ಇ-ವಾಹನ ಗುರಿ ಸಾಧಿಸಲು ಸರಕಾರಕ್ಕೆ ಬಹುಕೋಟಿ ಬೇಕು!!

ಈ ಯೋಜನೆಗೆ ಸುಮಾರು 22,500 ಕೋಟಿ ರು. ಹೂಡಿಕೆ ಮಾಡಬೇಕಾದ ಅಗತ್ಯವಿದೆ ಎಂದು ದೇಶದ ವಾಹನ ಒಕ್ಕೂಟ(SIAM) ಹೇಳಿದೆ. ಈ ಪ್ರಾಜೆಕ್ಟ್ ಖಂಡಿತವಾಗಿಯೂ ಇಂಧನ ಉಳಿಕೆ ಮಾಡಲಿದೆ ಎಂದು ವಾಹನ ಒಕ್ಕೂಟ ತಿಳಿಸಿದೆ.
ಈ ದಶಕದ ಅಂತ್ಯಕ್ಕೆ ಎಲೆಕ್ಟ್ರಿಕ್ ವಾಹನ ಬೇಡಿಕೆ ಸುಮಾರು 50 ಪಟ್ಟು ಹೆಚ್ಚಲಿದೆ ಎಂದು ಭಾರಿ ಉದ್ದಿಮೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಿಸರ ಸ್ನೇಹಿ ವಾಹನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರಕಾರದ ಈ ಕ್ರಮ ನೆರವಾಗಲಿದೆ. ಆದರೆ ಈ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಬೃಹತ್ ಪ್ರಮಾಣದ ಹೂಡಿಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ದೇಶವು ಇದೀಗ ಹೆಚ್ಚು ದಕ್ಷತೆಯ ಬ್ಯಾಟರಿ ಅಭಿವೃದ್ಧಿಪಡಿಸಲು ಗಮನ ಹರಿಸುತ್ತಿದೆ. ಹೆಚ್ಚಿನ ಹೂಡಿಕೆ ಬ್ಯಾಟರಿ ಅಭಿವೃದ್ಧಿಪಡಿಸಲು ವಿನಿಯೋಗವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








