ಪ್ರೀಮಿಯರ್: ಹೊಸ ಪೆಟ್ರೋಲ್ ರಿಯೊ ಕಾರು ರಸ್ತೆಗೆ

ಆದರೆ ಈ ಕಾರಿನ ಎಂಜಿನ್ ಬಿಎಸ್3 ಎಮಿಷನ್ ನಾರ್ಮ್ ದೂರು ಹೊಂದಿತ್ತು. ಹೀಗಾಗಿ ಕಂಪನಿಯು ಹೊಸ ಬ್ರಿಯೊ BS IV ಆವೃತ್ತಿ ಹೊರತಂದಿದೆ. ಇದರ ದರ 4.9 ಲಕ್ಷ ರುಪಾಯಿ.
ನೂತನ ಪೆಟ್ರೋಲ್ ಬ್ರಿಯೊ 1.2 ಲೀಟರಿನ ಎಂಜಿನ್ ಹೊಂದಿದೆ. ಇದು 75.5 ಅಶ್ವಶಕ್ತಿ ಮತ್ತು 103.9 ಎನ್ ಎಂ ಟಾರ್ಕ್ ನೀಡುತ್ತದೆ. ರಿಯೊ ಪೆಟ್ರೊಲ್ ಕಾರು ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಪ್ರೀಮಿಯರ್ ಹೇಳಿದೆ.
ಚೈನಾ ಕಾರು ಕಂಪನಿಗಳೆಲ್ಲ ಯುರೋಪ್ ಮತ್ತು ಅಮೆರಿಕಾದ ಕಾರು ವಿನ್ಯಾಸಗಳನ್ನು ಕಾಪಿ ಮಾಡುತ್ತದೆ. ಆದರೆ ಈ ಪ್ರೀಮಿಯರ್ ಕಂಪನಿ ಚೈನಾ ಕಾರುಗಳನ್ನು ಕಾಪಿ ಮಾಡಿಕೊಳ್ಳುತ್ತಿದೆ ಎಂದೆನಿಸುತ್ತದೆ. ಯಾಕೆಂದರೆ ಈ ರಿಯೊ ಕಾರು ಚೈನಾದ Zotye ಸ್ಪೋರ್ಟ್ಸ್ ಕಾರಿನಂತಿದೆ. ಪ್ರೀಮಿಯರ್ ರಿಯೊ ಪೆಟ್ರೋಲ್ ಕಾರಿನ ದರ 4.90 ಲಕ್ಷ ರು.ನಿಂದ 5.79 ಲಕ್ಷ ರು.ವರೆಗಿದೆ.


Click it and Unblock the Notifications








