ಐಐಟಿ, ಐಐಎಂ ಪದವೀಧರರಿಗೆ ಹ್ಯುಂಡೈ ಗಾಳ

Posted By:
Hyundai Starts Search IIT IIM Placement
ಬೆಂಗಳೂರು, ಡಿ 20: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಐಐಎಂ ಪದವೀಧರರತ್ತ ಕೊರಿಯಾದ ಹ್ಯುಂಡೈ ಮೋಟರ್ ಕಂಪನಿ ದೃಷ್ಟಿಹರಿಸಿದೆ. ಕಂಪನಿಯು ತನ್ನ ಜಾಗತಿಕ ವಹಿವಾಟಿಗೆ ದೇಶದ ಐಐಟಿ ಮತ್ತು ಐಐಎಂ ವಿದ್ಯಾರ್ಥಿಗಳನ್ನು ನೇಮಕಮಾಡಿಕೊಳ್ಳಲು ಆರಂಭಿಸಿದೆ.

ಈ ನೇಮಕಾತಿಯ ಮೊದಲ ಭಾಗವಾಗಿ ಕಂಪನಿಯು ಈಗಾಗಲೇ ಮದ್ರಾಸ್ ಐಐಟಿಯ ಇಬ್ಬರನ್ನು ನೇಮಕಮಾಡಿಕೊಂಡಿದೆ. ಅವರ ಎಷ್ಟು ವೇತನ ಗೊತ್ತೆ? ವರ್ಷಕ್ಕೆ ಸುಮಾರು 50 ಸಾವಿರ ಡಾಲರ್. ಅಂದ್ರೆ ಸುಮಾರು 27 ಲಕ್ಷ ರುಪಾಯಿಯಷ್ಟು.

ವಿಶ್ವದ ಐದನೇ ಬೃಹತ್ ಕಂಪನಿ ಹ್ಯುಂಡೈ, ಬೆಂಗಳೂರು ಐಐಎಂ ಪದವೀಧರರ ಕಡೆಗೂ ದೃಷ್ಟಿ ಹರಿಸಿದೆ. ಬೆಂಗಳೂರು ಐಐಎಂನಿಂದ ಕನಿಷ್ಠ ಒಬ್ಬನನ್ನಾದರೂ ಜಾಗತಿಕ ಮಾರುಕಟ್ಟೆ ವಹಿವಾಟಿಗೆ ಕಂಪನಿ ನೇಮಕಾತಿ ಮಾಡಲು ನಿರ್ಧರಿಸಿದೆ ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ.

ಬೆಂಗಳೂರು ಐಐಎಂ ಪದವೀಧರನಿಗೆ ವೇತನ ಇನ್ನೂ ಹೆಚ್ಚಿರಲಿದೆಯಂತೆ. ಅಂದರೆ ಈ ಅಭ್ಯರ್ಥಿ ವೇತನ ಸುಮಾರು 70 ಸಾವಿರ ಡಾಲರ್ ಅಂದರೆ ವರ್ಷಕ್ಕೆ ಸುಮಾರು 39 ಲಕ್ಷ ರುಪಾಯಿ ಇರಲಿದೆ. ಇಷ್ಟು ವೇತನ ಮಾತ್ರವಲ್ಲದೇ ವಸತಿ, ಆರೋಗ್ಯ ವಿಮೆ ಮತ್ತು ಊರಿಗೆ ಹೋಗುವ ವೆಚ್ಚಗಳನ್ನು ಕಂಪನಿ ಭರಿಸಲಿದೆಯಂತೆ.

ಲೀಡರ್ ವೇವ್ಸ್ ಮತ್ತು ಪ್ರೊಫೆಷನಲ್ ವೇವ್ಸ್ ಕಾರ್ಯತಂತ್ರದಡಿ ಕಂಪನಿಯು ಜಾಗತಿಕ ವಹಿವಾಟಿಗೆ ಐಐಟಿ ಮತ್ತು ಐಬಿಎಂ ಪದವೀಧರರನ್ನು ನೇಮಕಮಾಡಿಕೊಳ್ಳಲಿದೆ. ವಿದೇಶಿ ಘಟಕಗಳಿಗೆ ಅಂತಿಮ ನೇಮಕಾತಿ ಮಾಡುವ ಮುನ್ನ ಕಂಪನಿಯು ಅಭ್ಯರ್ಥಿಗಳಿಗೆ ಮ್ಯಾನೆಜ್ ಮೆಂಟ್/ಎಂಜಿನಿಯರಿಂಗ್ ಶಿಕ್ಷಣ ಕೂಡ ನೀಡುವುದಾಗಿ ಕಂಪನಿ ಹೇಳಿದೆ.

"ಹೆಚ್ಚಿನ ಐಐಟಿ ವಿದ್ಯಾರ್ಥಿಗಳ ಮಾಸ್ಟರ್ ಡಿಗ್ರಿ ಮಾಡಲು ಬಯಸುತ್ತಾರೆ. ಇದು ಕಂಪನಿಯ ಸಣ್ಣಹೆಜ್ಜೆ. ಫಲಿತಾಂಶ ಉತ್ತಮವಾಗಿದ್ದರೆ ಕಂಪನಿಯು ಇನ್ನಷ್ಟು ಐಐಟಿ ಮತ್ತು ಐಐಎಂ ಪದವೀಧರರನ್ನು ನೇಮಕಮಾಡಿಕೊಳ್ಳಲಿದೆ" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Korean auto major Hyundai Motor Company has embarked on a huge hiring project which is aimed to bolster its technical amd marketing divisions across the globe. Much of the hiring in India will focus on the reputed IITs and IIMs. It has already hired two students from IIT Madras under the Hyundai Blue Wave programme.
Story first published: Tuesday, December 20, 2011, 15:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark