ಒಂದೇ ಸೂರಿನಡಿ 60 ಸೂಪರ್ ಕಾರ್

ಇಲ್ಲಿ ವಿವಿಧ ಬಗೆಯ ಸುಮಾರು 60 ಸೂಪರ್ ಕಾರ್ ಗಳನ್ನು ಪ್ರದರ್ಶನದಲ್ಲಿಡಲಾಗಿತ್ತು. ಈ ವಾಹನ ಪ್ರದರ್ಶನವನ್ನು ಸೂಪರ್ ಕಾರ್ ಕ್ಲಬ್ ಆಯೋಜಿಸಿತ್ತು. ಇಲ್ಲಿದ್ದ ಸೂಪರ್ ಕಾರ್ ಗಳು ಒಂದಕ್ಕಿಂತ ಒಂದು ಸೂಪರ್ ಆಗಿದ್ದವು. ಅಲ್ಲಿನ ವೆಸ್ಟರ್ನ್ ಎಕ್ಸ್ ಪ್ರೆಸ್ ಹೆದ್ದಾರಿಯಿಂದಯಿಂದ ಬಾಂದ್ರಾ ವರ್ಲಿ ಸೀ ಲಿಂಕ್ ನ ರಾಯಲ್ ರೋಡ್ ವರೆಗೆ ಎಲ್ಲಿ ನೋಡಿದರೂ ಸೂಪರ್ ಕಾರ್ ಗಳೇ ಕಂಡು ಬರುತ್ತಿದ್ದವು. ನೂತನ ಸೂಪರ್ ಕಾರ್ ಪ್ರದರ್ಶನದಲ್ಲಿ ರೆಮಾಂಡ್ ಲಿಮಿಟೆಡ್ ನಿರ್ದೇಶಕ ಮತ್ತು ಸೂಪರ್ ಕಾರ್ ಕ್ಲಬ್ ಸಂಸ್ಥಾಪಕ, ವಿವಿಧ ಸೆಗ್ಮೆಂಟ್ ಕಾರ್ ಗಳಿಗೆ ಬಹುಮಾನ ನೀಡಿದ್ದಾರೆ.
ಈ ಪ್ರದರ್ಶನದ ಸಹ ಪ್ರಾಯೋಜಕರಾದ ಆಟೋಕಾರ್ ಇಂಡಿಯಾದ ಸಂಪಾದಕರು ಸೂಪರ್ ಕಾರ್ ಪ್ರದರ್ಶನದಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಈ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಸೂಪರ್ ಕಾರ್ ಪ್ರದರ್ಶನ ಮೊದಲ ಬಾರಿಗೆ ಏಪ್ರಿಲ್ 2009ರಂದು ನಡೆದಿತ್ತು. ಈ ಪ್ರದರ್ಶನ ಸಾಮಾನ್ಯ ಜನರಿಂದ ಹಿಡಿದು ವಾಹನದ ಮೇಲೆ ವಿಶೇಷ ಅಭಿರುಚಿ ಇರುವ ಎಲ್ಲರೂ ಕುತೂಹಳ ಕಣ್ಣುಗಳಿಂದ ವಾಹನಗಳನ್ನು ದಿಟ್ಟಿಸಿ ನೋಡುತ್ತಿದ್ದರು. [ಆಟೋಮೊಬೈಲ್ಸ್]


Click it and Unblock the Notifications








