ಕ್ಷೇಟಾ ಹೊರಗೆ ನೋಡಿ, ಒಳಗೆ ಇಣುಕಿ!

ಎಕ್ಸ್ ಟೀರಿಯರ್: ಟಾಟಾ ಇಂಡಿಕಾ ವಿ2 ಕ್ಷೇಟಾ ಕಾರು ನೋಡಲು ಆಕರ್ಷಕವಾಗಿದೆ. ಅಲಾಯ್ ವೀಲ್, ಟಿಂಟೆಡ್ ಅಥವಾ ಬಣ್ಣದ ಗ್ಲಾಸ್, ಆಕರ್ಷಕ ಮುಂಭಾಗದ ಗ್ರಿಲ್ ಗಳು, ಬಾಡಿ ಬಣ್ಣದ ಒಆರ್ ವಿಎಂ ಗಮನ ಸೆಳೆಯುತ್ತವೆ. ಟಾಟಾ ಇಂಡಿಕಾ ವಿ2 ಕ್ಷೇಟಾ ಹನ್ನೆರಡು ಬಣ್ಣಗಳಲ್ಲಿ ದೊರಕುತ್ತಿದೆ.
ಇಂಟಿರಿಯರ್: ಕ್ಷೇಟಾ ಕಾರಿನ ಇಂಟಿರಿಯರ್ ಗೆ ಇಣುಕಿದಾಗ ಈ ಕಾರು ಹಳೆಯ ಇಂಡಿಕಾ ವಿ2 ಫೀಚರುಗಳನ್ನೇ ಹೊಂದಿರುವುದು ಸ್ಪಷ್ಟವಾಗುತ್ತದೆ. ಆದರೂ ಅದರಲ್ಲಿ ಸೆಂಟ್ರಲ್ ಕನ್ಸೂಲ್ ಮತ್ತು ಇನ್ ಸ್ಟ್ರಮೆಂಟ್ ಕ್ಲಸ್ಟರ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ಈ ಕಾರು ಎಸ್ಟಿಲೊ, ಬೀಟ್, ಸ್ಪಾರ್ಕ್, ಆಲ್ಟೊ ಮತ್ತು ಮಾರುತಿ ಎ ಸ್ಟಾರ್ ಕಾರುಗಳಿಗಿಂತ ಆಕರ್ಷಕವಾದ ಇಂಟಿರಿಯರ್ ಹೊಂದಿದೆ.


Click it and Unblock the Notifications








