಆಗಸ್ಟ್‌ ತಿಂಗಳಿನಲ್ಲಿ ಸಹಭಾಗಿತ್ವವನ್ನು ಮಾಡಿಕೊಂಡವು.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಟೊಯೊಟಾ ಗ್ಲಾಂಜಾ ಕಾರ್ ಅನ್ನು ಬಿಡುಗಡೆಗೊಳಿಸಲಾಯಿತು. ಗ್ಲಾಂಜಾ ಮಾರುತಿ ಸುಜುಕಿ ಕಂಪನಿಯ ಬಲೆನೋ ಕಾರಿನ ರಿ ಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರು ಜನಪ್ರಿಯತೆಯನ್ನು ಪಡೆದ ನಂತರ ಈಗ ಸುಜುಕಿ-ಟೊಯೊಟಾ ಸಹಭಾಗಿತ್ವದ ಎರಡನೇ ಕಾರ್ ಆದ ಅರ್ಬನ್ ಕ್ರೂಸರ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರ್ ಅನ್ನು ಆಧರಿಸಿದೆ. ಆದರೆ ಹೊಸ ಅರ್ಬನ್ ಕ್ರೂಸರ್ ಕಾರಿನ ಎಕ್ಸ್'ಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ವಿಟಾರಾ ಬ್ರೆಝಾ ಕಾರಿಗಿಂತ ವಿಭಿನ್ನವಾಗಿ ಕಾಣುತ್ತದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನಾವು ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್‌ಯುವಿಯ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಎಕ್ಸ್'ಟಿರಿಯರ್ ಹಾಗೂ ಡಿಸೈನ್

ಅರ್ಬನ್ ಕ್ರೂಸರ್ ಕೆಲವು ಬದಲಾವಣೆಗಳನ್ನು ಹೊಂದಿದೆ. ಟೊಯೊಟಾ ಕಂಪನಿಯು ಈ ಎಸ್‌ಯುವಿಯ ಮುಂಭಾಗದಲ್ಲಿ ತನ್ನ ಸಿಗ್ನೆಚರ್ ಅನ್ನು ಅಳವಡಿಸಿದೆ. ಈ ಎಸ್‌ಯುವಿಯ ವರ್ಟಿಕಲ್ ಕ್ರೋಮ್ ಸ್ಟ್ರಿಪ್‌ಗಳನ್ನು ಹಾಗೂ ಗ್ರಿಲ್‌ನಲ್ಲಿ ಹಾರಿಜಾಂಟಲ್ ಸ್ಲ್ಯಾಟ್‌ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಇದು ಕಾಂಪ್ಯಾಕ್ಟ್-ಎಸ್‌ಯುವಿಯು ಮುಂಭಾಗದಲ್ಲಿ ಬೋಲ್ಡ್ ಲುಕ್ ಹೊಂದಿದೆ. ಈ ಎಸ್‌ಯುವಿಯಲ್ಲಿರುವ ಎಲ್‌ಇಡಿ ಡಿಆರ್‌ಎಲ್‌ಗಳ ಜೊತೆಗೆ ಪೂರ್ಣ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ನೀಡಲಾಗಿದೆ. ಇವುಗಳನ್ನು ರಾತ್ರಿಯಲ್ಲಿ ಹೆಚ್ಚು ಬೆಳಕನ್ನು ನೀಡುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಎಸ್‌ಯುವಿಯಲ್ಲಿ ಬ್ರೆಝಾದಲ್ಲಿರುವಂತಹ ಫಾಗ್ ಲೈಟ್ ನೀಡಲಾಗಿದ್ದರೂ ಸುತ್ತಲೂ ಕೆಲವು ಕ್ರೋಮ್ ಅಂಶಗಳನ್ನು ನೀಡಲಾಗಿದೆ. ಇದರಿಂದಾಗಿ ಈ ಎಸ್‌ಯುವಿಯ ಪ್ರೀಮಿಯಂ ಲುಕ್ ಹೆಚ್ಚುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಇನ್ನು ಸೈಡ್ ಪ್ರೊಫೈಲ್‌ನಲ್ಲಿ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯ ಸುತ್ತಲೂ ಬ್ಲಾಕ್ ಕ್ಲಾಡಿಂಗ್ ಸಹ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಅರ್ಬನ್ ಕ್ರೂಸರ್ ಎಸ್‌ಯುವಿಯು ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಕಪ್ಪು ಬಣ್ಣದ ಒಆರ್‌ವಿ‌ಎಂ, ರೂಫ್ ರೇಲ್ ಹಾಗೂ ಶಾರ್ಕ್ ಫಿನ್ಆಂಟೆನಾವನ್ನು ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಕಾಂಪ್ಯಾಕ್ಟ್ ಎಸ್‌ಯುವಿಯ ಹಿಂಭಾಗದಲ್ಲಿ ಬ್ರೆಝಾದಲ್ಲಿರುವಂತಹ ಟೇಲ್‌ಲೈಟ್, ಬಂಪರ್, ಕ್ರೋಮ್ ಸ್ಟ್ರಿಪ್‌ ಹಾಗೂ ಬೂಟ್‌ಗಳನ್ನು ನೀಡಲಾಗಿದೆ. ರಿಜಿಸ್ಟ್ರೇಶನ್ ಪ್ಲೇಟ್ ಮೇಲೆ ಕ್ರೋಮ್ ಸ್ಟ್ರಿಪ್‌ನಲ್ಲಿರುವ ಅರ್ಬನ್ ಕ್ರೂಸರ್ ಬ್ಯಾಡ್ಜ್ ನೀಡಲಾಗಿದೆ. ಈ ಎಸ್‌ಯುವಿಯು ಪಾರ್ಕಿಂಗ್ ಸೆನ್ಸರ್‌ಗಳ ಜೊತೆಗೆ ರೇರ್‌ವೀವ್ ಕ್ಯಾಮೆರಾ ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಇಂಟಿರಿಯರ್ ಹಾಗೂ ಫೀಚರ್'ಗಳು

ಅರ್ಬನ್ ಕ್ರೂಸರ್'ನ ಇಂಟಿರಿಯರ್ ವಿಟಾರಾ ಬ್ರೆಝಾದಂತೆಯೇ ಕಂಡು ಬಂದರೂ ಸೀಟ್ ಕವರ್‌ ಬೇರೆ ಬಣ್ಣವನ್ನು ಹೊಂದಿದೆ. ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಬೆಂಬಲಿಸುವ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಇನ್ಫೋಟೈನ್‌ಮೆಂಟ್ ಸಿಸ್ಟಂ ಕೆಳಗೆ ಡಿಜಿಟಲ್ ರೀಡ್‌ ಔಟ್ ಹೊಂದಿರುವ ಕ್ಲೈಮೇಟ್ ಕಂಟ್ರೋಲ್ ನೀಡಲಾಗಿದೆ. ಅದರ ಕೆಳಗೆ ಕಪ್ ಹೋಲ್ಡರ್, ಆಕ್ಸ್ ಹಾಗೂ ಚಾರ್ಜಿಂಗ್ ಕೇಬಲ್'ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಸ್ಟೀಯರಿಂಗ್ ವ್ಹೀಲ್ ಆರಾಮದಾಯಕವಾಗಿದ್ದು, ಹೆಚ್ಚು ಗ್ರಿಪ್ ಹೊಂದಿದೆ. ಚಾಲಕನ ಗಮನವು ರಸ್ತೆ ಮೇಲೆ ಇರಿಸಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್'ಗಳನ್ನು ಸರಿಯಾಗಿ ಇರಿಸಲಾಗಿದೆ. ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ವಿಟಾರಾ ಬ್ರೆಝಾದಲ್ಲಿರುವಂತಹ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ನಡುವೆ ಇರುವ ಎಂಐಡಿ ಸ್ಕ್ರೀನ್ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ. ಈ ಎಸ್‌ಯುವಿಯ ಎರಡೂ ಬದಿಯಲ್ಲಿ ಅನಲಾಗ್ ಟ್ಯಾಕೋಮೀಟರ್ ಹಾಗೂ ಸ್ಪೀಡೋಮೀಟರ್'ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಇನ್ನು ಈ ಎಸ್‌ಯುವಿಯಲ್ಲಿರುವ ಸೀಟುಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಮಾತ್ರ ಸೀಟ್ ಹೈಟ್ ಅಡ್ಜಸ್ಟಬಲ್ ನೀಡಲಾಗಿದೆ. ಸ್ಟೀಯರಿಂಗ್ ವ್ಹೀಲ್ ಮಾತ್ರ ಟಿಲ್ಟ್ ಆಯ್ಕೆಯನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಮುಂಭಾಗದ ಸೀಟುಗಳು ಮೆತ್ತನೆಯ ಹಾಗೂ ಯೋಗ್ಯವಾದ ಥೈ ಸಪೋರ್ಟ್ ಹೊಂದಿವೆ. ಎರಡನೇ ಸಾಲಿನಲ್ಲಿರುವ ಸೀಟುಗಳು ಯೋಗ್ಯವಾದ ಬ್ಯಾಕ್ ಸಪೋರ್ಟ್ ಹೊಂದಿದ್ದರೂ ಥೈ ಸಪೋರ್ಟ್ ಹೊಂದಿರುವುದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಎತ್ತರದ ಪ್ರಯಾಣಿಕರು ಕುಳಿತುಕೊಳ್ಳಲು ಹಾಗೂ ಆರಾಮವಾಗಿ ಸಾಗಲು ಯೋಗ್ಯ ಪ್ರಮಾಣದ ಹೆಡ್ ರೂಂ ಹಾಗೂ ಲೆಗ್ ರೂಂ ನೀಡಲಾಗಿದೆ. ಆದರೆ ಹಿಂದಿನ ಸಾಲಿನಲ್ಲಿ ಎಸಿ ವೆಂಟ್ ಆಗಲಿ ಅಥವಾ ಚಾರ್ಜಿಂಗ್ ಸಾಕೆಟ್ ಆಗಲಿ ನೀಡಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಎರಡನೇ ಸಾಲಿನಲ್ಲಿ ರಿಟ್ರಾಕ್ಟಬಲ್ ಆರ್ಮ್‌ರೆಸ್ಟ್ ಹಾಗೂ ಎರಡು ಕಪ್ ಹೋಲ್ಡರ್'ಗಳನ್ನು ನೀಡಲಾಗಿದೆ. ಟೊಯೊಟಾ ಅರ್ಬನ್ ಕ್ರೂಸರ್ ಎಸ್‌ಯುವಿಯು 328-ಲೀಟರ್'ಗಳಷ್ಟು ಯೋಗ್ಯವಾದ ಬೂಟ್ ಸ್ಪೇಸ್ ಹೊಂದಿದ್ದರೂ ಈ ಸೆಗ್'ಮೆಂಟಿನಲ್ಲಿ ತುಸು ಕಡಿಮೆ ಎನಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಬೂಟ್ ಸ್ಪೇಸ್ 60:40 ಸ್ಪ್ಲಿಟ್ ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಸೀಟಿನ ಎರಡೂ ಬದಿಗಳನ್ನು ಮಡಚುವ ಮೂಲಕ ಲಗೇಜ್'ಗಾಗಿ ಹೆಚ್ಚಿನ ಸ್ಥಳವನ್ನು ಪಡೆಯಬಹುದು.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಎಂಜಿನ್ ಹಾಗೂ ನಿರ್ವಹಣೆ

ಟೊಯೊಟಾ ಅರ್ಬನ್ ಕ್ರೂಸರ್ ಎಸ್‌ಯುವಿಯಲ್ಲಿ ವಿಟಾರಾ ಬ್ರೆಝಾದಲ್ಲಿರುವಂತಹ ಸುಜುಕಿ ಕಂಪನಿಯ ಮೈಲ್ಡ್-ಹೈಬ್ರಿಡ್ (ಎಸ್‌ಹೆಚ್‌ವಿಎಸ್) ಟೆಕ್ನಾಲಜಿ ಹೊಂದಿರುವ 1.5-ಲೀಟರ್ ಕೆ-ಸೀರೀಸ್ ಎಂಜಿನ್‌ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಎಂಜಿನ್ 104 ಬಿ‌ಹೆಚ್‌ಪಿ ಪವರ್ ಹಾಗೂ 138 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಐದು-ಸ್ಪೀಡ್ ಮ್ಯಾನುವಲ್ ಅಥವಾ ನಾಲ್ಕು-ಸ್ಪೀಡ್ ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್'ಗೆ ಹೊಂದಿಕೆಯಾಗುತ್ತದೆ. ನಾವು ಮ್ಯಾನುವಲ್ ಮಾದರಿಯನ್ನು ಚಾಲನೆ ಮಾಡಿದೆವು.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಈ ಎಂಜಿನ್ ರಿಫೈನ್ ಆಗಿರುವ ಕಾರಣಕ್ಕೆ ಕಾರು ನಿಷ್ಕ್ರಿಯವಾಗಿದ್ದಾಗ ಯಾವುದೇ ಶಬ್ದವೂ ಬರುವುದಿಲ್ಲ. ಈ ಎಸ್‌ಯು‌ವಿಯ ಎನ್‌ವಿಹೆಚ್ ಲೆವೆಲ್ ಹಾಗೂಕ್ಯಾಬಿನ್‌ನೊಳಗಿರುವ ಇನ್ಸುಲೇಶನ್ ಲೆವೆಲ್ ಉತ್ತಮವಾಗಿರುವುದರಿಂದ ಹೊರಗಿನ ಶಬ್ದವು ಒಳಗೆ ಕೇಳಿಸುವುದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಎಂಜಿನ್ ನ್ಯಾಚುರಲಿ ಆಸ್ಪಿರೇಟೆಡ್ ಆಗಿರುವುದರಿಂದ ಕಾರು ಮುಂದಕ್ಕೆ ಸಾಗಲು ಸ್ವಲ್ಪ ಪ್ರಮಾಣದ ಇಂಧನ ಸಾಕು. ಈ ಎಸ್‌ಯು‌ವಿಯು ಕಡಿಮೆ-ಮಟ್ಟದ ಟಾರ್ಕ್ ಹೊಂದಿರುವುದರಿಂದ ಕಡಿಮೆ ವೇಗದಲ್ಲಿ ಹೆಚ್ಚಿನ ಗೇರ್‌ನಲ್ಲಿ ಚಲಿಸಿದರೂ ಎಂಜಿನ್ ಸ್ಥಗಿತಗೊಳ್ಳುವುದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ನಾವು ಐದನೇ ಗೇರ್‌ನಲ್ಲಿ 40 