ವೆರ್ನಾ ಮತ್ತು ಇಯಾನ್ ಗೆ ಓವರ್ ಡ್ರೈವ್ ಪ್ರಶಸ್ತಿ

Posted By:
Hyundai Received CNBC TV18 Overdrive awards 2012
ದೇಶದ ಎರಡನೇ ಬೃಹತ್ ಪ್ರಯಾಣಿಕ ಕಾರು ಕಂಪನಿ ಹ್ಯುಂಡೈನ ವೆರ್ನಾ ಮತ್ತು ಇಯಾನ್ ಕಾರುಗಳು "CNBC TV18 ಓವರ್ ಡ್ರೈವ್ ಅವಾರ್ಡ್ 2012" ಪ್ರಶಸ್ತಿ ಪಡೆದಿವೆ. ಹ್ಯುಂಡೈ ಇಯಾನ್ "ವರ್ಷದ ಸಣ್ಣಕಾರು ಪ್ರಶಸ್ತಿ" ಮತ್ತು ವೆರ್ನಾ ಕಾರು "ವರ್ಷದ ಮಧ್ಯಮಗಾತ್ರದ ಕಾರು" ಪ್ರಶಸ್ತಿ ಬಾಚಿಕೊಂಡಿವೆ.

ಇವೆರಡು ಕಾರುಗಳು ಆಕರ್ಷಕ ಫ್ಲೂಡಿಕ್ ವಿನ್ಯಾಸದಿಂದ ಗ್ರಾಹಕರನ್ನು ಸೆಳೆದಿವೆ. ಹ್ಯುಂಡೈ ಫ್ಲೂಡಿಕ್ ವೆರ್ನಾ ಕಾರು ಈ ವರ್ಷದ ಮೇ ತಿಂಗಳಲ್ಲಿ ರಸ್ತೆಗಿಳಿದಿತ್ತು. ಸಣ್ಣಕಾರು ಇಯಾನ್ ಇತ್ತೀಚೆಗೆ ಅಂದರೆ ಅಕ್ಟೋಬರ್ ತಿಂಗಳಲ್ಲಿ ರಸ್ತೆಗಿಳಿದಿದೆ. ಇಯಾನ್ ಕಾರು ತನ್ನ ಆಕರ್ಷಕತೆ, ಕಡಿಮೆ ದರ ಮತ್ತು ಹೆಚ್ಚು ಮೈಲೇಜಿನಿಂದ ಹೆಚ್ಚು ಜನರಿಗೆ ಇಷ್ಟವಾಗಿದೆ.

2011ರ ವೆರ್ನಾ: ಈ ಕಾರು ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.

ಓದಿ: ಹ್ಯುಂಡೈ ಫ್ಲೂಡಿಕ್ ವೆರ್ನಾ ಸಂಪೂರ್ಣ ವಿಮರ್ಶೆ

ಹ್ಯುಂಡೈ ಇಯಾನ್: ಇಯಾನ್ ಕಾರು 814 ಸಿಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ. ಪ್ರತಿಲೀಟರ್ ಪೆಟ್ರೋಲ್ ಗೆ 21.1 ಕಿ.ಮೀ. ಮೈಲೇಜ್ ನೀಡುತ್ತದೆ. ನೂತನ ಇಯಾನ್ ಬೆಂಗಳೂರು ಎಕ್ಸ್ ಶೋರೂಂ ದರ 2,73,599 ರು.ನಿಂದ 3,76,827 ರುಪಾಯಿವರೆಗಿದೆ.

ಇಯಾನ್ ವಿಮರ್ಶೆ: ಸೌಂಡ್ ಸ್ವಲ್ಪ ಜಾಸ್ತಿ ಮಾಡು, ತುಂಬಾ ಒಳ್ಳೆ ಕಾರಿದು

English summary
Hyundai Motor India Ltd, received CNBC TV18 Overdrive awards for 2012. Hyundai Eon has been awarded the Micro-Mini Car of The Year and Hyundai Verna bagged the Midsized Car of The Year From CNBC TV18 Overdrive. Verna and Eon Review and Bangalore Price...
Story first published: Monday, December 12, 2011, 11:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark