ಸೌರಶಕ್ತಿ ಚಾಲಿತ ಮಹೀಂದ್ರ ಮತ್ತು ರೇವಾ ಕಾರು?!

Posted By:
To Follow DriveSpark On Facebook, Click The Like Button
Mahindra and Reva Cars will get Solar Power in Future
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಕಡಿಮೆಯಿದೆ. ಎಲೆಕ್ಟ್ರಿಕ್ ಕಾರುಗಳಿಗೆ ನಿತ್ಯ ಚಾರ್ಜ್ ಮಾಡುವ ಕಷ್ಟ ಕೆಲವರಿಗೆ ಇಷ್ಟವಿಲ್ಲ. ಭವಿಷ್ಯದಲ್ಲಿ ಮಹೀಂದ್ರ ಮತ್ತು ರೇವಾ ಕಾರುಗಳು ಸೋಲಾರ್ ಶಕ್ತಿಯಿಂದ ಚಲಿಸುವ ನಿರೀಕ್ಷೆಯಿದೆ.

ಮಹೀಂದ್ರ ಕಂಪನಿಯ ಸೌರ ತಂತ್ರಜ್ಞಾನ ವಿಭಾಗ "ಸೋಲಾರ್ ಒನ್" ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸೌರಚಾಲಿತ ಕಾರುಗಳು ಅನಿವಾರ್ಯತೆಯಿದೆ ಎಂದು ವಾಹನ ವಿಶ್ಲೇಷಕರ ಅಭಿಪ್ರಾಯ.

ಮುಂದಿನ ಎರಡು ವರ್ಷಗಳಲ್ಲಿ ರೇವಾ ಕಾರುಗಳಿಗೆ ಸೋಲಾರ್ ಪವರ್ ಅಳವಡಿಸುವ ಕುರಿತು ಕಂಪನಿ ಯೋಚಿಸುತ್ತಿದೆ. ಇದರೊಂದಿಗೆ ಹೈಬ್ರಿಡ್ ಕಾರು ಹೊರತರುವ ಕುರಿತು ಕಂಪನಿ ಯೋಚಿಸುತ್ತಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಸೋಲಾರ್ ತಂತ್ರಜ್ಞಾನ ಅಥವಾ ಡೀಸೆಲ್ ಕಾರುಗಳಿಗೆ ಹೈಬ್ರಿಡ್ ತಂತ್ರಜ್ಞಾನ ಅಳವಡಿಸುವ ನಿರೀಕ್ಷೆಯಿದೆ. ಹೀಗಾದರೆ ರೇವಾ ಹೈಬ್ರಿಡ್ ಕಾರುಗಳು ಜಾಗತಿಕವಾಗಿ ಜನಪ್ರಿಯಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ ಮಹೀಂದ್ರ ಕಾರುಗಳು ಸೋಲಾರ್ ಒನ್ ನೆರವಿನಿಂದ ಸೋಲಾರ್ ಕಾರುಗಳನ್ನು ನಿರ್ಮಿಸಲಿದೆ.

English summary
Bangalore based Mahindra and Reva cars will get solar power in some years. Some report said India’s first commercially produced electric car Reva will get solar power in two years.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark