ದುಬಾರಿ ಫೆರಾರಿ ಕಾರು ಬೆಂಕಿಗಾಹುತಿ

ದೇಶದ ರಸ್ತೆಯಲ್ಲಿ ಫೆರಾರಿ ದುಬಾರಿ ಕಾರು. ಇಲ್ಲಿ ಇದರ ದರ ಸುಮಾರು 3.5 ಕೋಟಿ ರುಪಾಯಿ ಇದೆ. ಫೆರಾರಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಹಿಂಭಾಗ ಹ್ಯಾಚ್ ಆಗಿರುವ ನಾಲ್ಕು ಸೀಟಿನ ಫ್ಯಾಮಿಲಿ ಕಾರನ್ನು ಅನಾವರಣ ಮಾಡಿತ್ತು.
ಇದರಲ್ಲಿ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಎರಡು ಹೆಚ್ಚುವರಿ ಸೀಟುಗಳಿವೆ. ಹಿಂಭಾಗದ ಹ್ಯಾಚ್ ಡೋರಿನಿಂದಾಗಿ ಲಗೇಜ್ ಸ್ಥಳಾವಕಾಶ ಹೆಚ್ಚಾಗಿದೆ. ಇದರ ಇಂಟಿರಿಯರ್ ಕೂಡ ಅತ್ಯಧಿಕ ಗುಣಮಟ್ಟದ ಚರ್ಮದ ಹೊದಿಕೆ ಮತ್ತು ಕಾರ್ಬನ್ ಫೈಬರಿನಿಂದ ಇಷ್ಟವಾಗುತ್ತದೆ.
ಎಫ್ಎಫ್ ಕಾರು ಬೆಂಕಿಗಾಹುತಿಯಾಗಿ ಫೆರಾರಿ ಫ್ಯಾನ್ ಗಳಿಗೆ ಷಾಕ್ ನೀಡಿದೆ. ಫೆರಾರಿ ಎಫ್ಎಫ್ ಕಾರನ್ನು 44 ವರ್ಷದ ವ್ಯಕ್ತಿಯೊಬ್ಬರು ಟೆಸ್ಟ್ ಡ್ರೈವ್ ಮಾಡುತ್ತಿದ್ದರು. ಆದರೆ ಕಾರು ಕೊಂಚ ಬಿಸಿಯಾದ ಅನುಭವವಾದ ಹಿನ್ನಲೆಯಲ್ಲಿ ಅವರು ಕಾರನ್ನು ಪಾರ್ಕ್ ಮಾಡಿ ಹೊರಗೆ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಪೋರ್ಟ್ಸ್ ಕಾರು ಬೆಂಕಿಗಾಹುತಿಯಾಗಿದೆ.
ಹಾಗಂತ ಫೆರಾರಿ ಕಾರು ಬೆಂಕಿಗಾಹುತಿಯಾಗುವುದು ಇದೇ ಮೊದಲಲ್ಲ. ಫೆರಾರಿ 438 ಇಟಲಿಯ ರಸ್ತೆಗಿಳಿದ 4 ತಿಂಗಳಲ್ಲಿ ಬೆಂಕಿಗಾಹುತಿಯಾಗಿತ್ತು.


Click it and Unblock the Notifications








