ಹುರ್ರೆ.. ಫಿಯೆಸ್ಟಾ ಗ್ರಾಹಕರಿಗೆ ಚಿನ್ನ ಉಚಿತ

Posted By:
Get Rs.75k Gold Free With New Ford Fiesta Classic
ದೀಪಾವಳಿ ಅಂದ್ರೆ ಕಾರು ಕಂಪನಿಗಳಿಗೆ ಅತ್ಯಧಿಕ ಕಾರು ಮಾರಾಟದ ಕಾಲ. ಈ ಸಮಯದಲ್ಲಿ ಕಂಪನಿಗಳು ನೀಡುವ ಆಫರುಗಳು ಬೊಂಬಾಟ್ ಆಗಿರುತ್ತವೆ. ಆಫರ್ ನೀಡುವಲ್ಲಿ ಕಾರು ಕಂಪನಿಗಳ ನಡುವೆ ಪೈಪೋಟಿ ಕಾಣುತ್ತದೆ. ಇದೀಗ ಫೋರ್ಡ್ ಕಂಪನಿಯು ನೀಡಿರುವ ದೀಪಾವಳಿ ಆಫರ್ ವಿಶೇಷವಾಗಿದೆ.

ಈ ದೀಪಾವಳಿಗೆ ನೀವು ಫೋರ್ಡ್ ಫಿಯೆಸ್ಟಾ ಕ್ಲಾಸಿಕ್ ಕಾರು ಖರೀದಿಸಿದರೆ ನಿಮ್ಮ ಹೆಂಡತಿ ಡಬಲ್ ಖುಷಿ ಪಡಬಹುದು. ಮೊದಲನೆಯದಾಗಿ ನೀವು ಒಂದು ಚಂದದ ಕಾರು ಖರೀದಿಸಿದ ಸಂತೋಷ. ಮತ್ತೊಂದು ಬಯಸದೇ ಬಂದ ಭಾಗ್ಯದಂತೆ ಉಚಿತವಾಗಿ 75 ಸಾವಿರ ರು. ಮೌಲ್ಯದ ಚಿನ್ನದ ಕೊಡುಗೆ ದೊರಕಿರುವುದು.

ಫಿಯೆಸ್ಟಾ ಕ್ಲಾಸಿಕ್ ಎಲ್ಎಕ್ಸ್ ಐ ಕಾರಿಗೆ "ಫೋರ್ಡ್ ಗೋಲ್ಡ್ ರಷ್" ಕೊಡುಗೆ ನೀಡುತ್ತಿದೆ. ಕಂಪನಿಯು ಕ್ಲಾಸಿಕ್ ಎಲ್ಎಕ್ಸ್ಐ ಪೆಟ್ರೋಲ್ ಆವೃತ್ತಿ ಖರೀದಿದಾರರಿಗೆ ಕಂಪನಿಯು 75 ಸಾವಿರ ರು. ಮೊತ್ತದ ಚಿನ್ನದ ಉಡುಗೊರೆ ನೀಡಲಿದೆ.

ಫೊರ್ಡ್ ದೇಶದಲ್ಲಿ ಹೊರತಂದ ಕ್ಲಾಸಿಕ್ ಆವೃತ್ತಿ ಆಕರ್ಷಕ ಕಾರು. ಇದು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಅತ್ಯುತ್ತಮ ನಿರ್ವಹಣೆ, ಇಂಟಿರಿಯರ್ ಒಳಗಡೆ ಸಾಕಷ್ಟು ಸ್ಥಳಾವಕಾಶ, ಕಾರ್ಯಕ್ಷಮತೆ ದಕ್ಷತೆ ಇತ್ಯಾದಿ ವಿಷಯಗಳಲ್ಲಿ ಫಿಯೆಸ್ಟಾ ಕ್ಲಾಸಿಕ್ ಫೇಮಸ್ಸು.

ಫಿಯೆಸ್ಟಾ ಕ್ಲಾಸಿಕ್ ಎಲ್ಎಕ್ಸ್ಐ ಪೆಟ್ರೋಲ್ ಆವೃತ್ತಿ ಖರೀದಿದಾರರಿಗೆ ಕಂಪನಿಯು 75 ಸಾವಿರ ರು. ಮೊತ್ತದ ಚಿನ್ನದ ಉಡುಗೊರೆ ನೀಡಲಿದೆ. ಅಂದ ಹಾಗೆ ಈ ಕಾರಿನ ಎಕ್ಸ್ ಶೋರೂಂ ದರ 7.30 ಲಕ್ಷ ರು. ಆಸುಪಾಸಿನಲ್ಲಿದೆ. ಚಿನ್ನದ ಆಫರನ್ನು ನೋಡಿದರೆ ಕಂಪನಿಯು ಸುಮಾರು ಶೇಕಡ 10ರಷ್ಟು ಡಿಸ್ಕೌಂಟ್ ನೀಡುತ್ತಿದೆ ಎಂದು ತಿಳಿದುಕೊಳ್ಳಬಹುದು.

English summary
Here comes another festive offer that is available only until the end of October. Ford Motors has announced the Ford Gold Rush for the Fiesta Classic. This offer promises to provide gold worth Rs.75,000 with every purchase of the Fiesta Classic Lxi.
Story first published: Tuesday, October 25, 2011, 10:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark