ರೆನಾಲ್ಟ್ ಕೊಲಿಯೊಸ್: ಒಂದು ಲಕ್ಷ ದುಬಾರಿ!!

Renault Koleos price hike
ರೂಪಾಯಿ ಮೌಲ್ಯ ಕುಸಿದಿರುವುದರಿಂದ ಕಾರು ಕಂಪನಿಗಳು ದರ ಹೆಚ್ಚಿಸುವ ಕುರಿತು ಪ್ರಕಟಿಸುತ್ತಿವೆ. ಇದೀಗ ರೆನಾಲ್ಟ್ ಇಂಡಿಯಾ ಕಂಪನಿಯು ಪ್ರೀಮಿಯಂ ಸ್ಪೋರ್ಟ್ ಕಾರಿನ ದರವನ್ನು ಸುಮಾರು 1 ಲಕ್ಷ ರು.ನಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ. ದರ ಹೆಚ್ಚಳ ಮುಂದಿನ ವರ್ಷ ಜನವರಿಯಿಂದ ಅನ್ವಯವಾಗಲಿದೆ.

ಜಾಗತಿಕ ಕರೆನ್ಸಿಗೆ ವಿರುದ್ಧವಾಗಿ ದೇಶದ ರೂಪಾಯಿ ಮೌಲ್ಯ ತಗ್ಗಿದೆ. ಹೀಗಾಗಿ ಕಂಪನಿಗೆ ಬೇರೆ ಯಾವ ಆಯ್ಕೆಯೂ ಕಾಣುತ್ತಿಲ್ಲ. ಹೊಸ ವರ್ಷದಿಂದ ಕೊಲಿಯೊಸ್ ದರ 22.99 ಲಕ್ಷ ರು. ಬದಲಾಗಿ 23.99 ಲಕ್ಷ ರು ಇರಲಿದೆ ಎಂದು ಕಂಪನಿ ಹೇಳಿದೆ.ಇದು ದೆಹಲಿ ಎಕ್ಸ್ ಶೋರೂಂ ದರ.

ರೆನಾಲ್ಟ್ ಕೊಲಿಯೊಸ್ ಈ ವರ್ಷದ ಸೆಪ್ಟಂಬರ್ ನಲ್ಲಿ ದೇಶದ ರಸ್ತೆಗಿಳಿದಿತ್ತು. ಕಂಪನಿಯು ಈ ಕಾರನ್ನು ಭಾರತಕ್ಕೆ ಆಮದುಮಾಡಿಕೊಳ್ಳುತ್ತಿದೆ. "ರೂಪಾಯಿ ಮೌಲ್ಯ ಕುಸಿತ ಮಾತ್ರವಲ್ಲದೇ ಕಚ್ಚಾ ಸಾಮಗ್ರಿಗಳ ದರ ಏರಿಕೆ ಕೂಡ ಕೊಲಿಯೊಸ್ ದರ ಹೆಚ್ಚಳಕ್ಕೆ ಕಾರಣ" ಎಂದು ಕಂಪನಿಯ ಎಂಡಿ ಮಾರ್ಕ್ ನಸೀಫ್ ಹೇಳಿದ್ದಾರೆ.

Most Read Articles

Kannada
English summary
Renault India announced it will hike the price of its SUV Koleos by Rs 1 lakh from 1 January 2012. Earlier Koleos offered at Rs 22.99 lakh which will now cost Rs 23.99 lakh. Reason: Depreciating rupee condition
Story first published: Thursday, December 15, 2011, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X