ಟೊಯೊಟಾ ಪ್ರಿಯುಸ್ ದೇಶದ ರಸ್ತೆಗಿಳಿಯಲು ಕ್ಷಣಗಣನೆ

ಟೊಯೊಟಾ ಪ್ರಿಯುಸ್ ಪರಿಷ್ಕೃತ ಆವೃತ್ತಿ, ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ಫ್ರಾಂಕ್ ಫರ್ಟ್ ವಾಹನ ಪ್ರದರ್ಶನದಲ್ಲಿ ಪ್ರಿಯುಸ್ ಅನಾವರಣ ಮಾಡಿ ಕಂಪನಿಯು ಜಾಗತಿಕವಾಗಿ ಮಾರಾಟ ಆರಂಭಿಸಿತ್ತು.
ಹಳೆಯ ಪ್ರಿಯುಸ್ ಗಿಂತ ನೂತನ ಕಾರಿನಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್, ಎಲ್ ಇಡಿ ಇತ್ಯಾದಿಗಳನ್ನು ಮುಂಭಾಗದ ಬಂಪರಿನಲ್ಲಿ ಅಳವಡಿಸಲಾಗಿದೆ. ಅಲಾಯ್ ವೀಲ್ ವಿನ್ಯಾಸ ಬದಲಾಗಿದೆ. ಎಲೆಕ್ಟ್ರಿಕ್ ಸೈಡ್ ಮಿರರ್ ಅಳವಡಿಸಲಾಗಿದೆ.
ಆದರೆ ಎಂಜಿನ್ ಬದಲಾಗಿಲ್ಲ. ನೂತನ ಟೊಯೊಟಾ ಪ್ರಿಯುಸ್ 1.8 ಲೀಟರ್, 98 ಹಾರ್ಸ್ ಪವರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿರುವ ಆಟ್ಕಿನ್ಸನ್ ಸೈಕಲ್ ಮತ್ತು ಎಲೆಕ್ಟ್ರಿಕ್ ಮೋಟರುಗಳು ಹೆಚ್ಚುವರಿಯಾಗಿ 36 ಅಶ್ವಶಕ್ತಿ ನೀಡಲಿದೆ. ಈ ಕಾರಿನ ಮೈಲೇಜ್ ಪ್ರತಿಲೀಟರಿಗೆ 21 ಕಿ.ಮೀ. ಇದೆ.


Click it and Unblock the Notifications








