ಐಕಾನಿಕ್ ಅಂಬಾಸಡರ್ ಕಾರು ಬಾಂಗ್ಲಾದಲ್ಲಿ ಟ್ಯಾಕ್ಸಿ

ಈ ಕುರಿತು ಕಂಪನಿಯು ಈಗಾಗಲೇ ಬಾಂಗ್ಲಾದ ಇಟ್ರಾಕೊ ಗ್ರೂಪ್ ಜೊತೆ ವ್ಯವಹಾರ ಮಾತುಕತೆ ನಡೆಸುತ್ತಿದೆ. ಸಿಕೆ ಬಿರ್ಲಾ ಗ್ರೂಪ್ ಆಟೋಮೊಬೈಲ್ ಕಂಪನಿಯು ಬಾಂಗ್ಲಾದೇಶದಲ್ಲಿ ಅಂಬಾಸಡರ್ ನಿರ್ಮಿಸಲು ಯೋಜಿಸಿದೆ. ಆದರೆ ಈ ಅಸೆಂಬಲ್ ಘಟಕ ಕಾರ್ಯನಿರ್ವಹಿಸಲು ಇನ್ನೂ ಎರಡು ವರ್ಷ ಬೇಕಿದೆ.
"ಅಂಬಾಸಡರ್ ಕಾರಿನ ರಫ್ತನ್ನು ಈಗಾಗಲೇ ಆರಂಭಿಸಿದ್ದೇವೆ. ಬಾಂಗ್ಲಾದಲ್ಲಿ ಈ ಕಾರು ಹೆಚ್ಚು ಬೇಡಿಕೆ ಕಂಡರೆ ಅಲ್ಲೇ ಸಿಬಿಯು ಘಟಕ ಮೂಲಕ ಅಂಬಾಸಡರ್ ಪೂರೈಕೆ ಮಾಡಲಿದ್ದೇವೆ" ಎಂದು ಹಿಂದೂಸ್ತಾನ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಝಾ ಹೇಳಿದ್ದಾರೆ.


Click it and Unblock the Notifications








