ಟಾಟಾ ಕ್ಷೇಟಾ: ದರ ಮತ್ತು ಮೈಲೇಜ್ ಎಷ್ಟು?

Posted By: * ಪಿಸಿ
Tata Indica V2 Xeta Full Review
ಎಲ್ಲಾ ಭಾರತೀಯರಂತೆ ನಿಮ್ಮ ಪ್ರಮುಖ ಪ್ರಶ್ನೆ ಮೈಲೇಜ್ ವಿಷ್ಯದ ಕುರಿತಾಗಿರಬಹುದು. ಕ್ಷೇಟಾ ಕಾರು ಎಲ್ ಪಿಜಿ ಆಯ್ಕೆಯಲ್ಲೂ ದೊರಕುತ್ತದೆ. ಎಲ್ ಪಿಜಿ ಕ್ಷೇಟಾ ಕಾರಿನಲ್ಲಿ ಸಿಟಿ ರಸ್ತೆಯಲ್ಲಿ 14 ಕಿ.ಮೀ. ಮತ್ತು ಹೆದ್ದಾರಿಯಲ್ಲಿ 16.5 ಕಿ.ಮೀ. ಮೈಲೇಜ್ ದೊರಕುತ್ತದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ ಕ್ಷೇಟಾ ಕಾರಿನಲ್ಲಿ ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 13 ಕಿ.ಮೀ. ಮತ್ತು ಹೆದ್ದಾರಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 15.5 ಕಿ.ಮೀ. ಮೈಲೇಜ್ ಪಡೆಯಬಹುದಾಗಿದೆ.

ದರ: ಟಾಟಾ ಇಂಡಿಕಾ ವಿ2 ಕ್ಷೇಟಾ ಹ್ಯಾಚ್ ಬ್ಯಾಕ್ ಕಾರು ಹೆಚ್ಚು ದುಬಾರಿಯಲ್ಲ. ಇದರ ಅಂದಾಜು ಎಕ್ಸ್ ಶೋರೂಂ ದರ 2.93 ಲಕ್ಷ ರುಪಾಯಿಯಿಂದ 3.63 ಲಕ್ಷ ರು.ವರೆಗಿದೆ.

ಬೆಂಗಳೂರು ಎಕ್ಸ್ ಶೋರೂಂ ದರ
 ಎಂಜಿನ್  ಜಿಎಲ್  ಜಿಎಲ್ಇ  ಜಿಎಲ್ಎಸ್  ಜಿಎಲ್ಎಕ್ಸ್
 ಪೆಟ್ರೋಲ್ ಬಿಎಸ್ 4  2,99,883 ರು.  3,23,096 ರು.  3,42,284 ರು.  3,66,597 ರು.
 ಎಲ್ ಪಿಜಿ ಬಿಎಸ್ 4  - 3,60,216 ರು. 3,58,861 ರು.  -

ಷರಾ: ಇಂಡಿಕಾ ವಿ2 ಕ್ಷೇಟಾ ಕಾರು ಅತ್ಯುತ್ತಮವಾಗಿದೆ. ಆದರೆ ಇದರಲ್ಲಿ ಏರ್ ಬ್ಯಾಗ್ ಮತ್ತು ಆಂಟಿ ಲಾಖ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿ ಪ್ರಮುಖ ಸುರಕ್ಷತೆಯ ಫೀಚರುಗಳು ಮಿಸ್ ಆಗಿವೆ. ಆರಾಮದಾಯಕತೆಯ ವಿಷ್ಯದಲ್ಲಿ ಈ ಕಾರು ಚರ್ಮದ ಸೀಟ್ ಮ್ಯಾಟ್ ಹೊಂದಿರಬೇಕಿತ್ತು. ಮನರಂಜನೆ ವಿಷ್ಯಕ್ಕೆ ಬಂದರೆ ಇದರಲ್ಲಿ ಯಾವುದೇ ಮ್ಯೂಸಿಕ್ ಸಿಸ್ಟಮ್ ಇಲ್ಲ. (ಮ್ಯೂಸಿಕ್ ಸಿಸ್ಟಮ್ ಬೇಕೆ?).

English summary
Tata Indica V2 Xeta Full Review: Tata Indica V2 Xeta specifications, features, colors, prices, reviews, Price, Mileage, Engine expert review.
Story first published: Monday, November 7, 2011, 10:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark