ಭೂತವನ್ನು ವಾಪಸ್ ಕರೆಸಿಕೊಂಡ ರೋಲ್ಸ್ ರಾಯ್ಸ್

Rolls Royce Recalls Ghost |
ಬ್ರಿಟನಿನ ದುಬಾರಿ ಕಾರು ಕಂಪನಿ ರೋಲ್ಸ್ ಯಾಯ್ಸ್ ಕಂಪನಿಯು ಸುಮಾರು 1,900 ಸೆಡಾನ್ ಕಾರು ಘೋಸ್ಟ್ ಹಿಂಪಡೆಯಲು ನಿರ್ಧರಿಸಿದೆ. ಸರ್ಕ್ಯೂಟ್ ಬೋರ್ಡ್ ನಲ್ಲಿ ಕಂಡು ಬಂದ ಸಮಸ್ಯೆಯನ್ನು ಸರಿಪಡಿಸಲು ಕಂಪನಿ ಈ ಹಿಂಪಡೆತ ಮಾಡಲಿದೆ. ಸೆಪ್ಟಂಬರ್ 2009ರಿಂದ ಸೆಪ್ಟಂಬರ್ 2010ರ ನಡುವೆ ಉತ್ಪಾದಿಸಿದ ಕಾರುಗಳನ್ನು ಕಂಪನಿ ವಾಪಸ್ ಪಡೆಯಲಿದೆ. ಭಾರತಕ್ಕೆ ಮಾರಾಟ ಮಾಡಿದ ಕಾರುಗಳನ್ನು ಕೂಡ ಕಂಪನಿ ಹಿಂಪಡೆಯಲಿದೆ.

"ಕಂಪನಿಯ ಜಾಗತಿಕ ಬ್ರಾಂಡ್ ತತ್ವದಂತೆ ನಾವು ಈ ಸಣ್ಣ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಬೃಹತ್ ಹಿಂಪಡೆತ ಪ್ರಕ್ರಿಯೆ ಆರಂಭಿಸಲಿದ್ದೇವೆ. ಆದರೆ ಈ ಸಮಸ್ಯೆ ಕುರಿತು ಯಾವುದೇ ಗ್ರಾಹಕರು ಇಲ್ಲಿವರೆಗೆ ದೂರು ಸಲ್ಲಿಸಿರಲಿಲ್ಲ. ಇಂತಹ ಸಮಸ್ಯೆ ಇದೆ ಎಂದು ಅರಿವಾದ ಕಾರಣ ಸ್ವಯಂಪ್ರೇರಿತವಾಗಿ ನಾವು ಹಿಂಪಡೆಯಲಿದ್ದೇವೆ" ಎಂದು ರೋಲ್ಸ್ ರಾಯ್ಸ್ ಮೋಟರ್ ಕಾರ್ಸ್ ಇಂಡಿಯಾದ ಏಷ್ಯಾ ಫೆಸಿಪಿಕ್ ವಿಭಾಗದ ಮುಖ್ಯಸ್ಥ ಪೌಲ್ ಹಾರಿಸ್ ಹೇಳಿದ್ದಾರೆ.

ಭೂತದ ಪರಿಚಯ: ಇತ್ತೀಚೆಗೆ ರೋಲ್ಸ್ ರಾಯ್ಸ್ ಕಂಪನಿಯು ದೇಶದ ಮಾರುಕಟ್ಟೆಗೆ ಘೋಸ್ಟ್ ಕಾರನ್ನು ಪರಿಚಯಿಸಿತ್ತು. ಇದರ ಆರಂಭಿಕ ದರ ಸುಮಾರು 3.05 ಕೋಟಿ ರುಪಾಯಿ. ಇದು ಪೆಟ್ರೋಲ್ ಎಂಜಿನ್ ಹೊಂದಿದೆ.

Most Read Articles

Kannada
English summary
Luxury vehicle company Rolls Royce will recall 1,900 Ghost car in global Market. Company recall this sedan car for fix a defective circuit board Problem.
Story first published: Monday, December 5, 2011, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X