ಎಕೊಸ್ಪೋರ್ಟ್: ಕಾಂಪ್ಯಾಕ್ಟ್ ಸ್ಪೋರ್ಟ್ ಕಾರು

EcoSport Compact SUV In Delhi Auto Expo
ಫೋರ್ಡ್ ಫ್ಯಾಕ್ಟರಿಯಿಂದ ಮತ್ತೊಂದು ಕಾರು ದೇಶದ ರಸ್ತೆಗಿಳಿಯಲಿದೆ. ಕಂಪನಿಯು ಎಕೊಸ್ಪೋರ್ಟ್ ಎಂಬ ಸ್ಪೋರ್ಟ್ ಯುಟಿಲಿಟಿ ವಾಹನವನ್ನು ಪರಿಚಯಿಸಲಿದೆಯಂತೆ. ಕಂಪನಿಯು ಇತ್ತೀಚೆಗೆ ಹೊರತಂದ ನೂತನ ಫೋರ್ಡ್ ಫಿಯೆಸ್ಟಾ ಕಾರನ್ನು ಜಾಗತಿಕ ಪ್ಲಾಟ್ ಫಾರ್ಮ್ ನಲ್ಲಿ ಹೊರತಂದಿತ್ತು.

ಇದೀಗ ಫಿಯೆಸ್ಟಾ ಪ್ಲಾಟ್ ಫಾರ್ಮ್ ನಲ್ಲಿ ಕಂಪನಿಯು ಎಕೊಸ್ಪೋರ್ಟ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಎಕೊಸ್ಪೋರ್ಟ್ ಕಾಂಪ್ಯಾಕ್ಟ್ ಎಸ್ ಯುವಿಯನ್ನು 2012ರ ವಾಹನ ಪ್ರದರ್ಶನದಲ್ಲಿ ಫೋರ್ಡ್ ಪ್ರದರ್ಶಿಸುವ ನಿರೀಕ್ಷೆಯಿದೆ. ಎಕೊಸ್ಪೋರ್ಟ್ ಎಂದರೆ ಫೋರ್ಡ್ ಗೆ ಹೊಸ ಹೆಸರಲ್ಲ. ಕಂಪನಿಯು ಈಗಾಗಲೇ ಎಕೊಸ್ಪೋರ್ಟ್ ಹೆಸರಿನ ಕಾರನ್ನು ಬ್ರೆಝಿಲ್ ನಲ್ಲಿ ಮಾರಾಟ ಮಾಡುತ್ತಿದೆ.

ಕಂಪನಿಯು ನೂತನ ಸ್ಪೋರ್ಟ್ ಕಾರಿನ ವಿಸ್ತಾರವನ್ನು ನಾಲ್ಕು ಮೀಟರಿಗಿಂತ ಕಡಿಮೆ ಮಾಡಿದೆ. ಇದರು ಕಡಿಮೆ ಅಬಕಾರಿ ಸುಂಕ ಪಡೆಯಲು ಕಂಪನಿಯ ಉಪಾಯ. ಗಾತ್ರ ಚಿಕ್ಕದಾದರೂ ಫೀಚರು, ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಎಕೊಸ್ಪೊರ್ಟ್ ಕಾರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕಲಿದೆ. ಇದು 1.5 ಲೀಟರಿನ ಡಿವಿ5 ಡೀಸೆಲ್ ಎಂಜಿನ್ ಹೊಂದಿದ್ದು 90 ಹಾರ್ಸ್ ಪವರ್ ನೀಡುತ್ತದೆ. ಆದರೆ ಕಂಪನಿಯು ಎಕೊಸ್ಪೋರ್ಟ್ ಪೆಟ್ರೋಲ್ ಆವೃತ್ತಿ ಹೊರತರುವ ಯಾವುದೇ ಸೂಚನೆಗಳಿಲ್ಲ. ಪ್ರಮುಖ ವಿಷ್ಯವೆಂದರೆ ದರ. ನೂತನ ಫೋರ್ಡ್ ಎಕೊಸ್ಪೋರ್ಟ್ ದರ ಸುಮಾರು 7ರಿಂದ 9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

Most Read Articles

Kannada
English summary
We all know that the new Ford Fiesta is built on a global platform that will be used to develop an array of new products. The first of several new cars to be built on the Fiesta's platform is the new EcoSport Compact SUV. The Ford EcoSport will most likely be unveiled at the 2012 Auto Expo in Delhi this January.
Story first published: Saturday, November 26, 2011, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X