ಬಿಎಂಡಬ್ಲ್ಯು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಆರಂಭ

Posted By:
BMW launched pre-owned car business in India
ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ವಹಿವಾಟು ಆರಂಭಿಸಿದೆ. ದೇಶದ ಕಾರು ಮಾರುಕಟ್ಟೆಯಲ್ಲಿ ಹಳೆಯ ಕಾರುಗಳಿಗೆ ಅತ್ಯಧಿಕ ಬೇಡಿಕೆ ಇರುವುದರಿಂದ ಮರ್ಸಿಡಿಸ್ ಬೆಂಝ್ ನಂತೆ ಬಿಎಂಡಬ್ಲ್ಯು ಕೂಡ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಕೂಡ ಕಾರು ಭೋಗ್ಯ ವಹಿವಾಟನ್ನು ಭಾರತದಲ್ಲಿ ಆರಂಭಿಸಿತ್ತು. ಬಿಎಂಡಬ್ಲ್ಯು ಕೂಡ ಸೆಕೆಂಡ್ ಹ್ಯಾಂಡ್ ಕಾರು ವಹಿವಾಟು ಸುರು ಮಾಡಿರುವುದರಿಂದ ಗ್ರಾಹಕರು ದುಬಾರಿ ಕಾರುಗಳನ್ನು ಸುಮಾರು 16 ಲಕ್ಷ ರು. ಆಸುಪಾಸಿನಲ್ಲಿ ಖರೀದಿಸಬಹುದಾಗಿದೆ.

"ಕಳೆದ ತಿಂಗಳವರೆಗೆ ಕಂಪನಿಯು 8,042 ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡಿದ್ದೇವೆ. ಇದೀಗ ಪ್ರೀಮಿಯಂ ಸೆಲೆಕ್ಷನ್ ಅಥವಾ ಸೆಕೆಂಡ್ ಹ್ಯಾಂಡ್ ಕಾರು ಬಿಸಿನೆಸ್ ಆರಂಭವಾಗಿರುವುದು ಕಂಪನಿಯನ್ನು ಇನ್ನಷ್ಟು ಸದೃಢಗೊಳಿಸಲಿದೆ" ಎಂದು ಬಿಎಂಡಬ್ಲ್ಯು ಅಧ್ಯಕ್ಷ ಆಂಡ್ರಿಸ್ ಸ್ಕಾಫ್ ಹೇಳಿದ್ದಾರೆ.

"ಸೆಕೆಂಡ್ ಹ್ಯಾಂಡ್ ಕಾರು ಬಿಸಿನೆಸ್ ನಿಂದ ಕಂಪನಿಯ ಒಟ್ಟಾರೆ ವಹಿವಾಟು ದೇಶದಲ್ಲಿ ಶೇಕಡ 10ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.

ಈಗ ಹೊಸ 3 ಸೀರಿಸ್ ಸೆಡಾನ್ ಕಾರು ದರ ಸುಮಾರು 24 ಲಕ್ಷ ರುಪಾಯಿ ಇದೆ. ಮೂರು ವರ್ಷ ಬಳಕೆ ಮಾಡಿದ ನಂತರ ಇದರ ದರ ಸುಮಾರು 16 ಲಕ್ಷ ರು. ಇರಲಿದೆ. ದೇಶದಲ್ಲಿರುವ ಕಂಪನಿಯ 7 ಬಿಎಂಡಬ್ಲ್ಯು ಪ್ರೀಮಿಯಂ ಸೆಲೆಕ್ಷನ್ ಶೋರೂಂಗಳಲ್ಲಿ ಇಂತಹ ಕಾರುಗಳು ದೊರಕಲಿದೆ ಎಂದು ಸ್ಕಾಫ್ ಮಾಹಿತಿ ನೀಡಿದ್ದಾರೆ.

ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರದಲ್ಲಿ ಬಿಎಂಡಬ್ಲ್ಯು ಫೈನಾನ್ಶಿಯಲ್ ಸರ್ವಿಸಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ. ತನ್ನ ಹಣಕಾಸು ಸೇವಾ ಕಂಪನಿಯ ಮೂಲಕ ಶೇಕಡ 13ರಷ್ಟು ಹಣವನ್ನು ಗ್ರಾಹಕರು ಸಾಲ ಪಡೆಯಬಹುದಾಗಿದೆ.

ಕಂಪನಿಯು ಈ ವರ್ಷ 10 ಸಾವಿರ ಕಾರು ಮಾರಾಟ ಮಾಡುವ ಗುರಿ ಹೊಂದಿತ್ತು. ಆದರೆ ಸದ್ಯದ ಮಾರುಕಟ್ಟೆ ಸಿತ್ಯಾಂತರದಿಂದ ಅಷ್ಟು ಮಾರಾಟವಾಗುವುದು ಕಷ್ಟ ಎಂದು ಸ್ಕಾಫ್ ಹೇಳಿದ್ದಾರೆ.

English summary
BMW launched its pre-owned car business in India. Now customers can get the premium car for as low as Rs 16 lakh in BMW Premium Selection Showrooms.
Story first published: Friday, November 25, 2011, 9:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark