ಹೊಂಡದಲ್ಲಿ ಸಿಲುಕಿದ ಹೊಂಡಾ ಕಾರು ತಯಾರಿಕೆ

By Super

Honda reduces car production
ಭಾರತಕ್ಕೆ ಹೊಸ ಹೊಸ ಕಾರುಗಳು ಹರಿದು ಬರುತ್ತಿದ್ದರೂ ಬೇಡಿಕೆ ಪ್ರಮಾಣದಲ್ಲಿ ಭಾರೀ ಕುಗ್ಗಿದೆ. ಕೊಳ್ಳುವವರಿಲ್ಲದೆ ಶೋರೂಮಿನಲ್ಲಿರುವ ಕಾರುಗಳು ಬರೀ ಅಲಂಕಾರಿಕ ವಸ್ತುಗಳಂತಾಗಿವೆ, ಧೂಳು ತಿನ್ನುತ್ತಿವೆ. ವ್ಯಾಪಾರ, ವಹಿವಾಟುಗಳಲ್ಲಿ ಭಾರೀ ಇಳಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾರುಗಳ ಉತ್ಪಾದನಾ ಪ್ರಮಾಣವೂ ಕುಗ್ಗುತ್ತಿದೆ.

ಆರ್ಥಿಕ ಹೊಡೆತದಿಂದ ಬೆಚ್ಚಿಬಿದ್ದಿರುವ ಹೊಂಡಾ ಕಾರು ತಯಾರಿಕಾ ಕಂಪನಿ ಕೂಡ ಪ್ರಸ್ತುತ ವರ್ಷದಲ್ಲಿ ಕಾರು ತಯಾರಿಕೆ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಲು ನಿಶ್ಚಯಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಗ್ಗುತ್ತಿದ್ದು, ಬಿಕ್ಕಟ್ಟಿನ ಕರಿನೆರಳು ಎಲ್ಲ ಉದ್ದಿಮೆಗಳಲ್ಲಿಯೂ ಹರಿದಾಡುತ್ತಿದೆ. ಇದರಿಂದಾಗಿ ಹೊಂಡಾ ಕಾರುಗಳ ಬೇಡಿಕೆಯೂ ಸಹಜವಾಗಿ ಕ್ಷೀಣಿಸುತ್ತಿದೆ. ಇದನ್ನು ಮನಗಂಡಿರುವ ಹೊಂಡಾ ಕಂಪನಿ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಹಿಂದಿಡಲು ನಿರ್ಧರಿಸಿದೆ. ಒಟ್ಟಿನಲ್ಲಿ, ಹೊಂಡಾ ಕಾರುಗಳ ತಯಾರಿಕೆ ಹೊಂಡದಲ್ಲಿ ಸಿಲುಕಿದಂತಾಗಿದೆ.

ಎರಡು ಶಿಫ್ಟ್ ಗಳಲ್ಲಿ ದಿನಕ್ಕೆ 380 ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವ ಹೊಂಡಾ ಈಗ ದಿನಕ್ಕೆ ಒಂದೇ ಶಿಫ್ಟಿನಲ್ಲಿ ಕೇವಲ 200 ಕಾರುಗಳನ್ನು ಮಾತ್ರ ತಯಾರಿಸುತ್ತಿದೆ. ಇದೇ ಸ್ಥಿತಿ ಇನ್ನೂ ಆರು ತಿಂಗಳು ಮುಂದುವರಿಸಲಿದೆ. ಉಳಿದ ಅಂಶಗಳೇನೇ ಇರಲಿ ಭಾರೀ ನಿರೀಕ್ಷೆಯ ಜಾಜ್ ಕಾರನ್ನು ಬಿಡುಗಡೆ ಮಾಡುವುದರಿಂದ ಹಿಂದೇಟು ಹಾಕುವುದಿಲ್ಲ ಎಂದು ಹೊಂಡಾ ಸ್ಪಷ್ಟಪಡಿಸಿದೆ. ಸರಕು ತುಂಬಲು ಅವಕಾಶವಿರುವ ಜಾಜ್ ಕಾರು ಸ್ಕೋಡಾ ಫೇಬಿಯಾ ಮತ್ತು ಇತ್ತೀಚೆಗೆ ಬಿಡುಗಡೆಯಾಗಿರುವ ಐ20ಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

Most Read Articles

Kannada
Story first published: Monday, June 18, 2012, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X