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದರೂ ಸಹ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಈ ಎಸ್‌ಯು‌ವಿಯು ನಿಧಾನವಾಗಿ, ಸ್ಥಿರವಾದ ವೇಗದಲ್ಲಿ ಟೇಕಾಫ್ ಆಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಅರ್ಬನ್ ಕ್ರೂಸರ್ ಎಸ್‌ಯು‌ವಿಯಲ್ಲಿ ಬ್ರೆಝಾದಲ್ಲಿರುವಂತಹ ಸಸ್ಪೆಂಷನ್ ಸೆಟಪ್ ನೀಡಲಾಗಿದೆ. ಈ ಸೆಟಪ್ ಸಾಫ್ಟ್ ಆಗಿರುವ ಕಾರಣ ಸವಾರಿಯ ಗುಣಮಟ್ಟವುಅತ್ಯುತ್ತಮವಾಗಿದೆ. ಇದರಿಂದ ಹಂಪ್ ಹಾಗೂ ಗುಂಡಿಗಳ ಮೇಲೆ ಸರಾಗವಾಗಿ ಸಾಗಬಹುದು.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಸೆಟಪ್ ಮೃದುವಾಗಿರುವುದರಿಂದ ಕೆಲವು ಪ್ರಮಾಣದ ಬಾಡಿ ರೋಲ್ ಸ್ಪಷ್ಟವಾಗಿದ್ದು ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಈ ಎಸ್‌ಯು‌ವಿಯು ಮಧ್ಯಮ ವೇಗದಲ್ಲಿ ಸರಾಗವಾಗಿ ಸಾಗಿದರೂ ಹೆಚ್ಚಿನ ವೇಗದಲ್ಲಿ ಸಾಗಿದಾಗ ತುಸು ತ್ರಾಸವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಸ್ಟೀಯರಿಂಗ್ ರೆಸ್ಪಾನ್ಸ್ ಉತ್ತಮವಾಗಿದ್ದು, ಗ್ರಿಪ್ ಕಳೆದುಕೊಂಡರೂ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಸಹಜ ಸ್ಥಿತಿಗೆ ತಲುಪಿಸಬಹುದು. ಇನ್ನು ಈ ಎಸ್‌ಯು‌ವಿಯ ಮೈಲೇಜ್ ಬಗ್ಗೆ ಹೇಳುವುದಾದರೆ ಈ ಎಸ್‌ಯು‌ವಿಯಲ್ಲಿರುವ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಸಿಟಿಯೊಳಗೆ ಪ್ರತಿ ಲೀಟರಿಗೆ 12.5 ರಿಂದ 14 ಕಿ.ಮೀ ಮೈಲೇಜ್ ನೀಡಿದರೆ, ಹೈವೇಯಲ್ಲಿ 15 ರಿಂದ 17.8 ಕಿ.ಮೀಗಳ ಮೈಲೇಜ್ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಅರ್ಬನ್ ಕ್ರೂಸರ್ ಆಧುನಿಕ ಸ್ಟೈಲಿಂಗ್ ಹಾಗೂ ಫೀಚರ್'ಗಳನ್ನು ಹೊಂದಿದ್ದು, ಯುವಕರನ್ನು ಆಕರ್ಷಿಸುತ್ತದೆ. ಈ ಕಾಂಪ್ಯಾಕ್ಟ್-ಎಸ್‌ಯುವಿಯು ಆಕರ್ಷಕ ಬೆಲೆ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಕಂಪನಿಯು ಈ ಎಸ್‌ಯು‌ವಿಯ ಸನ್‌ರೂಫ್, ಇನ್ಸುಲೇಶನ್ ಲೆವೆಲ್'ಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕು. ಕಂಪನಿಯು ಈ ಎಸ್‌ಯು‌ವಿಯ ಫೇಸ್‌ಲಿಫ್ಟ್ಆವೃತ್ತಿಯನ್ನು ಬಿಡುಗಡೆಗೊಳಿಸುವಾಗ ಇವುಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಮಾರುತಿ ಬ್ರೆಝಾಗಿಂತಲೂ ಟೊಯೊಟಾ ಅರ್ಬನ್ ಕ್ರೂಸರ್ ಬೆಸ್ಟ್?

ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಹಾಗೂ ಕಿಯಾ ಸೊನೆಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Toyota Urban Cruiser Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X